ಸುಧಾರಿತ ತಂತ್ರಜ್ಞಾನ ಪ್ರೇರಿತ ಎರಡು ಪ್ಯಾಸೆಂಜರ್ ಬಸ್‌ ಬಿಡುಗಡೆ ಮಾಡಿದ ಅಶೋಕ್ ಲೇಲ್ಯಾಂಡ್

ಹಿಂದುಜಾ ಅಂಗಸಂಸ್ಥೆಯಾದ ಅಶೋಕ್ ಲೇಲ್ಯಾಂಡ್ ಕಂಪನಿಯು ವಿವಿಧ ಮಾದರಿ ವಾಣಿಜ್ಯ ವಾಹನಗಳ ಜೊತೆ ಪ್ಯಾಸೆಂಜರ್ ವಾಹನಗಳ ಉತ್ಪಾದನೆಯಲ್ಲೂ ಮುಂಚೂಣಿ ಹೊಂದಿದ್ದು, ಕಂಪನಿಯು ಇತ್ತೀಚೆಗೆ ಯುಎಇ ಮಾರುಕಟ್ಟೆಯಲ್ಲಿ ಎರಡು ಹೊಸ ಮಾದರಿಯ ಮಧ್ಯಮ ಗಾತ್ರದ ಐಷಾರಾಮಿ ಬಸ್‌ಗಳನ್ನು ಬಿಡುಗಡೆ ಮಾಡಿದೆ.

ಎರಡು ಪ್ಯಾಸೆಂಜರ್ ಬಸ್‌ ಬಿಡುಗಡೆ ಮಾಡಿದ ಅಶೋಕ್ ಲೇಲ್ಯಾಂಡ್

ಭಾರತದ ನಂತರ ಯುಎಇ(ಯುನೈಟೆಡ್‌ ಅರಬ್‌ ಎಮಿರೇಟ್ಸ್)ನಲ್ಲಿ ಎರಡನೇ ಅತಿ ದೊಡ್ಡ ವಾಹನ ಉತ್ಪಾದನಾ ಘಟಕವನ್ನು ಹೊಂದಿರುವ ಅಶೋಕ್ ಲೇಲ್ಯಾಂಡ್ ಕಂಪನಿಯು ರಾಸ್ ಅಲ್ ಖೈಮಾದಲ್ಲಿ ವಿಶೇಷವಾಗಿ ಬಸ್ ಉತ್ಪಾದನೆಗಾಗಿ ಪ್ರತ್ಯೇಕ ಪ್ಲ್ಯಾಟ್‌ಫಾರ್ಮ್ ಹೊಂದಿದ್ದು, ಕಾರ್ಪೊರೇಟ್ ಕಂಪನಿಗಳ ಬೇಡಿಕೆ ಅನುಸಾರವಾಗಿ 70 ಆಸನ ಸೌಲಭ್ಯದ ಫಾಲ್ಕನ್ ಸೂಪರ್ ಮತ್ತು 26 ಆಸನ ಸೌಲಭ್ಯ ಗಾಜ್ಲ್ ಬಸ್ ಬಿಡುಗಡೆ ಮಾಡಿದೆ.

ಎರಡು ಪ್ಯಾಸೆಂಜರ್ ಬಸ್‌ ಬಿಡುಗಡೆ ಮಾಡಿದ ಅಶೋಕ್ ಲೇಲ್ಯಾಂಡ್

ಆತಿಥ್ಯ ಮತ್ತು ಪ್ರವಾಸೋದ್ಯಮ ಕ್ಷೇತ್ರದಲ್ಲಿನ ಬೇಡಿಕೆ ಅನುಸಾರವಾಗಿ ಫಾಲ್ಕನ್ ಸೂಪರ್ ಮತ್ತು ಗಾಜ್ಲ್ ಬಸ್ ಮಾದರಿಗಳನ್ನು ಬಿಡುಗಡೆ ಮಾಡಲಾಗಿದ್ದು, ಹೊಸ ಬಸ್‌ಗಳನ್ನು ಅಲ್ ಘುರೈರ್ ಗ್ರೂಪ್ ವೆಸ್ಟರ್ನ್ ಆಟೋ ಕಂಪನಿ ಸಹಭಾಗಿತ್ವದಲ್ಲಿ ಅಭಿವೃದ್ದಿಗೊಳಿಸಲಾಗಿದೆ.

ಎರಡು ಪ್ಯಾಸೆಂಜರ್ ಬಸ್‌ ಬಿಡುಗಡೆ ಮಾಡಿದ ಅಶೋಕ್ ಲೇಲ್ಯಾಂಡ್

ಅತ್ಯಾಧುನಿಕ ತಂತ್ರಜ್ಞನ ಸೌಲಭ್ಯಗಳನ್ನು ಹೊಂದಿರುವ ಫಾಲ್ಕನ್ ಸೂಪರ್ ಮತ್ತು ಗಾಜ್ಲ್ ಬಸ್‌ಗಳು ಗಲ್ಫ್ ಕೋ ಆಪರೇಷನ್ ಕೌನ್ಸಿಲ್(ಜಿಸಿಸಿ) ಸಾರಿಗೆ ಸಂಸ್ಥೆಯ ನಿಯಮದನ್ವಯ ಸಿದ್ದಗೊಂಡಿದ್ದು, ಅಡ್ವಾನ್ಸ್ ಟೆಕ್ನಾಲಜಿ ಸೌಲಭ್ಯಗಳೊಂದಿಗೆ ಅರಾಮದಾಯಕ ಮತ್ತು ಸುರಕ್ಷಿತ ಪ್ರಯಾಣವನ್ನು ಖಾತ್ರಿಪಡಿಸುತ್ತವೆ.

ಎರಡು ಪ್ಯಾಸೆಂಜರ್ ಬಸ್‌ ಬಿಡುಗಡೆ ಮಾಡಿದ ಅಶೋಕ್ ಲೇಲ್ಯಾಂಡ್

ಫಾಲ್ಕನ್ ಸೂಪರ್ ಮತ್ತು ಗಾಜ್ಲ್ ಬಸ್‌ಗಳ ಮಾದರಿಯ ಕಾರ್ಪೊರೇಟ್ ಕಂಪನಿಗಳ ಬೇಡಿಕೆ ಅನುಸಾರವಾಗಿ ಅಭಿವೃದ್ದಿಗೊಂಡಿರುವುದರಿಂದ ಬೆಲೆಗಳ ಬಗೆಗೆ ಯಾವುದೇ ಮಾಹಿತಿಯಿಲ್ಲವಾದರೂ ಬೆಂಝ್ ಬಸ್ ಮಾದರಿಗಳಿಗೆ ಸರಿಸಮನಾಗಿ ತಾಂತ್ರಿಕ ಸೌಲಭ್ಯಗಳನ್ನು ಹೊಂದಿದ್ದು, ರಾಸ್ ಅಲ್ ಖೈಮಾ ವಾಹನ ಉತ್ಪಾದನಾ ಘಟಕದ ಮೂಲಕ ಅಶೋಕ್ ಲೇಲ್ಯಾಂಡ್ ಕಂಪನಿಯು ಹಲವು ದಾಖಲೆಗಳಿಗೆ ಕಾರಣವಾಗಿದೆ.

ಎರಡು ಪ್ಯಾಸೆಂಜರ್ ಬಸ್‌ ಬಿಡುಗಡೆ ಮಾಡಿದ ಅಶೋಕ್ ಲೇಲ್ಯಾಂಡ್

2007ರಲ್ಲಿ ಸ್ಥಾಪನೆಯಾದ ರಾಸ್ ಅಲ್ ಖೈಮಾ ವಾಹನ ಉತ್ಪಾದನಾ ಘಟಕದಲ್ಲಿ ಇದುವರೆಗೆ ಸುಮಾರು 20,000ಕ್ಕೂ ಹೆಚ್ಚು ಐಷಾರಾಮಿ ಬಸ್ಸುಗಳನ್ನು ತಯಾರಿಸಿದ್ದು, ಯುಎಇ ಸೇರಿದಂತೆ ಯುರೋಪ್, ಆಫ್ರಿಕಾ ಮತ್ತು ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ಈ ಘಟಕದಿಂದಲೇ ವಿವಿಧ ಮಾದರಿಯ ಬಸ್ಸುಗಳನ್ನು ರಫ್ತು ಮಾಡುತ್ತದೆ.

ಎರಡು ಪ್ಯಾಸೆಂಜರ್ ಬಸ್‌ ಬಿಡುಗಡೆ ಮಾಡಿದ ಅಶೋಕ್ ಲೇಲ್ಯಾಂಡ್

ಅಶೋಕ್ ಲೇಲ್ಯಾಂಡ್ ನಿರ್ಮಾಣದ ಬಹುತೇಕ ಬಸ್‌ಗಳು ಸೌದಿ ಅರೇಬಿಯಾದಲ್ಲಿ ಸಂಚರಿಸುತ್ತಿದ್ದು, ಗಲ್ಫ್ ಕೋಆಪರೇಷನ್ ಕೌನ್ಸಿಲ್(ಜಿಸಿಸಿ) ಸಾರಿಗೆ ಸಂಸ್ಥೆಯ ನಿಯಮದಡಿ ಹೊಸ ಬಸ್‌ಗಳನ್ನು ಅಭಿವೃದ್ದಿಪಡಿಸಿ ಮಾರಾಟ ಮಾಡಲಾಗುತ್ತದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಎರಡು ಪ್ಯಾಸೆಂಜರ್ ಬಸ್‌ ಬಿಡುಗಡೆ ಮಾಡಿದ ಅಶೋಕ್ ಲೇಲ್ಯಾಂಡ್

ಪ್ರಾದೇಶಿಕ ಸಂಘಟನೆಯಾಗಿರುವ ಗಲ್ಫ್ ಕೋ ಆಪರೇಷನ್ ಕೌನ್ಸಿಲ್ (ಜಿಸಿಸಿ) ಸಾರಿಗೆ ಸಂಸ್ಥೆಯು ಕತಾರ್, ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್, ಬಹ್ರೆನ್, ಓಮನ್ ಮತ್ತು ಕುವೈತ್ ರಾಷ್ಟ್ರಗಳನ್ನು ಒಳಗೊಂಡಿದ್ದು, ಈ ಭಾಗದಲ್ಲಿ ಮಾರಾಟವಾಗುವ ಎಲ್ಲಾ ವಾಹನಗಳು ಜಿಸಿಸಿ ಸಂಸ್ಥೆಯಿಂದ ಮಾನ್ಯತೆ ಹೊಂದಿರುತ್ತವೆ.

ಎರಡು ಪ್ಯಾಸೆಂಜರ್ ಬಸ್‌ ಬಿಡುಗಡೆ ಮಾಡಿದ ಅಶೋಕ್ ಲೇಲ್ಯಾಂಡ್

ಅಶೋಕ್ ಲೇಲ್ಯಾಂಡ್ ಸೌದಿ ಅರೇಬಿಯಾದಲ್ಲಿನ ಪ್ರಯಾಣಿಕರ ಬಸ್‌ಗಳ ಮಾರಾಟದಲ್ಲಿ ಹೆಚ್ಚಿನ ಪಾಲು ಹೊಂದಿದ್ದು, ಸುಮಾರು 3 ಸಾವಿರಕ್ಕೂ ಹೆಚ್ಚು ಐಷಾರಾಮಿ ಬಸ್‌ಗಳನ್ನು ಕಾರ್ಪೊರೇಟ್ ಕಂಪನಿಗಳಿಗೆ ಮತ್ತು ಶಾಲಾ ವಾಹನ ಮಾದರಿಗಳನ್ನಾಗಿ ಮಾರಾಟ ಮಾಡಿದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಎರಡು ಪ್ಯಾಸೆಂಜರ್ ಬಸ್‌ ಬಿಡುಗಡೆ ಮಾಡಿದ ಅಶೋಕ್ ಲೇಲ್ಯಾಂಡ್

ಇದೀಗ ಬಿಡುಗಡೆಯಾಗಿರುವ 70 ಆಸನ ಸೌಲಭ್ಯದ ಫಾಲ್ಕನ್ ಸೂಪರ್ ಮತ್ತು 26 ಆಸನ ಸೌಲಭ್ಯ ಗಾಜ್ಲ್ ಬಸ್ ಮಾದರಿಗಳು ಮುಂಬರುವ ದಿನಗಳಲ್ಲಿ ಹೆಚ್ಚಿನ ಮಟ್ಟದ ಬೇಡಿಕೆ ತಂದುಕೊಡುವ ನೀರಿಕ್ಷೆಯಿದ್ದು, ಭಾರತದಲ್ಲೂ ಕೂಡಾ ವಿವಿಧ ಮಾದರಿಯ ಮಧ್ಯಮ ಗಾತ್ರದ ಪ್ರಯಾಣಿಕರ ವಾಹನಗಳನ್ನು ಮಾರಾಟ ಮಾಡುತ್ತಿದೆ.

Most Read Articles

Kannada
English summary
Ashok Leyland introduces Falcon Super and Gazl passenger bus. Read in Kannada.
Story first published: Friday, December 18, 2020, 22:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X