ಜನಪ್ರಿಯ ಮೊಜಾನ್ ಕಾರು ಉತ್ಪಾದನೆಗೆ ಗುಡ್‌ಬೈ ಹೇಳಿದ ಬೆಂಟ್ಲಿ

ಬ್ರಿಟಿಷ್ ಕಾರು ಉತ್ಪಾದನಾ ಕಂಪನಿಯಾಗಿರುವ ಬೆಂಟ್ಲಿ ತನ್ನ ಜನಪ್ರಿಯ ಮೊಜಾನ್ ಐಷಾರಾಮಿ ಸೆಡಾನ್ ಕಾರು ಮಾದರಿಯ ಉತ್ಪಾದನೆಗೆ ಗುಡಬೈ ಹೇಳಿದ್ದು, ಮಾರುಕಟ್ಟೆಯಲ್ಲಿ ಬೇಡಿಕೆ ಅನುಸಾರ ಹೊಸ ಕಾರು ಉತ್ಪನ್ನಗಳತ್ತ ಗಮನಹರಿಸುತ್ತಿದೆ.

ಜನಪ್ರಿಯ ಮೊಜಾನ್ ಕಾರು ಉತ್ಪಾದನೆಗೆ ಗುಡ್‌ಬೈ ಹೇಳಿದ ಬೆಂಟ್ಲಿ

ಐಷಾರಾಮಿ ಸೆಡಾನ್ ಆವೃತ್ತಿಯಾಗಿರುವ ಮೊಜಾನ್ ಬ್ರಾಂಡ್ ಬೆಂಟ್ಲಿ ನಿರ್ಮಾಣದ ಕಾರುಗಳಲ್ಲಿ ಅತಿ ಹೆಚ್ಚು ವಿಶೇಷತೆಗಳನ್ನು ಒಳಗೊಂಡ ಕಾರು ಮಾದರಿಯಾಗಿದ್ದು, 2009ರಲ್ಲಿ ಮೊದಲ ಬಾರಿಗೆ ಮಾರುಕಟ್ಟೆ ಪ್ರವೇಶಿಸುವ ಮೂಲಕ ಹೊಸ ಸಂಚಲನಕ್ಕೆ ಕಾರಣವಾಗಿತ್ತು. ಬಿಡುಗಡೆಯ ಇದುವರೆಗೂ ಹಲವಾರು ಬದಲಾವಣೆಗಳೊಂದಿಗೆ ಸುಧಾರಿತ ತಂತ್ರಜ್ಞಾನಗಳೊಂದಿಗೆ ಅಭಿವೃದ್ದಿಗೊಂಡಿದ್ದ ಹೊಸ ಕಾರು ಇದೀಗ ಮಾರುಕಟ್ಟೆಯಿಂದ ನಿರ್ಗಮಿಸುತ್ತಿದೆ.

ಜನಪ್ರಿಯ ಮೊಜಾನ್ ಕಾರು ಉತ್ಪಾದನೆಗೆ ಗುಡ್‌ಬೈ ಹೇಳಿದ ಬೆಂಟ್ಲಿ

ಕಾರು ಉತ್ಪಾದನೆಯಲ್ಲಿ 100 ವರ್ಷ ಪೂರೈಸಿದ ಸಂಭ್ರಮಕ್ಕಾಗಿ ಮೊಜಾನ್ ಪರಿಚಿಯಿಸಿದ್ದ ಬೆಂಟ್ಲಿ ಕಂಪನಿಯು ಇದೀಗ ಹೊಸ ಮಾದರಿ ಕಾರು ಉತ್ಪನ್ನಗಳತ್ತ ಗಮನಹರಿಸುತ್ತಿದ್ದು, ಮೊಜಾನ್ ಕಾರು ಇದುವರೆಗೆ ಸುಮಾರು 7,300 ಯುನಿಟ್ ಮಾರಾಟಗೊಂಡಿದೆ.

ಜನಪ್ರಿಯ ಮೊಜಾನ್ ಕಾರು ಉತ್ಪಾದನೆಗೆ ಗುಡ್‌ಬೈ ಹೇಳಿದ ಬೆಂಟ್ಲಿ

ಮೊಜಾನ್ ಕಾರಿನಲ್ಲಿ ಸಾಂಪ್ರಾದಾಯಿಕ ಕಾರು ಉತ್ಪಾದನಾ ಶೈಲಿಯಲ್ಲಿ ನಿರ್ಮಾಣಗೊಳ್ಳದೆ ಬಹುತೇಕ ಇಂಟಿರಿಯರ್ ಮತ್ತು ಎಕ್ಸಿಟಿರಿಯರ್ ವಿನ್ಯಾಸಗಳು ಹ್ಯಾಂಡ್‌ಮೆಡ್ ವಿನ್ಯಾಸಗಳನ್ನು ಹೊಂದಿದ್ದು, ಜಗತ್ತಿನ ಟಾಪ್ 10 ಶ್ರೇಷ್ಠ ಕಾರುಗಳ ಪಟ್ಟಿ ಸ್ಥಾನ ಪಡೆದುಕೊಂಡಿದೆ.

ಜನಪ್ರಿಯ ಮೊಜಾನ್ ಕಾರು ಉತ್ಪಾದನೆಗೆ ಗುಡ್‌ಬೈ ಹೇಳಿದ ಬೆಂಟ್ಲಿ

ಗ್ರಾಹಕರ ಬೇಡಿಕೆಯೆಂತೆ ಮೊಜಾನ್ ಕಾರು ಅಭಿವೃದ್ದಿಪಡಿಸುತ್ತಿರುವ ಬೆಂಟ್ಲಿ ಕಂಪನಿಯು ಇದೀಗ ಕೊನೆಯದಾಗಿ 30 ಕಾರುಗಳನ್ನು '6.75 ಎಡಿಷನ್‌ ಬೈ ಮುಲ್ಲಿನರ್' ಆವೃತ್ತಿಯೊಂದಿಗೆ ಮೊಜಾನ್ ಉತ್ಪಾದನೆಯನ್ನು ಕೊನೆಗೊಳಿಸಿದೆ.

ಜನಪ್ರಿಯ ಮೊಜಾನ್ ಕಾರು ಉತ್ಪಾದನೆಗೆ ಗುಡ್‌ಬೈ ಹೇಳಿದ ಬೆಂಟ್ಲಿ

ಕೊನೆಯ ಕಾರು ಮಾದರಿಯನ್ನು ಯುಎಸ್ಎ ಮೂಲದ ಗ್ರಾಹಕನಿಗೆ ಹಸ್ತಾಂತರಕ್ಕೆ ಸಿದ್ದವಾಗಿದ್ದು, ಕೊನೆಯ ಕಾರು ಮಾದರಿಯು ರೋಸ್ ಗೋಲ್ಡ್ ಬಣ್ಣ ಹೊಂದಿದೆ. ವಿಶ್ವದ ಪ್ರಮುಖ ಕೆಲವೇ ಕೆಲವು ಉದ್ಯಮಿಗಳ ಬಳಿ ಈ ಕಾರಿನ ಸಂಗ್ರವಿದ್ದು, ಭಾರತದಲ್ಲಿ ಒಂದೇ ಒಂದು ಕಾರು ನಮ್ಮ ಬೆಂಗಳೂರಿನಲ್ಲಿದೆ.

ಜನಪ್ರಿಯ ಮೊಜಾನ್ ಕಾರು ಉತ್ಪಾದನೆಗೆ ಗುಡ್‌ಬೈ ಹೇಳಿದ ಬೆಂಟ್ಲಿ

ಬೆಂಗಳೂರಿನ ಜಯನಗರದಲ್ಲಿರುವ ಬ್ರಿಟಿಷ್ ಬಯೋಲಾಜಿಕಲ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿರುವ ವಿ.ಎಸ್ ರೆಡ್ಡಿ ಅವರು ಬೆಂಟ್ಲಿ ಮೊಜಾನ್ ಸ್ಪೆಷಲ್ ಎಡಿಷನ್ ಕಾರನ್ನು ಇದೇ ವರ್ಷ ಮಾರ್ಚ್ ಆರಂಭದಲ್ಲಿ ಖರೀದಿ ಮಾಡಿದ್ದರು.

ಜನಪ್ರಿಯ ಮೊಜಾನ್ ಕಾರು ಉತ್ಪಾದನೆಗೆ ಗುಡ್‌ಬೈ ಹೇಳಿದ ಬೆಂಟ್ಲಿ

ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.9.50 ಕೋಟಿ ಬೆಲೆ ಹೊಂದಿದ್ದು, ಇದು ಆನ್‌ರೋಡ್ ಬೆಲೆಗಳಲ್ಲಿ ರೂ.12 ಕೋಟಿಗೂ ಅಧಿಕವಾಗಿದೆ. ಮೊಜಾನ್ ಸ್ಪೆಷಲ್ ಎಡಿಷನ್ ಕಾರು ಎಕ್ಸ್ಟೆಂಡ್ ಲಾಂಗ್ ವೀಲ್ಹ್ ಬೇಸ್ ವೈಶಿಷ್ಟ್ಯತೆ ಹೊಂದಿದ್ದು, ಹೊಸ ಕಾರು ಬೆಲೆಗೆ ತಕ್ಕಂತೆ ಹಲವಾರು ಸುಧಾರಿತ ತಂತ್ರಜ್ಞಾನ ಪ್ರೇರಿತ ಸೌಲಭ್ಯಗಳನ್ನು ಪಡೆದುಕೊಂಡಿದೆ.

ಜನಪ್ರಿಯ ಮೊಜಾನ್ ಕಾರು ಉತ್ಪಾದನೆಗೆ ಗುಡ್‌ಬೈ ಹೇಳಿದ ಬೆಂಟ್ಲಿ

ಬೆಂಟ್ಲಿ ಮೊಜಾನ್ ಎಕ್ಸ್ಟೆಂಡ್ ಲಾಂಗ್ ವೀಲ್ಹ್ ಬೇಸ್ ಸೆಂಚ್ಯುರಿ ಎಡಿಷನ್ ಕಾರು ಬರೋಬ್ಬರಿ 5,825-ಎಂಎಂ ಉದ್ದ, 2,208-ಎಂಎಂ ಅಗಲ, 1,541-ಎಂಎಂ ಎತ್ತರ ಮತ್ತು 3,516-ಎಂಎಂ ನಷ್ಟು ವೀಲ್ಹ್‌ಬೆಸ್ ಪಡೆದುಕೊಂಡಿದೆ.

ಜನಪ್ರಿಯ ಮೊಜಾನ್ ಕಾರು ಉತ್ಪಾದನೆಗೆ ಗುಡ್‌ಬೈ ಹೇಳಿದ ಬೆಂಟ್ಲಿ

ಸ್ಟೈನ್‌ಲೆಸ್ ಸ್ಟೀಲ್ ವರ್ಟಿಕಲ್ ರೆಡಿಯೆಟರ್ ಗ್ರೀಲ್, ಫುಲ್ ಎಲ್‌ಇಡಿ ಹೆಡ್‌ಲ್ಯಾಂಪ್ ಜೊತೆಗೆ ಟರ್ನ್ ಇಂಡಿಕೇಟರ್, ಬಿ ಆಕಾರದಲ್ಲಿ ಟೈಲ್ ಲ್ಯಾಂಪ್ ಕ್ಲಸ್ಟರ್, 21-ಇಂಚಿನ ಅಯಾಲ್ ವೀಲ್ಹ್ ಮತ್ತು ಡ್ಯುಯಲ್ ಟೋನ್ ಪೇಟಿಂಗ್ ನೀಡಲಾಗಿದೆ.

ಜನಪ್ರಿಯ ಮೊಜಾನ್ ಕಾರು ಉತ್ಪಾದನೆಗೆ ಗುಡ್‌ಬೈ ಹೇಳಿದ ಬೆಂಟ್ಲಿ

ಬೆಂಟ್ಲಿ ಕಂಪನಿಯು ಹೊಸ ಕಾರಿನಲ್ಲಿ ವಿಶೇಷವಾಗಿ ಮೇಲ್ಭಾಗವನ್ನು ರೋಸ್ ಗೋಲ್ಡ್‌ ಬಣ್ಣದಿಂದ ಮತ್ತು ಸೈಡ್ ಪ್ಯಾನೆಲ್‌ಗಳನ್ನು ಮೆಟಾಲಿಕ್ ಗ್ರೇ ಬಣ್ಣವನ್ನು ಲೇಪನ ಮಾಡಲಾಗಿದ್ದು, ಕಾರಿನ ಹಿಂಬದಿಯಲ್ಲಿ 100 ವರ್ಷಗಳನ್ನು ಪೂರೈಸಿದ ವಿಶೇಷ ಬ್ಯಾಡ್ಜ್ ಗಮನಸೆಳೆಯುತ್ತದೆ.

ಜನಪ್ರಿಯ ಮೊಜಾನ್ ಕಾರು ಉತ್ಪಾದನೆಗೆ ಗುಡ್‌ಬೈ ಹೇಳಿದ ಬೆಂಟ್ಲಿ

ಬೆಂಟ್ಲಿ ಕಾರಿಗೆ ಮತ್ತಷ್ಟು ಐಷಾರಾಮಿ ಲುಕ್ ನೀಡುವ ಪ್ರಮುಖ ತಾಂತ್ರಿಕ ಅಂಶ ಅಂದರೆ ಅದು 'ಫ್ಲೈಯಿಂಗ್ ಬಿ' ಲಾಂಛನ. ಸಾಮಾನ್ಯವಾಗಿ ಬೆಂಟ್ಲಿ ಇತರೆ ಕಾರುಗಳಿಂತಲೂ ಸೆಂಚ್ಯುರಿ ಎಡಿಷನ್‌ನಲ್ಲಿರುವ ಫ್ಲೈಯಿಂಗ್ ಬಿ ಲಾಂಛನವು ತುಸು ವಿಭಿನ್ನವಾಗಿದ್ದು, ಬಂಗಾರದ ಲೇಪನ ಹೊಂದಿದೆ.

ಜನಪ್ರಿಯ ಮೊಜಾನ್ ಕಾರು ಉತ್ಪಾದನೆಗೆ ಗುಡ್‌ಬೈ ಹೇಳಿದ ಬೆಂಟ್ಲಿ

ಇದು ಯಾವುದೇ ತುರ್ತು ಸಂದರ್ಭಗಳಲ್ಲೂ ಕೆಲವೇ ಸೆಕೇಂಡುಗಳಲ್ಲಿ ಕಾರಿನ ಬ್ಯಾನೆಟ್ ತಳಭಾಗದಲ್ಲಿ ಅವಿತುಕೊಳ್ಳುವಂತಹ ತಂತ್ರಜ್ಞಾನ ಸೌಲಭ್ಯವನ್ನು ನೀಡಲಾಗಿದ್ದು, ಈ ಕಾರಣದಿಂದಲೇ ಫ್ಲೈಯಿಂಗ್ ಬಿ ಲಾಂಛನವು ಯಾವುದೇ ಕಾರಣಕ್ಕೂ ಖದೀಮರ ಕೈಗೆ ಸಿಗಲು ಸಾಧ್ಯವೇ ಇಲ್ಲ ಎನ್ನುತ್ತಾರೆ ಬೆಂಟ್ಲಿ ಹಿರಿಯ ಅಧಿಕಾರಿಗಳು.

ಜನಪ್ರಿಯ ಮೊಜಾನ್ ಕಾರು ಉತ್ಪಾದನೆಗೆ ಗುಡ್‌ಬೈ ಹೇಳಿದ ಬೆಂಟ್ಲಿ

ಜೊತೆಗೆ ಹೊಸ ಕಾರಿನಲ್ಲಿ ವಿವಿಧ ತಾಂತ್ರಿಕ ಸೌಲಭ್ಯಗಳ ನಿಯಂತ್ರಿಸಬಲ್ಲ ಲೆದರ್ ಹೊದಿಕೆಯ ಫೋರ್-ಸ್ಪೋಕ್ ಸ್ಟೀರಿಂಗ್ ವೀಲ್ಹ್, ಫೇಡಲ್ ಶಿಫ್ಟರ್, ಸ್ಟಾರ್ಟ್/ಸ್ಟಾಪ್ ಬಟನ್, ಕ್ರೂಸ್ ಕಂಟ್ರೋಲ್ ಜೊತೆಗೆ ಮಲ್ಟಿ ಇನ್ಪಾರ್ಮೆಷನ್ ಡಿಸ್ಪೈ ಮಾಡುವ ಸೆಂಟ್ರಲ್ ಕನ್ಸೊಲ್, ಇನ್‌ಸ್ಟ್ರುಮೆಂಟಲ್ ಕ್ಲಸ್ಟರ್ ನೀಡಲಾಗಿದೆ.

ಜನಪ್ರಿಯ ಮೊಜಾನ್ ಕಾರು ಉತ್ಪಾದನೆಗೆ ಗುಡ್‌ಬೈ ಹೇಳಿದ ಬೆಂಟ್ಲಿ

ಎಂಜಿನ್ ಸಾಮರ್ಥ್ಯ

ಬೆಂಟ್ಲಿ ಮೊಜಾನ್ ಎಕ್ಸ್ಟೆಂಡ್ ಲಾಂಗ್ ವೀಲ್ಹ್ ಬೇಸ್ ಸೆಂಚ್ಯುರಿ ಎಡಿಷನ್ ಕಾರು 6.75-ಲೀಟರ್(6,750 ಸಿಸಿ) ವಿ8 ಪೆಟ್ರೋಲ್ ಎಂಜಿನ್ ಹೊಂದಿದ್ದು, 8-ಸ್ಪೀಡ್ ಜೆಡ್ಎಫ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 506-ಬಿಎಚ್‌ಪಿ ಮತ್ತು 1020-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ.

ಜನಪ್ರಿಯ ಮೊಜಾನ್ ಕಾರು ಉತ್ಪಾದನೆಗೆ ಗುಡ್‌ಬೈ ಹೇಳಿದ ಬೆಂಟ್ಲಿ

ಈ ಮೂಲಕ 5.5 ಸೇಕೆಂಡುಗಳಲ್ಲಿ ಸೊನ್ನೆಯಿಂದ 100 ಕಿ.ಮೀ ವೇಗ ಪಡೆದುಕೊಳ್ಳಬಲ್ಲ ಬೆಂಟ್ಲಿ ಮೊಜಾನ್ ಕಾರು ಪ್ರತಿ ಗಂಟೆಗೆ 296 ಕಿ.ಮೀ ಟಾಪ್ ಸ್ಪೀಡ್ ಹೊಂದಿದ್ದು, ಕಾರಿನಲ್ಲಿ ಗರಿಷ್ಠ ಸುರಕ್ಷತೆಗಾಗಿ ಕಾರ್ಬನ್ ಸೆರಾಮಿಕ್ ಡಿಸ್ಕ್ ಬ್ರೇಕ್, 9 ಏರ್ ‌ಬ್ಯಾಗ್‌ಗಳನ್ನು ನೀಡಲಾಗಿದೆ.

Most Read Articles

Kannada
English summary
Bentley Mulsanne Production Comes To An End: Over 7,300 Flagship Models Hand Crafted. Read in Kannada.
Story first published: Friday, June 26, 2020, 19:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X