Just In
- 28 min ago
ದಿಢೀರನೆ ಕೈಕೊಟ್ಟ ಬ್ರೇಕ್, 3 ಕಿ.ಮೀ ರಿವರ್ಸ್ ಗೇರಿನಲ್ಲಿ ಸಾಗಿದ ಟ್ರಕ್ ಚಾಲಕ
- 1 hr ago
ಕೈಗೆಟುಕುವ ದರದಲ್ಲಿ ಟಿವಿಎಸ್ ಎಕ್ಸ್ಎಲ್100 ವಿನ್ನರ್ ಎಡಿಷನ್ ಬಿಡುಗಡೆ
- 1 hr ago
ಭಾರತದಲ್ಲಿ ಅತಿದೊಡ್ಡ ಮಲ್ಟಿ ಬ್ರಾಂಡ್ ಕಾರ್ ಸರ್ವಿಸ್ ಸೆಂಟರ್ ತೆರೆದ ಬಾಷ್
- 13 hrs ago
ಮಧ್ಯಮ ಗಾತ್ರದ ಕಾರುಗಳಿಗೆ ಹೊಸ ಡೀಸೆಲ್ ಎಂಜಿನ್ ಪರಿಚಯಿಸಲು ಸಜ್ಜಾದ ಮಾರುತಿ ಸುಜುಕಿ
Don't Miss!
- News
''ಹಿಂಸಾಚಾರವನ್ನು ಎಂದಿಗೂ ಸಹಿಸುವುದಿಲ್ಲ'': ಮೆಲಾನಿಯಾ ಟ್ರಂಪ್ ವಿದಾಯದ ಭಾಷಣ
- Finance
ಕಾರು ಖರೀದಿಗೆ ಅತ್ಯಂತ ಕಡಿಮೆ ಬಡ್ಡಿ ದರಕ್ಕೆ ಸಾಲ ನೀಡುವ ಬ್ಯಾಂಕ್ ಗಳಿವು
- Sports
ಥಾಯ್ಲೆಂಡ್ ಓಪನ್ 2021: ಎರಡನೇ ಸುತ್ತಿಗೆ ಪ್ರವೇಶಿಸಿದ ಪಿವಿ ಸಿಂಧು
- Lifestyle
ಕೂದಲು ಬೇಗನೆ ಬೆಳ್ಳಗಾಗುವುದು: ಇದು ನಿಮ್ಮ ದೇಹದ ಕುರಿತು ಏನು ಸೂಚಿಸುತ್ತದೆ?
- Education
Indian Forest Service Recruitment 2021: 70 ಡಿಐಜಿಎಫ್/ಎಐಜಿಎಫ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Movies
ಚಿತ್ರೀಕರಣ ವೇಳೆ ಅಸ್ವಸ್ಥ: ನಟಿ ಅಲಿಯಾ ಭಟ್ ಆಸ್ಪತ್ರೆಗೆ ದಾಖಲು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
2022ರ ಸಿವಿಕ್ ಕಾರಿನ ಮೂಲಮಾದರಿಯನ್ನು ಅನಾವಾರಣಗೊಳಿಸಿದ ಹೋಂಡಾ
ಜಪಾನ್ ಮೂಲದ ಕಾರು ತಯಾರಕ ಕಂಪನಿಯಾದ ಹೋಂಡಾ ತನ್ನ 2022ರ ಸಿವಿಕ್ ಸೆಡಾನ್ ಕಾರಿನ ಮೂಲಮಾದರಿಯನ್ನು ಅನಾವಾರಣಗೊಳಿಸಿದೆ. 2022ರ ಹೋಂಡಾ ಸಿವಿಕ್ ಕಾರನ್ನು ಹಿಂದಿನ ಮಾದರಿಗೆ ಹೋಲಿಸಿದರೆ ಸಂಪೂರ್ಣವಾಗಿ ನವೀಕರಿಸಲಾಗಿದೆ.

ಹೊಸ ಹೋಂಡಾ ಸಿವಿಕ್ ಕಾರಿನ ಹೊರಭಾಗದಲ್ಲಿ ಸಂಪೂರ್ಣವಾಗಿ ವಿನ್ಯಾಸ ಬದಲಾವಣೆ ಮಾಡಿದ್ದರೆ, ಒಳಭಾಗದಲ್ಲಿ ಕ್ಯಾಬಿನ್ ಅನ್ನು ನವೀಕರಸಲಾಗಿದೆ. 2022ರ ಹೋಂಡಾ ಸಿವಿಕ್ ಕಾರು ವಿನ್ಯಾಸ ಬದಲಾವಣೆ ಮಾತ್ರವಲ್ಲದೇ ತಂತ್ರಜ್ಞಾನದ ಸೇರ್ಪಡೆ ಮತ್ತು ಹಲವಾರು ಸುರಕ್ಷತಾ ಫೀಚರ್ ಗಳನ್ನು ಅಳವಡಿಸಲಾಗಿದೆ. ಸುಮಾರು 50 ವರ್ಷಗಳಿಂದ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೋಂಡಾ ಸಿವಿಕ್ ಸೆಡಾನ್ ಮಾರಾಟವಾಗುತ್ತಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರದರ್ಶಿಸಲಾದ ಮಾದರಿ ಒಂದು ಮೂಲಮಾದರಿಯಾಗಿದ್ದರೂ, ಸರಿ ಸುಮಾರು ಇದೇ ರೀತಿಯಲ್ಲಿ ಉತ್ಪಾದನೆಯನ್ನು ಮಾಡಬಹುದು. 11ನೇ ತಲೆಮಾರಿನ ಹೋಂಡಾ ಸಿವಿಕ್ ಹೊರಭಾಗದಲ್ಲಿ ಸಂಪೂರ್ಣವಾಗಿ ಹೊಸ ವಿನ್ಯಾಸವನ್ನು ಹೊಂದಿದೆ.
MOST READ: 2020ರ ಸಿಟಿ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹೋಂಡಾ

ಹೊಸ ಹೋಂಡಾ ಸಿವಿಕ್ ಕಾರು ಗ್ರಿಲ್ ಮತ್ತು ನಯವಾದ ಎಲ್ಇಡಿ ಹೆಡ್ ಲ್ಯಾಂಪ್ ಗಳನ್ನು ಹೊಂದಿವೆ. ಇನ್ನು ಹೊಸ ಹೋಂಡಾ ಸಿವಿಕ್ ಕಾರಿನ ಸೈಡ್ ಪ್ರೊಫೈಲ್ ಬಗ್ಗೆ ಹೇಳುವುದಾದರೆ, ಸ್ಪೋರ್ಟ್ಸ್ ಕ್ಯಾರೆಕ್ಟರ್ ಲೈನ್ಸ್ ಆಕರ್ಷಕವಾಗಿದ್ದು, ಇದು ಸಿವಿಕ್ ಕಾರಿನ ಹೆಚ್ಚು ಸ್ಪೋರ್ಟಿ ಲುಕ್ ಅನ್ನು ನೀಡುತ್ತದೆ.

ಇನ್ನು ಕಾರಿನ ಹಿಂಭಾಗದ ವಿನ್ಯಾಸದ ಬಗ್ಗೆ ಹೇಳುವುದಾದರೆ, ಹಿಂಭಾಗದಲ್ಲಿಯು ಕೂಡ ಮನಾರ್ಹ ಬದಲಾವಣೆಗಳನ್ನು ಪಡೆದುಕೊಂಡಿದೆ. ಮೊದಲಿಗಿಂತಲೂ ಅಗಲವಾಗಿದ್ದು, ದೊಡ್ಡ ಟ್ವಿನ್ ಎಲ್ಇಡಿ ಟೈಲ್ ಲ್ಯಾಂಪ್, ಹೊಸ ಸ್ಪಾಯ್ಲರ್ ಮತ್ತು ನವೀಕರಿಸಿದ ಡ್ಯುಯಲ್ ಎಕ್ಸಾಸ್ಟ್ ಟಿಪ್ ಅನ್ನು ಅಳವಡಿಸಲಾಗಿದೆ.
MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಹೋಂಡಾ ಸಿವಿಕ್ 2022ರ ಮೂಲಮಾದರಿಯು 19 ಇಂಚಿನ ಬ್ಲ್ಯಾಕ್ ವ್ಝೀಲ್ ಅನ್ನು ಹೊಂದಿದೆ. ಇದು ಸೆಡಾನ್‌ನ ಸೋಲಾರ್ ಫ್ಲೇರ್ ಪರ್ಲ್ ಬಣ್ಣದ ಬಾಡಿಯೊಂದಿಗೆ ಆಕರ್ಷಕವಾಗಿ ಕಾಣುತ್ತಿದೆ. 2022ರ ಹೋಂಡಾ ಸಿವಿಕ್ ಕಾರು ಸ್ಪೋರ್ಟಿ ಲುಕ್ ಅನ್ನು ಹೊಂದಿದೆ.

ಇನ್ನು ಸಿವಿಕ್ ಕ್ಯಾಬಿನ್ ವಿನ್ಯಾಸವು ಆಕರ್ಷಕವಾಗಿದೆ. ಸಿಂಪಲ್ ಆಗಿ ಬಹಳ ಸ್ಟ್ಯಾಂಡರ್ಡ್ ಆಗಿ ಡ್ಯಾಶ್ ಬೋರ್ಡ್ ಅನ್ನು ಸಿದ್ದಪಡಿಸಿದ್ದಾರೆ. ಇನ್ನು ಒಂಬತ್ತು ಇಂಚಿನ ಟಚ್‌ಸ್ಕ್ರೀನ್ ಅನ್ನು ಅಳವಡಿಸಲಾಗಿದೆ.
MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಇನ್ನು ಇಂಟರಿಯರ್ ನಲ್ಲಿ ಕ್ಲೈಮೇಂಟ್ ಕಂಟ್ರೋಲ್ ಗಾಗಿ ರೋಟರಿ ಡಯಲ್‌ಗಳನ್ನು ಹೊಂದಿವೆ. ಇನ್ನು ಈ ಕಾರಿನಲ್ಲಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಸಂಪೂರ್ಣವಾಗಿ ಡಿಜಿಟಲ್ ಆಗಿರುತ್ತದೆ ಎಂದು ನಿರೀಕ್ಷಿಸುತ್ತೇವೆ. ಇನ್ನು ಹಲವಾರು ಅತ್ಯಾಧುನಿಕ ಫೀಚರ್ ಗಳನ್ನು ಹೊಂದಿರಲಿದೆ ಎಂದು ನಿರೀಕ್ಷಿಸುತ್ತೇವೆ.

ಹೊಸ ತಲೆಮಾರಿನ ಸಿವಿಕ್ ಉತ್ಪಾದನೆಯನ್ನು ಪ್ರಾರಂಭಿಸಿದ್ದಾಗ ಸೆಡಾನ್ ಮತ್ತು ಹ್ಯಾಚ್‌ಬ್ಯಾಕ್ ಬಾಡಿ ಸ್ಟೈಲ್‌ಗಳಲ್ಲಿ ನೀಡಲಾಗುವುದು ಎಂದು ಹೋಂಡಾ ಕಂಪನಿ ಹೇಳಿಕೊಂಡಿದೆ. ಹೋಂಡಾ ಕಂಪನಿಯು 2022ರ ಸಿವಿಕ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವುದರ ಬಗ್ಗೆ ಯಾವುದೇ ಮಾಹಿತಿಗಳು ಬಹಿರಂಗಪಡಿಸಿಲ್ಲ.