ಅಪಘಾತ ಗಾಯಾಳುಗಳಿಗೆ ಸಿಗಲಿದೆ ಕ್ಯಾಶ್ ಲೆಸ್ ಚಿಕಿತ್ಸೆ

ಭಾರತದಲ್ಲಿ ಪ್ರತಿವರ್ಷ ಸುಮಾರು 4.6 ಲಕ್ಷ ರಸ್ತೆ ಅಪಘಾತಗಳು ಸಂಭವಿಸುತ್ತಿದ್ದು, ಈ ರಸ್ತೆ ಅಪಘಾತಗಳಲ್ಲಿ ಸರಾಸರಿ 1.48 ಲಕ್ಷ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಭಾರತದ ಕೆಲ ರಾಜ್ಯಗಳಲ್ಲಿ ಹೆಚ್ಚಿನ ಸಂಖ್ಯೆಯ ರಸ್ತೆ ಅಪಘಾತಗಳಾಗುತ್ತವೆ.

ಅಪಘಾತ ಗಾಯಾಳುಗಳಿಗೆ ಸಿಗಲಿದೆ ಕ್ಯಾಶ್ ಲೆಸ್ ಚಿಕಿತ್ಸೆ

ಅಂತಹ ರಾಜ್ಯಗಳಲ್ಲಿ ಉತ್ತರ ಪ್ರದೇಶವೂ ಸೇರಿದೆ. ಇವುಗಳ ಜೊತೆಗೆ ಮಹಾರಾಷ್ಟ್ರ ಹಾಗೂ ತಮಿಳುನಾಡು ರಾಜ್ಯಗಳಲ್ಲೂ ಹೆಚ್ಚಿನ ಸಂಖ್ಯೆಯ ಅಪಘಾತಗಳಾಗುತ್ತವೆ. ಈ ಮೂರು ರಾಜ್ಯಗಳ ರಸ್ತೆ ಅಪಘಾತಗಳ ಒಟ್ಟು ಶೇಕಡವಾರು ಪ್ರಮಾಣವು ಇಡೀ ದೇಶದಲ್ಲಿ ಸಂಭವಿಸುವ ರಸ್ತೆ ಅಪಘಾತಗಳಿಗಿಂತ 30%ನಷ್ಟು ಹೆಚ್ಚಾಗಿದೆ.

ಅಪಘಾತ ಗಾಯಾಳುಗಳಿಗೆ ಸಿಗಲಿದೆ ಕ್ಯಾಶ್ ಲೆಸ್ ಚಿಕಿತ್ಸೆ

ರಸ್ತೆ ಅಪಘಾತದಲ್ಲಿ ಗಾಯಗೊಳ್ಳುವ ಜನರ ಚಿಕಿತ್ಸೆಗಾಗಿ ಹೊಸ ಕ್ಯಾಶ್ ಲೆಸ್ ಯೋಜನೆಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರವು ಚಿಂತನೆ ನಡೆಸಿದೆ. ಮೂಲಗಳ ಪ್ರಕಾರ, ರಸ್ತೆ ಅಪಘಾತದಲ್ಲಿ ಗಾಯಗೊಳ್ಳುವವರಿಗೆ ರೂ.2.5 ಲಕ್ಷಗಳವರೆಗಿನ ಚಿಕಿತ್ಸೆ ನೀಡಲು ಭಾರತ ಸರ್ಕಾರವು ಚಿಂತನೆ ನಡೆಸುತ್ತಿದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಅಪಘಾತ ಗಾಯಾಳುಗಳಿಗೆ ಸಿಗಲಿದೆ ಕ್ಯಾಶ್ ಲೆಸ್ ಚಿಕಿತ್ಸೆ

ಅಪಘಾತಗಳಲ್ಲಿ ಗಾಯಗೊಳ್ಳುವವರ ಚಿಕಿತ್ಸೆಯಲ್ಲಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರವು ಈ ಯೋಜನೆಯನ್ನು ಜಾರಿಗೆ ತರಲು ಮುಂದಾಗಿದೆ. ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಇಲಾಖೆಯು ತನ್ನದೇ ಆದ ಕೊಡುಗೆಯ ಮೂಲಕ ಮೋಟಾರು ವಾಹನ ಅಪಘಾತ ನಿಧಿಯನ್ನು ಸ್ಥಾಪಿಸಲಿದೆ.

ಅಪಘಾತ ಗಾಯಾಳುಗಳಿಗೆ ಸಿಗಲಿದೆ ಕ್ಯಾಶ್ ಲೆಸ್ ಚಿಕಿತ್ಸೆ

ಈ ಯೋಜನೆಯಲ್ಲಿ ಸಾರಿಗೆ ಇಲಾಖೆಗೆ ಸಾಮಾನ್ಯ ವಿಮಾ ಕಂಪನಿಗಳು ನೆರವು ನೀಡಲಿವೆ. ಅಪಘಾತಗಳಲ್ಲಿ ಬಲಿಯಾದವರ ವೆಚ್ಚವನ್ನು ಜಿಐಸಿ ಭರಿಸಿದರೆ, ವಿಮೆ ಮಾಡಿದ ವಾಹನಗಳಿಗೆ ಸಂಬಂಧಿಸಿದ ಪ್ರಕರಣಗಳು ಹಾಗೂ ಅಪಘಾತಕ್ಕೀಡಾದ ವಾಹನಗಳ ವೆಚ್ಚವನ್ನು ರಸ್ತೆ ಸಾರಿಗೆ ಇಲಾಖೆಯು ಭರಿಸಲಿದೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಅಪಘಾತ ಗಾಯಾಳುಗಳಿಗೆ ಸಿಗಲಿದೆ ಕ್ಯಾಶ್ ಲೆಸ್ ಚಿಕಿತ್ಸೆ

ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ಕ್ಯಾಶ್ ಲೆಸ್ ಚಿಕಿತ್ಸೆ ನೀಡಲು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಐಟಿ ಪ್ಲಾಟ್‌ಫಾರಂ ಅನ್ನು ಬಳಸಿಕೊಳ್ಳಲಾಗುತ್ತದೆ. ಅಪಘಾತವಾದ ಮೊದಲ ಒಂದು ಗಂಟೆಯ ಅವಧಿಯನ್ನೂ ಸಹ ಪರಿಗಣಿಸಲಾಗುತ್ತದೆ.

ಅಪಘಾತ ಗಾಯಾಳುಗಳಿಗೆ ಸಿಗಲಿದೆ ಕ್ಯಾಶ್ ಲೆಸ್ ಚಿಕಿತ್ಸೆ

ಈ ಐಟಿ ಪ್ಲಾಟ್‌ಫಾರಂ ಅನ್ನು ಆಯುಷ್ಮಾನ್ ಭಾರತ್ ಪ್ರಧಾನ್ ಮಂತ್ರಿ ಜನ ಆರೋಗ್ಯ ಯೋಜನೆಗಾಗಿಯೂ ದೇಶಾದ್ಯಂತ ಬಳಸಿಕೊಳ್ಳಲಾಗುತ್ತಿದೆ. ರಸ್ತೆ ಅಪಘಾತ ಸಂತ್ರಸ್ತರಿಗೆ ಈ ಯೋಜನೆಯಡಿ ನೆರವು ನೀಡಲು ಕೇಂದ್ರ ರಸ್ತೆ ಇಲಾಖೆಯಡಿಯಲ್ಲಿ ಖಾತೆಯನ್ನು ಸ್ಥಾಪಿಸಲಾಗುವುದು.

Most Read Articles

Kannada
English summary
Accident victims to get cashless treatment. Read in Kannada.
Story first published: Wednesday, July 1, 2020, 17:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X