ಕರೋನಾ ಎಫೆಕ್ಟ್- ಇ-ಟ್ರಾನ್ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮುಂದೂಡಿಕೆ

ಜಗತ್ತಿನಾದ್ಯಂತ ಆತಂಕ ಸೃಷ್ಠಿಸಿರುವ ಕರೋನಾ ವೈರಸ್‌ನಿಂದಾಗಿ ಭಾರೀ ಪ್ರಮಾಣದ ಆರ್ಥಿಕತೆ ಕುಸಿತ ಶುರುವಾಗಿದ್ದು, ಆಟೋ ಉತ್ಪಾದನಾ ಕಂಪನಿಗಳು ಸಹ ದಿನಂಪ್ರತಿ ಸಾವಿರಾರು ಕೋಟಿ ನಷ್ಟ ಅನುಭವಿಸುತ್ತಿವೆ.

ಕರೋನಾ ಎಫೆಕ್ಟ್- ಇ-ಟ್ರಾನ್ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮುಂದೂಡಿಕೆ

ಆಡಿ ಕಂಪನಿಯು ಭಾರತದಲ್ಲಿ ತನ್ನ ಮೊದಲ ಎಲೆಕ್ಟ್ರಿಕ್ ಎಸ್‌ಯುವಿ ಇ-ಟ್ರಾನ್ ಕಾರನ್ನು ಇದೇ ತಿಂಗಳು ಏಪ್ರಿಲ್‌ನಲ್ಲಿ ಬಿಡುಗಡೆಗಾಗಿ ಸಿದ್ದಗೊಂಡಿತ್ತು. ಆದರೆ ಕರೋನಾ ವೈರಸ್ ಹೆಚ್ಚಿದ್ದರಿಂದ ಹೊಸ ಕಾರು ಬಿಡುಗಡೆಯನ್ನು ತಾತ್ಕಾಲಿಕವಾಗಿ ಮುಂದೂಡಿಕೆ ಮಾಡಿದ್ದು, ಮಾಹಾಮಾರಿ ವೈರಸ್ ವಿರುದ್ಧ ಹೋರಾಟಕ್ಕಾಗಿ ಸರ್ಕಾರದ ಜೊತೆ ಕೈಜೋಡಿಸುವ ಮೂಲಕ 5 ಮಿಲಿಯನ್ ಯುರೋ ಡಾಲರ್ ದೇಣಿಗೆ ನೀಡಿ ಅಗತ್ಯ ವೈದ್ಯಕೀಯ ಉಪಕರಣಗಳ ತಯಾರಿಕೆಗೆ ಒಪ್ಪಿಗೆ ಸೂಚಿಸಿದೆ.

ಕರೋನಾ ಎಫೆಕ್ಟ್- ಇ-ಟ್ರಾನ್ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮುಂದೂಡಿಕೆ

ಇನ್ನು ಆಡಿ ಕಂಪನಿಯು ತನ್ನ ಮೊದಲ ಎಲೆಕ್ಟ್ರಿಕ್ ಎಸ್‌ಯುವಿ ಇ-ಟ್ರಾನ್ ಆವೃತ್ತಿಯನ್ನು ಭಾರತದಲ್ಲಿ ಈಗಾಗಲೇ ಪ್ರದರ್ಶನಗೊಳಿಸಿದ್ದು, ವಿನೂತನ ತಂತ್ರಜ್ಞಾನ ಪ್ರೇರಣೆ ಹೊಂದಿರುವ ಇ-ಟ್ರಾನ್ ಕಾರು ಹಲವು ವಿಶೇಷತೆಗಳಿಗೆ ಕಾರಣವಾಗಿದೆ.

ಕರೋನಾ ಎಫೆಕ್ಟ್- ಇ-ಟ್ರಾನ್ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮುಂದೂಡಿಕೆ

ಎಲೆಕ್ಟ್ರಿಕ್ ಕಾರು ಮಾದರಿಯಲ್ಲೇ ಹಲವು ಅತ್ಯಾಧುನಿಕ ತಾಂತ್ರಿಕ ಸೌಲಭ್ಯಗಳ ಪ್ರೇರಣೆ ಹೊಂದಿರುವ ಇ-ಟ್ರಾನ್ ಕಾರು ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಹಸಿರು ವಾಹನಗಳ ಪಟ್ಟಿಯಲ್ಲಿ ಅಗ್ರಸ್ಥಾನ ಗಿಟ್ಟಿಸಿಕೊಳ್ಳುವ ನೀರಿಕ್ಷೆಯಲ್ಲಿದೆ.

ಕರೋನಾ ಎಫೆಕ್ಟ್- ಇ-ಟ್ರಾನ್ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮುಂದೂಡಿಕೆ

ವಿಶ್ವಾದ್ಯಂತ ಎಲೆಕ್ಟ್ರಿಕ್ ವಾಹನಗಳಿಗೆ ಭಾರೀ ಬೇಡಿಕೆ ಸೃಷ್ಠಿಯಾಗುತ್ತಿರುವ ಹಿನ್ನೆಲೆಯಲ್ಲಿ ಆಡಿ ಸಂಸ್ಥೆಯು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಇ-ಟ್ರಾನ್ ಎಲೆಕ್ಟ್ರಿಕ್ ಐಷಾರಾಮಿ ಎಸ್‌ಯುವಿ ಮಾದರಿಯನ್ನು ಅಭಿವೃದ್ಧಿಪಡಿಸಿದ್ದು, ಈಗಾಗಲೇ ಯುಎಸ್ಎ ಮತ್ತು ಯುರೋಪ್ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಿರುವ ಇ-ಟ್ರಾನ್ ಇದೀಗ ಭಾರತದಲ್ಲೂ ಸದ್ದು ಮಾಡುವ ತವಕದಲ್ಲಿದೆ.

ಕರೋನಾ ಎಫೆಕ್ಟ್- ಇ-ಟ್ರಾನ್ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮುಂದೂಡಿಕೆ

ಶಾರ್ಪ್ ಆ್ಯಂಡ್ ಸ್ಟೈಲ್ ಆವೃತ್ತಿಯಾಗಿರುವ ಇ-ಟ್ರಾನ್ ಕಾರಿನಲ್ಲಿ ಎಲ್ಇಡಿ ಹೆಡ್‌ಲ್ಯಾಂಪ್ಸ್, ಆಕರ್ಷಕ ರೂಫ್ ಲೈನ್, ಬೂಟ್ ಮೇಲೆ ಎಲ್ಇಡಿ ಬಾರ್ಸ್, 20.5-ಇಂಚಿನ ಅಲಾಯ್ ವೀಲ್ಹ್, ರಿಯರ್ ವ್ಯೂ ಮಿರರ್ ಮೇಲೆ ಕ್ಯಾಮೆರಾ ಸೇರಿದಂತೆ ಮುಂಭಾಗ ಚಕ್ರಗಳಲ್ಲಿ 125ಕೆವಿ ಮೋಟಾರ್ ಮತ್ತು ಹಿಂಭಾಗದ ಚಕ್ರಗಳಲ್ಲಿ 140 ಕೆ.ವಿ ಮೋಟಾರ್ ಸಹಾಯದೊಂದಿಗೆ ಆಲ್ ವೀಲ್ಹ್ ಪವರ್‌ ಪಡೆದುಕೊಂಡಿದೆ.

ಕರೋನಾ ಎಫೆಕ್ಟ್- ಇ-ಟ್ರಾನ್ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮುಂದೂಡಿಕೆ

ಇ-ಟ್ರಾನ್ ಕಾರಿನಲ್ಲಿ 95kWh ಲೀಥಿಯಂ ಅಯಾನ್ ಬ್ಯಾಟರಿ ಸೌಲಭ್ಯವನ್ನು ಹೊಂದಿದ್ದು, ಪ್ರತಿ ಗಂಟೆಗೆ 200ಕಿ.ಮಿ ಟಾಪ್ ಸ್ಪೀಡ್ ಪಡೆದುಕೊಂಡಿದೆ. ಡಿಸಿ ಚಾರ್ಜರ್ ಮೂಲಕ ಅಥವಾ 400 ವೊಲ್ಟ್ಸ್ ಹೋಮ್ ಚಾರ್ಜರ್‌ನೊಂದಿಗೆ 95kWh ಬ್ಯಾಟರಿಯನ್ನು ಕೇವಲ 30 ನಿಮಿಷಗಳಲ್ಲಿ ಶೇ.80 ರಷ್ಟು ಚಾರ್ಜ್ ಮಾಡಿಕೊಳ್ಳಬಹುದಾಗಿದೆ.

ಕರೋನಾ ಎಫೆಕ್ಟ್- ಇ-ಟ್ರಾನ್ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮುಂದೂಡಿಕೆ

ಈ ಮೂಲಕ 5.7 ಸೇಕೆಂಡುಗಳಲ್ಲಿ 100 ಕಿ.ಮಿ ಗರಿಷ್ಠ ವೇಗ ಸಾಧಿಸುವ ಇ-ಟ್ರಾನ್ ಕಾರು ಟೆಸ್ಲಾ ಎಕ್ಸ್, ಜಾಗ್ವಾರ್ ಐಪೆಸ್ ಮತ್ತು ಮರ್ಸಿಡಿಸ್ ಬೆಂಝ್ ಇಕ್ಯೂಸಿ ಕಾರುಗಳಿಗೆ ಪ್ರತಿಸ್ಪರ್ಧಿಯಾಗಲಿದೆ.

ಕರೋನಾ ಎಫೆಕ್ಟ್- ಇ-ಟ್ರಾನ್ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮುಂದೂಡಿಕೆ

ಆದ್ರೆ ಇ-ಟ್ರಾನ್ ಕಾರಿನ ಅಧಿಕೃತ ಮೈಲೇಜ್ ಕುರಿತಾಗಿ ಯಾವುದೇ ಮಾಹಿತಿ ಹಂಚಿಕೊಳ್ಳದ ಆಡಿ ಕಂಪನಿಯು ಪ್ರತಿ ಸ್ಪರ್ಧಿ ಕಾರು ಮಾದರಿಗಳಿಂತಲೂ ಉತ್ತಮ ಮೈಲೇಜ್ ಮತ್ತು ಬೆಲೆ ಪಟ್ಟಿಯೊಂದಿಗೆ ಮಾರುಕಟ್ಟೆ ಪ್ರವೇಶಿಸುವ ಸುಳಿವು ನೀಡಿದೆ.

ಕರೋನಾ ಎಫೆಕ್ಟ್- ಇ-ಟ್ರಾನ್ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮುಂದೂಡಿಕೆ

ಹಾಗೆಯೇ 4.9-ಮೀಟರ್ ಉದ್ದವಿರುವ ಇ-ಟ್ರಾನ್ ಕಾರು ಸದ್ಯ ಮಾರಾಟವಾಗುತ್ತಿರುವ ಕ್ಯೂ5 ಮತ್ತು ಕ್ಯೂ7 ಕಾರುಗಳಿಂತಲೂ ಉತ್ತಮ ಒಳವಿನ್ಯಾಸವನ್ನು ಹೊಂದಿದ್ದು, 5-ಸೀಟರ್ ಆಸನ ಸೌಲಭ್ಯದೊಂದಿಗೆ 660-ಲೀಟರ್ ಸಾಮಾರ್ಥ್ಯದ ಬೂಟ್ ಸ್ಪೆಸ್ ಪಡೆದುಕೊಂಡಿದೆ.

ಕರೋನಾ ಎಫೆಕ್ಟ್- ಇ-ಟ್ರಾನ್ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮುಂದೂಡಿಕೆ

ಇ-ಟ್ರಾನ್ ಕಾರು ಹೊರಭಾಗದ ವಿನ್ಯಾಸದಂತೆಯೇ ಒಳವಿನ್ಯಾಸದಲ್ಲೂ ಐಷಾರಾಮಿ ಕಾರು ಪ್ರಿಯರನ್ನು ಸೆಳೆಯಲಿದ್ದು, ಮ್ಯಾಟ್ರಿಕ್ಸ್ ಟೆಕ್ನಾಲಜಿ ಪ್ರೇರಣೆಯೊಂದಿಗೆ ಮಲ್ಟಿ ಟಚ್‌ಸ್ಕೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಕ್ರಿಯೆಚರ್ ಕಂಫರ್ಟ್, ಬ್ಯಾಂಗ್ ಆ್ಯಂಡ್ ಓಲ್ಪ್‌ಸೆನ್ ಸೌಂಡ್ ಸಿಸ್ಟಂ ಸೌಲಭ್ಯವನ್ನು ಹೊಂದಿರಲಿದೆ.

ಕರೋನಾ ಎಫೆಕ್ಟ್- ಇ-ಟ್ರಾನ್ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮುಂದೂಡಿಕೆ

ಕಾರಿನ ಒಳಭಾಗವನ್ನು ಸಹ ಗ್ರಾಹಕ ಆದ್ಯತೆ ಮೇರೆಗೆ ವಿವಿಧ 4 ಮಾದರಿಯ ಡ್ಯುಯಲ್ ಬಣ್ಣಗಳ ಇಂಟಿರಿಯರ್ ನೀಡಲಾಗಿದ್ದು, ಹೊಸ ಭಾಗದಲ್ಲಿ 10 ಬಣ್ಣಗಳ ಆಯ್ಕೆ ನೀಡಲಾಗಿದೆ. ಒಟ್ಟಿನಲ್ಲಿ ಹಲವು ವಿಶೇಷತೆಗಳಿಗೆ ಕಾರಣವಾಗಿರುವ ಇ-ಟ್ರಾನ್ ಕಾರು ಮುಂದಿನ ಜೂನ್ ಅಥವಾ ಜುಲೈ ವೇಳೆಗೆ ಬಿಡುಗಡೆಯಾಗುವ ಸಾಧ್ಯತೆಗಳಿದ್ದು, ಕಾರಿನ ಬೆಲೆಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 90 ಲಕ್ಷದಿಂದ ರೂ. 1.10 ಕೋಟಿ ಇರಬಹುದೆಂದು ಅಂದಾಜಿಸಲಾಗಿದೆ.

Most Read Articles

Kannada
Read more on ಆಡಿ audi
English summary
Audi E-Tron launch averted due to Corona lockdown. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X