ಪ್ರತಿ ಗಂಟೆಗೆ 30ರಂತೆ ಮಾರಾಟವಾಗುತ್ತಿವೆ ಮಾರುತಿ ಸುಜುಕಿ ಬಲೆನೊ ಕಾರುಗಳು

ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ (ಎಂಎಸ್ಐಎಲ್) 2015ರ ಅಕ್ಟೋಬರ್ ತಿಂಗಳಲ್ಲಿ ಬಲೆನೊ ಬಿ2 ವಿಭಾಗದ ಹ್ಯಾಚ್‌ಬ್ಯಾಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಮಾರುತಿ ಸುಜುಕಿ ಕಾರುಗಳ ಸರಣಿಯಲ್ಲಿ ಅತ್ಯಂತ ಯಶಸ್ವಿ ಮಾದರಿಗಳಲ್ಲಿ ಒಂದಾಗಿದೆ.

ಪ್ರತಿಗಂಟೆಗೆ ಮಾರಾಟವಾಗುತ್ತಿವೆ 30 ಮಾರುತಿ ಸುಜುಕಿ ಬಲೆನೊ ಕಾರುಗಳು

ಈ ಬಲೆನೊ ಹ್ಯಾಚ್‌ಬ್ಯಾಕ್ ಅನ್ನು ಮಾರುತಿ ಸುಜುಕಿ ಕಂಪನಿಯ ಪ್ರೀಮಿಯಂ ನೆಕ್ಸಾ ಡೀಲರ್ ಮೂಲಕ ಮಾರಾಟ ಮಾಡಲಾಗುತ್ತಿದೆ. ವರ್ಷಗಳಲ್ಲಿ ಬಲೆನೊ ಕಾರುಗಳ ಮಾರಾಟವು ಉತ್ತಮ ಬೆಳವಣಿಗೆಯನ್ನು ಸಾಧಿಸುತ್ತಿದೆ. ಬಲೆನೊ ಹ್ಯಾಚ್‌ಬ್ಯಾಕ್ ಐದನೇ ತಲೆಮಾರಿನ ಹರ್ಟೆಕ್ಟ್ ಅರ್ಟಿಟೆಕ್ಜರ್ ಅನ್ನು ಆಧರಿಸಿದೆ. ಬಾಲೆನೊ ಭಾರತೀಯ ಮಾರುಕಟ್ಟೆಗೆ ಪಾದಾರ್ಪಣೆ ಮಾಡಿ ಕೇವಲ ಅರ್ಧ ದಶಕವಾಗಿದೆ. ಇಂಡೋ-ಜಪಾನೀಸ್ ತಯಾರಕ ಮಾರುತಿ ಸುಜುಕಿ ತನ್ನ ಬಲೆನೊ ಕಾರು ಭಾರತದಲ್ಲಿ ಎಂಟು ಲಕ್ಷ ಮಾರಾಟದ ಮೈಲಿಗಲ್ಲು ಸಾಧಿಸಿದೆ. ದೇಶದಲ್ಲಿ ಆತಿ ಹೆಚ್ಚು ವೇಗವಾಗಿ ಮಾರಾಟವಾಗುವ ಹ್ಯಾಚ್‌ಬ್ಯಾಕ್ ಆಗಿದೆ.

ಪ್ರತಿಗಂಟೆಗೆ ಮಾರಾಟವಾಗುತ್ತಿವೆ 30 ಮಾರುತಿ ಸುಜುಕಿ ಬಲೆನೊ ಕಾರುಗಳು

ಬಲೆನೊ ಕಾರು ಆಸ್ಟ್ರೇಲಿಯಾ, ಯುರೋಪ್, ಲ್ಯಾಟಿನ್ ಅಮೆರಿಕ, ಆಫ್ರಿಕಾ, ಮಧ್ಯಪ್ರಾಚ್ಯ ಮತ್ತು ಆಗ್ನೇಯ ಏಷ್ಯಾದಂತಹ ಅನೇಕ ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ರಫ್ತು ಮಾಡಲಾಗುತ್ತದೆ. ಬಲೆನೊ ಕೇವಲ 59 ತಿಂಗಳಲ್ಲಿ ಎಂಟು ಲಕ್ಷ ಮಾರಾಟದ ಮೈಲಿಗಲ್ಲು ತಲುಪಿದೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಪ್ರತಿಗಂಟೆಗೆ ಮಾರಾಟವಾಗುತ್ತಿವೆ 30 ಮಾರುತಿ ಸುಜುಕಿ ಬಲೆನೊ ಕಾರುಗಳು

ಭಾರತೀಯ ಮಾರುಕಟ್ಟೆಯಲ್ಲಿ 200 ನಗರಗಳಲ್ಲಿ 377 ನೆಕ್ಸಾ ಡೀಲರುಗಳ ಮೂಲಕ ಬಲೆನೊ ಕಾರನ್ನು ಮಾರಾಟ ಮಾಡಲಾಗುತ್ತದೆ. ವರದಿಯ ಪ್ರಕಾರ 2015ರಿಂದ ಪ್ರತಿಗಂಟೆಗೆ 30 ಯುನಿಟ್ ಹ್ಯಾಚ್‌ಗಳು ಮಾರಾಟವಾಗುತ್ತಿವೆ.

ಪ್ರತಿಗಂಟೆಗೆ ಮಾರಾಟವಾಗುತ್ತಿವೆ 30 ಮಾರುತಿ ಸುಜುಕಿ ಬಲೆನೊ ಕಾರುಗಳು

ಬಲೆನೊ ಐದು ಸೀಟರ್ ಹ್ಯಾಚ್‌ಬ್ಯಾಕ್ ಆಗಿದೆ. ಈ ಜನಪ್ರಿಯ ಬಲೆನೊ ಪ್ರೀಮಿಯಂ ಕಾರಿನಲ್ಲಿ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿಯೊಂದಿಗೆ ಸ್ಮಾರ್ಟ್ಪ್ಲೇ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ, ಮೌಂಟಡ್ ಕಂಟ್ರೋಲ್ ಮಲ್ಟಿ-ಫಂಕ್ಷನಲ್ ಸ್ಟೀಯರಿಂಗ್ ವ್ಹೀಲ್ ಮತ್ತು ಇತರ ಫೀಚರ್ ಗಳನ್ನು ಹೊಂದಿವೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಪ್ರತಿಗಂಟೆಗೆ ಮಾರಾಟವಾಗುತ್ತಿವೆ 30 ಮಾರುತಿ ಸುಜುಕಿ ಬಲೆನೊ ಕಾರುಗಳು

ಮಾರುತಿ ಸುಜುಕಿ ಬಲೆನೊ ಕಾರಿನ ಆರಂಭಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.5.70 ಲಕ್ಷಗಳಾಗಿದೆ. ಇನ್ನು ಮಾರುತಿ ಸುಜುಕಿ ಬಲೆನೊ ಕಾರಿನಲ್ಲಿರುವ 1.2-ಲೀಟರ್ ನಾಲ್ಕು ಸಿಲಿಂಡರ್ ಡ್ಯುಯಲ್ ಜೆಟ್ ಪೆಟ್ರೋಲ್ ಎಂಜಿನಿನ ಫ್ಯೂಯಲ್ ಮೈಲೇಜ್ ಸುಧಾರಣೆಗಾಗಿ ಎಸ್‌ಎಚ್‌ವಿಎಸ್ ತಂತ್ರಜ್ಞಾನದೊಂದಿಗೆ ಕೆಲಸ ಮಾಡುತ್ತದೆ.

ಪ್ರತಿಗಂಟೆಗೆ ಮಾರಾಟವಾಗುತ್ತಿವೆ 30 ಮಾರುತಿ ಸುಜುಕಿ ಬಲೆನೊ ಕಾರುಗಳು

ಈ ಎಂಜಿನ್ 6,000 ಆರ್‌ಪಿಎಂನಲ್ಲಿ 89 ಬಿಹೆಚ್‌ಪಿ ಪವರ್ ಮತ್ತು 4,400 ಆರ್‌ಪಿಎಂನಲ್ಲಿ 113 ಎನ್‌ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗುತ್ತದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಪ್ರತಿಗಂಟೆಗೆ ಮಾರಾಟವಾಗುತ್ತಿವೆ 30 ಮಾರುತಿ ಸುಜುಕಿ ಬಲೆನೊ ಕಾರುಗಳು

ಇದರೊಂದಿಗೆ ಸಾಮಾನ್ಯ 1.2-ಲೀಟರ್ ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 6,000 ಆರ್‌ಪಿಎಂನಲ್ಲಿ 82 ಬಿಹೆಚ್‌ಪಿ ಮತ್ತು 4,200 ಆರ್‌ಪಿಎಂನಲ್ಲಿ 113 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಮತ್ತು ಸಿವಿಟಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.

ಪ್ರತಿಗಂಟೆಗೆ ಮಾರಾಟವಾಗುತ್ತಿವೆ 30 ಮಾರುತಿ ಸುಜುಕಿ ಬಲೆನೊ ಕಾರುಗಳು

ಜನಪ್ರಿಯ ಮಾರುತಿ ಸುಜುಕಿ ಬಲೆನೊ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಹ್ಯುಂಡೈ ಎಲೈಟ್ ಐ20, ಟಾಟಾ ಆಲ್ಟ್ರೊಜ್, ಫೋಕ್ಸ್‌ವ್ಯಾಗನ್ ಪೊಲೊ ಮತ್ತು ಹೋಂಡಾ ಜಾಝ್ ಕಾರುಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
30 Units Of Maruti Baleno Sold Every Hour Since Launch In 2015. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X