ಕರೋನಾ ವೈರಸ್: ಸುರಕ್ಷತಾ ಕ್ರಮಗಳ ಮಾರ್ಗಸೂಚಿ ಬಿಡುಗಡೆಗೊಳಿಸಿದ ಆಡಿ ಇಂಡಿಯಾ

ಭಾರತದಲ್ಲಿ ಕರೋನಾ ವೈರಸ್ ಸೋಂಕಿನ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಛಾಗುತ್ತಿವೆ. ಈ ಕಾರಣಕ್ಕೆ ಸರ್ಕಾರವು ಮೇ 17ರವರೆಗೆ 3ನೇ ಹಂತದ ಲಾಕ್‌ಡೌನ್ ಅನ್ನು ಜಾರಿಗೊಳಿಸಿದೆ. ಆದರೆ ಈ ಬಾರಿಯ ಲಾಕ್‌ಡೌನ್‌ನಲ್ಲಿ ಸಾಕಷ್ಟು ವಿನಾಯಿತಿಗಳನ್ನು ನೀಡಲಾಗಿದೆ.

ಕರೋನಾ ವೈರಸ್: ಸುರಕ್ಷತಾ ಕ್ರಮಗಳ ಮಾರ್ಗಸೂಚಿ ಬಿಡುಗಡೆಗೊಳಿಸಿದ ಆಡಿ ಇಂಡಿಯಾ

ಇದರಿಂದಾಗಿ ವಾಹನ ತಯಾರಕ ಕಂಪನಿಗಳು ತಮ್ಮ ಕಾರ್ಯಾಚರಣೆಯನ್ನು ಪುನರಾರಂಭಿಸುತ್ತಿವೆ. ಐಷಾರಾಮಿ ಕಾರು ತಯಾರಕ ಕಂಪನಿಯಾದ ಆಡಿ ಇಂಡಿಯಾ ತನ್ನ ಗ್ರಾಹಕರು ಹಾಗೂ ಉದ್ಯೋಗಿಗಳನ್ನು ಸೋಂಕಿನಿಂದ ರಕ್ಷಿಸಲು ಕೆಲವು ಸೂಚನೆಗಳನ್ನು ನೀಡಿದೆ. ಆಡಿ ಇಂಡಿಯಾ ನೀಡಿರುವ ಸೂಚನೆಗಳ ಬಗ್ಗೆ ಈ ಲೇಖನದಲ್ಲಿ ನೋಡೋಣ.

ಕರೋನಾ ವೈರಸ್: ಸುರಕ್ಷತಾ ಕ್ರಮಗಳ ಮಾರ್ಗಸೂಚಿ ಬಿಡುಗಡೆಗೊಳಿಸಿದ ಆಡಿ ಇಂಡಿಯಾ

ಇದರ ಪ್ರಕಾರ ಶೋರೂಂ ಹಾಗೂ ವರ್ಕ್‌ಶಾಪ್‌ಗಳನ್ನು ದಿನಕ್ಕೆ ಎರಡು ಬಾರಿ ಕೆಮಿಕಲ್‌ನಿಂದ ಸ್ವಚ್ವಗೊಳಿಸಲಾಗುವುದು. ಎಲ್ಲಾ ಪ್ರವೇಶ ದ್ವಾರಗಳು ಹಾಗೂ ಪೀಠೋಪಕರಣಗಳನ್ನು ಸ್ವಚ್ವಗೊಳಿಸಲು ಆಡಿ ಸೂಚನೆಗಳನ್ನು ನೀಡಿದೆ. ಇದಲ್ಲದೆ, ಭದ್ರತಾ ಸಿಬ್ಬಂದಿಗಳಿಗೆ ಥರ್ಮಲ್ ಸ್ಕ್ಯಾನಿಂಗ್ ಜವಾಬ್ದಾರಿಯನ್ನು ನೀಡಲಾಗಿದೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಕರೋನಾ ವೈರಸ್: ಸುರಕ್ಷತಾ ಕ್ರಮಗಳ ಮಾರ್ಗಸೂಚಿ ಬಿಡುಗಡೆಗೊಳಿಸಿದ ಆಡಿ ಇಂಡಿಯಾ

ಭದ್ರತಾ ಸಿಬ್ಬಂದಿಗಳು ಶೋರೂಂನ ಮುಖ್ಯ ದ್ವಾರದಲ್ಲಿ ಒಳಗೆ ಬರುವ ಹಾಗೂ ಹೊರಕ್ಕೆ ಹೋಗುವ ಗ್ರಾಹಕರ ಥರ್ಮಲ್ ಸ್ಕ್ರೀನಿಂಗ್ ನಡೆಸಲಿದ್ದಾರೆ. ಇದರ ಜೊತೆಗೆ ಕಂಪನಿಯು ಎಲ್ಲಾ ಉದ್ಯೋಗಿಗಳಿಗೆ ಮಾಸ್ಕ್, ಹ್ಯಾಂಡ್ ಗ್ಲೌಸ್ ಹಾಗೂ ಸ್ಯಾನಿಟೈಜರ್‌ಗಳನ್ನು ಕಡ್ಡಾಯಗೊಳಿಸಿದೆ. ಕೆಫೆಟೇರಿಯಾ ಸಿಬ್ಬಂದಿಗಳು ಸಹ ಇವುಗಳನ್ನು ಬಳಸುವಂತೆ ಸೂಚನೆ ನೀಡಲಾಗಿದೆ.

ಕರೋನಾ ವೈರಸ್: ಸುರಕ್ಷತಾ ಕ್ರಮಗಳ ಮಾರ್ಗಸೂಚಿ ಬಿಡುಗಡೆಗೊಳಿಸಿದ ಆಡಿ ಇಂಡಿಯಾ

ಶೋರೂಂನ ಪ್ರತಿಯೊಂದು ಭಾಗದಲ್ಲೂ ಎಲ್ಲಾ ಸಮಯದಲ್ಲೂ ಸಾಮಾಜಿಕ ಅಂತರವನ್ನು ಅನುಸರಿಸಲಾಗುವುದೆಂದು ಕಂಪನಿ ಹೇಳಿದೆ. ಡೋರ್ ಹ್ಯಾಂಡಲ್ಸ್, ಸ್ಟೀಯರಿಂಗ್ ಹ್ಯಾಂಡಲ್ಸ್, ಗೇರ್ ನಾಬ್, ಬಟನ್, ಹ್ಯಾಂಡ್ ರೆಸ್ಟ್‌ಗಳನ್ನು ಆಡಿ ಕಾರ್ ಕೇರ್ ಉತ್ಪನ್ನಗಳೊಂದಿಗೆ ಸ್ವಚ್ವಗೊಳಿಸಲಾಗುವುದು.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಕರೋನಾ ವೈರಸ್: ಸುರಕ್ಷತಾ ಕ್ರಮಗಳ ಮಾರ್ಗಸೂಚಿ ಬಿಡುಗಡೆಗೊಳಿಸಿದ ಆಡಿ ಇಂಡಿಯಾ

ಬಿಸಾಕಲಾಗುವ ಸೀಟ್ ಕವರ್, ಗೇರ್ ನಾಬ್ ಹಾಗೂ ಫ್ಲೋರ್ ಮ್ಯಾಟ್‌ಗಳನ್ನು ಬಳಸಲಾಗುವುದು ಎಂದು ಕಂಪನಿಯು ಹೇಳಿದೆ. ಇದರೊಂದಿಗೆ, ಕಾರುಗಳ ಸರ್ವಿಸ್‌ಗೆ ಮೊದಲು ಹಾಗೂ ನಂತರ ಓಝೋನ್ ಟ್ರೀಟ್‌ಮೆಂಟ್‌ನೊಂದಿಗೆ ಸ್ಯಾನಿಟೇಷನ್ ಮಾಡಲಾಗುವುದು.

ಕರೋನಾ ವೈರಸ್: ಸುರಕ್ಷತಾ ಕ್ರಮಗಳ ಮಾರ್ಗಸೂಚಿ ಬಿಡುಗಡೆಗೊಳಿಸಿದ ಆಡಿ ಇಂಡಿಯಾ

ಕಂಪನಿಯ ಸೂಚನೆಗಳ ಪ್ರಕಾರ, ಡೆಲಿವರಿ ಮಾಡಲು ಸಿದ್ಧವಾಗಿರುವ ಎಲ್ಲಾ ಸ್ಯಾನಿಟರಿ ಕಾರುಗಳನ್ನು ಸಾಫ್ಟ್ ಸ್ಟಿಕ್ಕರ್‌ನಿಂದ ಮಾರ್ಕ್ ಮಾಡಲಾಗುವುದು. ನಂತರ ಆ ಕಾರಿಗೆ ಕಾಂಟ್ಯಾಕ್ಟ್‌ಲೆಸ್ ಪೇಪರ್ ವರ್ಕ್ ಮಾಡಲಾಗುತ್ತದೆ. ಆಡಿ ಇಂಡಿಯಾ ತನ್ನ ಎಲ್ಲಾ ಶೋ ರೂಂಗಳಿಗೆ ಈ ಸೂಚನೆಗಳನ್ನು ನೀಡಿದೆ.

Most Read Articles

Kannada
Read more on ಆಡಿ audi
English summary
Audi India announces safety guidelines as operations set to resume amidst lockdown relaxations. Read in Kannada.
Story first published: Sunday, May 10, 2020, 13:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X