ಕರೋನಾ ಎಫೆಕ್ಟ್- ಒಂದು ತಿಂಗಳ ಕಾಲ ಕಾರು ಉತ್ಪಾದನೆಯನ್ನು ಬಂದ್ ಮಾಡಿದ ಬೆಂಟ್ಲಿ

ವಿಶ್ವಾದ್ಯಂತ ಇದುವರೆಗೆ ಸುಮಾರು 11 ಸಾವಿರಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿರುವ ಕರೋನಾ ವೈರಸ್‌ನಿಂದಾಗಿ ಬಹುತೇಕ ರಾಷ್ಟ್ರಗಳ ಆರ್ಥಿಕ ಪರಿಸ್ಥಿತಿ ಶೋಚನೀಯ ಸ್ಥಿತಿಗೆ ತಲುಪುತ್ತಿದ್ದು, ಆಟೋ ಉದ್ಯಮವು ಕೂಡಾ ಭಾರೀ ಸಂಕಷ್ಟಕ್ಕೆ ಸಿಲುಕಿಕೊಂಡಿದೆ.

ಕರೋನಾ ಎಫೆಕ್ಟ್- ಒಂದು ತಿಂಗಳ ಕಾಲ ಕಾರು ಉತ್ಪಾದನೆಯನ್ನು ಬಂದ್ ಮಾಡಿದ ಬೆಂಟ್ಲಿ

ಕರೋನಾ ವೈರಸ್‌ ಅಟ್ಟಹಾಸವು ಚೀನಾದಲ್ಲಿ ಮಾತ್ರವಲ್ಲದೇ ವಿಶ್ವದ ಪ್ರಮುಖ ರಾಷ್ಟ್ರಗಳಿಗೂ ವ್ಯಾಪಿಸಿದ್ದು, ವೈರಸ್ ಪರಿಣಾಮದಿಂದಾಗಿ ಜನ-ಜೀವನ ಮಾತ್ರವಲ್ಲದೇ ಆರ್ಥಿಕ ಕುಸಿತವು ಕೂಡಾ ತಳಮಟ್ಟಕ್ಕೆ ಕುಸಿಯುವಂತೆ ಮಾಡಿದೆ. ವೈರಸ್ ತಡೆಗೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿದ್ದರೂ ಕೂಡಾ ಸಾವಿನ ಸಂಖ್ಯೆಯು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಇದರ ನಡುವೆ ಕರೋನಾ ವೈರಸ್ ಭೀತಿಯಿಂದಾಗಿ ಆಟೋ ಉತ್ಪಾದನಾ ಘಟಕಗಳು ಕದಮುಚ್ಚುತ್ತಿವೆ.

ಕರೋನಾ ಎಫೆಕ್ಟ್- ಒಂದು ತಿಂಗಳ ಕಾಲ ಕಾರು ಉತ್ಪಾದನೆಯನ್ನು ಬಂದ್ ಮಾಡಿದ ಬೆಂಟ್ಲಿ

ಚೀನಾದಲ್ಲಿರುವ ಹಲವಾರು ಆಟೋ ಕಂಪನಿಗಳು ತಮ್ಮ ಉತ್ಪಾದನಾ ಘಟಕವನ್ನು ಮುಚ್ಚಿದ ಬೆನ್ನಲ್ಲೇ ಇದೀಗ ಯುರೋಪಿನಲ್ಲಿರುವ ಹಲವಾರು ಆಟೋ ಕಂಪನಿಗಳು ತಮ್ಮ ಪ್ರಮುಖ ಕಾರು ಉತ್ಪಾದನಾ ಘಟಕಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿವೆ.

ಕರೋನಾ ಎಫೆಕ್ಟ್- ಒಂದು ತಿಂಗಳ ಕಾಲ ಕಾರು ಉತ್ಪಾದನೆಯನ್ನು ಬಂದ್ ಮಾಡಿದ ಬೆಂಟ್ಲಿ

ಬೆಂಟ್ಲಿ ಕೂಡಾ ಯುಕೆಯಲ್ಲಿರುವ ತನ್ನ ಅತಿ ದೊಡ್ಡ ಕಾರು ಉತ್ಪಾದನಾ ಘಟಕವನ್ನು ಸ್ಥಗಿತಗೊಳಿಸಿದ್ದು, ಮಾರ್ಚ್ 20ರಿಂದ ಎಪ್ರಿಲ್ 20ರ ತನಕ ಯಾವುದೇ ಉತ್ಪಾದನಾ ಪ್ರಕ್ರಿಯೆಗಳನ್ನು ಕೈಗೊಳ್ಳದಿರಲು ನಿರ್ಧರಿಸಿದೆ.

ಕರೋನಾ ಎಫೆಕ್ಟ್- ಒಂದು ತಿಂಗಳ ಕಾಲ ಕಾರು ಉತ್ಪಾದನೆಯನ್ನು ಬಂದ್ ಮಾಡಿದ ಬೆಂಟ್ಲಿ

ವೈರಸ್ ಹರಡದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿರುವ ಸರ್ಕಾರಗಳ ಪ್ರಯತ್ನಗಳಿಗೆ ತಾವು ಎಲ್ಲಾ ಸಹಕಾರ ನೀಡುವುದಾಗಿ ಹೇಳಿಕೊಂಡಿರುವ ಬೆಂಟ್ಲಿ ಮೋಟಾರ್ಸ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಆದ್ರಿಯಾನ್ ಹಾಲ್‌ಮಾರ್ಕ್ ಅವರು ಇದೇ ಸಂದರ್ಭದಲ್ಲಿ ತಮ್ಮ ನೆಚ್ಚಿನ ಗ್ರಾಹಕರಲ್ಲಿ ಕ್ಷಮೆಯಾಚಿಸಿದ್ದು, ಪರಿಸ್ಥಿತಿಗೆ ಅನುಗುಣವಾಗಿ ಕಾರು ಉತ್ಪಾದನೆಯನ್ನು ಸ್ಥಗಿತಗೊಳಿಸುತ್ತಿರುವುದರಿಂದ ಕಾರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದಿದ್ದಾರೆ.

ಕರೋನಾ ಎಫೆಕ್ಟ್- ಒಂದು ತಿಂಗಳ ಕಾಲ ಕಾರು ಉತ್ಪಾದನೆಯನ್ನು ಬಂದ್ ಮಾಡಿದ ಬೆಂಟ್ಲಿ

ಯುರೋಪಿನಲ್ಲಿ ಪ್ರಮುಖ ಕಾರು ಮಾರಾಟ ಕಂಪನಿಗಳಲ್ಲಿ ಒಂದಾಗಿರುವ ಫೋಕ್ಸ್‌ವ್ಯಾಗನ್ ಗ್ರೂಪ್ ಕೂಡಾ ಮುಂದಿನ ಎರಡು ವಾರಗಳ ಕಾಲ ಯಾವುದೇ ಉತ್ಪಾದನಾ ಚಟುವಟಿಕೆಯನ್ನು ಕೈಗೊಳ್ಳದಿರಲು ನಿರ್ಧರಿಸಿದ್ದು, ಕಾರ್ಮಿಕರಿಗೆ ಸೋಂಕು ಹರಡದಂತೆ ಸಾಕಷ್ಟು ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳವಾಗಿದೆ.

ಕರೋನಾ ಎಫೆಕ್ಟ್- ಒಂದು ತಿಂಗಳ ಕಾಲ ಕಾರು ಉತ್ಪಾದನೆಯನ್ನು ಬಂದ್ ಮಾಡಿದ ಬೆಂಟ್ಲಿ

ಫೋಕ್ಸ್‌ವ್ಯಾಗನ್ ಮಾತ್ರವಲ್ಲದೆ ಅಂಗಸಂಸ್ಥೆಗಳಾದ ಸ್ಕೋಡಾ, ಆಡಿ, ಫೋರ್ಷೆ ಮತ್ತು ಬುಗಾಟಿ ಕಾರುಗಳ ಉತ್ಪಾದನೆಯನ್ನು ಸಹ ಸ್ಥಗಿತಗೊಳಿಸಲಾಗಿದ್ದು, ಸದ್ಯದ ಪರಿಸ್ಥಿತಿಗೆ ಅನುಗುಣವಾಗಿ ಎಲ್ಲಾ ಮುಂಜಾಗ್ರತ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿವೆ.

ಕರೋನಾ ಎಫೆಕ್ಟ್- ಒಂದು ತಿಂಗಳ ಕಾಲ ಕಾರು ಉತ್ಪಾದನೆಯನ್ನು ಬಂದ್ ಮಾಡಿದ ಬೆಂಟ್ಲಿ

ಇನ್ನುಳಿದಂತೆ ಯುರೋಪ್ ರಾಷ್ಟ್ರಗಳಲ್ಲಿ ಪ್ರಮುಖ ವಾಹನ ಉತ್ಪಾದನಾ ಸಂಸ್ಥೆಗಳಾದ ಟೊಯೊಟಾ, ಸುಜುಕಿ, ಫಿಯೆಟ್ ಕ್ಲೈಸರ್, ರೆನಾಲ್ಟ್, ಪಿಎಸ್ಎ ಗ್ರೂಪ್‌ಗೆ ಸೇರಿದ 35ಕ್ಕೂ ಹೆಚ್ಚು ವಾಹನ ಉತ್ಪಾದನಾ ಘಟಕಗಳು ತಾತ್ಕಲಿಕವಾಗಿ ಸ್ಥಗಿತಗೊಂಡಿವೆ.

ಕರೋನಾ ಎಫೆಕ್ಟ್- ಒಂದು ತಿಂಗಳ ಕಾಲ ಕಾರು ಉತ್ಪಾದನೆಯನ್ನು ಬಂದ್ ಮಾಡಿದ ಬೆಂಟ್ಲಿ

ಆದರೆ ಭಾರತದಲ್ಲಿ ಮಾತ್ರ ಇದುವರೆಗೂ ಯಾವುದೇ ವಾಹನ ಉತ್ಪಾದನಾ ಕಂಪನಿಗಳು ಇದುವರೆಗೂ ಉತ್ಪಾದನಾ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿಲ್ಲವಾದರೂ ಸದ್ಯದ ಪರಿಸ್ಥಿತಿಗೆ ಅನುಗುಣವಾಗಿ ಎಲ್ಲಾ ರೀತಿಯ ಮುಂಜಾಗ್ರತ ಕ್ರಮಗಳನ್ನು ಪಾಲಿಸುತ್ತಿವೆ.

Most Read Articles

Kannada
English summary
Bentley Motors Halts Production Until April 20 Due To Coronavirus Crisis. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X