ಭಾರತದಲ್ಲಿ ಬಿಡುಗಡೆಯಾಯ್ತು ಐಷಾರಾಮಿ ಬಿಎಂಡಬ್ಲ್ಯೂ 8 ಸೀರಿಸ್ ಕಾರು

ಬಿಎಂಡಬ್ಲ್ಯೂ ಕಂಪನಿಯು ತನ್ನ 8 ಸೀರಿಸ್ ಗ್ರ್ಯಾನ್ ಕೂಪೆ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಬಿಎಂಡಬ್ಲ್ಯೂ 8 ಸೀರಿಸ್ ಗ್ರ್ಯಾನ್ ಕೂಪೆ ಕಾರನ್ನು 840 ಐ ಗ್ರ್ಯಾನ್ ಕೂಪೆ ಮತ್ತು 840 ಐ ಗ್ರ್ಯಾನ್ ಕೂಪೆ ಎಂ ಸ್ಪೋರ್ಟ್ ಎಂಬ ಎರಡು ರೂಪಾಂತರಗಳಲ್ಲಿ ಬಿಡುಗಡೆಗೊಳಿಸಲಾಗಿದೆ.

ಭಾರತದಲ್ಲಿ ಬಿಡುಗಡೆಯಾಯ್ತು ಐಷಾರಾಮಿ ಬಿಎಂಡಬ್ಲ್ಯೂ 8 ಸೀರಿಸ್ ಕಾರು

ಸ್ಟ್ಯಾಂಡರ್ಡ್ ಬಿಎಂಡಬ್ಲ್ಯು 840 ಐ ಗ್ರ್ಯಾನ್ ಕೂಪೆ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1.30 ಕೋಟಿಗಳಾಗಿದ್ದರೆ, 840 ಐ ಗ್ರ್ಯಾನ್ ಕೂಪೆ 'ಎಂ ಸ್ಪೋರ್ಟ್' ಆವೃತ್ತಿಯ ಬೆಲೆ ಸ್ವಲ್ಪ ಹೆಚ್ಚಾಗಿದ್ದು ರೂ.1.55 ಕೋಟಿಗಳಾಗಿದೆ. ಜರ್ಮನಿಯ ಕಾರು ತಯಾರಕ ಬಿಎಂಡಬ್ಲ್ಯೂ ಕಂಪನಿಯ ಟಾಪ್ ಸ್ಪೆಕ್ ಎಂ8 ಕೂಪೆ ಅನ್ನು ಕೂಡ ಪರಿಚಯಿಸಿದೆ. ಈ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.2.15ಗಳಾಗಿದೆ. ಕ್ಲಾರ್ಕ್ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಾಣವಾಗಿರುವ ಹೊಸ ಬಿಎಂಡಬ್ಲ್ಯು 8 ಸೀರಿಸ್ ಕಾರನ್ನು 2018ರಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿತ್ತು.

ಭಾರತದಲ್ಲಿ ಬಿಡುಗಡೆಯಾಯ್ತು ಐಷಾರಾಮಿ ಬಿಎಂಡಬ್ಲ್ಯೂ 8 ಸೀರಿಸ್ ಕಾರು

ಈ ಕಾರನ್ನು 19 ಇಂಚಿನ ಅಲಾಯ್ ವ್ಹೀಲ್ ಹಾಗೂ ಹೆಚ್ಚುವರಿಯಾದ 20 ಇಂಚಿನ ಅಲಾಯ್ ವ್ಹೀಲ್ ಗಳನ್ನು ಅಳವಡಿಸಲಾಗಿದೆ. ಈ ಹೊಸ ಬಿಎಂಡಬ್ಲ್ಯೂ 8 ಸೀರಿಸ್ ಗ್ರಾಂಡ್ ಕೂಪೆ ಕಾರು ಆಕರ್ಷಕ ಲುಕ್ ಅನ್ನು ಹೊಂದಿದೆ.

MOST READ: ಹೊಸ ಹ್ಯುಂಡೈ ವೆನ್ಯೂ ಪೆಟ್ರೋಲ್ ಆವೃತ್ತಿಯ ಮೈಲೇಜ್ ಮಾಹಿತಿ ಬಹಿರಂಗ

ಭಾರತದಲ್ಲಿ ಬಿಡುಗಡೆಯಾಯ್ತು ಐಷಾರಾಮಿ ಬಿಎಂಡಬ್ಲ್ಯೂ 8 ಸೀರಿಸ್ ಕಾರು

ಈ ಕಾರಿನಲ್ಲಿ ಅಡ್ಜಸ್ಟ್ ಮಾಡಬಹುದಾದ ಫ್ರಂಟ್ ಸೀಟುಗಳು, ವಿಂಗ್ ಮಿರರ್, ಪನೋರಮಿಕ್ ಸನ್‌ರೂಫ್, ಮೂರು ಹಂತದ ಕ್ಲೈಮೇಟ್ ಕಂಟ್ರೋಲ್, ಒಂದು ಇನ್ಸ್ ಟ್ರೂಮೆಂಟ್ ಕ್ಲಸ್ಟರ್‌ ಹಾಗೂ ಇನ್ಫೋಟೇನ್‌ಮೆಂಟ್ ಸ್ಲೀವ್ ಡ್ಯಾಶ್‌ಬೋರ್ಡ್‌ಗಳನ್ನು ನೀಡಲಾಗಿದೆ.

ಭಾರತದಲ್ಲಿ ಬಿಡುಗಡೆಯಾಯ್ತು ಐಷಾರಾಮಿ ಬಿಎಂಡಬ್ಲ್ಯೂ 8 ಸೀರಿಸ್ ಕಾರು

8 ಸೀರಿಸ್ ಕೂಪೆ ಕಾರಿನ ಮುಂಭಾಗದಲ್ಲಿ ಐ ಶೇಪಿನ ಹೆಡ್‌ಲ್ಯಾಂಪ್‌ಗಳು ಹಾಗೂ ಡಿಆರ್‌ಎಲ್ ಸಿಸ್ಟಂ ಹೊಂದಿರುವ ದೊಡ್ಡ ಗ್ರಿಲ್ ನೀಡಲಾಗಿದೆ. ಇವುಗಳ ಜೊತೆಗೆ ದೊಡ್ಡ ಗಾತ್ರದ ವ್ಹೀಲ್ ಗಳು, ಲಾಂಗ್‌ಬೋರ್ಡ್ ಹಾಗೂ ಸ್ಲೊಪ್ ರೂಫ್‌ಲೈನ್ ಗಳಿದ್ದು, ಹೊಸ ಬಿಎಂಡಬ್ಲ್ಯು ಕಾರನ್ನು ಆಕರ್ಷಕವಾಗಿ ಕಾಣುವಂತೆ ಮಾಡುತ್ತವೆ.

MOST READ: ಲಾಕ್‌ಡೌನ್‌ ನಡುವೆ ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ 2020ರ ಮಹೀಂದ್ರಾ ಥಾರ್

ಭಾರತದಲ್ಲಿ ಬಿಡುಗಡೆಯಾಯ್ತು ಐಷಾರಾಮಿ ಬಿಎಂಡಬ್ಲ್ಯೂ 8 ಸೀರಿಸ್ ಕಾರು

ಬಿಎಂಡಬ್ಲ್ಯು 840 ಐ ಗ್ರ್ಯಾನ್ ಕೂಪೆ ಮತ್ತು 840 ಐ ಎಂ ಸ್ಪೋರ್ಟ್ ಎಡಿಷನ್ 3.0 ಲೀಟರ್ ಆರು ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 340 ಬಿಹೆಚ್‍ಪಿ ಪವರ್ ಮತ್ತು 500 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿದೆ ಎಂಟು-ಸ್ಪೀಡಿನ ಗೇರ್‌ಬಾಕ್ಸ್‌ ಅನ್ನು ಅಳವಡಿಸಲಾಗಿದೆ.

ಭಾರತದಲ್ಲಿ ಬಿಡುಗಡೆಯಾಯ್ತು ಐಷಾರಾಮಿ ಬಿಎಂಡಬ್ಲ್ಯೂ 8 ಸೀರಿಸ್ ಕಾರು

ಬಿಎಂಡಬ್ಲ್ಯೂ 840 ಐ ಗ್ರ್ಯಾನ್ ಕೂಪೆಯ ಕಾರ್ಯಕ್ಷಮತೆ-ಆಧಾರಿತ ಎಂ8 ಆವೃತ್ತಿಯು ದೊಡ್ಡ 4.4-ಲೀಟರ್ ವಿ8 ಟ್ವಿನ್-ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 600 ಬಿಹೆಚ್‍ಪಿ ಪವರ್ ಮತ್ತು 750 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಬಿಡುಗಡೆಯಾಗಲಿದೆ ಹೊಸ ಸ್ಕೋಡಾ ಕರೋಕ್ ಎಸ್‍‍‍ಯುವಿ

ಭಾರತದಲ್ಲಿ ಬಿಡುಗಡೆಯಾಯ್ತು ಐಷಾರಾಮಿ ಬಿಎಂಡಬ್ಲ್ಯೂ 8 ಸೀರಿಸ್ ಕಾರು

ಈ ಎಂಜಿನ್ ನೊಂದಿಗೆ ಎಂಟು-ಸ್ಪೀಡಿನ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ ಅನ್ನು ಜೋಡಿಸಲಾಗಿದೆ. ಈ ಬಿಎಂಡಬ್ಲ್ಯೂ 8 ಸೀರಿಸ್ ಕಾರು ಕೇವಲ 3.3 ಸೆಕೆಂಡುಗಳಲ್ಲಿ 0 - 100 ಕಿಮೀ ಕ್ರಮಿಸುತ್ತದೆ.

ಭಾರತದಲ್ಲಿ ಬಿಡುಗಡೆಯಾಯ್ತು ಐಷಾರಾಮಿ ಬಿಎಂಡಬ್ಲ್ಯೂ 8 ಸೀರಿಸ್ ಕಾರು

ಬಿಎಂಡಬ್ಲ್ಯು 8 ಸೀರಿಸ್ ಬ್ರ್ಯಾಂಡ್‌ನ ಅತ್ಯಂತ ಐಷಾರಾಮಿ ಮಾದರಿಯಾಗಿದೆ. ಬಿಎಂಡಬ್ಲ್ಯು 8 ಸೀರಿಸ್ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಮರ್ಸಿಡಿಸ್ ಬೆಂಝ್ ಸಿಎಲ್‌ಎಸ್‌ ಕಾರಿಗೆ ಪೈಪೋಟಿಯನ್ನು ನೀಡುತ್ತದೆ.

Most Read Articles

Kannada
English summary
2020 BMW 8 Series Launched In India. Read in Kananda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X