ರೂ.16 ಕೋಟಿಗಳಿಗೆ ಹರಾಜಾಯ್ತು ಈ ನಟನ ಕಾರು, ಬೈಕ್

ಪಾಲ್ ವಾಕರ್ ವಿಶ್ವ ವಿಖ್ಯಾತ ನಟರಾಗಿದ್ದಾರೆ. ಹಾಲಿವುಡ್ ಚಿತ್ರಗಳನ್ನು ನೋಡುವವರಿಗೆ ಈ ಅಮೇರಿಕಾದ ನಟನ ಬಗ್ಗೆ ಹೇಳುವ ಅವಶ್ಯಕತೆಯಿಲ್ಲ. ಪಾಲ್ ವಾಕರ್ ತಮ್ಮ ನಟನೆಯಿಂದ ಮಾತ್ರವಲ್ಲದೇ ತಮ್ಮ ಬಳಿಯಿರುವ ಕಾರು ಹಾಗೂ ಬೈಕ್‍‍ಗಳಿಗಾಗಿಯೂ ಹೆಸರುವಾಸಿಯಾಗಿದ್ದರು.

ರೂ.16 ಕೋಟಿಗಳಿಗೆ ಹರಾಜಾಯ್ತು ಈ ನಟನ ಕಾರು, ಬೈಕ್

ಪಾಲ್ ವಾಕರ್ ಕಾರು ಹಾಗೂ ಬೈಕ್‍‍ಗಳ ಬಗ್ಗೆ ವಿಪರೀತ ಎನಿಸುವಷ್ಟು ಕ್ರೇಜ್ ಹೊಂದಿದ್ದರು. ಪಾಲ್ ವಾಕರ್‍‍ರವರು ಹೈ ಪರ್ಫಾಮೆನ್ಸ್ ವಾಹನಗಳ ಬಗ್ಗೆ ಹೆಚ್ಚು ಪ್ರೀತಿಯನ್ನು ಹೊಂದಿದ್ದರು. ಫಾಸ್ಟ್ ಅಂಡ್ ಫ್ಯೂರಿಯಸ್ ಚಿತ್ರದ ಈ ನಟ ಚಿತ್ರ ಪ್ರೇಮಿಗಳ ಮನಸ್ಸಿನಲ್ಲಿ ಸದಾ ನೆಲೆಸಲಿದ್ದಾರೆ.

ರೂ.16 ಕೋಟಿಗಳಿಗೆ ಹರಾಜಾಯ್ತು ಈ ನಟನ ಕಾರು, ಬೈಕ್

ಪಾಲ್ ವಾಕರ್‍‍ರವರು ಹೈ ಪರ್ಫಾಮೆನ್ಸ್ ಕಾರು ಹಾಗೂ ಬೈಕ್‍‍ಗಳ ಬಗೆಗಿನ ತಮ್ಮ ಪ್ರೀತಿಯನ್ನು ತಮ್ಮ ಚಿತ್ರಗಳಲ್ಲಿ ಮಾತ್ರವಲ್ಲದೇ ನಿಜ ಜೀವನದಲ್ಲಿಯೂ ಹೊಂದಿದ್ದರು. ಈ ವಿಶ್ವ ವಿಖ್ಯಾತ ನಟನ ಮನೆಯ ಗ್ಯಾರೇಜಿನಲ್ಲಿ ಹಲವಾರು ವಿಧದ ವಾಹನಗಳಿವೆ.

ರೂ.16 ಕೋಟಿಗಳಿಗೆ ಹರಾಜಾಯ್ತು ಈ ನಟನ ಕಾರು, ಬೈಕ್

ಇತ್ತೀಚಿಗೆ ಪಾಲ್ ವಾಕರ್‍‍ರವರ ಕಾರು ಹಾಗೂ ಬೈಕ್‍‍ಗಳನ್ನು ಹರಾಜ್ ಹಾಕಲಾಗಿತ್ತು. ಈ ಹರಾಜಿನಲ್ಲಿ ರೂ.16.40 ಕೋಟಿ ಸಂಗ್ರಹವಾಗಿದೆ. ಈ ಹರಾಜ್ ಅನ್ನು ಅಮೇರಿಕಾದ ಅರಿಜೋನಾದಲ್ಲಿ ನಡೆಸಲಾಗಿತ್ತು. ಪಾಲ್ ವಾಕರ್‍‍ರವರ ಎಲ್ಲಾ ವಾಹನಗಳು ಈ ಹರಾಜಿನಲ್ಲಿ ಮಾರಾಟವಾಗಿಲ್ಲ.

ರೂ.16 ಕೋಟಿಗಳಿಗೆ ಹರಾಜಾಯ್ತು ಈ ನಟನ ಕಾರು, ಬೈಕ್

ಕೆಲವು ವಾಹನಗಳು ಮಾತ್ರ ಹರಾಜಿನಲ್ಲಿ ಮಾರಾಟವಾಗಿವೆ. ಈ ಹರಾಜಿನಲ್ಲಿ 23 ಲಕ್ಷ ಡಾಲರ್ ಸಂಗ್ರಹವಾಗಿದೆ ಎಂದು ಹರಾಜನ್ನು ನಡೆಸಿದ ಬರೆಟ್ ಜಾಕ್ಸನ್‍‍ನ ಸಿ‍ಇ‍ಒ ಕ್ರೆಗ್ ಜಾಕ್ಸನ್ ಹೇಳಿದ್ದಾರೆ. ಪಾಲ್ ವಾಕರ್‍‍ರವರ ಬಳಿ ಕಾರು ಹಾಗೂ ಬೈಕ್‍‍ಗಳು ಮಾತ್ರವಿರಲಿಲ್ಲ, ಬದಲಿಗೆ ಟ್ರಕ್‍‍ಗಳೂ ಸಹ ಇದ್ದವು.

ರೂ.16 ಕೋಟಿಗಳಿಗೆ ಹರಾಜಾಯ್ತು ಈ ನಟನ ಕಾರು, ಬೈಕ್

ಪಾಲ್ ವಾಕರ್‍‍ರವರ ಬಳಿಯಿದ್ದ 21 ವಾಹನಗಳನ್ನು ಹರಾಜು ಹಾಕಲಾಗಿತ್ತು. ಈ ಹರಾಜು ಪ್ರಕ್ರಿಯೆಯು ಜನವರಿ 14ರಿಂದ 18ರವರೆಗೆ 5 ದಿನಗಳ ಕಾಲ ನಡೆದಿತ್ತು. ಪಾಲ್ ವಾಕರ್‍‍ರವರ ಬಳಿಯಿದ್ದ ಬಿಳಿ ಬಣ್ಣದ ಬಿ‍ಎಂ‍‍ಡಬ್ಲ್ಯು ಎಂ 3 ಲೈಟ್ ವೇಟ್ ಎಡಿಷನ್‍‍ನ 5 ಕಾರುಗಳನ್ನು ಸಹ ಹರಾಜು ಹಾಕಲಾಗಿತ್ತು.

ರೂ.16 ಕೋಟಿಗಳಿಗೆ ಹರಾಜಾಯ್ತು ಈ ನಟನ ಕಾರು, ಬೈಕ್

ಈ ಪೈಕಿ 1995ರ ಮಾದರಿಯ ಇ36 ಕಾರಿಗೆ ಅತಿ ಹೆಚ್ಚು ಬಿಡ್ ಮಾಡಲಾಗಿದೆ. ಈ ಕಾರ್ ಅನ್ನು 3.85 ಲಕ್ಷ ಡಾಲರ್‍‍ಗಳಿಗೆ ಹರಾಜು ಹಾಕಲಾಗಿದೆ. ಅಂದರೆ ಭಾರತೀಯ ಮೌಲ್ಯದ ಪ್ರಕಾರ ರೂ.2.74 ಕೋಟಿ.

ರೂ.16 ಕೋಟಿಗಳಿಗೆ ಹರಾಜಾಯ್ತು ಈ ನಟನ ಕಾರು, ಬೈಕ್

ಈ ಹರಾಜಿನಲ್ಲಿ ಸಂಗ್ರಹವಾದ ಹಣವನ್ನು ಪಾಲ್ ವಾಕರ್‍‍ರವರ ಪುತ್ರಿ ನಡೆಸುವ ಮಿಡೊ ರೇನ್ ವಾಕರ್ ಟ್ರಸ್ಟ್ ಗೆ ಕಳುಹಿಸಲಾಗಿದೆ. ಪಾಲ್ ವಾಕರ್‍‍ರವರ ಪುತ್ರಿ ಮಿಡೊ ರೇನ್ ವಾಕರ್‍‍ರವರಿಗೆ ಈಗ 21 ವರ್ಷ ವಯಸ್ಸು.

ರೂ.16 ಕೋಟಿಗಳಿಗೆ ಹರಾಜಾಯ್ತು ಈ ನಟನ ಕಾರು, ಬೈಕ್

ಅಂದ ಹಾಗೆ ಪಾಲ್ ವಾಕರ್‍‍ರವರು ತಮ್ಮ 40ನೇ ವಯಸ್ಸಿನಲ್ಲಿ ಸಾಂಟಾ ಕ್ಲಾರಿಟಾದಲ್ಲಿ ನಡೆದ ಅಪಘಾತದಲ್ಲಿ ಮೃತರಾದರು. 2013ರಲ್ಲಿ ನಡೆದ ಈ ದುರ್ಘಟನೆಯಲ್ಲಿ ಪಾಲ್ ವಾಕರ್‍‍ರವರು ತಮ್ಮ ಪೋರ್ಷೆ ಕಾರೆರಾ ಜಿಟಿ ಕಾರಿನಲ್ಲಿ ಚಲಿಸುತ್ತಿದ್ದರು.

ರೂ.16 ಕೋಟಿಗಳಿಗೆ ಹರಾಜಾಯ್ತು ಈ ನಟನ ಕಾರು, ಬೈಕ್

ಈ ದುರ್ಘಟನೆ ನಡೆದ ಸ್ಥಳವು ಕಾರುಗಳನ್ನು ಡ್ರಿಫ್ಟ್ ಮಾಡುವುದಕ್ಕೆ ಹೆಸರುವಾಸಿಯಾಗಿದೆ. ಪೊಲೀಸರು ನಡೆಸಿದ್ದ ತನಿಖೆಯಲ್ಲಿ ಕಾರು 80ರಿಂದ 93 ಮೈಲಿಯ ವೇಗದಲ್ಲಿ ಚಲಿಸಿದ್ದು ಹಾಗೂ ಟಯರ್‍‍ಗಳು ಹಳೆಯದಾಗಿದ್ದ ಕಾರಣಕ್ಕೆ ಈ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿತ್ತು.

Most Read Articles

Kannada
English summary
Actor Paul Walkers cars and bikes auctioned. Read in Kannada.
Story first published: Wednesday, January 29, 2020, 16:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X