'ಬಡಾ ದೋಸ್ತ್' ಲಘು ವಾಣಿಜ್ಯ ವಾಹನ ಬಿಡುಗಡೆ ಮಾಡಿದ ಅಶೋಕ್ ಲೇಲ್ಯಾಂಡ್

ದೇಶದ ಮೂರನೇ ಅತಿ ದೊಡ್ಡ ವಾಣಿಜ್ಯ ವಾಹನಗಳ ಉತ್ಪಾದನಾ ಕಂಪನಿಯಾದ ಅಶೋಕ್ ಲೇಲ್ಯಾಂಡ್ ದೇಶಿಯ ಮಾರುಕಟ್ಟೆಗಾಗಿ ಹೊಸ ಮಾದರಿಯ ಲಘು ವಾಣಿಜ್ಯ ವಾಹನ(ಲೈಟ್ ಕರ್ಮಷಿಯಲ್ ವೆಹಿಕಲ್) ಮಾದರಿಯೊಂದನ್ನು ಬಿಡುಗಡೆ ಮಾಡಿದ್ದು, ಹೊಸ ವಾಹನವು ಹಲವಾರು ಆಧುನಿಕ ಫೀಚರ್ಸ್‌ಗಳನ್ನು ಒಳಗೊಂಡಿದೆ.

'ಬಡಾ ದೋಸ್ತ್' ಲಘು ವಾಣಿಜ್ಯ ವಾಹನ ಬಿಡುಗಡೆ ಮಾಡಿದ ಅಶೋಕ್ ಲೇಲ್ಯಾಂಡ್

ಅಶೋಕ್ ಲೇಲ್ಯಾಂಡ್ ಕಂಪನಿಯು ಬಿಡುಗಡೆ ಮಾಡಿರುವ ಬಡಾ ದೋಸ್ತ್ ವಾಣಿಜ್ಯ ವಾಹನ ಮಾದರಿಯು ಈ ಹಿಂದಿನ ದೋಸ್ತ್ ಪ್ಲಸ್ ಮಾದರಿಂತಲೂ ಹೆಚ್ಚಿನ ಫೀಚರ್ಸ್ ಒಳಗೊಂಡಿದ್ದು, ಹೊಸ ವಾಹನದ ಬೆಲೆಯನ್ನು ಮುಂಬೈ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.7.75 ಲಕ್ಷಕ್ಕೆ ನಿಗದಿ ಮಾಡಿದೆ. ಗ್ರಾಹಕರ ಬೇಡಿಕೆಯೆಂತೆ ಬಡಾ ದೋಸ್ತ್ ವಾಹನ ಮಾದರಿಯಲ್ಲಿ ಎರಡು ಆವೃತ್ತಿಗಳು ಖರೀದಿಗೆ ಲಭ್ಯವಿದ್ದು, ಪ್ರತ್ಯೇಕ ಎರಡು ಆವೃತ್ತಿಗಳಲ್ಲಿ ಮತ್ತೆ ಎರಡು ಹೊಸ ಮಾದರಿಗಳನ್ನು ಅಭಿವೃದ್ದಿಗೊಳಿಸಲಾಗಿದೆ.

'ಬಡಾ ದೋಸ್ತ್' ಲಘು ವಾಣಿಜ್ಯ ವಾಹನ ಬಿಡುಗಡೆ ಮಾಡಿದ ಅಶೋಕ್ ಲೇಲ್ಯಾಂಡ್

ಬಡಾ ದೋಸ್ತ್ ವಾಹನ ಮಾದರಿಯು ಲೋಡ್ ಸಾಮಾರ್ಥ್ಯದ ಆಧಾರದ ಮೇಲೆ ಐ3 ಮತ್ತು ಐ4 ಆವೃತ್ತಿಗಳು ಖರೀದಿಗೆ ಲಭ್ಯವಿದ್ದು, ಐ3 ಮಾದರಿಯಲ್ಲಿ ಮತ್ತೆ ಎಲ್ಎಸ್, ಎಲ್ಎಕ್ಸ್ ಮತ್ತು ಐ4 ಮಾದರಿಯಲ್ಲಿ ಎಲ್ಎಸ್, ಎಲ್ಎಕ್ಸ್ ವೆರಿಯೆಂಟ್ ಪಡೆದುಕೊಂಡಿವೆ.

'ಬಡಾ ದೋಸ್ತ್' ಲಘು ವಾಣಿಜ್ಯ ವಾಹನ ಬಿಡುಗಡೆ ಮಾಡಿದ ಅಶೋಕ್ ಲೇಲ್ಯಾಂಡ್

ಮುಂಬೈ ಎಕ್ಸ್‌ಶೋರೂಂ ದರದಂತೆ ಬಡಾ ದೋಸ್ತ್ ಐ3 ಎಲ್ಎಸ್ ಮಾದರಿಯು ರೂ.7.75 ಲಕ್ಷ ಆರಂಭಿಕ ಬೆಲೆ ಹೊಂದಿದ್ದರೆ, ಬಡಾ ದೋಸ್ತ್ ಐ3 ಎಲ್ಎಕ್ಸ್ ಮಾದರಿಯು ರೂ. 7.95 ಲಕ್ಷ ಬೆಲೆ ಹೊಂದಿದೆ.

'ಬಡಾ ದೋಸ್ತ್' ಲಘು ವಾಣಿಜ್ಯ ವಾಹನ ಬಿಡುಗಡೆ ಮಾಡಿದ ಅಶೋಕ್ ಲೇಲ್ಯಾಂಡ್

ಬಡಾ ದೋಸ್ತ್ ಐ4 ಎಲ್ಎಸ್ ಮಾದರಿಯು ರೂ.7.79 ಲಕ್ಷಕ್ಕೆ ಮತ್ತು ಬಡಾ ದೋಸ್ತ್ ಐ4 ಎಲ್ಎಕ್ಸ್ ಮಾದರಿಯು ರೂ. 7.99 ಲಕ್ಷ ಬೆಲೆ ಹೊಂದಿದ್ದು, ಬಡಾ ದೋಸ್ತ್ ಐ3 ಮಾದರಿಯು 1,405 ಕೆಜಿ ಲೋಡ್ ಸಾಮರ್ಥ್ಯ ಹೊಂದಿದ್ದರೆ ಬಡಾ ದೋಸ್ತ್ ಐ4 ಮಾದರಿಯು 1,860 ಕೆಜಿ ಲೋಡ್ ಸಾಮರ್ಥ್ಯವನ್ನು ಪಡೆದುಕೊಂಡಿದೆ.

'ಬಡಾ ದೋಸ್ತ್' ಲಘು ವಾಣಿಜ್ಯ ವಾಹನ ಬಿಡುಗಡೆ ಮಾಡಿದ ಅಶೋಕ್ ಲೇಲ್ಯಾಂಡ್

ಅಶೋಕ್ ಲೇಲ್ಯಾಂಡ್ ಕಂಪನಿಯು ವಾಣಿಜ್ಯ ವಾಹನಗಳ ಉತ್ಪಾದನೆಯಲ್ಲಿ ಹೊಸತನ ಪರಿಚಯಿಸುವ ಸಂಬಂಧ ಉತ್ಪಾದನಾ ಪ್ಲ್ಯಾಟ್‌ಫಾರ್ಮ್‌ನಲ್ಲಿ ಸಾಕಷ್ಟು ಬದಲಾವಣೆ ತಂದಿದ್ದು, ಹೊಚ್ಚ ಹೊಸ ವಾಣಿಜ್ಯ ವಾಹನ ಮಾದರಿಯಾದ ಬಡಾ ದೋಸ್ತ್ ಮಾದರಿಯು ದೇಶಿಯ ಮಾರುಕಟ್ಟೆಯಲ್ಲಿ ಮಾತ್ರವಲ್ಲದೆ ಅಂತರ್‌ರಾಷ್ಟ್ರೀಯ ಮಾರುಕಟ್ಟೆಗೂ ರಫ್ತುಗೊಳ್ಳಲು ಸಜ್ಜಾಗಿದೆ.

'ಬಡಾ ದೋಸ್ತ್' ಲಘು ವಾಣಿಜ್ಯ ವಾಹನ ಬಿಡುಗಡೆ ಮಾಡಿದ ಅಶೋಕ್ ಲೇಲ್ಯಾಂಡ್

ಒಂದೇ ಪ್ಲ್ಯಾಟ್‌ಫಾರ್ಮ್ ಅಡಿ ಲೆಫ್ಟ್ ಹ್ಯಾಂಡ್ ಮತ್ತು ರೈಟ್ ಹ್ಯಾಂಡ್ ಡ್ರೈವ್ ಸೌಲಭ್ಯ ಹೊಂದಿರುವ ಬಡಾ ದೋಸ್ತ್ ವಾಹನ ಮಾದರಿಗಳನ್ನು ಸಿದ್ದಪಡಿಸುತ್ತಿರುವ ಅಶೋಕ್ ಲೇಲ್ಯಾಂಡ್ ಕಂಪನಿಯು ಟಾಟಾ ಮತ್ತು ಮಹೀಂದ್ರಾ ಲೈಟ್ ಕರ್ಮಷಿಲ್ ವಾಹನಗಳಿಗೆ ಭರ್ಜರಿಯಾಗಿ ಪೈಪೋಟಿ ನೀಡಲಿದೆ.

'ಬಡಾ ದೋಸ್ತ್' ಲಘು ವಾಣಿಜ್ಯ ವಾಹನ ಬಿಡುಗಡೆ ಮಾಡಿದ ಅಶೋಕ್ ಲೇಲ್ಯಾಂಡ್

ಅಶೋಕ್ ಲೇಲ್ಯಾಂಡ್ ಕಂಪನಿಯು ಈಗಾಗಲೇ ದೋಸ್ತ್ ಸರಣಿ ಮಾದರಿಗಳ ಮೂಲಕ ಭಾರೀ ಪ್ರಮಾಣದ ಮಾರಾಟ ದಾಖಲೆಯನ್ನು ತನ್ನದಾಗಿಸಿಕೊಂಡಿದ್ದು, ಹೊಸ ಬಡಾ ದೋಸ್ತ್ ಮಾದರಿಯ ಮೂಲಕ ಗ್ರಾಹಕರಿಗೆ ಆಧುನಿಕ ಸೌಲಭ್ಯಗಳನ್ನು ಒದಗಿಸುತ್ತಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

'ಬಡಾ ದೋಸ್ತ್' ಲಘು ವಾಣಿಜ್ಯ ವಾಹನ ಬಿಡುಗಡೆ ಮಾಡಿದ ಅಶೋಕ್ ಲೇಲ್ಯಾಂಡ್

ತ್ರಿ ಸೀಟರ್ ಆವೃತ್ತಿಯಾಗಿರುವ ಬಡಾ ದೋಸ್ತ್ ಲಘು ವಾಣಿಜ್ಯ ವಾಹನಗಳು ಸೂಪಿರಿಯರ್ ಇಂಟಿರಿಯರ್ ಸೌಲಭ್ಯಗಳನ್ನು ಹೊಂದಿದ್ದು, ಚಾಲಕನಿಗೆ ಅರಾಮದಾಯಕ ಡ್ರೈವ್ ಒದಗಿಸಲಿದೆ. ಹಾಗೆಯೇ ಡ್ಯಾಶ್ ಮೌಟೆಂಡ್ ಗೇರ್‌ಬಾಕ್ಸ್, ಡ್ಯುಯಲ್ ಟೋನ್ ಡ್ಯಾಶ್‌ಬೋರ್ಡ್, ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಎಸಿ ಸೌಲಭ್ಯ ಮತ್ತು ಪವರ್ ಸ್ಟ್ರೀರಿಂಗ್ ನೀಡಿರುವುದು ಚಾಲನೆಯನ್ನು ಸುಲಭಗೊಳಿಸುತ್ತದೆ.

'ಬಡಾ ದೋಸ್ತ್' ಲಘು ವಾಣಿಜ್ಯ ವಾಹನ ಬಿಡುಗಡೆ ಮಾಡಿದ ಅಶೋಕ್ ಲೇಲ್ಯಾಂಡ್

ಹೊಸ ತಾಂತ್ರಿಕ ಸೌಲಭ್ಯಗಳ ಮೂಲಕ ಗ್ರಾಹಕರಿಗೆ ಕಾರಿನ ಚಾಲನಾ ಅನುಭವ ನೀಡಲಿರುವ ಹೊಸ ವಾಣಿಜ್ಯ ವಾಹನವು ಅತ್ಯುತ್ತಮ ಇಂಧನ ದಕ್ಷತೆ ಹೊಂದಿದ್ದು, ವಾಣಿಜ್ಯ ವಾಹನಗಳ ನಿರ್ವಹಣಾ ವೆಚ್ಚಗಳನ್ನು ತಗ್ಗಿಸಲು ಹಲವಾರು ಹೊಸ ಸೌಲಭ್ಯಗಳನ್ನು ಪರಿಚಯಿಸಿರುವುದು ಗ್ರಾಹಕರ ಆಕರ್ಷಣೆಯಾಗಲಿದೆ.

MOST READ: ಬಿಡುಗಡೆಗೆ ಸಿದ್ದವಾದ ಹೋಂಡಾದ ಮೊದಲ ಎಲೆಕ್ಟ್ರಿಕ್ ಕಾರು

'ಬಡಾ ದೋಸ್ತ್' ಲಘು ವಾಣಿಜ್ಯ ವಾಹನ ಬಿಡುಗಡೆ ಮಾಡಿದ ಅಶೋಕ್ ಲೇಲ್ಯಾಂಡ್

ಇನ್ನು ಹೊಸ ಬಡಾ ದೋಸ್ತ್ ಲಘು ವಾಣಿಜ್ಯ ವಾಹನವು ಬಿಎಸ್-6 ಎಮಿಷನ್ ನಿಯಮ ಅನುಸಾರವಾಗಿ 1.5-ಲೀಟರ್ ತ್ರಿ ಸಿಲಿಂಡರ್ ಟರ್ಬೋ ಡೀಸೆಲ್ ಎಂಜಿನ್ ಹೊಂದಿದ್ದು, 79-ಬಿಎಚ್‌ಪಿ ಮತ್ತು 190-ಎನ್ಎಂ ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ದೂರದ ಪ್ರಯಾಣದಲ್ಲೂ ಅರಾಮದಾಯಕ ಡ್ರೈವಿಂಗ್ ಸೌಲಭ್ಯವನ್ನು ಒದಗಿಸುತ್ತದೆ.

Most Read Articles

Kannada
English summary
Ashok Leyland Bada Dost LCV Launched In India. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X