ಹೊಸ ಕ್ರೆಟಾ ಕಾರಿನ ವಿತರಣೆ ಆರಂಭಿಸಿದ ಹ್ಯುಂಡೈ

ಹ್ಯುಂಡೈ ಕಂಪನಿಯು ಕೆಲವು ದಿನಗಳ ಹಿಂದಷ್ಟೇ ದೇಶಿಯ ಮಾರುಕಟ್ಟೆಯಲ್ಲಿ ಹೊಸ ಕ್ರೆಟಾ ಕಾರ್ ಅನ್ನು ಬಿಡುಗಡೆಗೊಳಿಸಿತ್ತು. ಈ ಕಾರು ಗ್ರಾಹಕರಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಪಡೆದಿದೆ. ಈಗ ದೇಶಾದ್ಯಂತವಿರುವ ಹ್ಯುಂಡೈ ಕಂಪನಿಯ ಡೀಲರ್ ಗಳು ಹೊಸ ಕ್ರೆಟಾ ಕಾರನ್ನು ಗ್ರಾಹಕರಿಗೆ ವಿತರಿಸಲು ಆರಂಭಿಸಿದ್ದಾರೆ.

ಹೊಸ ಕ್ರೆಟಾ ಕಾರಿನ ವಿತರಣೆ ಆರಂಭಿಸಿದ ಹ್ಯುಂಡೈ

ಕರ್ನಾಟಕದಲ್ಲಿ, ಬಿಳಿ ಬಣ್ಣದ ಹ್ಯುಂಡೈ ಕ್ರೆಟಾ ಎಸ್‌ಎಕ್ಸ್ (ಒ) ಕಾರನ್ನು ಗ್ರಾಹಕರಿಗೆ ವಿತರಿಸಲಾಗಿದೆ. ಈ ವೀಡಿಯೊವನ್ನು ಬಿಎಂಸಿ ಹೆಚ್‌ಡಿ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್ ಲೋಡ್ ಮಾಡಲಾಗಿದೆ. ಕಾರನ್ನು ಪಡೆಯಲು ಗ್ರಾಹಕರು ಶೋ ರೂಂಗೆ ಬರುತ್ತಿರುವುದನ್ನು ಈ ವೀಡಿಯೊದಲ್ಲಿ ಕಾಣಬಹುದು.

ಹೊಸ ಕ್ರೆಟಾ ಕಾರಿನ ವಿತರಣೆ ಆರಂಭಿಸಿದ ಹ್ಯುಂಡೈ

ಫಾರ್ಮ್ ಗಳನ್ನು ಭರ್ತಿ ಮಾಡುವುದರ ಜೊತೆಗೆ ಎಲ್ಲಾ ಔಪಚಾರಿಕತೆಗಳನ್ನು ಪೂರ್ಣಗೊಳಿಸುವುದನ್ನು ಕಾಣಬಹುದು. ಶೋ ರೂಂನ ಹೊರಗಡೆ ಹೊಸ ಕಾರ್ ಅನ್ನು ಹೊದಿಕೆಯಿಂದ ಮುಚ್ಚಿ ನಿಲ್ಲಿಸಲಾಗಿದೆ. ಇದನ್ನು ಖರೀದಿಸಿರುವವರು ಕವರ್ ತೆಗೆದುಹಾಕುವುದನ್ನು ನೋಡಬಹುದು.

ಹೊಸ ಕ್ರೆಟಾ ಕಾರಿನ ವಿತರಣೆ ಆರಂಭಿಸಿದ ಹ್ಯುಂಡೈ

ಶೋರೂಂ ಮಾರಾಟಗಾರರು ಈ ಕಾರು ಹಾಗೂ ಅದರ ಮಾಲೀಕರೊಂದಿಗೆ ಫೋಟೋ ತೆಗೆಸಿಕೊಳ್ಳುತ್ತಾರೆ. ಹ್ಯುಂಡೈ ಭಾರತದ ಅತಿದೊಡ್ಡ ಕಾರು ತಯಾರಕ ಕಂಪನಿಗಳಲ್ಲಿ ಒಂದಾಗಿದ್ದು, ದೊಡ್ಡ ಪ್ರಮಾಣದ ಮಾರಾಟ ಹಾಗೂ ಸರ್ವಿಸ್ ನೆಟ್ ವರ್ಕ್ ಅನ್ನು ಹೊಂದಿದೆ ಎಂದು ಹೊಸ ಕಾರಿನ ಮಾಲೀಕರು ಹೇಳುತ್ತಿದ್ದಾರೆ.

ಹೊಸ ಕ್ರೆಟಾ ಕಾರಿನ ವಿತರಣೆ ಆರಂಭಿಸಿದ ಹ್ಯುಂಡೈ

ಈ ಕಾರಣಕ್ಕೆ ಬೇರೆ ಕಾರುಗಳನ್ನು ಖರೀದಿಸುವ ಬದಲು ಹ್ಯುಂಡೈ ಕ್ರೆಟಾವನ್ನು ಖರೀದಿಸಿರುವುದಾಗಿ ಹೇಳಿದ್ದಾರೆ. ಹೆಚ್ಚಿನ ಪ್ರಮಾಣದ ಸೇಲ್ಸ್ ನೆಟ್ ವರ್ಕ್ ಇರುವ ಕಾರಣಕ್ಕೆ ಕಿಯಾ ಸೆಲ್ಟೋಸ್ ಕಾರಿನ ಬದಲು ಹ್ಯುಂಡೈ ಕ್ರೆಟಾವನ್ನು ಖರೀದಿಸಿದ್ದಾಗಿ ಹೇಳಿದ್ದಾರೆ.

ಹೊಸ ಕ್ರೆಟಾ ಕಾರಿನ ವಿತರಣೆ ಆರಂಭಿಸಿದ ಹ್ಯುಂಡೈ

ಅಂದ ಹಾಗೆ ಈ ಗ್ರಾಹಕರು ಖರೀದಿಸಿರುವುದು, ಕ್ರೆಟಾ ಕಾರಿನ ಟಾಪ್ ಎಂಡ್ ಮಾದರಿಯಾದ ಎಸ್‌ಎಕ್ಸ್ (ಒ) ಕಾರ್ ಅನ್ನು. ಈ ಕ್ರೆಟಾದ ದುಬಾರಿ ಮಾದರಿಯಾಗಿದೆ. ಈ ಕಾರು ಪನೋರಮಿಕ್ ಸನ್ ರೂಫ್, ಏರ್ ಪ್ಯೂರಿಫೈಯರ್ ಸಿಸ್ಟಂ, ಡೈಮಂಡ್ ಕಟ್ ಅಲಾಯ್ ವ್ಹೀಲ್ಸ್, ಎಲ್ಇಡಿ ಹೆಡ್ ಲ್ಯಾಂಪ್, ಎಲ್ಇಡಿ ಟೇಲ್ ಲ್ಯಾಂಪ್ ಸೇರಿದಂತೆ ಹಲವಾರು ಫೀಚರ್ ಗಳನ್ನು ಹೊಂದಿದೆ.

ಹೊಸ ಕ್ರೆಟಾ ಕಾರಿನ ವಿತರಣೆ ಆರಂಭಿಸಿದ ಹ್ಯುಂಡೈ

ಹ್ಯುಂಡೈ ಕ್ರೆಟಾ ಕಾರಿನ ಟಾಪ್ ಮಾದರಿಯ ಕಾರು ಬೋಸ್ 8 ಸ್ಪೀಕರ್ ಸಿಸ್ಟಂ, ಎಲೆಕ್ಟ್ರಾನಿಕ್ ಆಗಿ ಅಡ್ಜಸ್ಟ್ ಮಾಡಬಹುದಾದ ಸೀಟುಗಳು, ಡ್ಯುಯಲ್ ಟೋನ್ ಇಂಟಿರಿಯರ್, ಲೆದರ್ ಪ್ಯಾಕೇಜಿಂಗ್, ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಸೇರಿದಂತೆ ಹಲವು ಫೀಚರ್ ಗಳನ್ನು ಹೊಂದಿದೆ.

ಈ ಮಾದರಿಯಲ್ಲಿ 1.4 ಲೀಟರಿನ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 138 ಬಿಹೆಚ್‌ಪಿ ಪವರ್ ಹಾಗೂ 242 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. 7-ಸ್ಪೀಡ್ ಟಿಸಿಡಿಯನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತದೆ. ಇದರ ಜೊತೆಗೆ ಹೊಸ ಕ್ರೆಟಾ ಕಾರಿನಲ್ಲಿ ಇನ್ನೂ ಎರಡು ಎಂಜಿನ್ ಆಯ್ಕೆಗಳನ್ನು ನೀಡಲಾಗುತ್ತದೆ.

ಹೊಸ ಕ್ರೆಟಾ ಕಾರಿನ ವಿತರಣೆ ಆರಂಭಿಸಿದ ಹ್ಯುಂಡೈ

ಹೊಸ ಕ್ರೆಟಾ ಕಾರಿನಲ್ಲಿ 1.5 ಲೀಟರಿನ ಪೆಟ್ರೋಲ್ ಹಾಗೂ 1.5 ಲೀಟರಿನ ಡೀಸೆಲ್ ಎಂಜಿನ್ ಗಳಲ್ಲಿಯೂ ಮಾರಾಟ ಮಾಡಲಾಗುತ್ತದೆ. ಹೊಸ ಹ್ಯುಂಡೈ ಕ್ರೆಟಾ ಕಾರಿಗೆ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೊಸ ಹ್ಯುಂಡೈ ಕ್ರೆಟಾ ಈ ಸೆಗ್ ಮೆಂಟ್ ನಲ್ಲಿ ಹೆಚ್ಚು ಮಾರಾಟವಾಗುವ ಸಾಧ್ಯತೆಗಳಿವೆ.

Most Read Articles

Kannada
English summary
All new Hyundai Creta SUV delivery begins in India. Read in Kannada.
Story first published: Tuesday, March 24, 2020, 15:19 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X