ಎಲೆಕ್ಟ್ರಿಕ್ ರಿಕ್ಷಾ ವಿತರಣೆಯ ವೀಡಿಯೊ ಬಿಡುಗಡೆಗೊಳಿಸಿದ ಅಮೇಜಾನ್

ಇತ್ತೀಚಿಗೆ ಭಾರತ ಪ್ರವಾಸದಲ್ಲಿದ್ದ ಅಮೇಜಾನ್ ಕಂಪನಿಯ ಸಿ‍ಇ‍ಒರವರು ಸಂದರ್ಶನವೊಂದರಲ್ಲಿ ಅಮೇಜಾನ್ ಕಂಪನಿಯು ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸುವುದಾಗಿ ತಿಳಿಸಿದ್ದರು.

ಎಲೆಕ್ಟ್ರಿಕ್ ರಿಕ್ಷಾ ವಿತರಣೆಯ ವೀಡಿಯೊ ಬಿಡುಗಡೆಗೊಳಿಸಿದ ಅಮೇಜಾನ್

ಈಗ ಅಮೇಜಾನ್ ಕಂಪನಿಯ ಸಿ‍ಇ‍ಒ ಜೆಫ್ ಬೆಜೋಸ್‍‍ರವರು ಟ್ವಿಟರ್‍‍ನಲ್ಲಿ ವೀಡಿಯೊವೊಂದನ್ನು ಬಿಡುಗಡೆಗೊಳಿಸಿದ್ದಾರೆ. ಈ ವೀಡಿಯೊದಲ್ಲಿ ಎಲೆಕ್ಟ್ರಿಕ್ ರಿಕ್ಷಾಗಳ ವಿತರಣೆಯನ್ನು ತೋರಿಸಲಾಗಿದೆ. ಈ ಮೂಲಕ ಅಮೇಜಾನ್ ಕಂಪನಿಯು ಭಾರತದಲ್ಲಿ ಎಲೆಕ್ಟ್ರಿಕ್ ರಿಕ್ಷಾಗಳ ವಿತರಣೆಯನ್ನು ಶುರುಮಾಡಿದೆ.

ಎಲೆಕ್ಟ್ರಿಕ್ ರಿಕ್ಷಾ ವಿತರಣೆಯ ವೀಡಿಯೊ ಬಿಡುಗಡೆಗೊಳಿಸಿದ ಅಮೇಜಾನ್

ಈ ವೀಡಿಯೊದಲ್ಲಿ ಜೆಫ್ ಬೆಜೋಸ್‍‍ರವರು ಸ್ವತಃ ತಾವೇ ಎಲೆಕ್ಟ್ರಿಕ್ ರಿಕ್ಷಾಗಳನ್ನು ಚಾಲನೆ ಮಾಡುತ್ತಿರುವುದನ್ನು ಕಾಣಬಹುದು. ಅಮೇಜಾನ್ ಕಂಪನಿಯು ಈ ಎಲೆಕ್ಟ್ರಿಕ್ ರಿಕ್ಷಾಗಳನ್ನು ಭಾರತದಲ್ಲಿ ಮಾಲಿನ್ಯ ರಹಿತ ಕೊಡುಗೆ ನೀಡುವ ಉದ್ದೇಶಕ್ಕಾಗಿ ತಯಾರಿಸಿದೆ.

ಎಲೆಕ್ಟ್ರಿಕ್ ರಿಕ್ಷಾ ವಿತರಣೆಯ ವೀಡಿಯೊ ಬಿಡುಗಡೆಗೊಳಿಸಿದ ಅಮೇಜಾನ್

ಈ ವೀಡಿಯೊ ಶೇರ್ ಮಾಡಿದ ನಂತರ ಮಾತನಾಡಿರುವ ಜೆಫ್ ಬೆಜೋಸ್‍‍ರವರು ಭಾರತದಲ್ಲಿ ಹೊಸ ಎಲೆಕ್ಟ್ರಿಕ್ ರಿಕ್ಷಾಗಳನ್ನು ವಿತರಿಸುತ್ತಿದ್ದೇವೆ. ಇದು ಪೂರ್ಣ ಎಲೆಕ್ಟ್ರಿಕ್ ಆಗಿದ್ದು, ಶೂನ್ಯ ಪ್ರಮಾಣದ ಮಾಲಿನ್ಯವನ್ನು ಉಂಟು ಮಾಡಲಿದೆ ಎಂದು ಹೇಳಿದ್ದಾರೆ.

ಎಲೆಕ್ಟ್ರಿಕ್ ರಿಕ್ಷಾ ವಿತರಣೆಯ ವೀಡಿಯೊ ಬಿಡುಗಡೆಗೊಳಿಸಿದ ಅಮೇಜಾನ್

ಜೆಫ್‍‍ರವರು ಚಾಲನೆ ಮಾಡುತ್ತಿರುವ ಆಟೋದ ಹಿಂಭಾಗದಲ್ಲಿ ಜೆಫ್ ಎಂಬ ಹೆಸರನ್ನೂ ಸಹ ಬರೆಯಲಾಗಿದೆ. ಅಮೇಜಾನ್ ಕಂಪನಿಯು ಮುಂಬರುವ ದಿನಗಳಲ್ಲಿ ಮತ್ತಷ್ಟು ಪರಿಸರ ಸ್ನೇಹಿ ವಾಹನಗಳನ್ನು ಬಿಡುಗಡೆಗೊಳಿಸಲಿದೆ.

ಎಲೆಕ್ಟ್ರಿಕ್ ರಿಕ್ಷಾ ವಿತರಣೆಯ ವೀಡಿಯೊ ಬಿಡುಗಡೆಗೊಳಿಸಿದ ಅಮೇಜಾನ್

ಅಮೇಜಾನ್ ಕಂಪನಿಯು ಈ ಎಲೆಕ್ಟ್ರಿಕ್ ಆಟೋದ ರೇಂಜ್ ಬಗ್ಗೆ, ಚಾರ್ಜಿಂಗ್ ಬಗ್ಗೆ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಇದರ ಜೊತೆಗೆ ಬೇರೆ ಯಾವುದೇ ಮಾಹಿತಿಗಳನ್ನು ಅಮೇಜಾನ್ ಕಂಪನಿಯು ಬಹಿರಂಗಪಡಿಸಿಲ್ಲ.

ಅಮೇಜಾನ್ ಕಂಪನಿಯು ಈ ಎಲೆಕ್ಟ್ರಿಕ್ ವಾಹನಗಳ ವಿತರಣೆಯನ್ನು ಬೇರೆ ಕಂಪನಿಗಳಿಗೂ ಸಹ ನೀಡಲಿದೆಯೇ ಅಥವಾ ಕೇವಲ ಅಮೇಜಾನ್ ಕಂಪನಿಗೆ ಮಾತ್ರ ಸೀಮಿತ ಪಡಿಸಲಿದೆಯೇ ಎಂಬುದನ್ನು ಇನ್ನೂ ಖಚಿತ ಪಡಿಸಿಲ್ಲ.

ಎಲೆಕ್ಟ್ರಿಕ್ ರಿಕ್ಷಾ ವಿತರಣೆಯ ವೀಡಿಯೊ ಬಿಡುಗಡೆಗೊಳಿಸಿದ ಅಮೇಜಾನ್

ಆದರೆ ಅಮೇಜಾನ್ ಕಂಪನಿಯು ಈ ಎಲೆಕ್ಟ್ರಿಕ್ ರಿಕ್ಷಾವನ್ನು ಸ್ವಂತ ಬಳಕೆಗೆ ಉಪಯೋಗಿಸುವ ಸಾಧ್ಯತೆಗಳಿವೆ. ಇದುವರೆಗೂ ಡೀಸೆಲ್ - ಪೆಟ್ರೋಲ್ ವಾಹನಗಳನ್ನು ಬಳಸುತ್ತಿದ್ದ ಅಮೇಜಾನ್ ಕಂಪನಿಯು ವಾಯು ಮಾಲಿನ್ಯವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ತನ್ನ ಡೆಲಿವರಿ ವಾಹನಗಳನ್ನು ಎಲೆಕ್ಟ್ರಿಕ್ ರಿಕ್ಷಾಗಳಿಗೆ ಬದಲಿಸುತ್ತಿದೆ.

Most Read Articles

Kannada
English summary
Amazon introduces electric delivery rickshaw. Read in Kannada.
Story first published: Monday, January 20, 2020, 14:09 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X