ಹೊಸ ಬಿಎಂಡಬ್ಲ್ಯು ಎಕ್ಸ್ 5 ಕಾರು ಖರೀದಿಸಿದ ಸುನಿಲ್ ಶೆಟ್ಟಿ

ದೇಶಾದ್ಯಂತ ಕಾರುಗಳ ಮಾರಾಟವು ಹೆಚ್ಚುತ್ತಿದೆ. ಆಗಸ್ಟ್ ತಿಂಗಳಿನಲ್ಲಿ ಕಾರುಗಳ ಮಾರಾಟವು ಕೋವಿಡ್ 19 ಬರುವ ಮುನ್ನ ಇದ್ದ ಪರಿಸ್ಥಿತಿಗೆ ತಲುಪಿದೆ. ಸಾಮಾನ್ಯ ಜನರ ಜೊತೆಗೆ, ಬಾಲಿವುಡ್ ತಾರೆಯರು ಸಹ ಹೊಸ ಕಾರುಗಳನ್ನು ಖರೀದಿಸಲು ಆರಂಭಿಸಿದ್ದಾರೆ.

ಹೊಸ ಬಿಎಂಡಬ್ಲ್ಯು ಎಕ್ಸ್ 5 ಕಾರು ಖರೀದಿಸಿದ ಸುನಿಲ್ ಶೆಟ್ಟಿ

ಇತ್ತೀಚೆಗಷ್ಟೇ ಅಮಿತಾಬ್ ಬಚ್ಚನ್ ರವರು ಹೊಸ ಮರ್ಸಿಡಿಸ್ ಬೆಂಝ್ ಕಾರನ್ನು ಖರೀದಿಸಿದರು. ಅವರ ನಂತರ ಬಿಗ್ ಬಾಸ್ ಖ್ಯಾತಿಯ ರಶ್ಮಿ ದೇಸಾಯಿ ರೇಂಜ್ ರೋವರ್ ಎಸ್‌ಯುವಿಯನ್ನು ಖರೀದಿಸಿದರು. ಈಗ ನಟ ಸುನಿಲ್ ಶೆಟ್ಟಿ ಹೊಸ ಬಿಎಂಡಬ್ಲ್ಯು ಎಕ್ಸ್ 5 ಕಾರನ್ನು ಖರೀದಿಸಿದ್ದಾರೆ. ಸುನಿಲ್ ಶೆಟ್ಟಿ ಹೊಸ ಬಿಎಂಡಬ್ಲ್ಯು ಎಕ್ಸ್ 5 ಕಾರನ್ನು ಮುಂಬೈನ ನವನೀತ್ ಮೋಟಾರ್ಸ್ ನಿಂದ ಖರೀದಿಸಿದ್ದಾರೆ. ಆದರೆ ಯಾವ ಮಾದರಿಯನ್ನು ಖರೀದಿಸಿದ್ದಾರೆ ಎಂಬುದನ್ನು ಬಹಿರಂಗಪಡಿಸಿಲ್ಲ.

ಹೊಸ ಬಿಎಂಡಬ್ಲ್ಯು ಎಕ್ಸ್ 5 ಕಾರು ಖರೀದಿಸಿದ ಸುನಿಲ್ ಶೆಟ್ಟಿ

ಹೊಸ ಬಿಎಂಡಬ್ಲ್ಯು ಎಕ್ಸ್ 5 ಕಾರನ್ನು ಈ ವರ್ಷದ ಮೇ ತಿಂಗಳಿನಲ್ಲಿ ಬಿಡುಗಡೆಗೊಳಿಸಲಾಗಿತ್ತು. ಈ ಕಾರಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ.72.90 ಲಕ್ಷಗಳಾಗಿದೆ. ಹೊಸ ಬಿಎಂಡಬ್ಲ್ಯು ಎಕ್ಸ್ 5 ಕಾರನ್ನು ಡೀಸೆಲ್ ಹಾಗೂ ಪೆಟ್ರೋಲ್ ಎಂಜಿನ್ ಗಳಲ್ಲಿ ಮಾರಾಟ ಮಾಡಲಾಗುತ್ತದೆ. ಡೀಸೆಲ್ ಎಂಜಿನ್ ಕಾರನ್ನು ಎಕ್ಸ್‌ಡ್ರೈವ್ 30 ಡಿ ಸ್ಪೋರ್ಟ್ಸ್ ಹಾಗೂ ಎಕ್ಸ್‌ಡ್ರೈವ್ 30 ಡಿ ಎಕ್ಸ್‌ಲೈನ್ ಮಾದರಿಗಳಲ್ಲಿ ಹಾಗೂ ಪೆಟ್ರೋಲ್ ಎಂಜಿನ್ ಕಾರನ್ನು ಎಕ್ಸ್‌ಡ್ರೈವ್ 40 ಐ ಎಂ ಸ್ಪೋರ್ಟ್ ಮಾದರಿಯಲ್ಲಿ ಮಾರಾಟ ಮಾಡಲಾಗುತ್ತದೆ.

MOSTREAD: ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

ಹೊಸ ಬಿಎಂಡಬ್ಲ್ಯು ಎಕ್ಸ್ 5 ಕಾರು ಖರೀದಿಸಿದ ಸುನಿಲ್ ಶೆಟ್ಟಿ

ಹೊಸ ಬಿಎಂಡಬ್ಲ್ಯು ಎಕ್ಸ್ 5 ಕಾರು ಹಳೆಯ ಮಾದರಿಗಿಂತ ಸ್ವಲ್ಪ ಎತ್ತರವಾಗಿ ಹಾಗೂ ದೊಡ್ಡದಾಗಿದೆ. ಹೊಸ ಕಾರಿನಲ್ಲಿ ಹಲವಾರು ಹೊಸ ಫೀಚರ್ ಹಾಗೂ ಎಕ್ವಿಪ್ ಮೆಂಟ್ ಗಳನ್ನು ಅಳವಡಿಸಲಾಗಿದೆ. ಇದು ಸಹಜವಾಗಿ ಸುನಿಲ್ ಶೆಟ್ಟಿಯವರನ್ನು ಆಕರ್ಷಿಸಿ ಈ ಕಾರನ್ನು ಖರೀದಿಸಿದ್ದಾರೆ.

ಹೊಸ ಬಿಎಂಡಬ್ಲ್ಯು ಎಕ್ಸ್ 5 ಕಾರು ಖರೀದಿಸಿದ ಸುನಿಲ್ ಶೆಟ್ಟಿ

ಸುನಿಲ್ ಶೆಟ್ಟಿರವರು ಹಲವಾರು ಕಾರು ಹಾಗೂ ಬೈಕುಗಳನ್ನು ಹೊಂದಿದ್ದಾರೆ. ಸುನಿಲ್ ಶೆಟ್ಟಿ ರೂ.1.5 ಕೋಟಿ ಬೆಲೆಯ ಹಮ್ಮರ್ ಹೆಚ್ 3, ಲ್ಯಾಂಡ್ ರೋವರ್ ರೇಂಜ್ ರೋವರ್, ಹಾಗೂ ಟೊಯೊಟಾ ಲ್ಯಾಂಡ್ ಕ್ರೂಸರ್ ಪ್ಯಾರಾಡೊಗಳನ್ನು ಹೊಂದಿದ್ದಾರೆ. ಹಮ್ಮರ್ ಹೆಚ್ 3 ಎಸ್‌ಯುವಿಯಲ್ಲಿ 3700 ಸಿಸಿಯ 5 ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 239 ಬಿಹೆಚ್‌ಪಿ ಪವರ್ ಹಾಗೂ 326 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಸ್‌ಯುವಿ 5-ಸ್ಪೀಡಿನ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಹೊಂದಿದೆ.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಹೊಸ ಬಿಎಂಡಬ್ಲ್ಯು ಎಕ್ಸ್ 5 ಕಾರು ಖರೀದಿಸಿದ ಸುನಿಲ್ ಶೆಟ್ಟಿ

ಇನ್ನು ಲ್ಯಾಂಡ್ ರೋವರ್ ರೇಂಜ್ ರೋವರ್ ಎಸ್‌ಯುವಿಯು 4999 ಸಿಸಿಯ 8 ಸಿಲಿಂಡರ್ ಎಂಜಿನ್ ಹೊಂದಿದೆ. ಈ ಎಂಜಿನ್ 567.25 ಬಿಹೆಚ್‌ಪಿ ಪವರ್ ಹಾಗೂ 700 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಸ್‌ಯುವಿಯಲ್ಲಿ 8-ಸ್ಪೀಡಿನ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಅಳವಡಿಸಲಾಗಿದೆ.

ಹೊಸ ಬಿಎಂಡಬ್ಲ್ಯು ಎಕ್ಸ್ 5 ಕಾರು ಖರೀದಿಸಿದ ಸುನಿಲ್ ಶೆಟ್ಟಿ

ಈ ಎಸ್‌ಯುವಿಯು ಪ್ರತಿ ಲೀಟರ್‌ಗೆ 7.8 ಕಿ.ಮೀ ಮೈಲೇಜ್ ನೀಡುತ್ತದೆ. ಲ್ಯಾಂಡ್ ರೋವರ್ ರೇಂಜ್ ರೋವರ್ ಎಸ್‌ಯುವಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.1 ಕೋಟಿಗಳಾಗಿದೆ. ಟೊಯೊಟಾ ಲ್ಯಾಂಡ್ ಕ್ರೂಸರ್ ಪ್ಯಾರಾಡೊದ ಬೆಲೆ ಎಕ್ಸ್ ಶೋರೂಂ ದರದಂತೆ ರೂ.96.3 ಲಕ್ಷಗಳಾಗಿದೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಹೊಸ ಬಿಎಂಡಬ್ಲ್ಯು ಎಕ್ಸ್ 5 ಕಾರು ಖರೀದಿಸಿದ ಸುನಿಲ್ ಶೆಟ್ಟಿ

ಈ ಎಸ್‌ಯುವಿಯಲ್ಲಿ 2982 ಸಿಸಿಯ 4 ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 170 ಬಿಹೆಚ್‌ಪಿ ಪವರ್ ಹಾಗೂ 410 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಸ್‌ಯುವಿಯ ಎಂಜಿನ್‌ನಲ್ಲಿ 5-ಸ್ಪೀಡಿನ ಗೇರ್‌ಬಾಕ್ಸ್ ಅಳವಡಿಸಲಾಗಿದೆ.

Most Read Articles

Kannada
English summary
Bollywood actor Suniel Shetty buys new BMW X5 SUV. Read in Kannada.
Story first published: Thursday, September 3, 2020, 12:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X