ಕುದುರೆ ಎಳೆಯುವ ಗಾಡಿಯಾಗಿ ಬದಲಾದ ಆಡಿ ಕಾರು

ಕಾರುಗಳನ್ನು ಮಾರ್ಪಾಡು ಮಾಡುವುದು ಭಾರತದಲ್ಲಿ ಮಾತ್ರವಲ್ಲದೇ ಪ್ರಪಂಚದೆಲ್ಲೆಡೆ ಜನಪ್ರಿಯವಾಗಿದೆ. ಸಾಮಾನ್ಯ ಕಾರುಗಳನ್ನು ಸಹ ಕಡಿಮೆ ವೆಚ್ಚದಲ್ಲಿ ದುಬಾರಿ ಬೆಲೆಯ ಐಷಾರಾಮಿ ವಾಹನಗಳ ರೀತಿಯಲ್ಲಿ ಮಾರ್ಪಾಡು ಮಾಡಬಹುದು. ಈ ಹಿಂದೆಯೂ ಸಹ ಹಲವಾರು ವಾಹನಗಳನ್ನು ಮಾಡಿಫೈಗೊಳಿಸಲಾಗಿದೆ.

ಕುದುರೆ ಎಳೆಯುವ ಗಾಡಿಯಾಗಿ ಬದಲಾದ ಆಡಿ ಕಾರು

ಆದರೆ ಯುವಕನೊಬ್ಬ ತನ್ನ ಐಷಾರಾಮಿ ಕಾರನ್ನು ಕುದುರೆ ಎಳೆಯುವ ಗಾಡಿಯನ್ನಾಗಿ ಮಾಡಿಫೈಗೊಳಿಸಿಕೊಂಡಿದ್ದಾನೆ. ಸಾಮಾನ್ಯವಾಗಿ ಯುವಜನರು ದುಬಾರಿ ಐಷಾರಾಮಿ ಕಾರುಗಳನ್ನು ಬೇರೆಯವರು ಅಸೂಯೆ ಪಡುವ ರೀತಿಯಲ್ಲಿ ಮಾಡಿಫೈಗೊಳಿಸಿಕೊಳ್ಳುತ್ತಾರೆ. ಆದರೆ ಬೆಲಾರಸ್‌ನ ಯುವಕನೊಬ್ಬ ತನ್ನ ಹಳೆಯ ಆಡಿ ಕಾರನ್ನು ಕುದುರೆಗಳಿಂದ ಎಳೆಯುವ ಗಾಡಿಯನ್ನಾಗಿ ಬದಲಿಸಿಕೊಂಡಿದ್ದಾನೆ.

ಕುದುರೆ ಎಳೆಯುವ ಗಾಡಿಯಾಗಿ ಬದಲಾದ ಆಡಿ ಕಾರು

ಅಲೆಕ್ಸಿ ಉಸಿಕೊವ್, ಬೆಲಾರಸ್‌ನ ಸ್ಲೊಬೊಡ್ಕಾ ಎಂಬ ಸಣ್ಣ ಹಳ್ಳಿಗೆ ಸೇರಿದವನು. ಆತ ಜಾನುವಾರುಗಳ ಸಾಕಣೆ ಮಾಡುತ್ತಿದ್ದು, ಕೆಲವು ಕುದುರೆಗಳನ್ನು ಸಹ ಸಾಕಿದ್ದಾನೆ. ಆತ ತನ್ನ ಬಳಿಯಿದ್ದ ಹಳೆ ಆಡಿ 80 ಕಾರನ್ನು ವಿಶಿಷ್ಟ, ವಿಚಿತ್ರ ರೀತಿಯಲ್ಲಿ ಮಾಡಿಫೈಗೊಳಿಸಿದ್ದಾನೆ.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಕುದುರೆ ಎಳೆಯುವ ಗಾಡಿಯಾಗಿ ಬದಲಾದ ಆಡಿ ಕಾರು

ತನ್ನ ಬಳಿಯಿರುವ ಜಾನುವಾರುಗಳ ಮೇಲ್ವಿಚಾರಣೆಗಾಗಿ ಆತ ಈ ರೀತಿಯ ಬದಲಾವಣೆ ಮಾಡಿದ್ದಾನೆ. ದೀರ್ಘಕಾಲದಿಂದ ಬಳಸದೇ ಗ್ಯಾರೇಜ್‌ನಲ್ಲಿ ನಿಲ್ಲಿಸಿದ್ದ ಕಾರನ್ನು ಮಾಡಿಫೈಗೊಳಿಸಿದ್ದಾನೆ ಎಂದು ಹೇಳಲಾಗಿದೆ.

ಕುದುರೆ ಎಳೆಯುವ ಗಾಡಿಯಾಗಿ ಬದಲಾದ ಆಡಿ ಕಾರು

ಮಾಡಿಫೈಗೊಂಡಿರುವ ಕಾರನ್ನು ನೋಡುತ್ತಿರುವ ಜನರು ಕಾರನ್ನು ಮಾಡಿಫೈಗೊಳಿಸದೇ ಹಾಗೆ ಬಿಡಬೇಕಿತ್ತು ಎಂದು ಹೇಳುತ್ತಿದ್ದಾರೆ. ಕಾರಿನ ಮುಂಭಾಗವನ್ನು ಸಂಪೂರ್ಣವಾಗಿ ಕತ್ತರಿಸಿ ಹಾಕಿರುವುದೇ ಇದಕ್ಕೆ ಕಾರಣ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಕುದುರೆ ಎಳೆಯುವ ಗಾಡಿಯಾಗಿ ಬದಲಾದ ಆಡಿ ಕಾರು

ಕಾರಿನ ಎಂಜಿನ್ ಹಾಗೂ ಮುಂಭಾಗದ ಸೀಟುಗಳನ್ನು ತೆಗೆದುಹಾಕಿ ಹಿಂಭಾಗದ ಸೀಟುಗಳನ್ನು ಮಾತ್ರ ಉಳಿಸಿಕೊಂಡು, ಕುದುರೆಗಳು ಈ ಕಾರನ್ನು ಎಳೆಯುವ ರೀತಿಯಲ್ಲಿ ಮಾಡಿಫೈಗೊಳಿಸಲಾಗಿದೆ.

ಕುದುರೆ ಎಳೆಯುವ ಗಾಡಿಯಾಗಿ ಬದಲಾದ ಆಡಿ ಕಾರು

ಈ ಕುದುರೆ ಗಾಡಿಯಲ್ಲಿ ಎಲೆಕ್ಟ್ರಿಕ್ ಲ್ಯಾಂಪ್ ಹಾಗೂ ಬ್ಯಾಟರಿಯನ್ನು ಅಳವಡಿಸಲಾಗಿದೆ. ಜೊತೆಗೆ ಸಣ್ಣ ಒವನ್ ಕೂಡ ಅಳವಡಿಸಲಾಗಿದೆ. ರಾಯಿಟರ್ಸ್ ಸೈಟ್ ಮೂಲಕ ಬಿಡುಗಡೆಯಾಗಿರುವ ಈ ಮಾಡಿಫೈಗೊಂಡಿರುವ ಕಾರಿನ ಫೋಟೋಗಳು ಇಂಟರ್ ನೆಟ್ ನಲ್ಲಿ ವೈರಲ್ ಆಗಿವೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಕುದುರೆ ಎಳೆಯುವ ಗಾಡಿಯಾಗಿ ಬದಲಾದ ಆಡಿ ಕಾರು

ಹಿಂದೆ ಈ ರೀತಿಯಲ್ಲಿ ಯಾವುದೇ ವಾಹನಗಳನ್ನು ಮಾಡಿಫೈಗೊಳಿಸಿರಲಿಲ್ಲ. ಮಾಡಿಫೈಗೊಂಡಿರುವ ಈ ಕಾರನ್ನು ಕುದುರೆ ಎಳೆಯಲು ಸಾಧ್ಯವಾಗುವಂತೆ ಈ ಕಾರಿನಲ್ಲಿ ಮೆಟಲ್ ರಾಡ್‌ಗಳನ್ನು ಅಳವಡಿಸಲಾಗಿದೆ.

ಕುದುರೆ ಎಳೆಯುವ ಗಾಡಿಯಾಗಿ ಬದಲಾದ ಆಡಿ ಕಾರು

ಕೇವಲ ಒಂದು ಕುದುರೆ ಮಾತ್ರ ಈ ಮಾಡಿಫೈ ಕಾರನ್ನು ಎಳೆಯುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಮಾಡಿಫೈಗೊಂಡ ಕಾರನ್ನು ದೊಡ್ಡ ಕುದುರೆಯೊಂದು ಸಣ್ಣ ಕುದುರೆಯ ಜೊತೆ ಎಳೆದುಕೊಂಡು ಹೋಗುತ್ತಿರುವುದನ್ನು ಫೋಟೋಗಳಲ್ಲಿ ಕಾಣಬಹುದು.

Most Read Articles

Kannada
English summary
Audi car modified as horse drawn cart in Belarus. Read in Kannada.
Story first published: Saturday, August 8, 2020, 10:33 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X