ಹೊಸ ಲಿಮಿಟೆಡ್ ಎಡಿಷನ್ ಎಸ್‍ಯುವಿಗಳನ್ನು ಅನಾವರಣಗೊಳಿಸಿದ ಬಿಎಂಡಬ್ಲ್ಯು

ಜರ್ಮನ್ ಮೂಲದ ಐಷಾರಾಮಿ ಕಾರು ತಯಾರಕ ಕಂಪನಿಯಾದ ಬಿಎಂಡಬ್ಲ್ಯು ತನ್ನ ಎಕ್ಸ್5 ಎಂ ಕಾಂಪಿಟೇಷನ್ ಮತ್ತು ಎಕ್ಸ್6 ಎಂ ಕಾಂಪಿಟೇಷನ್ ಎಸ್‍ಯುವಿಗಳ ಒಂದು ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಉಬರ್ ಎಕ್ಸ್‌ಕ್ಲೂಸಿವ್ 'ಫಸ್ಟ್ ಎಡಿಷನ್ ಅನ್ನು ಅನಾವರಣಗೊಳಿಸಿದೆ. ಈ ಎರಡು ಲಿಮಿಟೆಡ್ ಎಡಿಷನ್ ಗಳನ್ನು ಅಮೆರಿಕಾದ ಬಿಎಂಡಬ್ಲ್ಯು ಸ್ಪಾರ್ಟನ್‌ಬರ್ಗ್ ಉತ್ಪಾದನಾ ಕೇಂದ್ರದಲ್ಲಿ ತಯಾರಸಲಾಗುತ್ತದೆ.

ಹೊಸ ಲಿಮಿಟೆಡ್ ಎಡಿಷನ್ ಎಸ್‍ಯುವಿಗಳನ್ನು ಅನಾವರಣಗೊಳಿಸಿದ ಬಿಎಂಡಬ್ಲ್ಯು

ಬಿಎಂಡಬ್ಲ್ಯು ಎಕ್ಸ್5 ಎಂ ಕಾಂಪಿಟೇಷನ್ ಮತ್ತು ಎಕ್ಸ್6 ಎಂ ಕಾಂಪಿಟೇಷನ್ ಸ್ಪೆಷಲ್ ಎಡಿಷನ್ ಅಥವಾ ಲಿಮಿಟೆಡ್ ಎಡಿಷನ್ ಎಸ್‍ಯುವಿಗಳ ಎಂಜಿನ್ ಅನ್ನು ಸ್ಟ್ಯಾಂಡರ್ಡ್ ಮಾದರಿಗೆ ಹೋಲಿಸಿದರೆ ಎಂಜಿನ್ ನಲ್ಲಿ ಯಾವುದೇ ಬದಲಾವಣೆಗಳನ್ನು ಹೊಂದಿಲ್ಲ. ಈ ಎರಡು ಲಿಮಿಟೆಡ್ ಎಡಿಷನ್ ನಲ್ಲಿ ಟ್ವಿನ್ ಟರ್ಬೊ 4.4-ಲೀಟರ್ ವಿ8 ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 617 ಬಿಹೆಚ್‍ಪಿ ಪವರ್ ಮತ್ತು 750 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಹೊಸ ಲಿಮಿಟೆಡ್ ಎಡಿಷನ್ ಎಸ್‍ಯುವಿಗಳನ್ನು ಅನಾವರಣಗೊಳಿಸಿದ ಬಿಎಂಡಬ್ಲ್ಯು

ಇದರಲ್ಲಿ ಇರುವ ಎಕ್ಸ್‌ಡ್ರೈವ್ ಸಿಸ್ಟಂ ನಾಲ್ಕು ಚಕ್ರಗಳಿಗೆ ಝಡ್ಎಫ್ 8-ಸ್ಪೀಡ್ ಗೇರ್ ಬಾಕ್ಸ್ ಪವರ್ ಅನ್ನು ಕಳುಹಿಸುತ್ತದೆ. ಈ ಎರಡು ಎಸ್‍ಯುವಿಗಳು ಕೇವಲ 3.7 ಸೆಕೆಂಡುಗಳಲ್ಲಿ 0 ದಿಂದ 60 ಕಿಮೀ ಸ್ಫೀಡ್ ಅನ್ನು ಪಡೆದುಕೊಳ್ಳುತ್ತದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಹೊಸ ಲಿಮಿಟೆಡ್ ಎಡಿಷನ್ ಎಸ್‍ಯುವಿಗಳನ್ನು ಅನಾವರಣಗೊಳಿಸಿದ ಬಿಎಂಡಬ್ಲ್ಯು

ಇನ್ನು ಈ ಎರಡು ಎಸ್‍ಯುವಿಗಳು ಗಂಟೆಗೆ 285 ಕಿಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ, ಇನ್ನು ಹೊಸದಾಗಿ ಬಿಎಂಡಬ್ಲ್ಯು ಅನಾವರಣಗೊಳಿಸಿದ ಸ್ಪೆಷಲ್ ಎಡಿಷನ್ ಎಸ್‍ಯುವಿಗಳಲ್ಲಿ ಸ್ಟ್ಯಾಂಡರ್ಡ್ ಮಾದರಿಗೆ ಹೋಲಿಸಿದರೆ ಏನು ವಿಶೇಷವೆಂದರೆ, ವಿನ್ಯಾಸದಲ್ಲಿ ಕೆಲವು ಬದಲಾವಣೆಗಳಿವೆ.

ಹೊಸ ಲಿಮಿಟೆಡ್ ಎಡಿಷನ್ ಎಸ್‍ಯುವಿಗಳನ್ನು ಅನಾವರಣಗೊಳಿಸಿದ ಬಿಎಂಡಬ್ಲ್ಯು

ಬಿಎಂಡಬ್ಲ್ಯು ಎಕ್ಸ್5 ಎಂ ಕಾಂಪಿಟೇಷನ್ ಮತ್ತು ಎಕ್ಸ್6 ಎಂ ಕಾಂಪಿಟೇಷನ್ ಎಸ್‍ಯುವಿಗಳ ಸ್ಪೆಷಲ್ ಎಡಿಷನ್ ನಲ್ಲಿ ಬಿಎಂಡಬ್ಲ್ಯು ಇಂಡಿವಿಜುವಲ್ ಫ್ರೋಜನ್ ಡಾರ್ಕ್ ಸಿಲ್ವರ್ ಸ್ಪೆಷಲ್ ಬಣ್ಣದ ಫಿನಿಶಿಂಗ್ ಅನ್ನು ಹೊಂದಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಹೊಸ ಲಿಮಿಟೆಡ್ ಎಡಿಷನ್ ಎಸ್‍ಯುವಿಗಳನ್ನು ಅನಾವರಣಗೊಳಿಸಿದ ಬಿಎಂಡಬ್ಲ್ಯು

ಆದರೆ ನೀವು ಫ್ರೋಜನ್ ಮರೀನಾ ಬೇ ಬ್ಲೂ ಸ್ಪೆಷಲ್ ಕಲರ್ ಆಯ್ಕೆಯನ್ನು ಸಹ ಆರಿಸಿಕೊಳ್ಳಬಹುದು. ಈ ಹೊಸ ಎರಡು ಎಸ್‍ಯುವಿಗಳ 21 ಇಂಚಿನ ಮುಂಭಾಗ ಮತ್ತು 22 ಇಂಚಿನ ಹಿಂದಿನ ಟಯರ್ ಗಳಲ್ಲಿ ಸ್ಟಾರ್-ಸ್ಪೋಕ್ ಅಲಾಯ್ ವ್ಹೀಲ್ ವಿನ್ಯಾಸ ಮತ್ತು ಜೆಟ್ ಬ್ಲ್ಯಾಕ್ ಫಿನಿಶಿಂಗ್ ಅನ್ನು ಹೊಂದಿದೆ.

ಹೊಸ ಲಿಮಿಟೆಡ್ ಎಡಿಷನ್ ಎಸ್‍ಯುವಿಗಳನ್ನು ಅನಾವರಣಗೊಳಿಸಿದ ಬಿಎಂಡಬ್ಲ್ಯು

ಇದರೊಂದಿಗೆ ಎರಡು ಹೊಸ ಎಸ್‍ಯುವಿಗಳು ಕಾರ್ಬನ್ ಫೈಬರ್ ಪ್ಲಾಸ್ಟಿಕ್ (ಸಿಎಫ್‌ಆರ್‌ಪಿ) ಅಸೆಂಟ್ ಗಳನ್ನು ಮತ್ತು ಬ್ರ್ಯಾಂಡೆಡ್ ಕಾರ್ಬನ್ ಎಂಜಿನ್ ಕವರ್ ಅನ್ನು ಹೊಂದಿರಲಿದೆ. ಇನ್ನು ಹೊಸ ಎಸ್‍ಯುವಿಗಳ ಕ್ಯಾಬಿನ್‌ಗಳು ಸಿಲ್ವರ್‌ಸ್ಟೋನ್ ಮತ್ತು ಮಿಡ್ನೈಟ್ ಬ್ಲೂ ಡ್ಯುಯಲ್-ಟೋನ್ ಥೀಮ್‌ನೊಂದಿಗೆ ಬಿಎಂಡಬ್ಲ್ಯು ಇಂಡಿವಿಜುವಲ್ ಮೆರಿನೊ ಲೆದರ್ ಅನ್ನು ಒಳಗೊಂಡಿದೆ.

MOST READ: 2020ರ ಸಿಟಿ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹೋಂಡಾ

ಹೊಸ ಲಿಮಿಟೆಡ್ ಎಡಿಷನ್ ಎಸ್‍ಯುವಿಗಳನ್ನು ಅನಾವರಣಗೊಳಿಸಿದ ಬಿಎಂಡಬ್ಲ್ಯು

ಹೊಸ ಎರಡು ಎಸ್‍ಯುವಿಗಳಿ ಮಿಡ್ನೈಟ್ ಬ್ಲೂನಲ್ಲಿ ನೀವು ಅಲ್ಕಾಂಟರಾ-ಸುತ್ತಿದ ಹೆಡ್ಲೈನರ್ ಅನ್ನು ಸಹ ಹೊಂದಿದೆ. ಆದರೆ ಡೋರ್ ಪ್ಯಾನಲ್ ಟ್ರಿಮ್ ಮತ್ತು ಇನ್ಸ್ ಟ್ರೂಮೆಂಟ್ ಪ್ಯಾನಲ್ ಕಾಂಟ್ರಾಸ್ಟ್ ಸ್ಟಿಚಿಂಗ್ ಅನ್ನು ಹೊಂದಿರುತ್ತದೆ.

ಹೊಸ ಲಿಮಿಟೆಡ್ ಎಡಿಷನ್ ಎಸ್‍ಯುವಿಗಳನ್ನು ಅನಾವರಣಗೊಳಿಸಿದ ಬಿಎಂಡಬ್ಲ್ಯು

ಈ ಹೊಸ ಎಸ್‍ಯುವಿಗಳು 1/250" ಸಿಎಫ್‌ಆರ್‌ಪಿ ಬ್ಯಾಡ್ಜ್‌ಗಳನ್ನು ಹೊಂದಿದೆ. ಇನ್ನು ಈ ಬಿಎಂಡಬ್ಲ್ಯು ಎಕ್ಸ್5 ಎಂ ಕಾಂಪಿಟೇಷನ್ ಮತ್ತು ಎಕ್ಸ್6 ಎಂ ಕಾಂಪಿಟೇಷನ್ ಎಸ್‍ಯುವಿಗಳ ಸ್ಪೆಷಲ್ ಎಡಿಷನ್ ಅಲ್ಟ್ರಾ ಐಷಾರಾಮಿ ಮಾದರಿಗಳಾಗಿದೆ. ಇನ್ನು ಬಿಎಂಡಬ್ಲ್ಯು ಕಂಪನಿಯು ಈ ಎರಡು ಸ್ಪೆಷಲ್ ಎಡಿಷನ್ ಎಸ್‍ಯುವಿಗಳ ಬೆಲೆಯನ್ನು ಬಹಿರಂಗಪಡಿಸಿಲ್ಲ.

Most Read Articles

Kannada
English summary
BMW Reveals Limited Edition X5 M & X6 M Competition ‘First Edition’. Read In Kannada.
Story first published: Friday, October 30, 2020, 14:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X