Just In
- 12 hrs ago ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- 13 hrs ago Suzuki Access Electric: ಸುಜುಕಿ ಆಕ್ಸೆಸ್ ಎಲೆಕ್ಟ್ರಿಕ್ ಸ್ಕೂಟರ್ ಈ ವರ್ಷ ಬಿಡುಗಡೆ ಸಾಧ್ಯತೆ!
- 14 hrs ago Royal Enfield Himalayan ಸುಲಭವಾಗಿ ಖರೀದಿಸುವುದು ಹೇಗೆ?: ಇಲ್ಲಿದೆ ಡೌನ್ಪೇಮೆಂಟ್, EMI ಮಾಹಿತಿಗಳು!
- 14 hrs ago ಮಿಂಚಿನ ವೇಗಕ್ಕೆ ಸರಿಸಾಟಿಯಾಗಿ ಬೆಂಗಳೂರಿನ ಹೊಸ ಅಲ್ಟ್ರಾವೈಲೆಟ್ ಬೈಕ್ ಬಿಡುಗಡೆ: 323KM ರೇಂಜ್
Don't Miss!
- Sports 'ಟಿ20 ವಿಶ್ವಕಪ್ಗೆ ಈತನನ್ನು ಆಯ್ಕೆ ಮಾಡಿ'; ಅಜಿತ್ ಅಗರ್ಕರ್ಗೆ ಬಂತು ದೊಡ್ಡ ಮನವಿ!
- Finance ಡಾ. ರಾಜ್ಕುಮಾರ್ ಜನ್ಮದಿನದಂದು ಹೊಸ ಉದ್ಯಮ ಆರಂಭಿಸಿದ ಅಶ್ವಿನಿ ಪುನೀತ್ ರಾಜ್ಕುಮಾರ್
- Lifestyle ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- News Realme Narzo 70: ಭರ್ಜರಿ ಕ್ಯಾಮೆರಾ ಫೀಚರ್ಗಳೊಂದಿಗೆ ರಿಯಲ್ಮಿ ನಾರ್ಜೊ 70 ಗ್ರ್ಯಾಂಡ್ ಲಾಂಚ್
- Movies ನೀಲಿ ಪ್ರಪಂಚದ ಕರಾಳ ಸತ್ಯವನ್ನ ಹೇಳಿದ ಲಾನಾ ರೋಡ್ಸ್
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಿಯೆಟ್ ಟಯರ್ ಕಂಪನಿಯ ಬ್ರಾಂಡ್ ಅಂಬಾಸಿಡರ್ ಆದ ಅಮೀರ್ ಖಾನ್
ಸಿಯೆಟ್ ಟಯರ್ ಇಂಡಿಯಾ ಕಂಪನಿಯು ಎರಡು ವರ್ಷಗಳ ಅವಧಿಗೆ ಬಾಲಿವುಡ್ ನಟ ಅಮೀರ್ ಖಾನ್ ಅವರನ್ನು ತನ್ನ ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಿದೆ. ಬ್ರಾಂಡ್ ಅಂಬಾಸಿಡರ್ ಆಗಿರುವ ಅಮೀರ್ ಖಾನ್ ಸಿಯೆಟ್ ಟಯರ್ಗಳಿಗಾಗಿ ಎರಡು ಕಮರ್ಷಿಯಲ್ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಈ ಎರಡೂ ಜಾಹೀರಾತುಗಳನ್ನು ಐಪಿಎಲ್ 2020ರ ಅವಧಿಯಲ್ಲಿ ಪ್ರಸಾರ ಮಾಡಲಾಗುವುದು. ಈ ಜಾಹೀರಾತುಗಳಲ್ಲಿ ಅಮೀರ್ ಖಾನ್ ಸಿಯೆಟ್ ಸೆಕ್ಯುರಾ ಡ್ರೈವ್ ಪ್ರೀಮಿಯಂ ಟಯರ್ಗಳ ಬಳಕೆಯನ್ನು ಉತ್ತೇಜಿಸಲಿದ್ದಾರೆ. ಈ ಜಾಹೀರಾತುಗಳನ್ನು ಹಲವಾರು ಮೀಡಿಯಾ ಪ್ಲಾಟ್ ಫಾರಂಗಳಲ್ಲಿ ಪ್ರದರ್ಶಿಸಲಾಗುವುದು.
ಈ ಜಾಹೀರಾತಿನಲ್ಲಿ ಪ್ರತಿಯೊಂದು ಪರಿಸ್ಥಿತಿಗೂ ಹೊಂದಿಕೊಳ್ಳುವ ಟಯರ್ಗಳ ಸಾಮರ್ಥ್ಯ ಹಾಗೂ ಗುಣಮಟ್ಟದ ಬಗ್ಗೆ ಹೇಳಲಾಗುವುದು. ಇದರ ಜೊತೆಗೆ ಸಿಯೆಟ್ ಟಯರ್ಗಳು ಕಾರುಗಳಿಗೆ ಬ್ಯಾಲೆನ್ಸ್ ನೊಂದಿಗೆ ಉತ್ತಮವಾದ ಬ್ರೇಕಿಂಗ್ ಅನ್ನು ಹೇಗೆ ಒದಗಿಸುತ್ತವೆ ಎಂಬುದನ್ನು ವಿವರಿಸಲಾಗುವುದು.
MOSTREAD: ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್
ಸಿಯೆಟ್ ಸೆಕ್ಯುರಾ ಪ್ರೀಮಿಯಂ ಟಯರ್ಗಳನ್ನು ಹೋಂಡಾ ಸಿಟಿ, ಸ್ಕೋಡಾ ಆಕ್ಟೇವಿಯಾ, ಟೊಯೋಟಾ ಕೊರೊಲ್ಲಾ, ಹ್ಯುಂಡೈ ಕ್ರೆಟಾ, ಮಾರುತಿ ಸುಜುಕಿ ವಿಟಾರಾ ಬ್ರೆಝಾ, ಹೋಂಡಾ ಡಬ್ಲ್ಯೂಆರ್-ವಿಗಳಂತಹ ಪ್ರೀಮಿಯಂ ಸೆಡಾನ್ ಹಾಗೂ ಕಾಂಪ್ಯಾಕ್ಟ್ ಎಸ್ಯುವಿಗಳಿಗಾಗಿ ತಯಾರಿಸಲಾಗಿದೆ.
ಭಾರತದಲ್ಲಿ ಜಾವಾ ಪೆರಾಕ್ ಬೈಕಿಗಾಗಿ ಟಯರ್ಗಳನ್ನು ಉತ್ಪಾದಿಸುತ್ತಿರುವುದಾಗಿ ಸಿಯೆಟ್ ಕಂಪನಿ ತಿಳಿಸಿದೆ. ಜಾವಾ ಕಂಪನಿಯ ಪ್ರೀಮಿಯಂ ಬೈಕ್ ಆಗಿರುವ ಜಾವಾ ಪೆರಾಕ್ಗಾಗಿ ಸಿಯೆಟ್ ಕಂಪನಿಯು ಜೂಮ್ ಕ್ರೂಸ್ ಟಯರ್ಗಳನ್ನು ತಯಾರಿಸುತ್ತಿದೆ.
MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್
ಜೂಮ್ ಕ್ರೂಸ್ ಟಯರ್ಗಳು ಪೆರಾಕ್ ಬೈಕಿಗೆ ಆರಾಮದಾಯಕವಾದ ಸವಾರಿಯೊಂದಿಗೆ ಉತ್ತಮವಾದ ಗ್ರಿಪ್ ಅನ್ನು ನೀಡುತ್ತವೆ. ಇವುಗಳು ಸಾಮಾನ್ಯ ಟಯರ್ಗಳಿಗಿಂತ ಹೆಚ್ಚಿನ ಬ್ಯಾಲೆನ್ಸ್ ನೀಡುತ್ತವೆ ಎಂದು ಹೇಳಲಾಗಿದೆ.
ಸಿಯೆಟ್ ಕಂಪನಿಯು ಇತ್ತೀಚೆಗೆ ಬೈಕುಗಳಿಗಾಗಿ ಹೊಸ ಸರಣಿಯ ಪಂಕ್ಚರ್ಡ್ ಫ್ರೀ ಟಯರ್ಗಳನ್ನು ಬಿಡುಗಡೆಗೊಳಿಸಿದೆ. ಈ ಟಯರ್ಗಳು ಪಂಕ್ಚರ್ ಆದ ಸಂದರ್ಭದಲ್ಲಿ ಏರ್ ಪ್ರೆಷರ್ ಬೀಳದಂತೆ ತಡೆಯುತ್ತವೆ.
MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು
ಇದರಿಂದಾಗಿ ಬೈಕ್ ಸಮತೋಲನದಲ್ಲಿರುತ್ತದೆ ಎಂದು ಕಂಪನಿಯು ಹೇಳಿಕೊಂಡಿದೆ. ಈ ಟಯರ್ಗಳಲ್ಲಿ ಏರ್ ಫ್ಲೋ ತಪ್ಪಿಸಲು ಹೊಸ ಟೆಕ್ನಾಲಜಿಯನ್ನು ಬಳಸಲಾಗಿದೆ. ಈ ಟಯರ್ಗಳನ್ನು ಏಳು ವಿವಿಧ ಗಾತ್ರಗಳಲ್ಲಿ ಬಿಡುಗಡೆಗೊಳಿಸಲಾಗಿದೆ.
ಸಿಯೆಟ್ ಕಂಪನಿಯು ಟ್ರಕ್ಗಳು, ಬಸ್, ಕಾರು, ಬೈಕ್, ಸ್ಕೂಟರ್ ಸೇರಿದಂತೆ ವಿವಿಧ ವಾಹನಗಳಿಗಾಗಿ ಪ್ರತಿವರ್ಷ 15 ದಶಲಕ್ಷ ಟಯರ್ಗಳನ್ನು ಉತ್ಪಾದಿಸುತ್ತದೆ. ಸಿಯೆಟ್ ಕಂಪನಿಯು ಜಾವಾ ಕಂಪನಿಯ ಪ್ರತಿಸ್ಪರ್ಧಿ ಕಂಪನಿಯಾದ ರಾಯಲ್ ಎನ್ಫೀಲ್ಡ್ ಗಾಗಿಯೂ ಟಯರ್ಗಳನ್ನು ಉತ್ಪಾದಿಸುತ್ತದೆ.
MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ
ಸಿಯೆಟ್ ಕಂಪನಿಯು ಇತ್ತೀಚೆಗೆ ಗೋ-ಸೇಫ್ ಫೇಸ್ ಮಾಸ್ಕ್ ಅನ್ನು ಬಿಡುಗಡೆಗೊಳಿಸಿತ್ತು. ಗೋ-ಸೇಫ್ ಎಸ್ 95 ಹೆಸರಿನ ಈ ಮಾಸ್ಕ್ ನ ಬೆಲೆ ರೂ.295ಗಳಾಗಿದೆ. ಈ ಫೇಸ್ ಮಾಸ್ಕ್ ಅನ್ನು 30 ಬಾರಿ ಸ್ವಚ್ವಗೊಳಿಸಿ ಬಳಸಬಹುದು ಎಂದು ಕಂಪನಿ ಹೇಳಿದೆ.