ಮೂರು ಚಕ್ರದ ಆಂಬ್ಯುಲೆನ್ಸ್ ಬಿಡುಗಡೆಗೊಳಿಸಿದ ಅತುಲ್ ಆಟೋ

ಆಟೋರಿಕ್ಷಾ ತಯಾರಕ ಕಂಪನಿಯಾದ ಅತುಲ್ ಆಟೋ, ಕೋವಿಡ್ -19 ರೋಗಿಗಳನ್ನು ಕರೆದೊಯ್ಯಲು ಮೂರು ಚಕ್ರದ ಆಂಬ್ಯುಲೆನ್ಸ್ ಅನ್ನು ಬಿಡುಗಡೆಗೊಳಿಸಿದೆ. ಈ ಆಂಬ್ಯುಲೆನ್ಸ್‌ನ ಮೊದಲ ಯುನಿಟ್ ಅನ್ನು ಕಂಪನಿಯು ರಾಜ್‌ಕೋಟ್ ನಲ್ಲಿರುವ ಆಸ್ಪತ್ರೆಗೆ ನೀಡಿದೆ.

ಮೂರು ಚಕ್ರದ ಆಂಬ್ಯುಲೆನ್ಸ್ ಬಿಡುಗಡೆಗೊಳಿಸಿದ ಅತುಲ್ ಆಟೋ

ಶೀಘ್ರದಲ್ಲೇ ಈ ಆಂಬ್ಯುಲೆನ್ಸ್ ಉತ್ಪಾದನೆಯನ್ನು ದೊಡ್ಡ ಪ್ರಮಾಣದಲ್ಲಿ ಆರಂಭಿಸಲಾಗುವುದೆಂದು ಕಂಪನಿ ತಿಳಿಸಿದೆ. ಅತುಲ್ ಆಟೋಕಂಪನಿಯ ಪ್ರಕಾರ ಈ ಮೂರು ಚಕ್ರದ ಆಂಬ್ಯುಲೆನ್ಸ್ ಅನ್ನು ಸರಕು ಸಾಗಣೆಯ ತ್ರಿಚಕ್ರ ವಾಹನದಲ್ಲಿ ನಿರ್ಮಿಸಲಾಗಿದೆ. ಈ ಆಂಬ್ಯುಲೆನ್ಸ್ ಅನ್ನು ಜನನಿಬಿಡ ಹಾಗೂ ಕಿರಿದಾದ ರಸ್ತೆಗಳಲ್ಲಿಯೂ ಸರಾಗವಾಗಿ ಚಲಿಸುವಂತೆ ವಿನ್ಯಾಸಗೊಳಿಸಲಾಗಿದೆ.

ಮೂರು ಚಕ್ರದ ಆಂಬ್ಯುಲೆನ್ಸ್ ಬಿಡುಗಡೆಗೊಳಿಸಿದ ಅತುಲ್ ಆಟೋ

ಈ ಬಗ್ಗೆ ಮಾತನಾಡಿದ ಅತುಲ್ ಆಟೋ ಜನರಲ್ ಮ್ಯಾನೇಜರ್ ಯೋಗೇಶ್ ರಂಜನ್, ರಾಜ್‌ಕೋಟ್ ಜಿಲ್ಲಾಡಳಿತದ ಮನವಿಯ ಮೇರೆಗೆ ಈ ಆಂಬುಲೆನ್ಸ್ ಅನ್ನು ವಿನ್ಯಾಸಗೊಳಿಸಲಾಗಿದೆ. ವಸತಿ ಪ್ರದೇಶಗಳ ಕಿರಿದಾದ ರಸ್ತೆಗಳಲ್ಲಿ ವಾಸಿಸುವ ರೋಗಿಗಳನ್ನು ಈ ವಾಹನದಲ್ಲಿ ಸುಲಭವಾಗಿ ಆಸ್ಪತ್ರೆಗೆ ಸಾಗಿಸಬಹುದು.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಮೂರು ಚಕ್ರದ ಆಂಬ್ಯುಲೆನ್ಸ್ ಬಿಡುಗಡೆಗೊಳಿಸಿದ ಅತುಲ್ ಆಟೋ

ಶೀಘ್ರದಲ್ಲಿಯೇ ಈ ಆಂಬ್ಯುಲೆನ್ಸ್‌ನ ವಾಣಿಜ್ಯ ಉತ್ಪಾದನೆಯನ್ನು ಕಂಪನಿಯು ಆರಂಭಿಸಲಿದೆ ಎಂದು ಅವರು ಹೇಳಿದರು. ಆಂಬ್ಯುಲೆನ್ಸ್‌ ಚಿಕ್ಕ ಗಾತ್ರವನ್ನು ಹೊಂದಿರುವುದರಿಂದ ಭಾರತದ ಮಹಾನಗರಗಳ ಜನದಟ್ಟಣೆಯ ಪ್ರದೇಶಗಳಲ್ಲಿಯೂ ಸುಲಭವಾಗಿ ಚಲಿಸಲಿದೆ ಎಂದು ಹೇಳಿದರು.

ಮೂರು ಚಕ್ರದ ಆಂಬ್ಯುಲೆನ್ಸ್ ಬಿಡುಗಡೆಗೊಳಿಸಿದ ಅತುಲ್ ಆಟೋ

ಕೋವಿಡ್ -19 ರೋಗಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವುದರಿಂದ ದೇಶದಲ್ಲಿ ಆಂಬ್ಯುಲೆನ್ಸ್‌ಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಅನೇಕ ಆಟೋಮೊಬೈಲ್ ಕಂಪನಿಗಳು ಸಣ್ಣ ಗಾತ್ರದ 4-ವ್ಹೀಲರ್ ಹಾಗೂ ಬೈಕ್ ಆಂಬ್ಯುಲೆನ್ಸ್‌ಗಳನ್ನು ಬಿಡುಗಡೆಗೊಳಿಸಿ ರೋಗಿಗಳಿಗೆ ನೆರವಾಗುತ್ತಿವೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಮೂರು ಚಕ್ರದ ಆಂಬ್ಯುಲೆನ್ಸ್ ಬಿಡುಗಡೆಗೊಳಿಸಿದ ಅತುಲ್ ಆಟೋ

ಅತುಲ್ ಆಟೋ, ಹೊಸ ಯೋಜನೆಯಡಿ 3-ವೀಲರ್ ಆಂಬ್ಯುಲೆನ್ಸ್‌ ಅಭಿವೃದ್ಧಿಪಡಿಸಿದೆ. ಮೂರು ಚಕ್ರದ ಈ ಆಂಬ್ಯುಲೆನ್ಸ್, ಬೈಕ್ ಆಂಬ್ಯುಲೆನ್ಸ್‌ಗಿಂತ ಹೆಚ್ಚು ಉಪಯುಕ್ತವಾಗಿದ್ದು, 4-ವ್ಹೀಲರ್ ಆಂಬ್ಯುಲೆನ್ಸ್‌ಗಳು ತಲುಪಲು ಸಾಧ್ಯವಾಗದ ಜಾಗಗಳಿಗೆ ತಲುಪಲಿದೆ. ಸದ್ಯಕ್ಕೆ ರಾಜ್‌ಕೋಟ್ ನಲ್ಲಿರುವ ಆಸ್ಪತ್ರೆಯು ಈ ಸೇವೆಯನ್ನು ಪಡೆಯುತ್ತಿದೆ.

ಮೂರು ಚಕ್ರದ ಆಂಬ್ಯುಲೆನ್ಸ್ ಬಿಡುಗಡೆಗೊಳಿಸಿದ ಅತುಲ್ ಆಟೋ

ಬೇಡಿಕೆ ಬಂದ ನಂತರ ಇತರ ರಾಜ್ಯಗಳಿಗೂ ಈ ಆಂಬ್ಯುಲೆನ್ಸ್‌ಗಳನ್ನು ತಲುಪಿಸಲಾಗುವುದು ಎಂದು ಕಂಪನಿ ಹೇಳಿದೆ. ಕಂಪನಿಯು ಈ ಹಣಕಾಸು ವರ್ಷದ ಅಂತ್ಯದ ವೇಳೆಗೆ ಸುಮಾರು 250 ಆಂಬ್ಯುಲೆನ್ಸ್‌ಗಳನ್ನು ಉತ್ಪಾದಿಸುವ ಯೋಜನೆಯನ್ನು ಹೊಂದಿದೆ.

Most Read Articles

Kannada
English summary
Atul auto develops three wheeler ambulance. Read in Kannada.
Story first published: Tuesday, August 11, 2020, 15:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X