ಮಕ್ಕಳಿಗಾಗಿಯೇ ವಿಶೇಷವಾಗಿ ತಯಾರಾಗಿದೆ ಮಿನಿ ಜೀಪ್

ಭಾರತದಲ್ಲಿರುವ ರಸ್ತೆಗಳು ಈಗಲೂ ಸಹ ಸಮತೋಲನವನ್ನು ಹೊಂದಿಲ್ಲ. ಈ ಕಾರಣಕ್ಕಾಗಿ ಭಾರತದ ರಸ್ತೆಗಳಲ್ಲಿ ಹೆಚ್ಚಿನ ಸಂಖ್ಯೆಯ ಆಫ್ ರೋಡ್ ವಾಹನಗಳು ಕಂಡು ಬರುತ್ತಿವೆ. ಆಫ್ ರೋಡ್‍ ವಾಹನಗಳೆಂದರೆ ಕಣ್ಣ ಮುಂದೆ ಬರುವುದು ಜೀಪ್ ವಾಹನಗಳು.

ಮಕ್ಕಳಿಗಾಗಿಯೇ ವಿಶೇಷವಾಗಿ ತಯಾರಾಗಿದೆ ಮಿನಿ ಜೀಪ್

ಅಂದ ಹಾಗೆ ಭಾರತದಲ್ಲಿ ಮೊದಲ ಬಾರಿಗೆ ಮಹೀಂದ್ರಾ ಕಂಪನಿಯು ಜೀಪ್ ವಾಹನವನ್ನು ಬಿಡುಗಡೆಗೊಳಿಸಿತು. ಹಲವು ವರ್ಷಗಳವರೆಗೆ ಜೀಪ್‍‍ಗಳು ಭಾರತದ ಪೊಲೀಸರ ನೆಚ್ಚಿನ ವಾಹನಗಳಾಗಿದ್ದವು. ನಂತರ ಬಂದ ಮಹೀಂದ್ರಾ ಸ್ಕಾರ್ಪಿಯೊ ಹಾಗೂ ಬೊಲೆರೊ ವಾಹನಗಳೂ ಸಹ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾದವು.

ಮಕ್ಕಳಿಗಾಗಿಯೇ ವಿಶೇಷವಾಗಿ ತಯಾರಾಗಿದೆ ಮಿನಿ ಜೀಪ್

ಆಫ್ ರೋಡ್‍‍ಗಳಿಗೆ ಹೇಳಿ ಮಾಡಿಸಿದಂತಿರುವ ಜೀಪ್ ವಾಹನಗಳನ್ನು ಯುವಕನೊಬ್ಬ ಚಿಕ್ಕ ಮಾದರಿಯಲ್ಲಿ ವಿನ್ಯಾಸಗೊಳಿಸಿದ್ದಾನೆ. ಈ ವಾಹನದಲ್ಲಿ ಹಲವರು ವಿಶೇಷ ಫೀಚರ್‍‍ಗಳಿವೆ. ಇದರ ಜೊತೆಗೆ ಈ ಜೀಪ್ ಎಲೆಕ್ಟ್ರಿಕ್ ಆಗಿರುವುದು ಮತ್ತೊಂದು ವಿಶೇಷ. ಈ ಮಿನಿ ಜೀಪ್ ಅನ್ನು ಅಭಿವೃದ್ಧಿಪಡಿಸಿರುವುದು ದೊಡ್ಡವರಿಗಾಗಿ ಅಲ್ಲ ಬದಲಿಗೆ ಮಕ್ಕಳಿಗೆ. ಆದರೆ ಇದು ಅಟಿಕೆಯಲ್ಲ.

ಮಕ್ಕಳಿಗಾಗಿಯೇ ವಿಶೇಷವಾಗಿ ತಯಾರಾಗಿದೆ ಮಿನಿ ಜೀಪ್

ಬದಲಿಗೆ ಇದನ್ನು ದೊಡ್ಡ ಜೀಪ್‍‍ನಂತೆಯೇ ಚಲಾಯಿಸಬಹುದು. ಮಕ್ಕಳಿಗೆ ತಯಾರಿಸುವ ವಾಹನಗಳು ಬ್ಯಾಟರಿಯಿಂದ ಚಲಾಯಿಸಲಾಗುತ್ತದೆ. ಈ ಬ್ಯಾಟರಿಗಳನ್ನು ಚೀನಾ ಹಾಗೂ ಜಪಾನ್ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಭಾರತದ ಯುವಕನೊಬ್ಬ ತಯಾರಿಸಿರುವ ಈ ಚಿಕ್ಕ ಎಲೆಕ್ಟ್ರಿಕ್ ಜೀಪ್ ವಿದೇಶಿ ವಾಹನಗಳಿಗೆ ಸಡ್ಡು ಹೊಡೆಯುತ್ತದೆ.

ಮಕ್ಕಳಿಗಾಗಿಯೇ ವಿಶೇಷವಾಗಿ ತಯಾರಾಗಿದೆ ಮಿನಿ ಜೀಪ್

ಇದನ್ನು ಮಕ್ಕಳ ಬಳಕೆಗಾಗಿ ಮಾರ್ಕೆಟಿಂಗ್ ಮಾಡಲಾಗುವುದು ಎಂದು ಹೇಳಲಾಗಿದೆ. ಈ ಜೀಪ್ ಅನ್ನು ಅಭಿವೃದ್ಧಿಪಡಿಸಿರುವ ಯುವಕನು ಈ ಜೀಪಿನ ವೀಡಿಯೊವನ್ನು ಅಂಕಿತಾ ಚಾನೆಲ್ ಎಂಬ ಯುಟ್ಯೂಬ್ ಚಾನೆಲ್‍‍ನಲ್ಲಿ ಅಪ್‍‍ಲೋಡ್ ಮಾಡಿದ್ದಾನೆ.

ಮಕ್ಕಳಿಗಾಗಿಯೇ ವಿಶೇಷವಾಗಿ ತಯಾರಾಗಿದೆ ಮಿನಿ ಜೀಪ್

ಈ ವೀಡಿಯೊದಲ್ಲಿ ಈ ಜೀಪಿಗೆ ಸಂಬಂಧಪಟ್ಟ ಎಲ್ಲಾ ಫೀಚರ್‍‍ಗಳನ್ನು ಕಾಣಬಹುದು. ಜೀಪಿನ ಇಂಟಿರಿಯರ್, ಬ್ಯಾಟರಿ, ಸೀಟ್, ವ್ಹೀಲ್, ರೂಫ್, ಹಿಂಭಾಗದ ಸೀಟ್, ಕ್ಲಸ್ಟರ್, ಸ್ಟೀಯರಿಂಗ್ ವ್ಹೀಲ್ ಹಾಗೂ ಗೇರ್ ಲಿವರ್ ಸೇರಿದಂತೆ ಹಲವಾರು ಬಿಡಿಭಾಗಗಳನ್ನು ಪರಿಚಯಿಸುವುದರೊಂದಿಗೆ ಈ ವೀಡಿಯೊ ಆರಂಭವಾಗುತ್ತದೆ.

ಮಕ್ಕಳಿಗಾಗಿಯೇ ವಿಶೇಷವಾಗಿ ತಯಾರಾಗಿದೆ ಮಿನಿ ಜೀಪ್

ಈ ಜೀಪ್ ಅನ್ನು ಅಭಿವೃದ್ಧಿಪಡಿಸಿರುವ ಅಂಕಿತಾ ಜೀಪ್‍‍ನ ವ್ಯಕ್ತಿ ಪರಿಚಯಿಸುತ್ತಾರೆ. ಅಂಕಿತಾ ಜೀಪ್ ಕಂಪನಿಯು ಜೀಪ್ ವಾಹನಗಳನ್ನು ಮಾಡಿಫೈಗೊಳಿಸಲು ಹೆಸರುವಾಸಿಯಾಗಿದೆ. ಜೀಪ್‍‍ನ ಜೆರಾಕ್ಸ್ ಕಾಪಿಯಂತೆ ಕಾಣುವ ಈ ಚಿಕ್ಕ ವಾಹನವು ಜೀಪ್‍‍ನಲ್ಲಿರುವ ವಿನ್ಯಾಸವನ್ನೇ ಹೊಂದಿದೆ.

ಮಕ್ಕಳಿಗಾಗಿಯೇ ವಿಶೇಷವಾಗಿ ತಯಾರಾಗಿದೆ ಮಿನಿ ಜೀಪ್

ಈ ವಾಹನದಲ್ಲಿರುವ ಚಿಕ್ಕ ಫೀಚರ್‍‍‍ಗೂ ಸಹ ಹೆಚ್ಚಿನ ಮಹತ್ವವನ್ನು ನೀಡಲಾಗಿದೆ. ಐಷಾರಾಮಿ ಜೀಪ್ ಹೊಂದಿರುವ ಬಹುತೇಕ ಎಲ್ಲಾ ಫೀಚರ್‍‍ಗಳನ್ನು ಈ ಚಿಕ್ಕ ವಾಹನವು ಹೊಂದಿದೆ. ಇದರಲ್ಲಿ ಲಗ್ಷುರಿ ಸೀಟ್, ಗ್ರಿಲ್, ಎಲ್‍ಇ‍‍ಡಿ ಹೆಡ್‍‍ಲೈಟ್, ಇಂಡಿಕೇಟರ್, ಸೈಡ್ ಮಿರರ, ಹಿಂಭಾಗದ ಡೋರ್‍‍ಗಳು ಸೇರಿವೆ.

ಮಕ್ಕಳಿಗಾಗಿಯೇ ವಿಶೇಷವಾಗಿ ತಯಾರಾಗಿದೆ ಮಿನಿ ಜೀಪ್

ಹ್ಯಾಮರ್‍‍ಗಳಂತಹ ಟೂಲ್‍‍ಗಳನ್ನು ಮಿನಿ ಜೀಪ್‍‍ನ ಪಕ್ಕದಲ್ಲಿ ಜೋಡಿಸಲಾಗಿದೆ. ಬ್ಯಾಟರಿಯನ್ನು ಈ ಮಿನಿ ಜೀಪ್‍‍ನ ಮುಂಭಾಗದಲ್ಲಿಡಲಾಗಿದೆ. ಈ ಬ್ಯಾಟರಿಯನ್ನು ಪೂರ್ತಿಯಾಗಿ ಚಾರ್ಜ್ ಮಾಡಿದರೆ 80ರಿಂದ 100 ಕಿ.ಮೀಗಳವರೆಗೆ ಚಲಿಸುತ್ತದೆ. ಇದಕ್ಕಾಗಿ ನಾಲ್ಕು ಬ್ಯಾಟರಿಗಳನ್ನು ನೀಡಲಾಗಿದೆ.

ಮಕ್ಕಳಿಗಾಗಿಯೇ ವಿಶೇಷವಾಗಿ ತಯಾರಾಗಿದೆ ಮಿನಿ ಜೀಪ್

ಈ ಮಿನಿ ಜೀಪ್‍‍ನ ಸ್ಟೈಲ್ ಜನರನ್ನು ತನ್ನತ್ತ ಆಕರ್ಷಿಸುತ್ತದೆ. ಬೈಕ್‍‍ಗಳಲ್ಲಿರುವಂತಹ ಅಲಾಯ್ ವ್ಹೀಲ್‍‍ಗಳನ್ನು ಈ ಮಿನಿ ಜೀಪ್‍‍ನ ವ್ಹೀಲ್‍‍ಗಳಲ್ಲಿ ಅಳವಡಿಸಲಾಗಿದೆ. ಇದನ್ನು ಹೊರತುಪಡಿಸಿ ಬೇರೆಲ್ಲಾ ಫೀಚರ್‍‍ಗಳು ದೊಡ್ಡ ಗಾತ್ರದ ಜೀಪ್‍‍ನ ಫೀಚರ್‍‍ಗಳನ್ನೇ ಹೊಂದಿವೆ.

ಈ ಮಿನಿ ಜೀಪ್ ರೂಫ್ ಅನ್ನು ಹೊಂದಿಲ್ಲ. ಮಕ್ಕಳ ಜೊತೆಗೆ ದೊಡ್ಡವರೂ ಸಹ ಈ ಮಿನಿ ಜೀಪ್ ಅನ್ನು ಚಾಲನೆ ಮಾಡಲಿ ಎಂಬ ಕಾರಣಕ್ಕೆ ರೂಫ್ ನೀಡಲಾಗಿಲ್ಲ. ಈ ವಾಹನಕ್ಕೆ ರೂ.3 ಲಕ್ಷ ಬೆಲೆಯನ್ನು ನಿಗದಿಪಡಿಸಲಾಗಿದೆ. ಈ ಮಿನಿ ಜೀಪ್ ಹಲವು ಪ್ರೀಮಿಯಂ ಸೌಲಭ್ಯಗಳೊಂದಿಗೆ ಮಾರಾಟವಾಗಲಿದೆ.

ಮಕ್ಕಳಿಗಾಗಿಯೇ ವಿಶೇಷವಾಗಿ ತಯಾರಾಗಿದೆ ಮಿನಿ ಜೀಪ್

ಈ ಮಿನಿ ಎಲೆಕ್ಟ್ರಿಕ್ ಜೀಪ್‍‍ನಲ್ಲಿ ರಿವರ್ಸ್ ಗೇರ್ ಅನ್ನು ಸಹ ನೀಡಲಾಗಿದೆ. ಇದರಿಂದಾಗಿ ಜೀಪ್ ಮುಂದಕ್ಕೆ ಹಾಗೂ ಹಿಂದಕ್ಕೆ ಸರಾಗವಾಗಿ ಚಲಿಸಲಿದೆ. ಈ ಮಿನಿ ಜೀಪ್‍‍ನ ಟಾಪ್ ಸ್ಪೀಡ್‍‍ನ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ. ಮಕ್ಕಳಿಗಾಗಿ ತಯಾರಿಸಿರುವ ಕಾರಣಕ್ಕೆ ಈ ಜೀಪ್ ಪ್ರತಿ ಗಂಟೆಗೆ 30 ಕಿ.ಮೀ ವೇಗದಲ್ಲಿ ಚಲಿಸುವ ಸಾಧ್ಯತೆಗಳಿವೆ.

Most Read Articles

Kannada
English summary
Mini jeep designed for kids. Read in Kannada.
Story first published: Monday, February 24, 2020, 15:17 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X