Just In
Don't Miss!
- Sports
ಆಸಿಸ್ ಬೌಲರ್ಗಳಿಗೆ ಪಾಂಟಿಂಗ್ ಚಾಟಿ: ಶಾರ್ದೂಲ್- ಸುಂದರ್ ಆಟಕ್ಕೆ ಮೆಚ್ಚುಗೆ
- Finance
ಪ್ರತಿ ಲೀಟರ್ ಪೆಟ್ರೋಲ್- ಡೀಸೆಲ್ ಗೆ ನೀವು ನೀಡುವ ಬೆಲೆಯಲ್ಲಿ 48% ಕೇಂದ್ರದ ಸುಂಕ
- News
ಕರ್ನಾಟಕ ಆಕ್ರಮಿತ ಪ್ರದೇಶ ಶೀಘ್ರ ಮಹಾರಾಷ್ಟ್ರಕ್ಕೆ ಸೇರ್ಪಡೆ: ಉದ್ಧವ್ ಠಾಕ್ರೆ
- Movies
ಶಿವಮೊಗ್ಗದಲ್ಲಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್: 'ಬೆಸ್ಟ್ ವೀಕೆಂಡ್ ಎವರ್' ಎಂದ ನಟಿ
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕಿಯಾ ಕಾರ್ನೀವಲ್ ಎಂಪಿವಿ ಖರೀದಿಸಿದ ಮಾಜಿ ಕ್ರಿಕೆಟಿಗ
ನಮ್ಮ ದೇಶದ ಕ್ರಿಕೆಟಿಗರು ಒಂದಕ್ಕಿಂತ ಹೆಚ್ಚು ಕಾರುಗಳನ್ನು ಹೊಂದಿರುವುದು ಸಾಮಾನ್ಯ ಸಂಗತಿಯಾಗಿದೆ. ಧೋನಿ, ಕೊಹ್ಲಿ, ಸಚಿನ್ ಅವರಂತಹ ಆಟಗಾರರು ಐಷಾರಾಮಿ ಕಾರುಗಳ ಸಂಗ್ರಹವನ್ನೇ ಹೊಂದಿದ್ದಾರೆ. ಇತ್ತೀಚೆಗೆ ಮಾಜಿ ಕ್ರಿಕೆಟಿಗರೊಬ್ಬರು ಹೊಸ ಐಷಾರಾಮಿ ಕಾರು ಖರೀದಿಸಿದ್ದಾರೆ.

ಮಾಜಿ ಕ್ರಿಕೆಟಿಗ ಅಜಯ್ ಜಡೇಜಾ ಹೊಸ ಕಾರ್ನೀವಲ್ ಎಂಪಿವಿಯನ್ನು ಖರೀದಿಸಿದ್ದಾರೆ. ಇತ್ತೀಚೆಗೆ ಈ ಕಾರ್ ಅನ್ನು ಅಜಯ್ ಜಡೇಜಾರವರಿಗೆ ಹೋಮ್ ಡೆಲಿವರಿ ಮಾಡಲಾಯಿತು. ಅಜಯ್ ಜಡೇಜಾರವರು ಸದ್ಯಕ್ಕೆ ರಾಜಸ್ಥಾನದ ಉದಯಪುರದಲ್ಲಿ ವಾಸಿಸುತ್ತಿದ್ದಾರೆ.

ಈ ಹಿಂದೆ ಭಾರತ ಕ್ರಿಕೆಟ್ ತಂಡದ ಭಾಗವಾಗಿದ್ದ ಅಜಯ್ ಜಡೇಜಾರವರು ಈಗ ಕಾಮೆಂಟರಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಕಾರ್ನೀವಲ್ ಅಜಯ್ ಜಡೇಜಾರವರ ಮೊದಲ ಐಷಾರಾಮಿ ಕಾರ್ ಆಗಿರುವ ಸಾಧ್ಯತೆಗಳಿವೆ. ಈ ಮೊದಲು ಅವರು ಯಾವುದೇ ಐಷಾರಾಮಿ ಕಾರಿನೊಂದಿಗೆ ಕಾಣಿಸಿಕೊಂಡಿರಲಿಲ್ಲ.
MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಕಿಯಾ ಮೋಟಾರ್ಸ್‌ನ ಐಷಾರಾಮಿ ಎಂಪಿವಿಯಾದ ಕಾರ್ನೀವಲ್ ಅನ್ನು 2020ರ ಆಟೋ ಎಕ್ಸ್‌ಪೋದಲ್ಲಿ ಬಿಡುಗಡೆಗೊಳಿಸಲಾಯಿತು. ಇದು ಕಂಪನಿಯ ಅತ್ಯಂತ ದುಬಾರಿ ಕಾರ್ ಆಗಿದ್ದು,ಐಷಾರಾಮಿ ಕ್ಯಾಬಿನ್ ಹಾಗೂ ಆಕರ್ಷಕ ಬೆಲೆಯನ್ನು ಹೊಂದಿದೆ.

ಕಿಯಾ ಕಾರ್ನೀವಲ್ ಅನ್ನು ಹಲವಾರು ಮಾದರಿಗಳಲ್ಲಿ ಬಿಡುಗಡೆಗೊಳಿಸಲಾಗಿದೆ. ಅಜಯ್ ಜಡೇಜಾ ಟಾಪ್ ಎಂಡ್ ಲಿಮೋಸಿನ್ ಮಾದರಿಯನ್ನು ಖರೀದಿಸಿದ್ದಾರೆ. ಈ ಕಾರಿನ ಬೆಲೆ ಸುಮಾರು ರೂ.34 ಲಕ್ಷಗಳಾಗಿದ್ದು, ಆನ್ ರೋಡ್ ದರವು ರೂ.36 ಲಕ್ಷಗಳಾಗುತ್ತದೆ.
MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಕಿಯಾ ಕಾರ್ನೀವಲ್ ಬಿಡುಗಡೆಯಾಗುವ ಮೊದಲೇ 3,500 ಬುಕ್ಕಿಂಗ್‌ಗಳನ್ನು ಪಡೆದಿತ್ತು. ಕಾರ್ನೀವಲ್ ಎಂಪಿವಿಯನ್ನು ಪ್ರೀಮಿಯಂ, ಪ್ರೆಸ್ಟಿಜ್ ಹಾಗೂ ಲಿಮೋಸಿನ್ ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ.

ಕಾರ್ನೀವಲ್ ಎಂಪಿವಿಯನ್ನು 9 ಸೀಟು, 7 ಸೀಟು ಹಾಗೂ 8 ಸೀಟುಗಳ ಆಯ್ಕೆಯೊಂದಿಗೆ ಮಾರಾಟ ಮಾಡಲಾಗುತ್ತದೆ. ಟಾಪ್ ಎಂಡ್ ಮಾದರಿಯು ಅಡ್ಜಸ್ಟಬಲ್ ಮಾಡಬಹುದಾದ ಸೀಟುಗಳನ್ನು ಹೊಂದಿದೆ. ಈ ಎಂಪಿವಿಯಲ್ಲಿ ಹಲವಾರು ಫೀಚರ್‌ಗಳನ್ನು ನೀಡಲಾಗಿದೆ.
MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

5 ಮೀಟರ್ ಉದ್ದದ ಈ ಎಂಪಿವಿ ಹೆಚ್ಚು ವಿಶಾಲವಾದ ಕ್ಯಾಬಿನ್, ಲೆಗ್ ರೂಂ ಹಾಗೂ ಹೆಡ್ ರೂಂಗಳನ್ನು ಹೊಂದಿದೆ. ಇದರ ಜೊತೆಗೆ ಎಲೆಕ್ಟ್ರಿಕ್ ಸ್ಲೈಡಿಂಗ್ ಡೋರ್‌ಗಳು, ಪವರ್-ಫೋಲ್ಡಿಂಗ್ ಒಆರ್‌ವಿಎಂ, ಎಲ್‌ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್, ಎಲ್‌ಇಡಿ ಟೇಲ್‌ಲ್ಯಾಂಪ್, ಪವರ್-ಚಾಲಿತ ಟೇಲ್‌ಗೇಟ್ ಸೇರಿದಂತೆ ಹಲವು ಫೀಚರ್‌ಗಳನ್ನು ಹೊಂದಿದೆ.

ಕಿಯಾ ಕಾರ್ನೀವಲ್‌ನಲ್ಲಿ 2.2-ಲೀಟರ್ 4-ಸಿಲಿಂಡರ್ ಟರ್ಬೊ-ಡೀಸೆಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 197 ಬಿಹೆಚ್‌ಪಿ ಪವರ್ ಹಾಗೂ 440 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಇದರ ಜೊತೆಗೆ 8-ಸ್ಪೀಡಿನ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ನೀಡಲಾಗಿದೆ.
ಚಿತ್ರಕೃಪೆ: ಅನುರಾಗ್ ಶರ್ಮಾ