2019-20ರ ಹಣಕಾಸು ವರ್ಷದಲ್ಲಿ ಅತಿ ಹೆಚ್ಚು ಮಾರಾಟವಾದ ಟ್ರ್ಯಾಕ್ಟರ್‌ಗಳಿವು..

ಕೃಷಿ ಚಟುವಟಿಕೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಟ್ರ್ಯಾಕ್ಟರ್‌ಗಳು ಕಳೆದ ಒಂದು ದಶಕದಲ್ಲಿ ಭಾರೀ ಪ್ರಮಾಣದ ಬೇಡಿಕೆಯನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಬಹುತೇಕ ಕೃಷಿ ಚಟುವಟಿಕೆಗಳನ್ನು ಯಾಂತ್ರಿಕರಣಗೊಳಿಸುತ್ತಿರುವುದೆ ಟ್ರ್ಯಾಕ್ಟರ್ ಬೇಡಿಕೆಯಲ್ಲಿ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ.

2019-20ರ ಹಣಕಾಸು ವರ್ಷದಲ್ಲಿ ಅತಿ ಹೆಚ್ಚು ಮಾರಾಟವಾದ ಟ್ರ್ಯಾಕ್ಟರ್‌ಗಳಿವು..

ಕೃಷಿ ಕಾರ್ಮಿಕರ ಕೊರತೆ ನೀಗಿಸುವುದು ಹಾಗೂ ಅವರ ಮೇಲಿನ ಅವಲಂಬನೆ ಕಡಿಮೆಗೊಳಿಸುವುದರ ಜೊತೆಗೆ ಉತ್ಪಾದಕತೆ ಹೆಚ್ಚಿಸಲು ಯಾಂತ್ರಿಕರಣ ಯೋಜನೆಗಳು ಇಂದು ಭಾರೀ ಬದಲಾವಣೆಗೆ ಕಾರಣವಾಗಿದ್ದು, ಟ್ರ್ಯಾಕ್ಟರ್ ಮಾರಾಟವು ಸಹ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲೇ ಇದೆ. ಹಾಗಾದ್ರೆ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಟ್ರ್ಯಾಕ್ಟರ್ ಯಾವವು? ಬೇಡಿಕೆ ಎಷ್ಟಿದೆ ಎನ್ನುವ ವರದಿಯನ್ನು ಈ ಲೇಖನದಲ್ಲಿ ತಿಳಿಯೋಣ.

2019-20ರ ಹಣಕಾಸು ವರ್ಷದಲ್ಲಿ ಅತಿ ಹೆಚ್ಚು ಮಾರಾಟವಾದ ಟ್ರ್ಯಾಕ್ಟರ್‌ಗಳಿವು..

ಭಾರತದಲ್ಲಿ ಸುಮಾರು 50ಕ್ಕೂ ಹೆಚ್ಚು ಕೃಷಿ ಚಟುವಟಿಕೆಗೆ ಸಂಬಂಧಿತದಂತೆ ವಿವಿಧ ಮಾದರಿಯ ಯಂತ್ರೊಪಕರಣರಗಳನ್ನು ಸಿದ್ದಪಡಿಸುವ ಕಂಪನಿಗಳು ಕಾರ್ಯನಿರ್ವಹಿಸುತ್ತಿದ್ದು, ಇದರಲ್ಲಿ ಕೆಲವೇ ಕೆಲವು ಕಂಪನಿಗಳು ಮಾತ್ರವೇ ಟ್ರ್ಯಾಕ್ಟರ್ ಉತ್ಪಾದನೆ ಮಾಡುತ್ತಿವೆ.

2019-20ರ ಹಣಕಾಸು ವರ್ಷದಲ್ಲಿ ಅತಿ ಹೆಚ್ಚು ಮಾರಾಟವಾದ ಟ್ರ್ಯಾಕ್ಟರ್‌ಗಳಿವು..

ಮಹೀಂದ್ರಾ, ಟಫೆ, ಸೊನಾಲಿಕಾ, ಎಸ್ಕಾರ್ಟ್ಸ್, ಜಾನ್ ಡಿಯರ್, ನ್ಯೂ ಹೊಲಾಂಡ್ ಕಂಪನಿಗಳು ಭಾರತದಲ್ಲಿ ಟ್ರ್ಯಾಕ್ಟರ್ ಮಾರಾಟ ಮಾಡುವ ಪ್ರಮುಖ ಕಂಪನಿಗಳಾಗಿದ್ದು, 2019-20ರ ಹಣಕಾಸು ವರ್ಷದಲ್ಲಿ ಮಾರಾಟವಾದ ಟ್ರ್ಯಾಕ್ಟರ್ ಸಂಖ್ಯೆಯ ಬಗೆಗೆ ಇಲ್ಲಿ ಚರ್ಚಿಸೋಣ.

MOST READ: ಐಷಾರಾಮಿ ಕಾರುಗಳನ್ನೆ ಟ್ರ್ಯಾಕ್ಟರ್‍‍ಗಳನ್ನಾಗಿ ಪರಿವರ್ತಿಸಿದ ರೈತರು..!!

2019-20ರ ಹಣಕಾಸು ವರ್ಷದಲ್ಲಿ ಅತಿ ಹೆಚ್ಚು ಮಾರಾಟವಾದ ಟ್ರ್ಯಾಕ್ಟರ್‌ಗಳಿವು..

ಕಳೆದ ವರ್ಷದ ಆರ್ಥಿಕ ಹಿಂಜರಿತ ನಡುವೆಯೂ ಹಲವು ಟ್ರ್ಯಾಕ್ಟರ್ ಕಂಪನಿಗಳು ಅಧಿಕ ಪ್ರಮಾಣದ ಬೇಡಿಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಅಧಿಕ ಪ್ರಮಾಣದ ಬೇಡಿಕೆಯಿದ್ದರೂ 2018-19ರ ಹಣಕಾಸು ವರ್ಷದಲ್ಲಿನ ಟ್ರ್ಯಾಕ್ಟರ್ ಮಾರಾಟ ಪ್ರಮಾಣಕ್ಕಿಂತಲೂ 2019-20ರ ಅವಧಿಯಲ್ಲಿ ಮಾರಾಟ ಪ್ರಮಾಣವು ತುಸು ಇಳಿಕೆ ಕಂಡಿದೆ ಎನ್ನಬಹುದು.

2019-20ರ ಹಣಕಾಸು ವರ್ಷದಲ್ಲಿ ಅತಿ ಹೆಚ್ಚು ಮಾರಾಟವಾದ ಟ್ರ್ಯಾಕ್ಟರ್‌ಗಳಿವು..

ಮಹೀಂದ್ರಾ ಟ್ರ್ಯಾಕ್ಟರ್

ಭಾರತದ ಅತಿ ದೊಡ್ಡ ಟ್ರ್ಯಾಕ್ಟರ್ ಉತ್ಪಾದನೆ ಮತ್ತು ಮಾರಾಟ ಕಂಪನಿಯಾಗಿ ಹೊರಹೊಮ್ಮಿರುವ ಮಹೀಂದ್ರಾ ಟ್ರ್ಯಾಕ್ಟರ್ ವಿಭಾಗವು 2019-20ರ ಅವಧಿಯಲ್ಲಿ ಒಟ್ಟು 2,91,901 ಯುನಿಟ್ ಮಾರಾಟ ಮಾಡಿದ್ದು, 2018-19ರ ಅವಧಿಯಲ್ಲಿ 3,16,742 ಯನಿಟ್ ಮಾರಾಟ ಮಾಡಿತ್ತು.

MOST READ: ರೈತರ ಬದುಕಿಗೆ ಹೊಸ ಆಶಾಕಿರಣವಾಗುತ್ತಿದೆ ಟಫೆ ಸಂಸ್ಥೆಯ ಈ ಹೊಸ ಆ್ಯಪ್‌

2019-20ರ ಹಣಕಾಸು ವರ್ಷದಲ್ಲಿ ಅತಿ ಹೆಚ್ಚು ಮಾರಾಟವಾದ ಟ್ರ್ಯಾಕ್ಟರ್‌ಗಳಿವು..

ಆದರೆ ಕಳೆದ ವರ್ಷ ಉಂಟಾದ ಆರ್ಥಿಕ ಹಿಂಜರಿತವೂ ಕೃಷಿ ವಲಯದ ಭಾರೀ ಪರಿಣಾಮ ಬೀದಿದ್ದರಿಂದ ಕೃಷಿ ಉಪಕರಣ ಮಾರಾಟವು ಸಹ ಕುಸಿತ ಕಂಡಿತ್ತು. ಆದರೂ 2,91,901 ಯುನಿಟ್ ಮಾರಾಟ ಮಾಡಿದ್ದ ಮಹೀಂದ್ರಾ ಕಂಪನಿಯು ಟ್ರ್ಯಾಕ್ಟರ್ ಮಾರಾಟದಲ್ಲಿ ಮೊದಲ ಸ್ಥಾನದಲ್ಲೇ ಮುಂದುವರಿದ್ದು, ಯುವೊ 40ಹೆಚ್‌ಪಿ, ಯುವೊ 50ಹೆಚ್‌ಪಿ ಮತ್ತು ಅರ್ಜುನ ನೊವೊ ಮಾದರಿಗಳಿಗೆ ಉತ್ತಮ ಬೇಡಿಕೆಯಿದೆ.

2019-20ರ ಹಣಕಾಸು ವರ್ಷದಲ್ಲಿ ಅತಿ ಹೆಚ್ಚು ಮಾರಾಟವಾದ ಟ್ರ್ಯಾಕ್ಟರ್‌ಗಳಿವು..

ಟಫೆ(TAFE)

ಚೆನ್ನೈ ಮೂಲದ ಟ್ರ್ಯಾಕ್ಟರ್ಸ್ ಆ್ಯಂಡ್ ಫಾರ್ಮಾ ಇಕ್ವಿಪ್‌ಮೆಂಟ್ ಲಿಮಿಟೆಡ್(ಟಫೆ) ಕಂಪನಿಯು ಮಹೀಂದ್ರಾ ನಂತರ ಎರಡನೇ ಅತಿ ದೊಡ್ಡ ಟ್ರ್ಯಾಕ್ಟರ್ ಮಾರಾಟ ಕಂಪನಿಯಾಗಿದ್ದು, 2019-20 ಹಣಕಾಸು ವರ್ಷದ ಅವಧಿಯಲ್ಲಿ 1,20,151 ಯುನಿಟ್ ಮಾರಾಟ ಮಾಡಿದೆ. ಕಳೆದ ಹಣಕಾಸು ವರ್ಷಕ್ಕಿಂತಲೂ ಶೇ.17ರಷ್ಟು ಮಾರಾಟದಲ್ಲಿ ಕುಸಿತ ಕಂಡಿದ್ದರೂ ಗ್ರಾಹಕರ ವಿಶ್ವಾಸ ಗಳಿಸುತ್ತ ಟಫೆ ಹಲವಾರು ಪ್ರಮುಖ ನಿರ್ಧಾರಗಳನ್ನು ಕೈಗೊಂಡಿದೆ.

MOST READ: ವೈದ್ಯರ ನೆರವಿಗೆ ಬರಲಿದೆ ಮಹೀಂದ್ರಾ ನಿರ್ಮಾಣದ ವಿಶೇಷ ಏರೋಸೊಲ್ ಬಾಕ್ಸ್

2019-20ರ ಹಣಕಾಸು ವರ್ಷದಲ್ಲಿ ಅತಿ ಹೆಚ್ಚು ಮಾರಾಟವಾದ ಟ್ರ್ಯಾಕ್ಟರ್‌ಗಳಿವು..

ಸೊನಾಲಿಕಾ

ಪಂಜಾಬ್ ಮೂಲದ ಸೊನಾಲಿಕಾ ಗ್ರೂಪ್ ಕಂಪನಿಯು ಟ್ರ್ಯಾಕ್ಟರ್ ಸೇರಿದಂತೆ ಹಲವಾರು ಕೃಷಿ ಚಟುವಟಿಕೆಯ ಯಂತ್ರೊಪಕರಣಗಳ ಉತ್ಪಾದನೆಯನ್ನು ಹೊಂದಿದ್ದು, 2019-20ರ ಹಣಕಾಸು ವರ್ಷದ ಅವಧಿಯಲ್ಲಿ 82,958 ಯನಿಟ್ ಮಾರಾಟಮಾಡಿದೆ. ಇದು ಕಳೆದ ವರ್ಷದ ಹಣಕಾಸು ವರ್ಷದ ಮಾರಾಟಕ್ಕಿಂತಲೂ ಶೇ. 13ರಷ್ಟು ಕುಸಿತ ಕಂಡಿದ್ದು, ಆರ್ಥಿಕ ಹಿಂಜರಿತವು ಕೃಷಿ ಯಂತ್ರೊಪಕರಣಗಳ ಖರೀದಿ ಮೇಲೂ ಪರಿಣಾಮ ಬೀರಿದೆ.

2019-20ರ ಹಣಕಾಸು ವರ್ಷದಲ್ಲಿ ಅತಿ ಹೆಚ್ಚು ಮಾರಾಟವಾದ ಟ್ರ್ಯಾಕ್ಟರ್‌ಗಳಿವು..

ಎಸ್ಕಾರ್ಟ್ಸ್

ಹರಿಯಾಣ ಮೂಲದ ಎಸ್ಕಾರ್ಟ್ ಕಂಪನಿಯು ಕೂಡಾ 2019-20ರ ಹಣಕಾಸು ವರ್ಷದ ಅವಧಿಯಲ್ಲಿ 82,252 ಯುನಿಟ್ ಮಾರಾಟ ಮಾಡಿದ್ದು, ಕಳೆದ ಹಣಕಾಸು ವರ್ಷದ ಟ್ರ್ಯಾಕ್ಟರ್ ಮಾರಾಟಕ್ಕಿಂತಲೂ ಶೇ.11ರಷ್ಟು ಕುಸಿತ ಕಂಡಿದೆ.

MOST READ: ಲಾಕ್ ಡೌನ್ ಎಫೆಕ್ಟ್- ಮಾರ್ಗ ಮಧ್ಯದಲ್ಲೇ ಉಳಿದ ಸಾವಿರಾರು ಕೋಟಿ ಮೌಲ್ಯದ ಹೊಸ ವಾಹನಗಳು

2019-20ರ ಹಣಕಾಸು ವರ್ಷದಲ್ಲಿ ಅತಿ ಹೆಚ್ಚು ಮಾರಾಟವಾದ ಟ್ರ್ಯಾಕ್ಟರ್‌ಗಳಿವು..

ಜಾನ್ ಡಿಯರ್

ಟ್ರ್ಯಾಕ್ಟರ್ ತಯಾರಿಕೆ ಉದ್ಯಮದಲ್ಲಿ ಮುಂಚೂಣಿಯಲ್ಲಿರುವ ಯುಎಸ್ಎ ಮೂಲದ ಜಾನ್ ಡಿಯರ್ ಕಂಪನಿ ಕೂಡಾ ಭಾರತದಲ್ಲಿ ಉತ್ತಮ ಬೇಡಿಕೆಯೊಂದಿಗೆ 2019-20ರ ಹಣಕಾಸು ವರ್ಷದಲ್ಲಿ 68,322 ಯುನಿಟ್ ಮಾರಾಟ ಮಾಡಿ ಬೇಡಿಕೆಯಲ್ಲಿ ಸ್ಥಿರತೆ ಕಾಯ್ದುಕೊಂಡಿದ್ದು, ಭಾರೀ ಗಾತ್ರದ ವಾಣಿಜ್ಯ ಚಟುವಟಿಕೆಯ ಯಂತ್ರೊಪಕರಣಗಳ ಮಾರಾಟದಲ್ಲೂ ಕೂಡಾ ಜಾನ್ ಡಿಯರ್ ಉತ್ತಮ ಬೇಡಿಕೆ ದಾಖಲಿಸಿದೆ.

2019-20ರ ಹಣಕಾಸು ವರ್ಷದಲ್ಲಿ ಅತಿ ಹೆಚ್ಚು ಮಾರಾಟವಾದ ಟ್ರ್ಯಾಕ್ಟರ್‌ಗಳಿವು..

ನ್ಯೂ ಹೊಲಾಂಡ್

ಸುಧಾರಿತ ತಂತ್ರಜ್ಞಾನ ಪ್ರೇರಿತ ಟ್ರ್ಯಾಕ್ಟರ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿ ಇಟಾಲಿಯನ್ ಕಂಪನಿ ನ್ಯೂ ಹೊಲಾಂಡ್ ಭಾರತದಲ್ಲೂ ಉತ್ತಮ ಬೇಡಿಕೆ ಹೊಂದಿದ್ದು, 2019-20ರ ಅವಧಿಯಲ್ಲಿ 26,745 ಯನಿಟ್ ಮಾರಾಟಗೊಂಡಿದೆ. ಇದು ಕಳೆದ ಹಣಕಾಸು ವರ್ಷಕ್ಕಿಂತಲೂ ಶೇ. 14ರಷ್ಟು ಕಡಿಮೆ ಬೇಡಿಕೆಯಾಗಿದ್ದರೂ ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಮಾದರಿಯ ಟ್ರ್ಯಾಕ್ಟರ್ ಉತ್ಪನ್ನಗಳೊಂದಿಗೆ ಉತ್ತಮ ಬೇಡಿಕೆ ಪಡೆದುಕೊಳ್ಳುವ ವಿಶ್ವಾಸದಲ್ಲಿದೆ.

2019-20ರ ಹಣಕಾಸು ವರ್ಷದಲ್ಲಿ ಅತಿ ಹೆಚ್ಚು ಮಾರಾಟವಾದ ಟ್ರ್ಯಾಕ್ಟರ್‌ಗಳಿವು..

ಇನ್ನುಳಿದಂತೆ ಜಪಾನಿನ ಖ್ಯಾತ ಟ್ರಾಕ್ಟರ್ ಕಂಪೆನಿಯಾದ ಕುಬೊಟಾ, ಭಾರತೀಯ ಕಂಪನಿಗಳಾದ ವಿಎಸ್‌ಟಿ, ಎಸ್‌ಡಿಎಫ್, ಕ್ಯಾಪ್ಟೈನ್, ಇಂಡೋಫಾರ್ಮ್, ಫೋರ್ಸ್, ಎಸ್ ಮತ್ತು ಪ್ರೀತ್ ಕಂಪನಿಗಳು ಕೂಡಾ ಈ ಬಾರಿ ಟ್ರ್ಯಾಕ್ಟರ್ ಮಾರಾಟದಲ್ಲಿ ತುಸು ಹಿನ್ನಡೆ ಅನುಭವಿಸಿದ್ದು, ಮುಂಬರುವ ದಿನಗಳಲ್ಲಿ ಇನ್ನಷ್ಟು ಹೊಸ ಉತ್ಪನ್ನಗಳೊಂದಿಗೆ ಅಧಿಕ ಪ್ರಮಾಣದ ಟ್ರ್ಯಾಕ್ಟರ್ ಮಾರಾಟ ಮಾಡುವ ಯೋಜನೆಯಲ್ಲಿವೆ.

Source: Autopunditz

2019-20ರ ಹಣಕಾಸು ವರ್ಷದಲ್ಲಿ ಅತಿ ಹೆಚ್ಚು ಮಾರಾಟವಾದ ಟ್ರ್ಯಾಕ್ಟರ್‌ಗಳಿವು..

2019-20ರ ಅವಧಿಯಲ್ಲಿ ಅತಿ ಹೆಚ್ಚು ಮಾರಾಟವಾದ ಟ್ರ್ಯಾಕ್ಟರ್ಸ್..

ರ‌್ಯಾಂಕ್ ಟ್ರ್ಯಾಕ್ಟರ್ ಮಾದರಿ ಮಾರಾಟ ಪ್ರಮಾಣ(2019-20) ಮಾರಾಟ ಪ್ರಮಾಣ(2018-19) ಮಾರಾಟ ಪ್ರಮಾಣದ ವ್ಯತ್ಯಾಸ
1 ಮಹೀಂದ್ರಾ 2,91,901 3,16,742 -7.8
2 ಟಫೆ 1,20,151 1,44,693 -17.0
3 ಸೊನಾಲಿಕಾ 82,958 95,976 -13.6
4 ಎಸ್ಕಾರ್ಟ್ಸ್ 82,252 93,087 -11.6
5 ಜಾನ್ ಡಿಯರ್ 68,322 68,132 0.3
6 ನ್ಯೂ ಹೊಲಾಂಡ್ 26,745 31,256 -14.4
7 ಕುಬೊಟಾ 12,924 10,876 18.8
8 ವಿಎಸ್‌ಟಿ 6,703 7,570 -11.5
9 ಎಸ್‌ಡಿಎಫ್ 4,102 4,263 -3.8
10 ಫೋರ್ಸ್ 3,248 3,730 -12.9
11 ಕ್ಯಾಪ್ಟೈನ್ 3,126 2,961 5.6
12 ಇಂಡೋಫಾರ್ಮ್ 2,875 3,158 -9.0
13 ಎಸ್ 2,055 3,586 -42.7
14 ಪ್ರೀತ್ 1,643 2,262 -27.4

Most Read Articles

Kannada
English summary
Best Selling Tractor Brands In India For Financial Year 2019-20. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X