ಈ ಐಷಾರಾಮಿ ಕಾರು ಕಾರ್ಯನಿರ್ವಹಿಸಲು ಮೊಬೈಲ್ ಫೋನ್‌ ಸಾಕು

ಕಾರುಗಳಲ್ಲಿ ಹೊಸ ಹೊಸ ತಂತ್ರಜ್ಞಾನವನ್ನು ಪರಿಚಯಿಸಲಾಗುತ್ತಿದೆ. ಸ್ಮಾರ್ಟ್‌ಫೋನ್ ಹಾಗೂ ಕಾರಿನಲ್ಲಿರುವ ಇನ್ಫೋಟೇನ್‌ಮೆಂಟ್ ಸಾಧನವನ್ನು ಇಂಟರ್‌ನೆಟ್ ಮೂಲಕ ಸಂಪರ್ಕಿಸುವ ಕನೆಕ್ಟ್ ಕಾರ್ ಎಂಬ ಹೊಸ ಟೆಕ್ನಾಲಜಿಯನ್ನು ಬಿಡುಗಡೆಗೊಳಿಸಲಾಗಿದೆ.

ಈ ಐಷಾರಾಮಿ ಕಾರು ಕಾರ್ಯನಿರ್ವಹಿಸಲು ಮೊಬೈಲ್ ಫೋನ್‌ ಸಾಕು

ಈ ಟೆಕ್ನಾಲಜಿಯನ್ನು ಹೊಸ ಹಂತಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಕಾರು ತಯಾರಕ ಕಂಪನಿಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ವಿಶ್ವದ ಪ್ರಮುಖ ಮೊಬೈಲ್ ಫೋನ್‌ ತಯಾರಕ ಕಂಪನಿಯಾದ ಆಪಲ್, ಕಾರುಗಳಿಗಾಗಿ ಡಿಜಿಟಲ್ ಕೀ ಟೆಕ್ನಾಲಜಿಯನ್ನು ಪರಿಚಯಿಸಿದೆ. ಆಪಲ್ ಐಫೋನ್ ಅನ್ನು ಹೆಚ್ಚಿನ ಭದ್ರತಾ ಫೀಚರ್‌ ಹಾಗೂ ಡಿಜಿಟಲ್ ಕೀ ಪ್ರೊಸೆಸರ್‌ನೊಂದಿಗೆ ಸಿದ್ಧ ಪಡಿಸಲಾಗಿದೆ.

ಈ ಐಷಾರಾಮಿ ಕಾರು ಕಾರ್ಯನಿರ್ವಹಿಸಲು ಮೊಬೈಲ್ ಫೋನ್‌ ಸಾಕು

ಕಾರಿನ ಡ್ಯಾಶ್‌ಬೋರ್ಡ್ ಬಳಿಯ ಟ್ರೇನಲ್ಲಿರುವ ಐಫೋನ್‌ನಲ್ಲಿ, ಪುಶ್ ಬಟನ್ ಒತ್ತುವುದರ ಮೂಲಕ ಎಂಜಿನ್ ಆನ್ ಹಾಗೂ ಆಫ್ ಮಾಡಬಹುದು. ಇದರಿಂದಾಗಿ ಇನ್ನು ಮುಂದೆ ಕಾರ್ ಅನ್ನು ಅನ್‌ಲಾಕ್ ಮಾಡಲು ಕೀಗಳ ಅಗತ್ಯವಿರುವುದಿಲ್ಲ. ಇದೇ ಮೊದಲ ಬಾರಿಗೆ ಬಿಎಂಡಬ್ಲ್ಯು ಐಷಾರಾಮಿ ಕಾರುಗಳಲ್ಲಿ ಈ ಟೆಕ್ನಾಲಜಿಯನ್ನು ಪರಿಚಯಿಸಲಾಗಿದೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಈ ಐಷಾರಾಮಿ ಕಾರು ಕಾರ್ಯನಿರ್ವಹಿಸಲು ಮೊಬೈಲ್ ಫೋನ್‌ ಸಾಕು

ಆಪಲ್‌ನ ಡಿಜಿಟಲ್ ಕೀ ಪ್ರೊಸೆಸರ್ ಅನ್ನು ನಿರ್ದಿಷ್ಟ ಮಾರ್ಗಸೂಚಿಗಳೊಂದಿಗೆ ಬಿಎಂಡಬ್ಲ್ಯು ಇನ್ಫೋಟೆನ್‌ಮೆಂಟ್ ಸಿಸ್ಟಂನೊಂದಿಗೆ ಅಳವಡಿಸಲಾಗುವುದು. ಕಾರಿನ ಎಂಜಿನ್ ಆನ್ ಮಾಡಲು ಹೆಚ್ಚುವರಿ ಕೀಗಳ ಅಗತ್ಯವಿಲ್ಲ.

ಈ ಐಷಾರಾಮಿ ಕಾರು ಕಾರ್ಯನಿರ್ವಹಿಸಲು ಮೊಬೈಲ್ ಫೋನ್‌ ಸಾಕು

ಬಿಎಂಡಬ್ಲ್ಯು ಕಾರು ಮಾಲೀಕರು ಹೆಚ್ಚು ಸುರಕ್ಷಿತ ಫೀಚರ್‌ಗಳನ್ನು ಹೊಂದಿರುವ ಡಿಜಿಟಲ್ ಕೀ ಪ್ರೊಸೆಸರ್ ಅನ್ನು ಆಪಲ್ ವಾಲೆಟ್ ಮೂಲಕ ಆಕ್ಸೆಸ್ ಮಾಡಬಹುದು. ಈ ಡಿಜಿಟಲ್ ಪ್ರೊಸೆಸರ್ ಅನ್ನು ಎಂಜಿನ್ ಆನ್ ಹಾಗೂ ಆಫ್ ಮಾಡಲು ಮಾತ್ರವಲ್ಲದೇ, ಕಾರ್ ಅನ್ನು ಮಿತಿಯಲ್ಲಿಡಲು, ರೇಡಿಯೊದ ವಾಲ್ಯುಮ್ ನಿಯಂತ್ರಿಸಲು ಹಾಗೂ ಎಂಜಿನ್ ಪರ್ಫಾಮೆನ್ಸ್ ಕಂಟ್ರೋಲ್ ಮಾಡಲು ಸಹ ಬಳಸಬಹುದು.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಈ ಐಷಾರಾಮಿ ಕಾರು ಕಾರ್ಯನಿರ್ವಹಿಸಲು ಮೊಬೈಲ್ ಫೋನ್‌ ಸಾಕು

ಈ ಡಿಜಿಟಲ್ ಕೀಯನ್ನು ಗರಿಷ್ಠ 5 ಮೊಬೈಲ್ ಫೋನ್‌ಗಳ ಮೂಲಕ ಪಡೆಯಬಹುದು. ಐಫೋನ್ ಉಚಿತವಾಗಿದ್ದರೂ ಗ್ರಾಹಕರು 5 ಗಂಟೆಗಳ ಸರ್ವೀಸ್ ಮಾಡಬಹುದು. ಆಪಲ್ ವಾಚ್‌ಗಳಲ್ಲೂ ಡಿಜಿಟಲ್ ಕೀ ಪ್ರೊಸೆಸರ್ ಬಳಸಬಹುದು ಎಂದು ಆಪಲ್ ಕಂಪನಿ ಹೇಳಿದೆ.

ಈ ಐಷಾರಾಮಿ ಕಾರು ಕಾರ್ಯನಿರ್ವಹಿಸಲು ಮೊಬೈಲ್ ಫೋನ್‌ ಸಾಕು

ಈ ಡಿಜಿಟಲ್ ಕೀ ಟೆಕ್ನಾಲಜಿಯನ್ನು ಬೆಂಬಲಿಸುವ ಇನ್ಫೋಟೇನ್‌ಮೆಂಟ್ ಸಿಸ್ಟಂಗಳನ್ನು ಜುಲೈ 1ರಿಂದ ವಿಶ್ವದ 45 ದೇಶಗಳಲ್ಲಿ ಉತ್ಪಾದಿಸಲಾಗುವ ಬಿಎಂಡಬ್ಲ್ಯು ಕಾರುಗಳಲ್ಲಿ ಅಳವಡಿಸಲಾಗುವುದು. ಈ ಸೌಲಭ್ಯವನ್ನು ಬಿಎಂಡಬ್ಲ್ಯು 1 ಸೀರಿಸ್, 2 ಸೀರಿಸ್, 3 ಸೀರಿಸ್, 4 ಸೀರಿಸ್, 5 ಸೀರಿಸ್, 6 ಸೀರಿಸ್, 8 ಸೀರಿಸ್, ಎಕ್ಸ್ -5, ಎಕ್ಸ್ -6, ಎಕ್ಸ್ -7, ಎಕ್ಸ್ 5 ಎಂ ಹಾಗೂ ಝಡ್ 4ಗಳಲ್ಲಿ ಅಳವಡಿಸಲಾಗುವುದು.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಈ ಐಷಾರಾಮಿ ಕಾರು ಕಾರ್ಯನಿರ್ವಹಿಸಲು ಮೊಬೈಲ್ ಫೋನ್‌ ಸಾಕು

ಬಿಎಂಡಬ್ಲ್ಯು ಡಿಜಿಟಲ್ ಕೀಗಳನ್ನು ಐಫೋನ್ ಎಕ್ಸ್‌ಆರ್, ಐಫೋನ್ ಎಕ್ಸ್‌ಎಸ್, ಆಪಲ್ 5 ಸೀರೀಸ್ ವಾಚ್ ಹಾಗೂ ಹೊಸದಾಗಿ ಬಿಡುಗಡೆಯಾಗಿರುವ ಆಪಲ್ ಸಾಧನಗಳಲ್ಲಿ ಅಳವಡಿಸಲಾಗುವುದು. ಐಒಎಸ್ -14 ಪ್ರೊಸೆಸರ್ ಹೊಂದಿರುವ ಆಪಲ್ ಸಾಧನಗಳು ಈ ಫೀಚರ್ ಹೊಂದಿರಲಿವೆ. ಇದರಿಂದಾಗಿ ಕನೆಕ್ಟ್ ಕಾರು ಟೆಕ್ನಾಲಜಿಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಸಾಧ್ಯವಾಗಲಿದೆ.

Most Read Articles

Kannada
English summary
BMW Car can be unlocked through apple Iphone. Read in Kannada.
Story first published: Wednesday, June 24, 2020, 10:47 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X