ಹೊಸ ರೇಂಜ್ ರೋವರ್ ಎಸ್‍ಯುವಿಗಳ ಬೆಲೆ ಮಾಹಿತಿ ಬಹಿರಂಗ

ಬ್ರಿಟನ್ ಮೂಲದ ಲ್ಯಾಂಡ್ ರೋವರ್ ಕಂಪನಿಯು ತನ್ನ 2021ರ ರೇಂಜ್ ರೋವರ್ ಮತ್ತು ರೇಂಜ್ ರೋವರ್ ಸ್ಪೋರ್ಟ್ ಎಸ್‍ಯುವಿಗಳ ಬೆಲೆ ಮಾಹಿತಿಯನ್ನು ಬಹಿರಂಗಪಡಿಸಿದೆ. ಲ್ಯಾಂಡ್ ರೋವರ್ ಸರಣಿಯಲ್ಲಿ ರೇಂಜ್ ರೋವರ್ ಮತ್ತು ರೇಂಜ್ ರೋವರ್ ಸ್ಪೋರ್ಟ್ ಜನಪ್ರಿಯ ಎಸ್‍ಯುವಿಗಳಾಗಿದೆ.

ಹೊಸ ರೇಂಜ್ ರೋವರ್ ಎಸ್‍ಯುವಿಗಳ ಬೆಲೆ ಮಾಹಿತಿ ಬಹಿರಂಗ

ರೇಂಜ್ ರೋವರ್ ಸ್ಪೋರ್ಟ್ ಎಸ್‍ಯುವಿಯ ಬೆಲೆಯು ರೂ.88.24 ಲಕ್ಷದಿಂದ ರೂ.1.50 ಕೋಟಿಗಳಷ್ಟಿದ್ದರೆ, ರೇಂಜ್ ರೋವರ್ ಎಸ್‌ಯುವಿಯ ಬೆಲೆಯು ರೂ.1.96 ಕೋಟಿಯಿಂದ ರೂ.4.09 ಕೋಟಿಗಳಾಗಿದೆ. ಈ ಎಲ್ಲಾ ಬೆಲೆಗಳು ದೆಹಲಿ ಎಕ್ಸ್ ಶೋರೂಂ ಪ್ರಕಾರವಾಗಿದೆ. ಈ ವರ್ಷದ ಜುಲೈನಲ್ಲಿ ಕಾರು ತಯಾರಕರು 2021 ಮಾದರಿಗಳ ಬಗ್ಗೆ ವಿವರಗಳನ್ನು ಬಹಿರಂಗ ಪಡಿಸಿದ್ದರು.

ಹೊಸ ರೇಂಜ್ ರೋವರ್ ಎಸ್‍ಯುವಿಗಳ ಬೆಲೆ ಮಾಹಿತಿ ಬಹಿರಂಗ

ರೇಂಜ್ ರೋವರ್ ಎಸ್‍ಯುವಿಯಲ್ಲಿ ಲೀಟರ್ ಡೀಸೆಲ್ ಮೈಲ್ಡ್-ಹೈಬ್ರಿಡ್ ಎಂಜಿನ್ ಅನ್ನು ಹೊಂದಿದೆ. ಅಲ್ಲದೆ 2021 ರೇಂಜ್ ರೋವರ್ ಅನ್ನು ಸ್ಟ್ಯಾಂಡರ್ಡ್ ವ್ಹೀಲ್ ಬೇಸ್ ಮತ್ತು ಲಾಂಗ್ ವ್ಹೀಲ್ ಬೇಸ್ ಎರಡೂ ಮಾದರಿಗಳಲ್ಲಿ ನೀಡಲಾಗುತ್ತದೆ. ಇನ್ನು ವೆಸ್ಟ್ಮಿನಿಸ್ಟರ್ ಎಡಿಷನ್, ವೆಸ್ಟ್ಮಿನಿಸ್ಟರ್ ಬ್ಲ್ಯಾಕ್ ಎಡಿಷನ್ ಮತ್ತು ರೇಂಜ್ ರೋವರ್ ಫಿಫ್ಟಿ ಮುಂತಾದ ವಿಶೇಷ ಆವೃತ್ತಿಗಳನ್ನು ಸಹ ಪಡೆಯುತ್ತದೆ.

MOST READ: ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌

ಹೊಸ ರೇಂಜ್ ರೋವರ್ ಎಸ್‍ಯುವಿಗಳ ಬೆಲೆ ಮಾಹಿತಿ ಬಹಿರಂಗ

ರೇಂಜ್ ರೋವರ್ ಸ್ಪೋರ್ಟ್ ಎಸ್‍ಯುವಿಯು ಎಸ್, ಎಸ್ಇ, ಎಚ್ಎಸ್ಇ, ಎಚ್ಎಸ್ಇ ಡೈನಾಮಿಕ್, ಆಟೋಬೈಗ್ರಾಫ್ರಿ ಡೈನಾಮಿಕ್, ಎಚ್ಎಸ್ಇ ಸಿಲ್ವರ್ ಮತ್ತು ಹೆಚ್ಎಸ್ಇ ಡೈನಾಮಿಕ್ ಬ್ಲ್ಯಾಕ್ ಎಂಬ ಒಟ್ಟು 7 ರೂಪಾಂತರಗಳಲ್ಲಿ ಲಭ್ಯವಿರಲಿದೆ.

ಹೊಸ ರೇಂಜ್ ರೋವರ್ ಎಸ್‍ಯುವಿಗಳ ಬೆಲೆ ಮಾಹಿತಿ ಬಹಿರಂಗ

ರೇಂಜ್ ರೋವರ್ ಸ್ಪೋರ್ಟ್ ಎಸ್‍ಯುವಿಯಲ್ಲಿ ಲೀಟರ್, 4-ಸಿಲಿಂಡರ್ ಪೆಟ್ರೋಲ್ (ಪಿ300) ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 296 ಬಿಹೆಚ್‌ಪಿ ಪವರ್ ಮತ್ತು 400 ಎನ್‌ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಹೊಸ ರೇಂಜ್ ರೋವರ್ ಎಸ್‍ಯುವಿಗಳ ಬೆಲೆ ಮಾಹಿತಿ ಬಹಿರಂಗ

ಇದರೊಂದಿಗೆ ಹೊಸ 3.0-ಲೀಟರ್ 6-ಸಿಲಿಂಡರ್ ಡೀಸೆಲ್ ಮೈಲ್ಡ್-ಹೈಬ್ರಿಡ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 296 ಬಿಹೆಚ್‌ಪಿ ಪವರ್ ಮತ್ತು 650 ಎನ್‌ಎಂ ಟಾರ್ಕ್ ಉತ್ಪಾದಿಸಲಾಗುತ್ತದೆ.

MOST READ: 2020ರ ಸಿಟಿ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹೋಂಡಾ

ಹೊಸ ರೇಂಜ್ ರೋವರ್ ಎಸ್‍ಯುವಿಗಳ ಬೆಲೆ ಮಾಹಿತಿ ಬಹಿರಂಗ

ರೇಂಜ್ ರೋವರ್ ಕೂಡ 7 ರೂಪಾಂತರಗಳಲ್ಲಿ ಲಭ್ಯವಿರಲಿದೆ. ಇದು ವೌಜ್ ಟ್ರಿಮ್ ಮಾತ್ರ ಸ್ಟ್ಯಾಂಡರ್ಡ್ ವ್ಹೀಲ್ ಬೇಸ್‌ನ ಆಯ್ಕೆಯನ್ನು ಪಡೆಯುತ್ತದೆ. ಉಳಿದವುಗಳೆಲ್ಲವೂ ಉದ್ದವಾದ ವ್ಹೀಲ್ ಬೇಸ್ ಸ್ಟ್ಯಾಂಡರ್ಡ್ ಆಗಿ ಲಭ್ಯವಿರಲಿದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಹೊಸ ರೇಂಜ್ ರೋವರ್ ಎಸ್‍ಯುವಿಗಳ ಬೆಲೆ ಮಾಹಿತಿ ಬಹಿರಂಗ

2021ರ ರೇಂಜ್ ರೋವರ್‌ನ ಎಂಜಿನ್ ಆಯ್ಕೆಗಳಲ್ಲಿ ಮೈಲ್ಡ್-ಹೈಬ್ರಿಡ್ ತಂತ್ರಜ್ಞಾನದೊಂದಿಗೆ ಲಭ್ಯವಿರಲಿದೆ. ಇದರೊಂದಿಗೆ 3.0-ಲೀಟರ್ 6-ಸಿಲಿಂಡರ್ ಪೆಟ್ರೋಲ್ ಎಂಜಿನ್ ಮತ್ತು 3.0-ಲೀಟರ್ 6-ಸಿಲಿಂಡರ್ ಡೀಸೆಲ್ ಮೈಲ್ಡ್-ಹೈಬ್ರಿಡ್ ಎಂಜಿನ್ ಅನ್ನು ಒಳಗೊಂಡಿದೆ.

ಹೊಸ ರೇಂಜ್ ರೋವರ್ ಎಸ್‍ಯುವಿಗಳ ಬೆಲೆ ಮಾಹಿತಿ ಬಹಿರಂಗ

ಲ್ಯಾಂಡ್ ರೋವರ್ ಇಂಡಿಯಾ ತನ್ನ ವೆಬ್‌ಸೈಟ್‌ನಲ್ಲಿ 3.0-ಲೀಟರ್ 6-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಮೈಲ್ಡ್-ಹೈಬ್ರಿಡ್ ತಂತ್ರಜ್ಞಾನ ಮತ್ತು ರೇಂಜ್ ರೋವರ್ ಸ್ಪೋರ್ಟ್ ಮಾದರಿಯಲ್ಲಿ ಎಸ್‌ವಿಆರ್ ಟ್ರಿಮ್ ಅನ್ನು ಪಟ್ಟಿ ಮಾಡಿದೆ.

ಹೊಸ ರೇಂಜ್ ರೋವರ್ ಎಸ್‍ಯುವಿಗಳ ಬೆಲೆ ಮಾಹಿತಿ ಬಹಿರಂಗ

ಪೆಟ್ರೋಲ್ ಹೈಬ್ರಿಡ್ ಅನ್ನು 394 ಬಿಹೆಚ್‌ಪಿ ಮತ್ತು 550 ಎನ್‌ಎಂ ಪೀಕ್ ಟಾರ್ಕ್ ತಯಾರಿಸುವಂತೆ ಟ್ಯೂನ್ ಮಾಡಲಾಗಿದೆ. ಇದರೊಂದಿಗೆ ಎಸ್‌ವಿಆರ್ 5.0-ಲೀಟರ್ ವಿ8 ಪೆಟ್ರೋಲ್ ಎಂಜಿನ್ ಪಡೆಯುತ್ತದೆ, ಈ ಎಂಜಿನ್ 567 ಬಿಹೆಚ್‌ಪಿ ಮತ್ತು 700 ಎನ್‌ಎಂ ಪೀಕ್ ಟಾರ್ಕ್ ಉತ್ಪಾದಿಸಲಾಗುತ್ತದೆ. ಈ ರೂಪಾಂತರಗಳ ಬೆಲೆಗಳನ್ನು ಇನ್ನೂ ಪಟ್ಟಿ ಮಾಡಲಾಗಿಲ್ಲ, ಆದ್ದರಿಂದ ಇದನ್ನು ನಂತರ ಪರಿಚಯಿಸುವ ಸಾಧ್ಯತೆಯಿದೆ.

Most Read Articles

Kannada
English summary
Range Rover And Range Rover Sport Prices Announced. Read In Kannada.
Story first published: Monday, September 28, 2020, 15:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X