ತೈವಾನ್ ಅಧ್ಯಕ್ಷೀಯ ಚುನಾವಣೆಯಲ್ಲಿ ಬಳಕೆಯಾಗಲಿದೆ ಮಹೀಂದ್ರಾ ಕಾರು..!

ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯ ಕಾರುಗಳು ದೇಶಿಯ ಮಾರುಕಟ್ಟೆಯಲ್ಲಿ ಸಾಕಷ್ಟು ಜನಪ್ರಿಯವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿವೆ. ಈಗ ಮಹೀಂದ್ರಾ ಕಂಪನಿಯ ಸ್ಕಾರ್ಪಿಯೊ ಪಿಕ್ ಅಪ್ ಕಾರ್ ಅನ್ನು ತೈವಾನ್‍‍ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯ ಪ್ರಚಾರದಲ್ಲಿ ಬಳಸಲಾಗುತ್ತಿದೆ.

ತೈವಾನ್ ಅಧ್ಯಕ್ಷೀಯ ಚುನಾವಣೆಯಲ್ಲಿ ಬಳಕೆಯಾಗಲಿದೆ ಮಹೀಂದ್ರಾ ಕಾರು..!

ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷರಾದ ಆನಂದ್ ಮಹೀಂದ್ರಾರವರು ತಮ್ಮ ಕಂಪನಿಯ ಸ್ಕಾರ್ಪಿಯೋ ಪಿಕ್ ಅಪ್ ಕಾರ್ ಅನ್ನು ತೈವಾನ್‌ನ ಅಧ್ಯಕ್ಷೀಯ ಚುನಾವಣೆಯ ಪ್ರಚಾರಕ್ಕಾಗಿ ಸೇರಿಸಿಕೊಂಡಿರುವ ಬಗ್ಗೆ ಸಂತಸವನ್ನು ವ್ಯಕ್ತಪಡಿಸಿದ್ದಾರೆ.

ತೈವಾನ್ ಅಧ್ಯಕ್ಷೀಯ ಚುನಾವಣೆಯಲ್ಲಿ ಬಳಕೆಯಾಗಲಿದೆ ಮಹೀಂದ್ರಾ ಕಾರು..!

ಈ ವಿಷಯವನ್ನು ಟ್ವಿಟರ್‍‍ನಲ್ಲಿ ಶೇರ್ ಮಾಡಿರುವ ಆನಂದ್ ಮಹೀಂದ್ರಾರವರು, ಮಹೀಂದ್ರಾ ಕಂಪನಿಗೆ ಇದು ಹೆಮ್ಮೆಯ ಕ್ಷಣವಾಗಿದೆ ಎಂದು ಹೇಳಿದ್ದಾರೆ. ಮಹೀಂದ್ರಾ ಗ್ರೂಪ್ ಅಧ್ಯಕ್ಷರಾದ ಆನಂದ್ ಮಹೀಂದ್ರಾರವರು ಏಪ್ರಿಲ್ 1ರಂದು ತಮ್ಮ ಹುದ್ದೆಯಿಂದ ಕೆಳಗಿಳಿಯಲಿದ್ದು, ಕಂಪನಿಯಲ್ಲಿ ನಾನ್-ಎಕ್ಸಿಕ್ಯೂಟಿವ್ ಹುದ್ದೆಯಲ್ಲಿ ಮುಂದುವರೆಯುವ ಸಾಧ್ಯತೆಗಳಿವೆ.

ತೈವಾನ್ ಅಧ್ಯಕ್ಷೀಯ ಚುನಾವಣೆಯಲ್ಲಿ ಬಳಕೆಯಾಗಲಿದೆ ಮಹೀಂದ್ರಾ ಕಾರು..!

ತಮಗೆ ಈ ವಿಷಯವನ್ನು ತಿಳಿಸಿದ ಇನ್ವೆಸ್ಟ್ ಇಂಡಿಯಾ - ತೈವಾನ್‍‍ಗೆ ಧನ್ಯವಾದ ಸಲ್ಲಿಸಿದ್ದಾರೆ. ಇನ್ವೆಸ್ಟ್ ಇಂಡಿಯಾ, ಭಾರತ ಸರ್ಕಾರದ ರಾಷ್ಟ್ರೀಯ ಹೂಡಿಕೆ ಉತ್ತೇಜನ ಮತ್ತು ಸೌಲಭ್ಯ ಸಂಸ್ಥೆಯಾಗಿದೆ. ಇನ್ವೆಸ್ಟ್ ಇಂಡಿಯಾ ಜನವರಿ 10ರಂದು ಟ್ವೀಟ್ ಮಾಡಿತ್ತು.

ತೈವಾನ್ ಅಧ್ಯಕ್ಷೀಯ ಚುನಾವಣೆಯಲ್ಲಿ ಬಳಕೆಯಾಗಲಿದೆ ಮಹೀಂದ್ರಾ ಕಾರು..!

ಈ ಟ್ವೀಟ್‍‍ನಲ್ಲಿ ತೈವಾನ್‌ನ ಅಧ್ಯಕ್ಷೀಯ ಚುನಾವಣೆಯ ಪ್ರಚಾರದಲ್ಲಿ ಬೆಂಗಾವಲು ಭಾಗವಾಗಿ ಮಹೀಂದ್ರಾ ಕಾರ್ ಅನ್ನು ಆಯ್ಕೆ ಮಾಡಿರುವ ಬಗ್ಗೆ ತಿಳಿಸಿತ್ತು. ಅಂದ ಹಾಗೆ ತೈವಾನ್‌ನಲ್ಲಿ ಅಧ್ಯಕ್ಷೀಯ ಚುನಾವಣೆ ಇದೇ ತಿಂಗಳು ನಡೆಯಲಿದೆ.

ತೈವಾನ್ ಅಧ್ಯಕ್ಷೀಯ ಚುನಾವಣೆಯಲ್ಲಿ ಬಳಕೆಯಾಗಲಿದೆ ಮಹೀಂದ್ರಾ ಕಾರು..!

ಇನ್ವೆಸ್ಟ್ ಇಂಡಿಯಾವನ್ನು 2009ರಲ್ಲಿ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಪ್ರಚಾರಕ್ಕಾಗಿ ಸ್ಥಾಪಿಸಲಾಯಿತು. ಇದು ಭಾರತದಲ್ಲಿ ಹೂಡಿಕೆ ಮಾಡಲು ಬಯಸುವವರಿಗೆ ರೆಫೆರೆನ್ಸ್ ನೀಡುತ್ತದೆ. ಇನ್ವೆಸ್ಟ್ ಇಂಡಿಯಾ, ಲಾಭದ ಘಟಕವಲ್ಲ.

ತೈವಾನ್ ಅಧ್ಯಕ್ಷೀಯ ಚುನಾವಣೆಯಲ್ಲಿ ಬಳಕೆಯಾಗಲಿದೆ ಮಹೀಂದ್ರಾ ಕಾರು..!

ಮಹೀಂದ್ರಾ ಅಂಡ್ ಮಹೀಂದ್ರಾ ಪಿಕಪ್ ಟ್ರಕ್ 2,609 ಸಿಸಿ, ನಾಲ್ಕು ಸಿಲಿಂಡರ್, ಡೈರೆಕ್ಟ್ ಇಂಜೆಕ್ಷನ್ ಡೀಸೆಲ್ ಎಂಜಿನ್ ಹೊಂದಿದೆ. ಈ ಕಾರು 80 ಲೀಟರ್ ಸಾಮರ್ಥ್ಯದ ಪ್ಯೂಯಲ್ ಟ್ಯಾಂಕ್ ಹೊಂದಿದೆ. ಈ ಕಾರ್ ಅನ್ನು 2ಡಿ ಅಥವಾ 4 ಡಬ್ಲ್ಯೂಡಿ ಕಾನ್ಫಿಗರೇಷನ್‍‍ನಲ್ಲಿ ಮಾರಾಟ ಮಾಡಲಾಗುತ್ತದೆ.

ತೈವಾನ್ ಅಧ್ಯಕ್ಷೀಯ ಚುನಾವಣೆಯಲ್ಲಿ ಬಳಕೆಯಾಗಲಿದೆ ಮಹೀಂದ್ರಾ ಕಾರು..!

ಪಿಕಪ್ ಟ್ರಕ್ ಅನ್ನು ಸ್ಕಾರ್ಪಿಯೋ ಗೆಟ್ಅವೇ ಎಂದು ಸಹ ಕರೆಯಲಾಗುತ್ತದೆ. ಸ್ಕಾರ್ಪಿಯೋ ಗೆಟ್‍ಅವೇ ಕಾರು ಟೊಯೊಟಾ ಹಿಲಕ್ಸ್, ಇಸುಝ್ ಡಿ-ಮ್ಯಾಕ್ಸ್, ಮಿತ್ಸುಬಿಷಿ ಟ್ರಿಟಾನ್ ಹಾಗೂ ಟಾಟಾ ಕ್ಸೆನಾನ್‍‍ಗಳಿಗೆ ಪೈಪೋಟಿ ನೀಡುತ್ತದೆ. ಮಹೀಂದ್ರಾ ಕಂಪನಿಯು ಭಾರತದಲ್ಲಿ ಸ್ಕಾರ್ಪಿಯೋ ಗೆಟ್ಅವೇಯ 4 ಡೋರಿನ ಡಬಲ್ ಕ್ಯಾಬ್ ಮಾದರಿಯನ್ನು ಮಾತ್ರ ಮಾರಾಟ ಮಾಡುತ್ತದೆ.

ತೈವಾನ್ ಅಧ್ಯಕ್ಷೀಯ ಚುನಾವಣೆಯಲ್ಲಿ ಬಳಕೆಯಾಗಲಿದೆ ಮಹೀಂದ್ರಾ ಕಾರು..!

ಈ ಕಾರ್ ಅನ್ನು ಕೆಲವು ದೇಶಗಳಲ್ಲಿ 2 ಡೋರಿನ ಸಿಂಗಲ್ ಕ್ಯಾಬ್‌ನಲ್ಲಿ ಮಾರಾಟ ಮಾಡಲಾಗುತ್ತದೆ. ಭಾರತವನ್ನು ಹೊರತುಪಡಿಸಿ, ಈ ಕಾರ್ ಅನ್ನು ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ಇಂಡೋನೇಷ್ಯಾ ಹಾಗೂ ನ್ಯೂಜಿಲೆಂಡ್‍‍ಗಳಲ್ಲಿ ಮಾರಾಟ ಮಾಡಲಾಗುತ್ತದೆ.

Most Read Articles

Kannada
English summary
Scorpio Pickup Truck used in Taiwan President election campaign. Read in Kannada.
Story first published: Wednesday, January 15, 2020, 18:17 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X