ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಬಿಡುಗಡೆ ಕುರಿತು ಸ್ಪಷ್ಟಪಡಿಸಿದ ಬಿಎಂಡಬ್ಲ್ಯು

ಜರ್ಮನ್ ಕಾರು ತಯಾರಕ ಕಂಪನಿಯಾದ ಬಿಎಂಡಬ್ಲ್ಯ ಮೋಟಾರ್ಸ್ ಕಂಪನಿಯು ಭಾರತದಲ್ಲಿ ಎಲೆಕ್ಟ್ರಿಕ್ ಕಾರು ಮಾದರಿಗಳ ಬಿಡುಗಡೆ ಕುರಿತು ಸ್ಪಷ್ಟಪಡಿಸಿದ್ದು, ಚಾರ್ಜಿಂಗ್ ಸೌಲಭ್ಯಗಳ ಆಧಾರದ ಮೇಲೆ ಇವಿ ಕಾರುಗಳ ಪರಿಚಯಿಸುವುದಾಗಿ ಹೇಳಿಕೊಂಡಿದೆ.

ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಬಿಡುಗಡೆ ಕುರಿತು ಸ್ಪಷ್ಟಪಡಿಸಿದ ಬಿಎಂಡಬ್ಲ್ಯು

ಭಾರತದಲ್ಲಿ ಸದ್ಯ ಕೆಲವೇ ಕೆಲವು ನಗರಗಳಲ್ಲಿ ಸಾರ್ವಜನಿಕ ಬಳಕೆಯ ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೆಷನ್‌ಗಳ ಸೌಲಭ್ಯಗಳಿದ್ದು, ಇದು ಹಲವಾರು ಹೊಸ ಎಲೆಕ್ಟ್ರಿಕ್ ವಾಹನಗಳ ಬಿಡುಗಡೆಯ ವಿಳಂಬಕ್ಕೆ ಕಾರಣವಾಗಿದೆ. ಚಾರ್ಜಿಂಗ್ ನಿಲ್ದಾಣಗಳ ಸೌಲಭ್ಯಗಳಿಲ್ಲದೆ ಎಲೆಕ್ಟ್ರಿಕ್ ವಾಹನಗಳ ಬಿಡುಗಡೆಯು ನಷ್ಟ ಉಂಟು ಮಾಡಬಹುದು ಎನ್ನುವ ಲೆಕ್ಕಾಚಾರದಲ್ಲಿರುವ ಆಟೋ ಕಂಪನಿಗಳು ಹೆಚ್ಚಿನ ಮಟ್ಟದ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳ ನಿರ್ಮಾಣಕ್ಕೆ ಕಾಯುತ್ತಿವೆ.

ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಬಿಡುಗಡೆ ಕುರಿತು ಸ್ಪಷ್ಟಪಡಿಸಿದ ಬಿಎಂಡಬ್ಲ್ಯು

ಲಾಸ್ಟ್ ಮೈಲ್ ಕನೆಕ್ವಿಟಿವಾಗಿ ಚಾರ್ಜಿಂಗ್ ಸೌಲಭ್ಯಗಳಿಲ್ಲದಿರುವುದರಿಂದ ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಗ್ರಾಹಕರು ಹಿಂದೇಟು ಹಾಕುತ್ತಿರುವ ಬಗ್ಗೆ ಹಲವಾರು ಅಧ್ಯಯನ ವರದಿ ಬಹಿರಂಗಗೊಳಿಸಿದ್ದು, ಎಲೆಕ್ಟ್ರಿಕ್ ವಾಹನಗಳ ಭವಿಷ್ಯವು ಚಾರ್ಜಿಂಗ್ ಸೌಲಭ್ಯಗಳ ಮೇಲೆ ನಿಂತಿದೆ.

ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಬಿಡುಗಡೆ ಕುರಿತು ಸ್ಪಷ್ಟಪಡಿಸಿದ ಬಿಎಂಡಬ್ಲ್ಯು

ಅದರಲ್ಲೂ ಎಲೆಕ್ಟ್ರಿಕ್ ಮೊಲಿಬಿಟಿಯು ಪ್ರಾಥಮಿಕ ಹಂತದಲ್ಲಿ ಆರಂಭಗೊಂಡಿರುವ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಿಡುಗಡೆಯು ಆರ್ಥಿಕವಾಗಿ ಭಾರೀ ನಷ್ಟ ಎಂದೇ ಭಾವಿಸಿರುವ ಆಟೋ ಕಂಪನಿಗಳು ಇನ್ನು ಕೆಲವು ವರ್ಷ ಕಾಯ್ದು ನಂತರ ತಮ್ಮ ಭವಿಷ್ಯದ ವಾಹನಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿವೆ.

ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಬಿಡುಗಡೆ ಕುರಿತು ಸ್ಪಷ್ಟಪಡಿಸಿದ ಬಿಎಂಡಬ್ಲ್ಯು

ಜರ್ಮನ್ ಐಷಾರಾಮಿ ಕಾರು ಉತ್ಪಾದನಾ ಕಂಪನಿಯಾದ ಬಿಎಂಡಬ್ಲ್ಯು ಕೂಡಾ ಭಾರತದಲ್ಲಿ ಎಲೆಕ್ಟ್ರಿಕ್ ಕಾರು ಬಿಡುಗಡೆ ಯಾವಾಗ? ಎನ್ನುವ ಪ್ರಶ್ನೆಗೆ ಚಾರ್ಜಿಂಗ್ ಸೌಲಭ್ಯಗಳ ಮೇಲೆ ಭವಿಷ್ಯ ವಾಹನಗಳು ಬಿಡುಗಡೆಯಾಗಲಿವೆ ಎನ್ನುವ ಸುಳಿವು ನೀಡಿದ್ದಾರೆ. ಬಿಎಂಡಬ್ಲ್ಯು ಕಂಪನಿಯು ಯುರೋಪ್‌ನಲ್ಲಿ ಈಗಾಗಲೇ ಪ್ರಮುಖ ಮೂರು ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡುತ್ತಿದ್ದು, ಭಾರತದಲ್ಲಿ 2021ಕ್ಕೆ ಹೊಸ ಇವಿ ಮಾದರಿಗಳನ್ನು ಪರಿಚಯಿಸುವ ಸಿದ್ದತೆಯಲ್ಲಿದೆ.

ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಬಿಡುಗಡೆ ಕುರಿತು ಸ್ಪಷ್ಟಪಡಿಸಿದ ಬಿಎಂಡಬ್ಲ್ಯು

ಮಾಧ್ಯಮ ಸಂಸ್ಥೆಯೊಂದರ ಸಂದರ್ಶನದಲ್ಲಿ ಮಾತನಾಡಿರುವ ಬಿಎಂಡಬ್ಲ್ಯು ಇಂಡಿಯಾ ಸಿಇಒ ವಿಕ್ರಮ್ ಪಾವಾ ಅವರು ಇವಿ ವಾಹನಗಳ ಬಿಡುಗಡೆಗೆ ಕಂಪನಿಯು ಉತ್ಸುಕವಾಗಿದ್ದು, ಚಾರ್ಜಿಂಗ್ ಸೌಲಭ್ಯಗಳು ಗರಿಷ್ಠ ಪ್ರಮಾಣದಲ್ಲಿ ಲಭ್ಯವಿದ್ದಲ್ಲಿ ಹೊಸ ಇವಿ ವಾಹನಗಳ ಬಿಡುಗಡೆಗೆ ಪೂರಕವಾದ ಅಂಶವಾಗಿರಲಿದೆ ಎಂದಿದ್ದಾರೆ.

MOST READ: ಬಿಡುಗಡೆಗೆ ಸಿದ್ದವಾದ ಹೋಂಡಾದ ಮೊದಲ ಎಲೆಕ್ಟ್ರಿಕ್ ಕಾರು

ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಬಿಡುಗಡೆ ಕುರಿತು ಸ್ಪಷ್ಟಪಡಿಸಿದ ಬಿಎಂಡಬ್ಲ್ಯು

ಇನ್ನು ಮಾಲಿನ್ಯವನ್ನು ತಡೆಯುವ ಉದ್ದೇಶದಿಂದ ಇಂಧನ ಆಧರಿತ ವಾಹನಗಳಿಗೆ ಕನಿಷ್ಠ ಕ್ರಮಕೈಗೊಳ್ಳುತ್ತಿರುವ ವಿಶ್ವದ ಪ್ರಮುಖ ರಾಷ್ಟ್ರಗಳು ಎಲೆಕ್ಟ್ರಿಕ್, ಹೈಬ್ರಿಡ್ ವಾಹನಗಳ ಬಳಕೆ ಒತ್ತು ನೀಡಲಾಗುತ್ತಿದ್ದು, ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಆಕರ್ಷಿಸಲು ಎಲ್ಲಾ ಅಗತ್ಯ ಯೋಜನೆಗಳನ್ನು ಜಾರಿ ತರಲಾಗಿದೆ.

ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಬಿಡುಗಡೆ ಕುರಿತು ಸ್ಪಷ್ಟಪಡಿಸಿದ ಬಿಎಂಡಬ್ಲ್ಯು

ಭಾರತದಲ್ಲಿ ಸದ್ಯ ಫೇಮ್ 2 ಯೋಜನೆ ಅಡಿ ಎಲೆಕ್ಟ್ರಿಕ್ ವಾಹನ ಉತ್ಪಾದನಾ ಕಂಪನಿಗಳಿಗೆ ಮಾತ್ರವಲ್ಲ ಖರೀದಿದಾರರಿಗೂ ಕೂಡಾ ಹಲವಾರು ಆಫರ್‌ಗಳನ್ನು ನೀಡಲಾಗುತ್ತಿದ್ದು, ಇವಿ ವಾಹನಗಳ ಖರೀದಿಸುವ ಗ್ರಾಹಕರಿಗೆ ಗರಿಷ್ಠ ಪ್ರಮಾಣದ ಸಬ್ಸಡಿ, ಜಿಎಸ್‌ಟಿ ವಿನಾಯ್ತಿ, ತೆರಿಗೆ ವಿನಾಯ್ತಿ ನೀಡಲಾಗುತ್ತಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಬಿಡುಗಡೆ ಕುರಿತು ಸ್ಪಷ್ಟಪಡಿಸಿದ ಬಿಎಂಡಬ್ಲ್ಯು

ಹಾಗೆಯೇ ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಪೂರಕವಾದ ಚಾರ್ಜಿಂಗ್ ನಿಲ್ದಾಣಗಳನ್ನು ಹೆಚ್ಚಿಸಲು ಬೃಹತ್ ಯೋಜನೆಗೆ ಚಾಲನೆ ನೀಡಿದ್ದು, ನಗರ ಪ್ರದೇಶಗಳ ವ್ಯಾಪ್ತಿಯ 3 ಕಿ.ಮೀ ಒಂದು ಮತ್ತು ಹೆದ್ದಾರಿಗಳಲ್ಲಿ ತಲಾ 25 ಕಿ.ಮೀ ಒಂದು ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳನ್ನು ತೆರೆಯಲಾಗುತ್ತಿದೆ. ಹಾಗೆಯೇ ಪ್ರಸ್ತುತ ಕಾರ್ಯನಿರ್ವಹಣೆಯಲ್ಲಿರುವ ಪೆಟ್ರೋಲ್ ಬಂಕ್‌ಗಳಲ್ಲೇ ಚಾರ್ಜಿಂಗ್ ಪಾಯಿಂಟ್‌ಗಳನ್ನು ಸರ್ಕಾರವೇ ಅಳವಡಿಸುವ ಯೋಜನೆಯಲ್ಲಿದೆ.

Most Read Articles

Kannada
English summary
BMW has revealed the electric car launch plan for India. Read in Kannada.
Story first published: Saturday, October 24, 2020, 23:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X