ಅನಾವರಣವಾಗಲಿದೆ ಬಿಎಂಡಬ್ಲ್ಯೂ 5-ಸೀರಿಸ್ ಫೇಸ್‌ಲಿಫ್ಟ್ ಕಾರು

ಜರ್ಮನಿಯ ಐಷಾರಾಮಿ ಕಾರು ತಯಾರಕ ಕಂಪನಿಯಾದ ಬಿಎಂಡಬ್ಲ್ಯೂ ಕಂಪನಿಯು ತನ್ನ ಹೊಸ 5-ಸೀರಿಸ್ ಫೇಸ್‌ಲಿಫ್ಟ್ ಕಾರನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಬಿಎಂಡಬ್ಲ್ಯೂ ಕಂಪನಿಯು ತನ್ನ ಬಹುನಿರೀಕ್ಷಿತ ಬಿಎಂಡಬ್ಲ್ಯೂ 5-ಸೀರಿಸ್ ಫೇಸ್‌ಲಿಫ್ಟ್ ಕಾರನ್ನು ಇದೇ ತಿಂಗಳ 27ರಂದು ಜಾಗತಿಕವಾಗಿ ಅನಾವರಣಗೊಳಿಸಲಿದೆ.

ಅನಾವರಣವಾಗಲಿದೆ ಬಿಎಂಡಬ್ಲ್ಯೂ 5-ಸೀರಿಸ್ ಫೇಸ್‌ಲಿಫ್ಟ್ ಕಾರು

ಪ್ರಸ್ತುತ ಮಾರುಕಟ್ಟೆಯಲ್ಲಿರುವ ಬಿಎಂಡಬ್ಲ್ಯೂ 5-ಸೀರಿಸ್ ಕಾರನ್ನು ಭಾರತದಲ್ಲಿ ಮೊದಲ ಬಾರಿಗೆ ಸುಮಾರು ಮೂರು ವರ್ಷಗಳ ಹಿಂದೆ ಬಿಡುಗಡೆಗೊಳಿಸಿತು. ಇದೀಗ ಬಿಎಂಡಬ್ಲ್ಯೂ ಕಂಪನಿಯು ಮೂರು ವರ್ಷಗಳ ಬಳಿಕ 5-ಸೀರಿಸ್ ಫೇಸ್‌ಲಿಫ್ಟ್ ಕಾರನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಬಿಎಂಡಬ್ಲ್ಯೂ 5-ಸೀರೀಸ್ ಫೇಸ್‌ಲಿಫ್ಟ್ ಕಾರು ಮುಂಭಾಗ ಗ್ರಿಲ್ ಅನ್ನು ಹೊಂದಿದೆ. ಈ ಕಾರಿನಲ್ಲಿ ಹೊಸ ಗ್ರಿಲ್ ಮತ್ತು ಹೊಸ ಸ್ಲೀಕ್ ಹೆಡ್ ಲೈಟ್ ಅನ್ನು ಅಳವಡಿಸಿದ್ದಾರೆ. ಈ ಹೊಸ ಬಿಎಂಡಬ್ಲ್ಯೂ 5-ಸೀರಿಸ್ ಫೇಸ್‌ಲಿಫ್ಟ್ ಕಾರು ಹಿಂದಿನ ಮಾದರಿಗಿಂತ ಆಕರ್ಷಕವಾಗಿದೆ.

ಅನಾವರಣವಾಗಲಿದೆ ಬಿಎಂಡಬ್ಲ್ಯೂ 5-ಸೀರಿಸ್ ಫೇಸ್‌ಲಿಫ್ಟ್ ಕಾರು

ಈ ಹೊಸ ಬಿಎಂಡಬ್ಲ್ಯೂ 5-ಸೀರಿಸ್ ಕಾರಿನ ಬಂಪರ್ ಗಳೊಂದಿಗೆ ಆಗ್ರೆಸಿವ್ ವಿನ್ಯಾಸಗೊಳಿಸಿದ ಏರ್ ಡ್ಯಮ್ ಗಳನ್ನು ಹೊಂದಿದೆ, ಇನ್ನು ಈ ಕಾರಿನಲ್ಲಿ ಮರುವಿನ್ಯಾಸಗೊಳಿಸಿದ ಡ್ಯುಯಲ್ ಟೋನ್ ಅಲಾಯ್ ವ್ಜೀಲ್ ಗಳನ್ನು ಅಳವಡಿಸಲಾಗಿದೆ.

MOST READ: ಹೊಸ ವಿನ್ಯಾಸದೊಂದಿಗೆ ಬಿಡುಗಡೆಯಾಗಲಿದೆ ಸ್ಕೋಡಾ ಸೂಪರ್ಬ್ ಫೇಸ್‌ಲಿಫ್ಟ್

ಅನಾವರಣವಾಗಲಿದೆ ಬಿಎಂಡಬ್ಲ್ಯೂ 5-ಸೀರಿಸ್ ಫೇಸ್‌ಲಿಫ್ಟ್ ಕಾರು

ಇತ್ತೀಚೆಗೆ ಬಿಡುಗಡೆಗೊಳಿಸಿದ ಟೀಸರ್ ಚಿತ್ರದಲ್ಲಿ ಹೊಸ ಬಿಎಂಡಬ್ಲ್ಯೂ 5-ಸೀರಿಸ್ ಕಾರಿನ ಮುಂಭಾಗ ಹೊಸ ಆಕಾರದ ಎಲ್ಇಡಿ ಡಿಆರ್‌ಎಲ್‌ಗಳೊಂದಿಗೆ ಹೊಸ ತೆಳ್ಳನೆಯ ಹೆಡ್‌ಲ್ಯಾಂಪ್‌ಗಳನ್ನು ಹೊಂದಿದೆ. ಇದನ್ನು ಹೊರತುಪಡಿಸಿದರೆ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಮಾದರಿಯನ್ನು ಹೋಲುತ್ತದೆ.

ಅನಾವರಣವಾಗಲಿದೆ ಬಿಎಂಡಬ್ಲ್ಯೂ 5-ಸೀರಿಸ್ ಫೇಸ್‌ಲಿಫ್ಟ್ ಕಾರು

ಕಾರಿನ ಹಿಂಭಾಗಾದಲ್ಲಿ ಮರುವಿನ್ಯಾಸಗೊಳಿಸಲಾದ ಟೇಲ್ ಲ್ಯಾಂಪ್ ಮತ್ತು ಕ್ವಾಡ್-ಎಕ್ಸಾಸ್ಟ್ ಗಳೊಂದಿಗೆ ಸ್ಪೋರ್ಟಿಯರ್ ಬಂಪರ್ ಅನ್ನು ಹೊಂದಿದೆ. ಹೊಸ ಬಿಎಂಡಬ್ಲ್ಯೂ 5-ಸೀರಿಸ್ ಕಾರಿನ ಇಂಟಿರಿಯರ್ ಚಿತ್ರಗಳು ಬಹಿರಂಗವಾಗಿಲ್ಲ. ಇಂಟಿರಿಯರ್ ನಲ್ಲಿ ಹೆಚ್ಚಿನ ಬದಲಾವಣೆಗಳನ್ನು ಹೊಂದಿರುವುದಿಲ್ಲ ಎಂದು ನಿರೀಕ್ಷಿಸುತ್ತೇವೆ.

MOST READ: ಇತಿಹಾಸದ ಪುಟ ಸೇರಿದ ಫೋಕ್ಸ್‌ವ್ಯಾಗನ್ ಎಮಿಯೊ ಕಾರು

ಅನಾವರಣವಾಗಲಿದೆ ಬಿಎಂಡಬ್ಲ್ಯೂ 5-ಸೀರಿಸ್ ಫೇಸ್‌ಲಿಫ್ಟ್ ಕಾರು

ಬಿಎಂಡಬ್ಲ್ಯೂ 5-ಸೀರಿಸ್ ಫೇಸ್‌ಲಿಫ್ಟ್ ಕಾರು ಡಿಜಿಟಲ್ ಇನ್ಸ್ ಟ್ರೂಮೆಂಟ್ ಪ್ಯಾನೆಲ್, ಆಂಬಿಯೆಂಟ್ ಲೈಟಿಂಗ್, ಹರ್ಮನ್ ಕಾರ್ಡನ್ ಸೌಂಡ್ ಸಿಸ್ಟಂ, ಸನ್‌ರೂಫ್, ಹೆಡ್ಸ್-ಅಪ್ ಡಿಸ್ಪ್ಲೇ ಮತ್ತು ವೈರ್‌ಲೆಸ್ ಆಪಲ್ ಕಾರ್‌ಪ್ಲೇಯೊಂದಿಗೆ ಬಿಎಂಡಬ್ಲ್ಯು ಐ-ಡ್ರೈವ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಒಳಗೊಂಡಿರುತ್ತದೆ.

ಅನಾವರಣವಾಗಲಿದೆ ಬಿಎಂಡಬ್ಲ್ಯೂ 5-ಸೀರಿಸ್ ಫೇಸ್‌ಲಿಫ್ಟ್ ಕಾರು

ಈ 5-ಸೀರಿಸ್ ಫೇಸ್‌ಲಿಫ್ಟ್ ಕಾರಿನಲ್ಲಿ ಸುರಕ್ಷತೆಗಾಗಿ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಬಹುದು. ಸುರಕ್ಷತೆಗಾಗಿ 8 ಏರ್‌ಬ್ಯಾಗ್‌ಗಳು, ಎಬಿಎಸ್ ಜೊತೆ ಇಬಿಡಿ, ಪಾರ್ಕಿಂಗ್ ಸೆನ್ಸರ್‌ಗಳು, ರಿಯರ್ ವ್ಯೂ ಕ್ಯಾಮೆರಾ, ಜೊತೆಗೆ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಅನ್ನು ಹೊಂದಿರುತ್ತದೆ.

MOST READ: ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌

ಅನಾವರಣವಾಗಲಿದೆ ಬಿಎಂಡಬ್ಲ್ಯೂ 5-ಸೀರಿಸ್ ಫೇಸ್‌ಲಿಫ್ಟ್ ಕಾರು

5-ಸೀರಿಸ್ ಫೇಸ್‌ಲಿಫ್ಟ್ ಕಾರಿನ ಮ್ಯಾಕಾನಿಕಲ್ ಅಂಶಗಳು ಬಹಿರಂಗವಾಗಿಲ್ಲ. ಆದರೆ ಚಾರ್ಜಿಂಗ್ ಪೋರ್ಟ್ ಹೈಬ್ರಿಡ್ ರೂಪಾಂತರವನ್ನು ಪರಿಚಯಿಸುವ ಸಾದ್ಯತೆಗಳಿದೆ. 5-ಸೀರಿಸ್ ಕಾರಿನಲ್ಲಿರುವ 2.0-ಲೀಟರ್ ಡೀಸೆಲ್ ಎಂಜಿನ್ 190 ಬಿಹೆಚ್‍ಪಿ ಪವರ್ ಉತ್ಪಾದಿಸಿದರೆ, 2.0-ಲೀಟರ್ ಪೆಟ್ರೋಲ್ ಎಂಜಿನ್ 252 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಇನ್ನು 3.0-ಲೀಟರ್ ಡೀಸೆಲ್ ಎಂಜಿನ್ 265 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ.

ಅನಾವರಣವಾಗಲಿದೆ ಬಿಎಂಡಬ್ಲ್ಯೂ 5-ಸೀರಿಸ್ ಫೇಸ್‌ಲಿಫ್ಟ್ ಕಾರು

ಈ ಹೊಸ ಬಿಎಂಡಬ್ಲ್ಯೂ 5-ಸೀರಿಸ್ ಫೇಸ್‌ಲಿಫ್ಟ್ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಆಡಿ ಎ6, ಮರ್ಸಿಡಿಸ್ ಬೆಂಝ್ ಇ-ಕ್ಲಾಸ್, ಜಾಗ್ವಾರ್ ಎಕ್ಸ್‌ಎಫ್ ಮತ್ತು ವೋಲ್ವೋ ಎಸ್90 ಕಾರುಗಳಿಗೆ ಪೈಪೋಟಿ ನೀಡುತ್ತದೆ, ಬಿಎಂಡಬ್ಲ್ಯೂ 5-ಸೀರಿಸ್ ಫೇಸ್‌ಲಿಫ್ಟ್ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.55.40 ಲಕ್ಷಗಳಾಗಿದೆ.

Most Read Articles

Kannada
English summary
India-bound BMW 5 Series facelift to be revealed on 27 May. Read in Kannada.
Story first published: Friday, May 22, 2020, 10:38 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X