ಟಾಟಾ ಮೋಟಾರ್ಸ್ ವೆಬ್ ಸೈಟಿನಲ್ಲಿ ಕಾಣಿಸಿಕೊಂಡ ಆಲ್‌‌ಟ್ರೊಜ್ ಟರ್ಬೋ ಪೆಟ್ರೋಲ್ ಮಾದರಿ

ಟಾಟಾ ಮೋಟಾರ್ಸ್ ಕಂಪನಿಯ ಆಲ್‌‌ಟ್ರೊಜ್ ಕಾರು ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು ಮಾರುಕಟ್ಟೆಯಲ್ಲಿರುವ ಅತ್ಯುತ್ತಮ ಆಯ್ಕೆಗಳಲ್ಲಿ ಒಂದಾಗಿದೆ. ವಿಭಿನ್ನ ವಿನ್ಯಾಸ, ಹಲವಾರು ಫೀಚರ್ ಹಾಗೂ ಅತ್ಯುತ್ತಮ ಎಂಜಿನ್ ಆಯ್ಕೆಯೊಂದಿಗೆ ಈ ಕಾರು ಗ್ರಾಹಕರ ಬೆಲೆಗೆ ತಕ್ಕ ಮೌಲ್ಯವನ್ನು ನೀಡುತ್ತದೆ.

ಟಾಟಾ ಮೋಟಾರ್ಸ್ ವೆಬ್ ಸೈಟಿನಲ್ಲಿ ಕಾಣಿಸಿಕೊಂಡ ಆಲ್‌‌ಟ್ರೊಜ್ ಟರ್ಬೋ ಪೆಟ್ರೋಲ್ ಮಾದರಿ

ಸದ್ಯಕ್ಕೆ ಟಾಟಾ ಆಲ್‌‌ಟ್ರೊಜ್ ಕಾರಿನ ಪೆಟ್ರೋಲ್ ಹಾಗೂ ಡೀಸೆಲ್ ಮಾದರಿಗಳ ಕಾರುಗಳನ್ನು ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ ಮಾರಾಟ ಮಾಡಲಾಗುತ್ತಿದೆ. ಟಾಟಾ ಮೋಟಾರ್ಸ್ ಕಂಪನಿಯು ಆಲ್‌‌ಟ್ರೊಜ್ ಕಾರನ್ನು ಮತ್ತೊಂದು ಎಂಜಿನ್ ಆಯ್ಕೆಯಲ್ಲಿ ಬಿಡುಗಡೆಗೊಳಿಸಲು ಮುಂದಾಗಿದೆ.

ಟಾಟಾ ಮೋಟಾರ್ಸ್ ವೆಬ್ ಸೈಟಿನಲ್ಲಿ ಕಾಣಿಸಿಕೊಂಡ ಆಲ್‌‌ಟ್ರೊಜ್ ಟರ್ಬೋ ಪೆಟ್ರೋಲ್ ಮಾದರಿ

ಶೀಘ್ರದಲ್ಲೇ ಟಾಟಾ ಆಲ್‌‌ಟ್ರೊಜ್ ಕಾರನ್ನು ಶಕ್ತಿಶಾಲಿಯಾದ ಟರ್ಬೊ ಪೆಟ್ರೋಲ್ ಎಂಜಿನ್ ನೊಂದಿಗೆ ಬಿಡುಗಡೆಗೊಳಿಸಲಾಗುವುದು. ಟರ್ಬೋ ಪೆಟ್ರೋಲ್ ಎಂಜಿನ್ ಹೊಂದಿರುವ ಆಲ್‌‌ಟ್ರೊಜ್ ಕಾರನ್ನು ಹಲವಾರು ಬಾರಿ ಸ್ಪಾಟ್ ಟೆಸ್ಟ್ ಮಾಡಲಾಗಿದೆ.

MOSTREAD: ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

ಟಾಟಾ ಮೋಟಾರ್ಸ್ ವೆಬ್ ಸೈಟಿನಲ್ಲಿ ಕಾಣಿಸಿಕೊಂಡ ಆಲ್‌‌ಟ್ರೊಜ್ ಟರ್ಬೋ ಪೆಟ್ರೋಲ್ ಮಾದರಿ

ಟಾಟಾ ಮೋಟಾರ್ಸ್ ಟರ್ಬೋ ಪೆಟ್ರೋಲ್ ಎಂಜಿನ್ ಹೊಂದಿರುವ ಆಲ್‌‌ಟ್ರೊಜ್ ಕಾರಿನ ಬಗ್ಗೆ ತನ್ನ ವೆಬ್ ಸೈಟಿನಲ್ಲಿ ಅಪ್ ಲೋಡ್ ಮಾಡಿರುವ ಬಗ್ಗೆ ಟೀಮ್ ಬಿಹೆಚ್‌ಪಿ ವರದಿ ಮಾಡಿದೆ. ಈ ಕಾರಿನಲ್ಲಿ ಐಟರ್ಬೊ ಬ್ಯಾಡ್ಜ್ ಹಾಗೂ ಕಪ್ಪು ಬಣ್ಣದ ಫಿನಿಷಿಂಗ್ ಹೊಂದಿರುವ ಟೇಲ್ ಲೈಟ್‌ಗಳನ್ನು ಅಳವಡಿಸಲಾಗುವುದು ಎಂದು ಹೇಳಲಾಗಿದೆ. ಇದರ ಜೊತೆಗೆ ಕೆಲವು ಹೆಚ್ಚುವರಿ ಫೀಚರ್ ಗಳನ್ನು ಅಳವಡಿಸಲಾಗುವುದು.

ಟಾಟಾ ಮೋಟಾರ್ಸ್ ವೆಬ್ ಸೈಟಿನಲ್ಲಿ ಕಾಣಿಸಿಕೊಂಡ ಆಲ್‌‌ಟ್ರೊಜ್ ಟರ್ಬೋ ಪೆಟ್ರೋಲ್ ಮಾದರಿ

ಟಾಟಾ ಆಲ್‌‌ಟ್ರೊಜ್ ಕಾರಿನ ಟರ್ಬೊ ಮಾದರಿಯಲ್ಲಿ 1.2 ಲೀಟರಿನ ಟರ್ಬೋ ಪೆಟ್ರೋಲ್ ಎಂಜಿನ್ ಅಳವಡಿಸಲಾಗುವುದು. ಈ ಎಂಜಿನ್ ಗರಿಷ್ಠ 108 ಬಿಹೆಚ್‌ಪಿ ಪವರ್ ಹಾಗೂ 140 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಟಾಟಾ ಮೋಟಾರ್ಸ್ ವೆಬ್ ಸೈಟಿನಲ್ಲಿ ಕಾಣಿಸಿಕೊಂಡ ಆಲ್‌‌ಟ್ರೊಜ್ ಟರ್ಬೋ ಪೆಟ್ರೋಲ್ ಮಾದರಿ

ಈ ಎಂಜಿನ್ ನೊಂದಿಗೆ 6 ಸ್ಪೀಡಿನ ಮ್ಯಾನುವಲ್ ಗೇರ್‌ಬಾಕ್ಸ್‌ ಜೋಡಿಸಲಾಗುತ್ತದೆ. 7-ಸ್ಪೀಡಿನ ಡ್ಯುಯಲ್-ಕ್ಲಚ್ ಗೇರ್ ಬಾಕ್ಸ್ ಅಳವಡಿಸುವ ನಿರೀಕ್ಷೆಗಳೂ ಇವೆ. ಪೆಡಲ್ ಶಿಫ್ಟ್ ಸೌಲಭ್ಯವನ್ನು ಆಟೋಮ್ಯಾಟಿಕ್ ಮಾದರಿಯಲ್ಲಿ ನೀಡುವ ಸಾಧ್ಯತೆಗಳಿವೆ.

ಟಾಟಾ ಮೋಟಾರ್ಸ್ ವೆಬ್ ಸೈಟಿನಲ್ಲಿ ಕಾಣಿಸಿಕೊಂಡ ಆಲ್‌‌ಟ್ರೊಜ್ ಟರ್ಬೋ ಪೆಟ್ರೋಲ್ ಮಾದರಿ

ಟಾಟಾ ಆಲ್‌‌ಟ್ರೊಜ್ ಕಾರು ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್, ಎಲ್ಇಡಿ ಟೇಲ್ ಲೈಟ್ಸ್, 16 ಇಂಚಿನ ಡೈಮಂಡ್ ಕಟ್ ಅಲಾಯ್ ವ್ಹೀಲ್, ಸೆಮಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, 7 ಇಂಚಿನ ಟಚ್‌ಸ್ಕ್ರೀನ್ ಹೊಂದಿರುವ ಇನ್ಫೋಟೇನ್‌ಮೆಂಟ್ ಸಿಸ್ಟಂ, ಆಪಲ್ ಕಾರ್ ಪ್ಲೇ ಹಾಗೂ ಆಂಡ್ರಾಯ್ಡ್ ಆಟೋಗಳನ್ನು ಹೊಂದಿದೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಟಾಟಾ ಮೋಟಾರ್ಸ್ ವೆಬ್ ಸೈಟಿನಲ್ಲಿ ಕಾಣಿಸಿಕೊಂಡ ಆಲ್‌‌ಟ್ರೊಜ್ ಟರ್ಬೋ ಪೆಟ್ರೋಲ್ ಮಾದರಿ

ಈ ಕಾರಿನಲ್ಲಿ ಫ್ಲಾಟ್-ಬಾಟಮ್ ಸ್ಟೀಯರಿಂಗ್ ವ್ಹೀಲ್ ಒದಗಿಸಲಾಗಿದೆ. ಟಾಟಾ ಆಲ್‌‌ಟ್ರೊಜ್ ಕಾರಿನಲ್ಲಿರುವ 1.2 ಲೀಟರಿನ ಪೆಟ್ರೋಲ್ ಎಂಜಿನ್ 85 ಬಿಹೆಚ್‌ಪಿ ಪವರ್ ಹಾಗೂ 113 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

ಟಾಟಾ ಮೋಟಾರ್ಸ್ ವೆಬ್ ಸೈಟಿನಲ್ಲಿ ಕಾಣಿಸಿಕೊಂಡ ಆಲ್‌‌ಟ್ರೊಜ್ ಟರ್ಬೋ ಪೆಟ್ರೋಲ್ ಮಾದರಿ

ಇನ್ನು 1.5 ಲೀಟರಿನ ಡೀಸೆಲ್ ಎಂಜಿನ್ 89 ಬಿಹೆಚ್‌ಪಿ ಪವರ್ ಹಾಗೂ 200 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5 ಸ್ಪೀಡಿನ ಮ್ಯಾನುವಲ್ ಗೇರ್ ಬಾಕ್ಸ್ ಜೋಡಿಸಲಾಗಿದೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಟಾಟಾ ಮೋಟಾರ್ಸ್ ವೆಬ್ ಸೈಟಿನಲ್ಲಿ ಕಾಣಿಸಿಕೊಂಡ ಆಲ್‌‌ಟ್ರೊಜ್ ಟರ್ಬೋ ಪೆಟ್ರೋಲ್ ಮಾದರಿ

ಟಾಟಾ ಆಲ್‌‌ಟ್ರೊಜ್‌ನ ಟರ್ಬೊ ಪೆಟ್ರೋಲ್ ಮಾದರಿಯು ಫೋಕ್ಸ್‌ವ್ಯಾಗನ್ ಪೊಲೊ ಡಿಎಸ್‌ಐ ಹಾಗೂ ಹೊಸ ಹ್ಯುಂಡೈ ಎಲೈಟ್ ಐ 20 ಕಾರುಗಳಿಗೆ ಪೈಪೋಟಿ ನೀಡಲಿದೆ. ಈ ಹೊಸ ಮಾದರಿಯ ಬೆಲೆ ಸ್ವಲ್ಪ ಹೆಚ್ಚಾಗಲಿದೆ. ಈ ಕಾರನ್ನು ವಿಶೇಷ ಬಣ್ಣಗಳಲ್ಲಿ ಬಿಡುಗಡೆಗೊಳಿಸಲಾಗುವುದು.

Most Read Articles

Kannada
English summary
Altroz Turbo petrol model appears on official website of Tata Motors. Read in Kannada.
Story first published: Friday, October 9, 2020, 14:25 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X