ಎಲೆಕ್ಟ್ರಿಕ್ ವಾಹನಗಳ ಬಳಕೆ ಸರಿಯಲ್ಲವೆಂದ ಬಿಲ್ ಗೇಟ್ಸ್

ಡೀಸೆಲ್ ಹಾಗೂ ಪೆಟ್ರೋಲ್ ಎಂಜಿನ್ ವಾಹನಗಳು ಹಲವಾರು ರೀತಿಯ ಸಮಸ್ಯೆಗಳನ್ನು ಉಂಟು ಮಾಡುತ್ತವೆ. ಇವುಗಳಲ್ಲಿ ವಾಯು ಮಾಲಿನ್ಯವು ಪ್ರಮುಖವಾದುದು. ಯಾವುದೇ ದೇಶವಾಗಲಿ ಪೆಟ್ರೋಲ್ ಹಾಗೂ ಡೀಸೆಲ್ ಖರೀದಿಸಲು ಹೆಚ್ಚಿನ ಪ್ರಮಾಣದಲ್ಲಿ ಖರ್ಚು ಮಾಡಬೇಕಾಗುತ್ತದೆ.

ಎಲೆಕ್ಟ್ರಿಕ್ ವಾಹನಗಳ ಬಳಕೆ ಸರಿಯಲ್ಲವೆಂದ ಬಿಲ್ ಗೇಟ್ಸ್

ಇದರಿಂದ ದೇಶದ ಅರ್ಥ ವ್ಯವಸ್ಥೆಯ ಮೇಲೂ ಪರಿಣಾಮ ಬೀರುತ್ತದೆ. ಈ ಕಾರಣಕ್ಕಾಗಿ ಎಲೆಕ್ಟ್ರಿಕ್ ವಾಹನಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಭಾರತ ಮಾತ್ರವಲ್ಲದೇ ಪ್ರಪಂಚದ ಬಹುತೇಕ ದೇಶಗಳು ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ಧಿಪಡಿಸುತ್ತಿವೆ.

ಎಲೆಕ್ಟ್ರಿಕ್ ವಾಹನಗಳ ಬಳಕೆ ಸರಿಯಲ್ಲವೆಂದ ಬಿಲ್ ಗೇಟ್ಸ್

ಎಲೆಕ್ಟ್ರಿಕ್ ವಾಹನಗಳು ಡೀಸೆಲ್ ಹಾಗೂ ಪೆಟ್ರೋಲ್ ಎಂಜಿನ್ ವಾಹನಗಳಂತೆ ವಾಯು ಮಾಲಿನ್ಯವನ್ನುಂಟು ಮಾಡುವುದಿಲ್ಲ. ಬದಲಿಗೆ ಪರಿಸರ ಸ್ನೇಹಿಯಾಗಿರುತ್ತವೆ. ಡೀಸೆಲ್ ಹಾಗೂ ಪೆಟ್ರೋಲ್ ವಾಹನಗಳ ಮೆಂಟೆನೆನ್ಸ್ ಕೂಡ ಕಡಿಮೆಯಾಗಿರುತ್ತದೆ.

ಎಲೆಕ್ಟ್ರಿಕ್ ವಾಹನಗಳ ಬಳಕೆ ಸರಿಯಲ್ಲವೆಂದ ಬಿಲ್ ಗೇಟ್ಸ್

ಎಲೆಕ್ಟ್ರಿಕ್ ವಾಹನಗಳೂ ಸಹ ಅನೇಕ ನ್ಯೂನತೆಗಳನ್ನು ಹೊಂದಿವೆ. ಇವುಗಳಲ್ಲಿ ಅವುಗಳು ಕ್ರಮಿಸುವ ದೂರವು ಸಹ ಸೇರಿದೆ. ಎಲೆಕ್ಟ್ರಿಕ್ ವಾಹನಗಳನ್ನು ಚಾರ್ಜ್ ಮಾಡಲು ಹೆಚ್ಚು ಸಮಯ ಬೇಕಾಗುತ್ತದೆ. ಈ ಕಾರಣಗಳಿಗಾಗಿ ಜನರು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ.

ಎಲೆಕ್ಟ್ರಿಕ್ ವಾಹನಗಳ ಬಳಕೆ ಸರಿಯಲ್ಲವೆಂದ ಬಿಲ್ ಗೇಟ್ಸ್

ಪ್ರಪಂಚದ ಅತಿ ದೊಡ್ಡ ಶ್ರೀಮಂತರಲ್ಲಿ ಒಬ್ಬರಾದ ಬಿಲ್ ಗೇಟ್ಸ್ ರವರು ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಪ್ರಶ್ನಿಸಿದ್ದಾರೆ. ಬಿಲ್ ಗೇಟ್ಸ್ ರವರು ಮಾರ್ಕ್ಸ್ ಬ್ರೌನ್ಲಿಯವರನ್ನು ಸಂದರ್ಶಿಸುವ ವೇಳೆಯಲ್ಲಿ ಮಾತನಾಡುತ್ತಿದ್ದರು. ಈ ವೇಳೆ ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಮಾತನಾಡಿದ್ದಾರೆ.

ಎಲೆಕ್ಟ್ರಿಕ್ ವಾಹನಗಳ ಬಳಕೆ ಸರಿಯಲ್ಲವೆಂದ ಬಿಲ್ ಗೇಟ್ಸ್

ಬಿಲ್ ಗೇಟ್ಸ್ ರವರು ಪೋರ್ಷೆ ಕಂಪನಿಯ ಟೈಕಾನ್ ಎಲೆಕ್ಟ್ರಿಕ್ ಕಾರ್ ಅನ್ನು ಖರೀದಿಸಿದ್ದಾರೆ. ಇದೇ ಮೊದಲ ಬಾರಿಗೆ ಬಿಲ್ ಗೇಟ್ಸ್ ರವರು ಎಲೆಕ್ಟ್ರಿಕ್ ಕಾರ್ ಅನ್ನು ಖರೀದಿಸಿದ್ದಾರೆ. ಈ ವಿಷಯವನ್ನು ಸ್ವತಃ ಬಿಲ್ ಗೇಟ್ಸ್ ರವರೇ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ.

ಎಲೆಕ್ಟ್ರಿಕ್ ವಾಹನಗಳ ಬಳಕೆ ಸರಿಯಲ್ಲವೆಂದ ಬಿಲ್ ಗೇಟ್ಸ್

ಎಲೆಕ್ಟ್ರಿಕ್ ವಾಹನಗಳು ವಾಯು ಮಾಲಿನ್ಯವನ್ನು ಕಡಿಮೆಗೊಳಿಸುತ್ತವೆ ಎಂದು ಬಿಲ್ ಗೇಟ್ಸ್ ರವರು ಹೇಳಿದ್ದಾರೆ. ಆದರೆ ಈ ಎಲೆಕ್ಟ್ರಿಕ್ ವಾಹನಗಳಿಂದ ಹಲವು ಸಮಸ್ಯೆಗಳಿವೆ ಎಂದು ಬಿಲ್ ಗೇಟ್ಸ್ ರವರು ಹೇಳಿದ್ದಾರೆ.

ಎಲೆಕ್ಟ್ರಿಕ್ ವಾಹನಗಳ ಬಳಕೆ ಸರಿಯಲ್ಲವೆಂದ ಬಿಲ್ ಗೇಟ್ಸ್

ತಮ್ಮ ಎಲೆಕ್ಟ್ರಿಕ್ ಕಾರು ಪ್ರೀಮಿಯಂವಾಗಿರುವ ಕಾರಣ ಈ ಕಾರ್ ಅನ್ನು ಡ್ರೈವ್ ಮಾಡುವುದನ್ನು ಆನಂದಿಸುತ್ತಿರುವುದಾಗಿ ತಿಳಿಸಿದ ಅವರಿಗೆ ಈ ಕಾರಿನಲ್ಲಿ ಯಾವುದಾದರೂ ಸಮಸ್ಯೆಗಳಿವೆಯೇ ಎಂದು ಇಂಟರ್‍‍ನೆಟ್‍‍ನಲ್ಲಿ ಪ್ರಶ್ನಿಸಲಾಗಿದೆ. ಈ ಕಾರ್ ಅನ್ನು ಪೂರ್ತಿಯಾಗಿ ಚಾರ್ಜ್ ಮಾಡಿದರೆ ನಿರೀಕ್ಷಿಸಿದಷ್ಟು ದೂರ ಚಲಿಸುತ್ತಿಲ್ಲವೆಂದು ಬಿಲ್ ಗೇಟ್ಸ್ ರವರು ಉತ್ತರಿಸಿದ್ದಾರೆ.

ಎಲೆಕ್ಟ್ರಿಕ್ ವಾಹನಗಳ ಬಳಕೆ ಸರಿಯಲ್ಲವೆಂದ ಬಿಲ್ ಗೇಟ್ಸ್

ಯಾರಾದರೂ ಹೆಚ್ಚು ದೂರ ಪ್ರಯಾಣ ಬೆಳೆಸಲು ಬಯಸಿದರೆ ಅವರಿಗೆ ಚಾರ್ಜಿಂಗ್ ಸಮಸ್ಯೆ ಎದುರಾಗಲಿದೆ ಎಂದು ಹೇಳಿದ್ದಾರೆ. ಇಂಧನವನ್ನು ತಕ್ಷಣ ತುಂಬಿಸಬಹುದು ಆದರೆ ಬ್ಯಾಟರಿಗಳನ್ನು ರಿಚಾರ್ಜ್ ಮಾಡಲು ಹೆಚ್ಚು ಸಮಯ ಬೇಕಾಗುತ್ತದೆ ಎಂದು ಬಿಲ್ ಗೇಟ್ಸ್ ರವರು ಹೇಳಿದ್ದಾರೆ.

ಎಲೆಕ್ಟ್ರಿಕ್ ವಾಹನಗಳ ಬಳಕೆ ಸರಿಯಲ್ಲವೆಂದ ಬಿಲ್ ಗೇಟ್ಸ್

ಇದು ನಿಜವೂ ಹೌದು. ಕೇವಲ 5 ನಿಮಿಷದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಅನ್ನು ತುಂಬಿಸಬಹುದು. ಆದರೆ ಕಾರುಗಳಲ್ಲಿರುವ ಎಲೆಕ್ಟ್ರಿಕ್ ಬ್ಯಾಟರಿಗಳು ಪೂರ್ತಿಯಾಗಿ ಚಾರ್ಜ್ ಆಗಲು ಸುದೀರ್ಘ ಸಮಯ ತೆಗೆದುಕೊಳ್ಳುತ್ತವೆ. ಇದು ಎಲೆಕ್ಟ್ರಿಕ್ ವಾಹನಗಳಲ್ಲಿರುವ ಅತಿ ದೊಡ್ದ ಸಮಸ್ಯೆಯಾಗಿದೆ.

ಎಲೆಕ್ಟ್ರಿಕ್ ವಾಹನಗಳ ಬಳಕೆ ಸರಿಯಲ್ಲವೆಂದ ಬಿಲ್ ಗೇಟ್ಸ್

ಟಾಪ್ ಮಾದರಿಯಾದ ಪೋರ್ಷೆ ಟೈಕಾನ್ ಟರ್ಬೊ ಎಸ್ 0 - 100 ಕಿ.ಮೀ ವೇಗವನ್ನು 2.8 ಸೆಕೆಂಡುಗಳಲ್ಲಿ ಆಕ್ಸೆಲರೇಟ್ ಮಾಡುತ್ತದೆ. ಈ ಕಾರು ಪೋರ್ಷೆ ಕಂಪನಿಯು ಬಿಡುಗಡೆಗೊಳಿಸಿರುವ ಮೊದಲ ಎಲೆಕ್ಟ್ರಿಕ್ ಕಾರ್ ಆಗಿದೆ.

Most Read Articles

Kannada
English summary
Billionaire Bill Gates not happy with electric vehicles. Read in Kannada.
Story first published: Tuesday, February 18, 2020, 15:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X