ಹೊಸ ಐಷಾರಾಮಿ ಆಡಿ ಕಾರುಗಳ ಖರೀದಿಗೆ ಬುಕ್ಕಿಂಗ್ ಆರಂಭ

ಆಡಿ ಕಂಪನಿಯು ತನ್ನ ಹೊಸ ಎ6 ಸೆಡಾನ್, ಎ8 ಎಲ್ ಸೆಡಾನ್ ಮತ್ತು ಕ್ಯೂ8 ಎಸ್‌ಯುವಿಗಳಿಗೆ ಬುಕ್ಕಿಂಗ್ ಅನ್ನು ಪ್ರಾರಭಿಸಲಾಗಿದೆ. ಈ ಕಾರುಗಳನ್ನು ಖರೀದಿಸಲು ನೀವು ಆನ್‌ಲೈನ್ ಮೂಲಕ ಟೋಕನ್ ಮೊತ್ತ ರೂ.50,000 ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.

ಹೊಸ ಐಷಾರಾಮಿ ಆಡಿ ಕಾರುಗಳ ಖರೀದಿಗೆ ಬುಕ್ಕಿಂಗ್ ಆರಂಭ

ಈ ಮೂರು ಮಾದರಿಗಳನ್ನು ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸಲಾಗಿದ್ದು. ಲಾಕ್‌ಡೌನ್ ನಿಂದಾಗಿ ಮಾರಾಟ ಮತ್ತು ಬುಕ್ಕಿಗ್ ಅನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು. ಇದೀಗ ಸರ್ಕಾರವು ಲಾಕ್‌ಡೌನ್ ಅನ್ನು ಸಡಿಲಿಕೆಗೊಳಿಸಿರುವುದರಿಂದ್ ಆಡಿ ಕಂಪನಿಯು ತನ್ನ ಪ್ರೀಮಿಯಂ ಮಾದರಿಗಳಿಗಾಗಿ ಆನ್‌ಲೈನ್ ಬುಕ್ಕಿಂಗ್ ಅನ್ನು ಪ್ರಾರಂಭಿಸಿದೆ. ಲಾಕ್‌ಡೌನ್ ಮುಗಿದ ಬಳಿಕ ಈ ಕಾರುಗಳ ವಿತರಣೆಯನ್ನು ಪ್ರಾರಂಭಿಸಬಹುದು.

ಹೊಸ ಐಷಾರಾಮಿ ಆಡಿ ಕಾರುಗಳ ಖರೀದಿಗೆ ಬುಕ್ಕಿಂಗ್ ಆರಂಭ

ಇದರಲ್ಲಿ ಆಡಿ ಎ6 ಕಾರನ್ನು ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಬಿಡುಗಡೆ ಮಾಡಲಾಗಿತ್ತು. ಹೊಸ ಎ6 ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ,54.20 ಲಕ್ಷಗಳಾಗಿದೆ. ಈ ಕಾರು ಎರಡು ರೂಪಾಂತರಗಳಲ್ಲಿ ಲಭ್ಯವಿದೆ.

MOST READ: ಬಿಡುಗಡೆಯಾಗಲಿದೆ ಹೊಸ ಸ್ಕೋಡಾ ಕರೋಕ್ ಎಸ್‍‍‍ಯುವಿ

ಹೊಸ ಐಷಾರಾಮಿ ಆಡಿ ಕಾರುಗಳ ಖರೀದಿಗೆ ಬುಕ್ಕಿಂಗ್ ಆರಂಭ

ಹೊಸ ಜನರೇಷನ್ ಆಡಿ ಎ6 2.0 ಲೀಟರ್ ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದ್ದು. ಈ ಎಂಜಿನ್ 245 ಬಿಎಚ್‍ಪಿ ಪವರ್ ಮತ್ತು 370 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಸೆಡಾನ್ ಕೇವಲ 6.1 ಸೆಕೆಂಡ್‍‍ಗಳಲ್ಲಿ ಪ್ರತಿಗಂಟೆಗೆ 0 ದಿಂದ 100 ವೇಗದಲ್ಲಿ ಸಾಗುತ್ತದೆ. ಎಂಜಿ‍ನ್‍ನೊಂದಿಗೆ 7 ಸ್ಪೀಡ್ ಎಸ್‍ ಟ್ರೋನಿಕ್ ಡ್ಯುಯಲ್ ಕ್ಲಚ್ ಗೇರ್‍‍ಬಾಕ್ಸ್ ಅನ್ನು ಹೊಂದಿದೆ.

ಹೊಸ ಐಷಾರಾಮಿ ಆಡಿ ಕಾರುಗಳ ಖರೀದಿಗೆ ಬುಕ್ಕಿಂಗ್ ಆರಂಭ

ಮುಂದಿನ ಮಾದರಿಯಾದ ಆಡಿ ಎ8 ಎಲ್ ಲಾಂಗ್-ವೀಲ್‌ಬೇಸ್ ಆವೃತ್ತಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸಲಿದೆ. ಇದರಲ್ಲಿ 3.0 ಲೀಟರ್ ವಿ6 ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಿದೆ. ಇನ್ನೂ 3.0 ಲೀಟರ್ ವಿ6 ಡೀಸೆಲ್ ಎಂಜಿನ್ ಅನ್ನು ಕೂಡ ಅಳವಡಿಸಲಾಗಿದೆ. ಈ ಎಂಜಿನ್ 340 ಬಿ‍ಹೆಚ್‍‍ಪಿ ಪವರ್ ಮತ್ತು 500 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಹೊಸ ನವೀಕರಣಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಮಾರುತಿ ಸ್ವಿಫ್ಟ್ ಫೇಸ್‌ಲಿಫ್ಟ್

ಹೊಸ ಐಷಾರಾಮಿ ಆಡಿ ಕಾರುಗಳ ಖರೀದಿಗೆ ಬುಕ್ಕಿಂಗ್ ಆರಂಭ

ಜರ್ಮನಿಯ ಐಷಾರಾಮಿ ಕಾರು ತಯಾರಕರಾದ ಆಡಿ ತನ್ನ ಪ್ರಮುಖ ಎಸ್‍‍ಯು‍ವಿ ಕ್ಯೂ8 ಅನ್ನು ಈ ವರ್ಷದ ಆರಂಭದಲ್ಲಿ ಭಾರತದಲ್ಲಿ ಬಿಡುಗಡೆಗೊಳಿಸಿತು. ಕ್ಯೂ8 ಎಸ್‍‍ಯುವಿಯ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1.33 ಕೋಟಿಗಳಾಗಿದೆ.

ಹೊಸ ಐಷಾರಾಮಿ ಆಡಿ ಕಾರುಗಳ ಖರೀದಿಗೆ ಬುಕ್ಕಿಂಗ್ ಆರಂಭ

ಕ್ಯೂ8 ಎಸ್‍ಯು‍ವಿಯು 3.0 ಬಿಎಸ್-6 ಟಿಎಫ್‍‍ಎಸ್‍ಐ 48 ವಿ ಮೈಲ್ಡ್ ಹೈಬ್ರಿಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 340 ಬಿ‍ಹೆಚ್‍‍ಪಿ ಪವರ್ ಮತ್ತು 500 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿ‍‍ನ್‍ನೊಂದಿಗೆ 8 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ ಮತ್ತು ಕಂಪನಿಯ ಕ್ವಾಟ್ರೋ ಅಲ್-ವ್ಹೀಲ್ ಡ್ರೈವ್ ಅನ್ನು ಅಳವಡಿಸಲಾಗಿದೆ.

ಹೊಸ ಐಷಾರಾಮಿ ಆಡಿ ಕಾರುಗಳ ಖರೀದಿಗೆ ಬುಕ್ಕಿಂಗ್ ಆರಂಭ

ಆಡಿ ಎ6 ಸೆಡಾನ್, ಎ8 ಎಲ್ ಸೆಡಾನ್ ಮತ್ತು ಕ್ಯೂ8 ಎಸ್‌ಯುವಿಯು ಪ್ರೀಮಿಯಂ ವಾಹನಗಳಾಗಿದೆ. ಈ ಮೂರು ಜನಪ್ರಿಯ ಕಾರುಗಳನ್ನು ಇತ್ತೀಚೆಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಲಾಕ್ ಡೌನ್ ಮುಗಿದ ಬಳಿಕ ಈ ಹೊಸ ಮೂರು ಮಾದರಿಗಳನ್ನು ವಿತರಿಸಲಾಗುತ್ತದೆ.

Most Read Articles

Kannada
Read more on ಆಡಿ audi
English summary
Audi Commences Online Bookings For A6, A8 L & Q8 Models In India. Read in Kannada.
Story first published: Tuesday, May 12, 2020, 20:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X