Just In
Don't Miss!
- News
ಜನಸೇವಕ್ ಸಮಾವೇಶದಲ್ಲಿ ಅಮಿತ್ ಶಾ ಭಾಷಣ; ಮುಖ್ಯಾಂಶಗಳು
- Movies
Bigg Boss Tamil 4: ಅತಿ ಹೆಚ್ಚು ಸಂಭಾವನೆ ಪಡೆದ ಸ್ಪರ್ಧಿಯೇ ವಿಜೇತ!
- Finance
ಸಿಲಿಂಡರ್ ಬುಕ್ ಮಾಡಿದ ಎರಡು ಗಂಟೆಯೊಳಗೆ ಮನೆ ಬಾಗಿಲಿಗೆ ಡೆಲಿವರಿ
- Sports
ಆಸಿಸ್ ಬೌಲರ್ಗಳಿಗೆ ಪಾಂಟಿಂಗ್ ಚಾಟಿ: ಶಾರ್ದೂಲ್- ಸುಂದರ್ ಆಟಕ್ಕೆ ಮೆಚ್ಚುಗೆ
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಭಾರತಕ್ಕೆ ಮತ್ತೆ ಲಗ್ಗೆ ಇಟ್ಟ ಬಿಎಂಡಬ್ಲ್ಯು 320ಡಿ ಕಾರು
ಜರ್ಮನ್ ಮೂಲದ ವಾಹನ ತಯಾರಕ ಕಂಪನಿಯಾದ ಬಿಎಂಡಬ್ಲ್ಯು ತನ್ನ 320ಡಿ ಸ್ಪೋರ್ಟ್ ವೆರಿಯೆಂಟ್ ಅನ್ನು ಭಾರತದಲ್ಲಿ ಸದ್ದಿಲ್ಲದೆ ಮರು ಬಿಡುಗಡೆಗೊಳಿಸಿದೆ. ಈ ಹೊಸ ಬಿಎಂಡಬ್ಲ್ಯು 320ಡಿ ಸ್ಪೋರ್ಟ್ ವೆರಿಯೆಂಟ್ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.42.10 ಲಕ್ಷಗಳಾಗಿದೆ.

ಈ ವರ್ಷದ ಮಾರ್ಚ್ ತಿಂಗಳಲ್ಲಿ 320ಡಿ ಸ್ಪೋರ್ಟ್ ವೆರಿಯೆಂಟ್ ಅನ್ನು 330ಐ ಸ್ಪೋರ್ಟ್ ರೂಪಾಂತರವನ್ನು ಬಿಡುಗಡೆಗೊಳಿಸಿದಾಗ ಸ್ಥಗಿತಗೊಳಿಸಿತ್ತು. ಆದರೆ ಇದೀಗ ಬಿಎಂಡಬ್ಲ್ಯು ಕಂಪನಿಯು ಮತ್ತೊಮ್ಮೆ 320ಡಿ ಸ್ಪೋರ್ಟ್ ವೆರಿಯೆಂಟ್ ಅನ್ನು ಬಿಡುಗಡೆಗೊಳಿಸಿದೆ. ಬಿಎಂಡಬ್ಲ್ಯು 320ಡಿ ಸ್ಪೋರ್ಟ್ ವೆರಿಯೆಂಟ್ ತನ್ನ 3-ಸೀರಿಸ್ ಬ್ರ್ಯಾಂಡ್ ಎಂಟ್ರಿ ಲೆವೆಲ್ ಡೀಸೆಲ್ ರೂಪಾಂತರವಾಗಿದೆ. ಈ ಬಿಎಂಡಬ್ಲ್ಯು ಸ್ಪೋರ್ಟ್ ವೆರಿಯೆಂಟ್ ಆಕರ್ಷಕ ಲುಕ್ ಅನ್ನು ಹೊಂದಿದೆ.

ಈ ಹೊಸ ಬಿಎಂಡಬ್ಲ್ಯು 320ಡಿ ಸ್ಪೋರ್ಟ್ ಮಾದರಿಯಲ್ಲಿ ಎಲ್ಇಡಿ ಹೆಡ್ ಲೈಟ್, ಎಲ್ಇಡಿ ಫಾಗ್ ಲೈಟ್ಸ್, ಪನೋರಮಿಕ್ ಸನ್ ರೂಫ್ ಮತ್ತು ಮೂರು ಹಂತದ ಕ್ಲೈಮೆಂಟ್ ಕಂಟ್ರೋಲ್ ಅನ್ನು ಒಳಗೊಂಡಿದೆ.
MOST READ: ಅನಾವರಣವಾಯ್ತು ಬಿಎಂಡಬ್ಲ್ಯು ಎಕ್ಸ್7 ಡಾರ್ಕ್ ಶ್ಯಾಡೋ ಎಸ್ಯುವಿ

ಈ ಬಿಎಂಡಬ್ಲ್ಯು 320ಡಿ ಸ್ಪೋರ್ಟ್ ವೆರಿಯೆಂಟ್ ಲೆದರ್ ಸ್ಟೀಯರಿಂಗ್ ವ್ಹೀಲ್, ಹತ್ತು-ಸ್ಪೀಕರ್ ಆಡಿಯೊ ಸಿಸ್ಟಂ ಮತ್ತು ಅನಲಾಗ್ ಸ್ಟೈಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ. ಈ ಕಾರು ಆಲ್ಪೈನ್ ವೈಟ್, ಬ್ಲ್ಯಾಕ್ ಸಫೈರ್ ಮತ್ತು ಮೆಡಿಟರೇನಿಯನ್ ಬ್ಲೂ ಎಂಬ ಮೂರು ಬಣ್ಣ ಆಯ್ಕೆಗಳಲ್ಲಿ ಲಭ್ಯವಿರಲಿದೆ.

ಈ ಹೊಸ ಬಿಎಂಡಬ್ಲ್ಯು ಕಾರಿನಲ್ಲಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಆಪಲ್ ಕಾರ್ ಪ್ಲೇ ಕನೆಕ್ಟಿವಿಟಿ, ಆಂಬಿಯೆಂಟ್ ಲೈಟಿಂಗ್ ಮತ್ತು ಪಾರ್ಕಿಂಗ್ ಅಸಿಸ್ಟೆಂಟ್ನಂತಹ ಹೆಚ್ಚಿನ ತಯಾರಕರು ನೀಡುವ ಫೀಚರುಗಳನ್ನು ಒಳಗೊಂಡಿಲ್ಲ.
MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಈ ಹೊಸ ಬಿಎಂಡಬ್ಲ್ಯು 320ಡಿ ಕಾರಿನಲ್ಲಿ 2.0 ಲೀಟರ್ ನಾಲ್ಕು ಸಿಲಿಂಡರ್ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 188 ಬಿಹೆಚ್ಪಿ ಪವರ್ ಮತ್ತು 400 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 8-ಸ್ಫೀಡ್ ಸ್ಟೆಪ್ಟ್ರಾನಿಕ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.

ಇನ್ನು ಬಿಎಂಡಬ್ಲ್ಯು ಕಂಪನಿಯ ಸಂಬಂಧಿಸಿದ ಇತರೆ ಸುದ್ದಿ, ಬಿಎಂಡಬ್ಲ್ಯು ತನ್ನ ಹೊಸ ಎಕ್ಸ್7 ಡಾರ್ಕ್ ಶ್ಯಾಡೋ ಲಿಮಿಟೆಡ್ ಎಡಿಷನ್ ಎಸ್ಯುವಿಯನ್ನು ಇತ್ತೀಚೆಗೆ ಅನಾವರಣಗೊಳಿಸಿದೆ. ಈ ಹೊಸ ಬಿಎಂಡಬ್ಲ್ಯು ಎಕ್ಸ್7 ಡಾರ್ಕ್ ಶ್ಯಾಡೋ ಎಸ್ಯುವಿಯು ಲಿಮಿಟೆಡ್ ಎಡಿಷನ್ ಆಗಿರುವುದರಿಂದ ವಿಶ್ವಾದ್ಯಂತ ಕೇವಲ 500 ಯುನಿಟ್ ಗಳನ್ನು ಮಾತ್ರ ಮಾರಾಟ ಮಾಡಲಾಗುತ್ತದೆ.
MOST READ: ಭಾರತಕ್ಕೆ ಲಗ್ಗೆ ಇಡಲಿದೆ ಹೊಸ ಹೋಂಡಾ ಹೆಚ್ಆರ್-ವಿ ಎಸ್ಯುವಿ

ಹೊಸ ಬಿಎಂಡಬ್ಲ್ಯು ಎಕ್ಸ್7 ಡಾರ್ಕ್ ಶ್ಯಾಡೋ ಮಾದರಿಯ ಉತ್ಪಾದನೆಯನ್ನು ಅಮೇರಿಕದ ಸ್ಪಾರ್ಟನ್ಬರ್ಗ್ ನಲ್ಲಿ ಶೀಘ್ರದಲ್ಲೇ ಪ್ರಾರಂಭಿಸಲಿದೆ. ಈ ಲಿಮಿಟೆಡ್ ಎಡಿಷನ್ ಮಾದರಿಯಲ್ಲಿ ಬಿಎಂಡಬ್ಲ್ಯು ಎಕ್ಸ್7 ನೀಡಲಾಗಿರುವ ಎಲ್ಲಾ ಎಂಜಿನ್ ಆಯ್ಕೆಗಳನ್ನು ನೀಡಬಹುದು.

ಹೊಸ ಬಿಎಂಡಬ್ಲ್ಯು 320ಡಿ ಭಾರತದಲ್ಲಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿದೆ. ಬಿಎಂಡಬ್ಲ್ಯು ಕಂಪನಿಯು ಮತ್ತೊಮೆ ಈ ಜನಪ್ರಿಯ ಮಾದರಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಮಾದರಿಯು ಹೆಚ್ಚಿನ ಗ್ರಾಹಕರನ್ನು ಸೆಳೆಯಬಹುದು ಎಂದು ನಿರೀಕ್ಷಿಸುತ್ತೇವೆ.