ಬೆಂಗಳೂರಿನಲ್ಲಿ ತಲೆಎತ್ತಿದ ಬಿಎಂಡಬ್ಲ್ಯು ಐಷಾರಾಮಿ ಸೆಕೆಂಡ್ ಹ್ಯಾಂಡ್ ಶೋರೂಂ

ಬಿಎಂಡಬ್ಲ್ಯು ಇಂಡಿಯಾ ಕಂಪನಿಯು ಭಾರತದಲ್ಲಿ ತನ್ನ ಅತಿ ದೊಡ್ಡ ಯೂಸ್ಡ್ ಕಾರ್ ಶೋರೂಂಗೆ ಚಾಲನೆ ನೀಡಿದ್ದು, ಹೊಸ ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಮಳಿಗೆಯು ನಮ್ಮ ಬೆಂಗಳೂರಿನ ಏರ್‌ಪೋರ್ಟ್ ರಸ್ತೆಯಲ್ಲಿ ತಲೆ ಎತ್ತಿದೆ.

ಬಿಎಂಡಬ್ಲ್ಯು ಐಷಾರಾಮಿ ಸೆಕೆಂಡ್ ಹ್ಯಾಂಡ್ ಶೋರೂಂ ಆರಂಭ

ಬಿಎಂಡಬ್ಲ್ಯು ಕಂಪನಿಯ ಹೊಸ ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಮಳಿಗೆಯನ್ನು ನವನೀತ್ ಮೋಟಾರ್ಸ್‌ನೊಂದಿಗೆ ಚಾಲನೆ ನೀಡಿದ್ದು, ಹೊಸ ಶೋರೂಂನಲ್ಲಿ ಬಿಎಂಡಬ್ಲ್ಯು ನಿರ್ಮಾಣದ ಸೆಕೆಂಡ್ ಹ್ಯಾಂಡ್ ಕಾರುಗಳು ಆಕರ್ಷಕ ಬೆಲೆಯೊಂದಿಗೆ ಖರೀದಿಗೆ ಲಭ್ಯವಿರಲಿವೆ. ಬಿಎಂಡಬ್ಲ್ಯು ಸೆಕೆಂಡ್ ಹ್ಯಾಂಡ್ ಕಾರುಗಳು ಹೊಸ ಕಾರುಗಳ ಮಾದರಿಯಲ್ಲೇ ಗರಿಷ್ಠ ಮಟ್ಟದ ವಾರಂಟಿ, ಆಕರ್ಷಕ ಸಾಲಸೌಲಭ್ಯಗಳನ್ನು ಪಡೆದುಕೊಂಡಿವೆ.

ಬಿಎಂಡಬ್ಲ್ಯು ಐಷಾರಾಮಿ ಸೆಕೆಂಡ್ ಹ್ಯಾಂಡ್ ಶೋರೂಂ ಆರಂಭ

ಅಸಂಘಟಿತವಾಗಿ ಕಾರ್ಯನಿರ್ವಹಿಸುತ್ತಿರುವ ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಉದ್ಯಮವನ್ನು ವ್ಯವಸ್ಥಿತವಾಗಿ ಮಾರಾಟ ಮಾಡುವ ಗುರಿ ಯೋಜನೆ ಹೊಂದಿರುವ ಬಿಎಂಡಬ್ಲ್ಯು ಕಂಪನಿಯು ಸೆಕೆಂಡ್ ಹ್ಯಾಂಡ್ ಖರೀದಿಸುವ ಗ್ರಾಹಕರಿಗೆ ಗರಿಷ್ಠ ಭದ್ರತೆ ಒದಗಿಸುತ್ತಿದೆ.

ಬಿಎಂಡಬ್ಲ್ಯು ಐಷಾರಾಮಿ ಸೆಕೆಂಡ್ ಹ್ಯಾಂಡ್ ಶೋರೂಂ ಆರಂಭ

ಅಸಂಘಟಿತವಾಗಿರುವ ಸ್ಥಳೀಯ ವ್ಯಾಪಾರಿಗಳ ಬಳಿ ಸೆಕೆಂಡ್ ಹ್ಯಾಂಡ್ ವಾಹನ ಖರೀದಿಯು ಕೆಲವು ಸಂದರ್ಭಗಳಲ್ಲಿ ಲಾಭಕ್ಕಿಂತ ಹೆಚ್ಚು ನಷ್ಟ ಅನುಭವಿಸಬೇಕಾದ ಸಂದರ್ಭಗಳು ಎದುರಾಗಬಹುದಾಗಿದ್ದು, ಪ್ರಮಾಣೀಕೃತ ಸೆಕೆಂಡ್ ಹ್ಯಾಂಡ್ ವಾಹನಗಳು ಗ್ರಾಹಕರ ಆಯ್ಕೆಗೆ ಉತ್ತಮ ಎನ್ನಬಹುದು.

ಬಿಎಂಡಬ್ಲ್ಯು ಐಷಾರಾಮಿ ಸೆಕೆಂಡ್ ಹ್ಯಾಂಡ್ ಶೋರೂಂ ಆರಂಭ

ಜೊತೆಗೆ ಪ್ರಮಾಣೀಕೃತ ಸೆಕೆಂಡ್ ಹ್ಯಾಂಡ್ ವಾಹನಗಳ ಮಾರಾಟ ಮಳಿಗೆಗಳಲ್ಲಿ ಖರೀದಿಸುವ ವಾಹನಗಳಿಗೆ ಹೆಚ್ಚುವರಿಯಾಗಿ ವಾರಂಟಿ ಸಹ ದೊರೆಯಲಿದ್ದು, ಇಲ್ಲಿ ಮೋಸ ವ್ಯವಹಾರಗಳಿಗೆ ಯಾವುದೇ ಅವಕಾಶವಿರುವುದಿಲ್ಲ.

MOST READ: ಹೊಸ ಪೊಲೊ ಕಾರು ವಿತರಣೆ ಮಾಡಿದ ಎರಡೇ ನಿಮಿಷದಲ್ಲಿ ನಡೆಯಿತು ಅಪಘಾತ..!

ಬಿಎಂಡಬ್ಲ್ಯು ಐಷಾರಾಮಿ ಸೆಕೆಂಡ್ ಹ್ಯಾಂಡ್ ಶೋರೂಂ ಆರಂಭ

ಒಂದು ವೇಳೆ ಮೋಸವೆಂದು ಕಂಡುಬಂದಲ್ಲಿ ಕಾನೂನು ಹೋರಾಟಕ್ಕೆ ಎಲ್ಲಾ ಅವಕಾಶಗಳಿದ್ದು, ಮೋಸ ವ್ಯವಹಾರ ಸಾಬೀತಾದಲ್ಲಿ ಪರಿಹಾರ ಕಂಡುಕೊಳ್ಳಬಹುದಾದ ಅವಕಾಶವಿದೆ. ಇದಕ್ಕಾಗಿ ಬಹುತೇಕ ಕಾರು ಕಂಪನಿಗಳು ತಮ್ಮದೆ ನಿರ್ಮಾಣದ ಸೆಕೆಂಡ್ ಹ್ಯಾಂಡ್ ಕಾರುಗಳು ಮಾರಾಟವನ್ನು ಅಧಿಕೃತವಾಗಿ ಚಾಲನೆ ನೀಡುತ್ತಿವೆ.

ಬಿಎಂಡಬ್ಲ್ಯು ಐಷಾರಾಮಿ ಸೆಕೆಂಡ್ ಹ್ಯಾಂಡ್ ಶೋರೂಂ ಆರಂಭ

ಇದಲ್ಲದೆ ಸದ್ಯ ಪರಿಸ್ಥಿತಿಯಲ್ಲಿ ಕರೋನಾ ವೈರಸ್ ಪರಿಣಾಮ ಆಟೋ ಉದ್ಯಮವು ಮಂದಗತಿಯಲ್ಲಿ ಸಾಗಿದ್ದು, ಹೊಸ ವಾಹನ ಖರೀದಿ ಯೋಜನೆಯಲ್ಲಿದ್ದ ಹಲವು ಗ್ರಾಹಕರು ಪರಿಸ್ಥಿತಿಗೆ ಅನುಗುಣವಾಗಿ ಸೆಕೆಂಡ್ ಹ್ಯಾಂಡ್ ವಾಹನಗಳ ಖರೀದಿಯತ್ತ ಮುಖ ಮಾಡುತ್ತಿದ್ದಾರೆ.

MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ಬಿಎಂಡಬ್ಲ್ಯು ಐಷಾರಾಮಿ ಸೆಕೆಂಡ್ ಹ್ಯಾಂಡ್ ಶೋರೂಂ ಆರಂಭ

ಈ ಅವಕಾಶವನ್ನು ಬಳಸಿಕೊಳ್ಳಲು ಮುಂದಾಗಿರುವ ಬಹುತೇಕ ಆಟೋ ಕಂಪನಿಗಳು ಹೊಸ ವಾಹನಗಳ ಮಾರಾಟದ ಜೊತೆಗೆ ಸೆಕೆಂಡ್ ಹ್ಯಾಂಡ್ ಕಾರುಗಳ ಮಾರಾಟದ ಉದ್ಯಮದ ಮೇಲೂ ಭಾರೀ ಹೂಡಿಕೆ ಮಾಡುತ್ತಿವೆ.

Most Read Articles

Kannada
English summary
Largest BMW Premium Selection Facility Launches In Bengaluru. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X