ಆಕರ್ಷಕ ಬೆಲೆಯೊಂದಿಗೆ ಬಿಡುಗಡೆಯಾಗಲಿರುವ ನಿಸ್ಸಾನ್ ಮ್ಯಾಗ್ನೈಟ್ ಕಂಪ್ಯಾಕ್ಟ್ ಎಸ್‌ಯುವಿ ಅನಾವರಣ

ನಿಸ್ಸಾನ್ ಗ್ಲೊಬಲ್ ಕಂಪನಿಯು ತನ್ನ ಬಹುನೀರಿಕ್ಷಿತ ಮ್ಯಾಗ್ನೈಟ್ ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾದರಿಯನ್ನು ಭಾರತದಲ್ಲಿ ಮಾತ್ರವಲ್ಲದೆ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಬಿಡುಗಡೆ ಮಾಡಲು ಅಂತಿಮ ಹಂತದ ಸಿದ್ದತೆ ನಡೆಸಿದ್ದು, ಇದೀಗ ಹೊಸ ಕಾರಿನ ಉತ್ಪಾದನಾ ಆವೃತ್ತಿಯನ್ನು ಅನಾವರಣಗೊಳಿಸಿದೆ.

ನಿಸ್ಸಾನ್ ಮ್ಯಾಗ್ನೈಟ್ ಕಂಪ್ಯಾಕ್ಟ್ ಎಸ್‌ಯುವಿ ಅನಾವರಣ

ಬಿ-ಸೆಗ್ಮೆಂಟ್‌ನಲ್ಲಿರುವ ಪ್ರಮುಖ ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾದರಿಗಳಿಗೆ ಪೈಪೋಟಿಯಾಗಿ ಬಿಡುಗಡೆಯಾಗುತ್ತಿರುವ ಮ್ಯಾಗ್ನೈಟ್ ಕಾರು ಸಬ್ ಫೋರ್ ಮೀಟರ್ ವಿನ್ಯಾಸ ಹೊಂದಿದ್ದು, ಹೊಸ ಕಾರು ಶೀಘ್ರದಲ್ಲೇ ಅಧಿಕೃತವಾಗಿ ಮಾರಾಟಕ್ಕೆ ಲಭ್ಯವಾಗುವ ಸುಳಿವು ನೀಡಿದೆ. ಮಾಗ್ನೈಟ್ ಕಾರು ಬಿಡುಗಡೆಯ ನಂತರ ಮುಂದಿನ ಕೆಲವು ವರ್ಷಗಳಲ್ಲಿ ಒಟ್ಟು 8 ಹೊಸ ಕಾರು ಮಾದರಿಗಳನ್ನು ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿರುವ ನಿಸ್ಸಾನ್ ಇಂಡಿಯಾ ಕಂಪನಿಯು ಕಾರು ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸುವ ಸುಳಿವು ನೀಡಿದೆ.

ನಿಸ್ಸಾನ್ ಮ್ಯಾಗ್ನೈಟ್ ಕಂಪ್ಯಾಕ್ಟ್ ಎಸ್‌ಯುವಿ ಅನಾವರಣ

ಮ್ಯಾಗ್ನೈಟ್ ಕಾರು ಮಾದರಿಯು ಹೊಸ 8 ಕಾರುಗಳಲ್ಲಿ ಒಂದಾಗಿದ್ದು, ಹೊಸ ಕಾರು ದೇಶದಲ್ಲಿ ಮಾರಾಟವಾಗುತ್ತಿರುವ ಹಲವು ಜನಪ್ರಿಯ ಕಾರು ಮಾದರಿಗಳಿಗೆ ಪೈಪೋಟಿಯಾಗಿ ಆಕರ್ಷಕ ಬೆಲೆಯಲ್ಲಿ ಖರೀದಿಗೆ ಲಭ್ಯವಾಗಲಿದೆ.

ನಿಸ್ಸಾನ್ ಮ್ಯಾಗ್ನೈಟ್ ಕಂಪ್ಯಾಕ್ಟ್ ಎಸ್‌ಯುವಿ ಅನಾವರಣ

ಮ್ಯಾಗ್ನೈಟ್ ಕಾನ್ಸೆಪ್ಟ್ ಮಾದರಿಯಲ್ಲಿ ನೀಡಲಾದ ವಿನ್ಯಾಸಗಳನ್ನೇ ಉತ್ಪಾದನಾ ಆವೃತ್ತಿಯಲ್ಲೂ ಉಳಿಸಿಕೊಳ್ಳಲು ಯತ್ನಿಸಿರುವ ನಿಸ್ಸಾನ್ ಕಂಪನಿಯು ಹೊಸ ಕಾರಿನ ಕಾರ್ಯಕ್ಷಮತೆ ಕುರಿತಂತೆ ಹಲವಾರು ಸುತ್ತಿನ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಕೈಗೊಂಡಿದ್ದು, ಹೊಸ ಕಾರು ಸ್ಪೋರ್ಟಿ ಲುಕ್‌ನೊಂದಿಗೆ ಕಟಿಂಗ್ ಎಡ್ಜ್ ವಿನ್ಯಾಸಗಳನ್ನು ಪಡೆದುಕೊಂಡಿದೆ.

ನಿಸ್ಸಾನ್ ಮ್ಯಾಗ್ನೈಟ್ ಕಂಪ್ಯಾಕ್ಟ್ ಎಸ್‌ಯುವಿ ಅನಾವರಣ

ಹೊಸ ಕಂಪ್ಯಾಕ್ಟ್ ಎಸ್‌ಯುವಿಯಲ್ಲಿ ಆಕರ್ಷಕವಾದ ಗ್ರಿಲ್, ಕ್ರೋಮ್ ಸ್ಟ್ರೀಪ್, ಸ್ಲಿಕ್ ಎಲ್ಇಡಿ ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, ಎಲ್ ವಿನ್ಯಾಸದ ಎಲ್ಇಡಿ ಡಿಆರ್‌ಎಲ್‌ಗಳು, ಫ್ರಂಟ್ ಬಂಪರ್, ಫಾಗ್ ಲ್ಯಾಂಪ್, ಸೆಂಟ್ರಲ್ ಏರ್ ಇನ್‌ಟೆಕ್ ಸೌಲಭ್ಯಗಳಿವೆ. ಹಾಗೆಯೇ ಹೊಸ ಕಾರಿನ ಸೈಡ್ ಪ್ರೋಫೈಲ್ ಕೂಡಾ ಆಕರ್ಷಕವಾಗಿದ್ದು, 16-ಇಂಚಿನ ಡೈಮಂಡ್ ಕಟ್ ಅಲಾಯ್ ವೀಲ್ಹ್, ಟೈಲ್‌ಲೈಟ್ ಸೌಲಭ್ಯದೊಂದಿಗೆ ಕಾರಿನ ಡೋರ್ ತಳಭಾಗದಲ್ಲಿ ಮತ್ತು ರಿಯರ್ ಬಂಪರ್ ಬಳಿ ಸಿಲ್ವರ್ ಕೊಟಿಂಗ್ ಹೊಂದಿರುವ ಆಕ್ಸೆಂಟ್ ನೀಡಲಾಗಿದೆ.

ನಿಸ್ಸಾನ್ ಮ್ಯಾಗ್ನೈಟ್ ಕಂಪ್ಯಾಕ್ಟ್ ಎಸ್‌ಯುವಿ ಅನಾವರಣ

ಮ್ಯಾಗ್ನೈಟ್ ಕಾರಿನಲ್ಲಿ ಕಪ್ಪು ಬಣ್ಣದ ವೀಲ್ಹ್ ಆರ್ಚ್, ವೀಲ್ಹ್ ಆರ್ಚ್‌ಗೆ ಹೊಂದಿಕೊಂಡಿರುವ ಬ್ಲ್ಯಾಕ್ ಕ್ಲಾಡಿಂಗ್, ಬೂಟ್ ಲಿಡ್, ಕಾರಿನ ಹಿಂಭಾಗದ ಮಧ್ಯದಲ್ಲಿ ನಿಸ್ಸಾನ್ ಲೊಗೊ ಜೊತೆಗೆ ಮ್ಯಾಗ್ನೈಟ್ ಲೊಗೊ ನೀಡಲಾಗಿದ್ದು, ಕಾರಿನ ಹೊರ ನೋಟಕ್ಕೆ ಮತ್ತಷ್ಟು ಆಕರ್ಷಣೆ ನೀಡಲಿವೆ.

ನಿಸ್ಸಾನ್ ಮ್ಯಾಗ್ನೈಟ್ ಕಂಪ್ಯಾಕ್ಟ್ ಎಸ್‌ಯುವಿ ಅನಾವರಣ

ನಿಸ್ಸಾನ್ ಕಂಪನಿಯು ಮ್ಯಾಗ್ನೈಟ್ ಕಾರಿನಲ್ಲಿ ಹೊರಭಾಗದಂತೆ ಒಳಭಾಗದಲ್ಲೂ ಆಕರ್ಷಕ ವಿನ್ಯಾಸವನ್ನು ನೀಡಿದ್ದು, ಸಂಪೂರ್ಣವಾಗಿ ಕಪ್ಪು ಬಣ್ಣದ ಕ್ಯಾಬಿನ್ ಪ್ರೀಮಿಯಂ ಅನುಭವ ನೀಡುತ್ತದೆ. ಆಸನಗಳಲ್ಲಿ ಮಾತ್ರ ಗ್ರೇ ಬಣ್ಣವನ್ನು ಬಣ್ಣವನ್ನು ಬಳಕೆ ಮಾಡಲಾಗಿದ್ದು, ಫ್ಲ್ಯಾಟ್ ಬಾಟಮ್ ಸ್ಪೀರಿಂಗ್ ವೀಲ್ಹ್, ಮೌಂಟೆಡ್ ಕಂಟ್ರೋಲ್ಸ್, 7-ಇಂಚಿನ ಫುಲ್ ಡಿಜಿಟಲ್ ಟಿಎಫ್‌ಟಿ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, 8-ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಕ್ಲಸ್ಟರ್, ಕ್ಲೈಮೆಟ್ ಕಂಟ್ರೋಲ್ ಸಿಸ್ಟಂ ಹೊಂದಿದೆ.

ನಿಸ್ಸಾನ್ ಮ್ಯಾಗ್ನೈಟ್ ಕಂಪ್ಯಾಕ್ಟ್ ಎಸ್‌ಯುವಿ ಅನಾವರಣ

ಹಿಂಬದಿಯಲ್ಲಿ ಆರಾಮದಾಯಕ ಆಸನಗಳೊಂದಿಗೆ ಸೆಂಟರ್ ಆರ್ಮ್ ರೆಸ್ಟ್, ರಿಯರ್ ಎಸಿ ವೆಂಟ್ಸ್, 60:40 ಅನುಪಾತದಲ್ಲಿ ಮಡಿಕೆ ಮಾಡಬಹುದಾದ ಆಸನಗಳು, 334-ಲೀಟರ್ ಸಾಮರ್ಥ್ಯದ ಬೂಟ್ ಸ್ಪೆಸ್ ನೀಡಲಾಗಿದ್ದು, ಹೆಚ್ಚುವರಿ ಬೂಟ್ ಸ್ಪೆಸ್ ಅವಶ್ಯವಿದ್ದಲ್ಲಿ ಹಿಂಬದಿಯ ಆಸನಗಳನ್ನು ಮಡಿಕೆ ಮಾಡಿಕೊಳ್ಳಬಹುದಾಗಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ನಿಸ್ಸಾನ್ ಮ್ಯಾಗ್ನೈಟ್ ಕಂಪ್ಯಾಕ್ಟ್ ಎಸ್‌ಯುವಿ ಅನಾವರಣ

ಎಂಜಿನ್ ಮತ್ತು ಪರ್ಫಾಮೆನ್ಸ್

ನಿಸ್ಸಾನ್ ಕಂಪನಿಯು ಮ್ಯಾಗ್ನೈಟ್ ಕಂಪ್ಯಾಕ್ಟ್ ಎಸ್‌ಯುವಿಯಲ್ಲಿ ಎಂಜಿನ್ ಹಾಗೂ ಟ್ರಾನ್ಸ್ ಮಿಷನ್ ಆಯ್ಕೆಗಳ ಬಗ್ಗೆ ಅಧಿಕೃತವಾದ ಮಾಹಿತಿ ನೀಡಿಲ್ಲವಾದರೂ ಕಂಪನಿಯು ಹೊಸ ಕಾರಿನಲ್ಲಿ 1.0-ಲೀಟರ್ ಸಾಮರ್ಥ್ಯದ ಮೂರು ಸಿಲಿಂಡರಿನ ಪೆಟ್ರೋಲ್ ಎಂಜಿನ್ ಅಳವಡಿಸುವುದು ಬಹುತೇಕ ಖಚಿತವಾಗಿದೆ. ಈ ಎಂಜಿನ್ ಅನ್ನು ರೆನಾಲ್ಟ್ ಟ್ರೈಬರ್‌ನಿಂದ ಎರವಲು ಪಡೆದುಕೊಂಡಿರುವ ಕಂಪನಿಯ ಎಕ್ಸ್‌ಟ್ರಾನಿಕ್ ಸಿವಿಟಿ ಗೇರ್‌ಬಾಕ್ಸ್ ಮತ್ತು ಬೆಸ್ ವೆರಿಯೆಂಟ್‌ಗಳಲ್ಲಿ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆ ನೀಡಲಿದೆ.

ನಿಸ್ಸಾನ್ ಮ್ಯಾಗ್ನೈಟ್ ಕಂಪ್ಯಾಕ್ಟ್ ಎಸ್‌ಯುವಿ ಅನಾವರಣ

ಮ್ಯಾಗ್ನೈಟ್ ಕಾರಿನಲ್ಲಿ ನಿಸ್ಸಾನ್ ಕಂಪನಿಯು ಹಲವಾರು ಪ್ರೀಮಿಯಂ ಫೀಚರ್ಸ್ ಜೋಡಣೆ ಮಾಡಿದ್ದು, ಹೊಸ ಕಾರಿನ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 6.50 ಲಕ್ಷದಿಂದ ರೂ.11 ಲಕ್ಷ ಬೆಲೆ ಅಂತರದಲ್ಲಿ ಮಾರಾಟ ಮಾಡುವ ನೀರಿಕ್ಷೆಯಲ್ಲಿದೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ನಿಸ್ಸಾನ್ ಮ್ಯಾಗ್ನೈಟ್ ಕಂಪ್ಯಾಕ್ಟ್ ಎಸ್‌ಯುವಿ ಅನಾವರಣ

ಹೊಸ ಕಾರಿನ ಮೂಲಕ ಕಾರು ಮಾರಾಟದಲ್ಲಿ ಮತ್ತೊಂದು ಹಂತದ ಯಶಸ್ವಿ ನೀರಿಕ್ಷೆಯಲ್ಲಿರುವ ನಿಸ್ಸಾನ್ ಕಾರು ಕಂಪ್ಯಾಕ್ಟ್ ಎಸ್‌ಯುವಿ ಮಾದರಿಗಳಾದ ಮಾರುತಿ ಸುಜುಕಿ ವಿಟಾರಾ ಬ್ರೆಝಾ, ಹ್ಯುಂಡೈ ವೆನ್ಯೂ, ಕಿಯಾ ಸೊನೆಟ್, ಮಹೀಂದ್ರಾ ಎಕ್ಸ್‌ಯುವಿ300 ಮತ್ತು ಟಾಟಾ ನೆಕ್ಸಾನ್ ಕಾರುಗಳಿಗೆ ಪೈಪೋಟಿ ನೀಡಲಿದೆ.

Most Read Articles

Kannada
English summary
All-New Nissan Magnite Compact-SUV Globally Unveiled. Read in Kannada.
Story first published: Wednesday, October 21, 2020, 15:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X