ಮ್ಯಾನುವಲ್ ಗೇರ್ ಬಾಕ್ಸ್ ಗಿಂತ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಬೆಸ್ಟ್.. ಏಕೆ ಗೊತ್ತಾ?

ಇತ್ತೀಚಿಗೆ ಬಿಡುಗಡೆಯಾಗುತ್ತಿರುವ ಬಹುತೇಕ ಎಲ್ಲಾ ಕಾರುಗಳಲ್ಲಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಗಳನ್ನು ನೀಡಲಾಗುತ್ತದೆ. ಈ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಗಳ ಪ್ರಯೋಜನಗಳೇನು, ಯಾವುದು ಉತ್ತಮವಾದ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಹೊಂದಿರುವ ಕಾರು ಮುಂತಾದ ವಿವರಗಳನ್ನು ಈ ಲೇಖನದಲ್ಲಿ ನೋಡೋಣ.

ಮ್ಯಾನುವಲ್ ಗೇರ್ ಬಾಕ್ಸ್ ಗಿಂತ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಬೆಸ್ಟ್.. ಏಕೆ ಗೊತ್ತಾ?

ಭಾರತದ ಪ್ರಮುಖ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ತನ್ನ 7 ಕಾರುಗಳನ್ನು ಆಟೋಮ್ಯಾಟಿಕ್ ಗೇರ್‌ಬಾಕ್ಸ್ ನೊಂದಿಗೆ ಬಿಡುಗಡೆಗೊಳಿಸಿದೆ. ಈ ಎಜಿಎಸ್ ಗಳು ನಗರದ ಬಳಕೆಗೆ ಸೂಕ್ತವಾಗಿವೆ. ಈ ಆಟೋಮ್ಯಾಟಿಕ್ ಗೇರ್‌ಬಾಕ್ಸ್ (ಎಜಿಎಸ್) ನಿಂದಾಗಿ ಇಂಧನ ದಕ್ಷತೆ ಹೆಚ್ಚುವುದಲ್ಲದೇ, ಡ್ರೈವ್ ಮಾಡುವುದು ಸುಲಭವಾಗಲಿದೆ. ಜೊತೆಗೆ ಎಜಿಎಸ್ ಕಾರುಗಳು ಅಷ್ಟೇನೂ ದುಬಾರಿಯಲ್ಲ.

ಮ್ಯಾನುವಲ್ ಗೇರ್ ಬಾಕ್ಸ್ ಗಿಂತ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಬೆಸ್ಟ್.. ಏಕೆ ಗೊತ್ತಾ?

ಭಾರತದ ನಗರಗಳಲ್ಲಿ ವಾಹನಗಳ ಸಂಖ್ಯೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರಿಂದಾಗಿ ಕಾರುಗಳ ಜೊತೆಗೆ, ಕಾರಿನಲ್ಲಿ ಪ್ರಯಾಣಿಸುವವರ ಮೇಲೆ ಹೆಚ್ಚು ಒತ್ತಡ ಉಂಟಾಗುತ್ತಿದೆ. ಈ ಸಂಚಾರ ದಟ್ಟಣೆಯನ್ನು ಸರಿ ದಾರಿಗೆ ತರುವುದು ನಮ್ಮಿಂದ ಸಾಧ್ಯವಾಗದೇ ಇದ್ದರೂ, ಸರಿಯಾದ ಕಾರುಗಳನ್ನು ಆಯ್ಕೆ ಮಾಡಿಕೊಳ್ಳುವುದು ನಮ್ಮ ಕೈಯಲ್ಲಿದೆ.

ಮ್ಯಾನುವಲ್ ಗೇರ್ ಬಾಕ್ಸ್ ಗಿಂತ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಬೆಸ್ಟ್.. ಏಕೆ ಗೊತ್ತಾ?

ನಗರಗಳ ಸಂಚಾರ ದಟ್ಟಣೆಯನ್ನು ಅರ್ಥಮಾಡಿಕೊಂಡಿರುವ ಕಾರು ತಯಾರಕ ಕಂಪನಿಗಳು, ತಮ್ಮ ಕಾರುಗಳಲ್ಲಿ ಎಜಿಎಸ್ ಅಳವಡಿಸುತ್ತಿವೆ. ಮಾರುತಿ ಸುಜುಕಿ ಕಂಪನಿಯು 2014ರಲ್ಲಿ ಮೊದಲ ಬಾರಿಗೆ ಸೆಲೆರಿಯೊ ಹ್ಯಾಚ್‌ಬ್ಯಾಕ್‌ನಲ್ಲಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಅನ್ನು ಬಿಡುಗಡೆಗೊಳಿಸಿತು.

ಮ್ಯಾನುವಲ್ ಗೇರ್ ಬಾಕ್ಸ್ ಗಿಂತ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಬೆಸ್ಟ್.. ಏಕೆ ಗೊತ್ತಾ?

ಮ್ಯಾನುವಲ್ ಗೇರ್ ಬಾಕ್ಸ್ ಗಳು ಕ್ಲಚ್ ಮೂಲಕ ಕಾರ್ಯನಿರ್ವಹಿಸುವಾಗ ಹೆಚ್ಚು ಒತ್ತಡ ಉಂಟಾಗುತ್ತದೆ. ಇದರಿಂದ ಕಾರಿನ ಇಂಧನ ದಕ್ಷತೆಯ ಮೇಲೆ ಪರಿಣಾಮ ಬೀರುವುದಲ್ಲದೆ ಕ್ಲಚ್ ಪೆಡಲ್ ಬ್ಲೇಡ್‌ಗಳ ಬಾಳಿಕೆ ಕಡಿಮೆಯಾಗುತ್ತದೆ. ಈ ಕಾರಣಕ್ಕೆ ಎಜಿಎಸ್‌ ಗಳು ಮೊದಲ ಬಾರಿಗೆ ಡ್ರೈವ್ ಮಾಡುತ್ತಿರುವವರಿಗೂ ಸಹ ಬಹಳ ವೇಗವಾಗಿ ಹಾಗೂ ಸುಲಭವಾಗಿ ಹೊಂದಿಕೊಳ್ಳುತ್ತವೆ.

ಮ್ಯಾನುವಲ್ ಗೇರ್ ಬಾಕ್ಸ್ ಗಿಂತ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಬೆಸ್ಟ್.. ಏಕೆ ಗೊತ್ತಾ?

ಇವುಗಳಿಂದ ಕ್ಲಚ್ ಪೆಡಲ್‌ಗಳಿಗೂ ಸಹ ಯಾವುದೇ ತೊಂದರೆಯಾಗುವುದಿಲ್ಲ. ಎಜಿಎಸ್ ಕಾರುಗಳಲ್ಲಿ ಕ್ಲಚ್ ಫ್ರೀ ಪೆಡಲ್ ನೀಡಲಾಗುತ್ತದೆ. ಎಜಿಎಸ್ ಟ್ರಾನ್ಸ್ ಮಿಷನ್ ಮೂಲಕ ಯಾವುದೇ ಆಕ್ಸೆಲರೇಷನ್ ಅವಶ್ಯಕತೆ ಇಲ್ಲದೆ ಕಾರು ಚಲಿಸುತ್ತದೆ. ಭಾರೀ ಸಂಚಾರ ದಟ್ಟಣೆಯಲ್ಲಿ ಎಜಿಎಸ್ ನೆರವಾಗುತ್ತದೆ.

ಮ್ಯಾನುವಲ್ ಗೇರ್ ಬಾಕ್ಸ್ ಗಿಂತ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಬೆಸ್ಟ್.. ಏಕೆ ಗೊತ್ತಾ?

ಸಂಚಾರ ದಟ್ಟಣೆಯ ಸಂದರ್ಭದಲ್ಲಿ ಡ್ರೈವರ್ ಬ್ರೇಕ್‌ಗಳನ್ನು ಮಾತ್ರ ಹಾಕಿದರೆ ಸಾಕಾಗುತ್ತದೆ. ಎಜಿಎಸ್ ಟ್ರಾನ್ಸ್ ಮಿಷನ್ ನಿಂದ ಉಂಟಾಗುವ ಕಿಕ್‌ಸ್ಟಾರ್ಟ್, ಇಳಿಜಾರು ರಸ್ತೆಗಳಲ್ಲಿ ಕಾರನ್ನು ಹೆಚ್ಚು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಕಡಿಮೆ ಗೇರ್‌ನಲ್ಲಿಯೂ ಹೆಚ್ಚಿನ ಪವರ್ ಪಡೆಯಬಹುದು.

ಮ್ಯಾನುವಲ್ ಗೇರ್ ಬಾಕ್ಸ್ ಗಿಂತ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಬೆಸ್ಟ್.. ಏಕೆ ಗೊತ್ತಾ?

ಸೆಲೆರಿಯೊ ಕಾರಿನ ಬಿಡುಗಡೆಯ ನಂತರ, ಮಾರುತಿ ಸುಜುಕಿ ಕಂಪನಿಯು ಆಲ್ಟೊ ಕೆ 10, ಎಸ್-ಪ್ರೆಸ್ಸೊ, ವ್ಯಾಗನ್ಆರ್, ಸ್ವಿಫ್ಟ್, ಡಿಸೈರ್ ಹಾಗೂ ಇಗ್ನಿಸ್ ಕಾರುಗಳನ್ನು ಎಜಿಎಸ್ ನೊಂದಿಗೆ ಬಿಡುಗಡೆಗೊಳಿಸಿದೆ. ಎಜಿಎಸ್ ಹೊಂದಿರುವ ಕಾರಿನ ಆರಂಭಿಕ ಬೆಲೆ ರೂ.4.5 ಲಕ್ಷಗಳಾಗಿದೆ.

ಮ್ಯಾನುವಲ್ ಗೇರ್ ಬಾಕ್ಸ್ ಗಿಂತ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಬೆಸ್ಟ್.. ಏಕೆ ಗೊತ್ತಾ?

ಮಾರುತಿ ಸುಜುಕಿ ಕಂಪನಿಯ ಎಜಿಎಸ್ ಕಾರುಗಳ ಇಂಧನ ದಕ್ಷತೆಯು ಮ್ಯಾನುವಲ್ ಕಾರುಗಳ ಇಂಧನ ದಕ್ಷತೆಗೆ ಸರಿಸಮನಾಗಿದೆ. ಇದರಿಂದಾಗಿ ಎಜಿಎಸ್ ಟ್ರಾನ್ಸ್ ಮಿಷನ್ ಹೊಂದಿರುವ ಕಾರುಗಳು ಹೆಚ್ಚು ಗ್ರಾಹಕರನ್ನು ಆಕರ್ಷಿಸುತ್ತವೆ. ಎಜಿಎಸ್ ಹೊಂದಿರುವ ಕಾರುಗಳು ಮೂಬರುವ ದಿನಗಳಲ್ಲಿ ಹೆಚ್ಚು ಜನಪ್ರಿಯವಾಗುವ ಸಾಧ್ಯತೆಗಳಿವೆ. ಏಕೆಂದರೆ ಎಜಿಎಸ್ ಕಾರುಗಳ ನಿರ್ವಹಣಾ ವೆಚ್ಚವು ಹೆಚ್ಚಾಗಿರುವುದಿಲ್ಲ.

Most Read Articles

Kannada
English summary
AGS is the perfect for city driving. Read in Kannada.
Story first published: Saturday, April 4, 2020, 12:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X