ಕೋವಿಡ್ 19: ಪಿಎಂ ಪರಿಹಾರ ನಿಧಿಗೆ ರೂ.50 ಕೋಟಿ ನೆರವು ನೀಡಿದ ಬಾಷ್ ಇಂಡಿಯಾ

ಮಹಾಮಾರಿ ಕರೋನಾ ವೈರಸ್ ವಿರುದ್ಧದ ಹೋರಾಟಕ್ಕಾಗಿ ಈಗಾಗಲೇ ಹಲವು ಆಟೋ ಉತ್ಪಾದನಾ ಕಂಪನಿಗಳು ಭಾರೀ ಪ್ರಮಾಣದ ಹಣಕಾಸಿನ ನೆರವು ಘೋಷಣೆ ಮಾಡಿರುವುದಲ್ಲದೇ ಅಗತ್ಯ ವೈದ್ಯಕೀಯ ಉಪಕರಣಗಳನ್ನು ಅಭಿವೃದ್ದಿಪಡಿಸುತ್ತಿದ್ದು, ಇದೀಗ ಆಟೋ ಬಿಡಿಭಾಗಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಬಾಷ್ ಕಂಪನಿ ಕೂಡಾ ಭಾರೀ ಪ್ರಮಾಣದ ನೆರವು ಘೋಷಿಸಿದೆ.

ಕೋವಿಡ್ 19: ಪಿಎಂ ಪರಿಹಾರ ನಿಧಿಗೆ ರೂ.50 ಕೋಟಿ ನೆರವು ನೀಡಿದ ಬಾಷ್ ಇಂಡಿಯಾ

ವೈರಸ್ ಅಟ್ಟಹಾಸ ಹೆಚ್ಚಾಗುತ್ತಿದ್ದಂತೆ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಲಾಕ್ ಡೌನ್ ವಿಧಿಸಲಾಗಿದ್ದು, ಇದರಿಂದ ವಾಣಿಜ್ಯ ಚಟುವಟಿಕೆಗಳನ್ನು ಸ್ಥಗಿತಗೊಂಡಿವೆ. ಈ ಹಿನ್ನಲೆಯಲ್ಲಿ ಭಾರತ ಸೇರಿದಂತೆ ವಿಶ್ವದ ಪ್ರಮುಖ ರಾಷ್ಟ್ರಗಳ ಆರ್ಥಿಕ ಪರಿಸ್ಥಿತಿ ಶೋಚನೀಯ ಸ್ಥಿತಿ ತಲುಪಿದೆ. ಕರೋನಾ ವೈರಸ್ ವಿರುದ್ಧ ಹೋರಾಟಕ್ಕಾಗಿ ಆರಂಭಿಸಲಾಗಿರುವ ದೇಣಿಗೆ ಸಂಗ್ರಹ ಅಭಿಯಾನಕ್ಕೆ ಈಗಾಗಲೇ ಭಾರೀ ಪ್ರಮಾಣದ ನೆರವು ಹರಿದು ಬಂದಿದ್ದು, ಉದ್ಯಮಿಗಳು, ಚಿತ್ರ ನಟರು, ಸರ್ಕಾರಿ ಅಧಿಕಾರಿಗಳು ಮತ್ತು ಜನಸಾಮಾನ್ಯರು ಸಹ ತಮ್ಮ ಕೈಲಾದಷ್ಟು ದೇಣಿಗೆ ನೀಡಿ ಕರೋನಾ ವಿರುದ್ಧ ಸರ್ಕಾರದ ಹೋರಾಟಕ್ಕೆ ಶಕ್ತಿ ತುಂಬಿದ್ದಾರೆ.

ಕೋವಿಡ್ 19: ಪಿಎಂ ಪರಿಹಾರ ನಿಧಿಗೆ ರೂ.50 ಕೋಟಿ ನೆರವು ನೀಡಿದ ಬಾಷ್ ಇಂಡಿಯಾ

ಅದರಲ್ಲೂ ಆಟೋ ಉತ್ಪಾದನಾ ಕಂಪನಿಗಳು ಕರೋನಾ ವಿರುದ್ದ ಹೋರಾಟಕ್ಕಾಗಿ ಸಂಕಷ್ಟದ ಸಮಯದಲ್ಲೂ ಸರ್ಕಾರದ ಜೊತೆ ನಿಂತಿರುವುದಲ್ಲದೆ ವೈದ್ಯಕೀಯ ಉಪಕರಣಗಳ ತಯಾರಿಕೆಗೂ ಚಾಲನೆ ನೀಡಿವೆ.

MOST READ: ಅತಿ ಕಡಿಮೆ ಬೆಲೆಯಲ್ಲಿ 'ಏರ್ 100' ವೆಂಟಿಲೆಟರ್ ಪರಿಚಯಿಸಿದ ಮಹೀಂದ್ರಾ

ಕೋವಿಡ್ 19: ಪಿಎಂ ಪರಿಹಾರ ನಿಧಿಗೆ ರೂ.50 ಕೋಟಿ ನೆರವು ನೀಡಿದ ಬಾಷ್ ಇಂಡಿಯಾ

ಆರೋಗ್ಯ ಕೇಂದ್ರಗಳಿಗೆ ಅಗತ್ಯವಿರುವ ಟೆಸ್ಟಿಂಗ್ ಕಿಟ್, ವೆಂಟಿಲೆಟರ್ ಮತ್ತು ಐಸಿಯು ಯುನಿಟ್‌ಗೆ ಅಗತ್ಯವಿರುವ ತಾಂತ್ರಿಕ ಸೌಲಭ್ಯಗಳನ್ನು ನೀಡುವುದಾಗಿ ಘೋಷಣೆ ಮಾಡಿದ್ದು, ಆರೋಗ್ಯ ಇಲಾಖೆಯ ಬೇಡಿಕೆಗಳನ್ನು ಪೂರೈಸುವ ಮೂಲಕ ವೈರಸ್ ವಿರುದ್ಧ ಹೋರಾಟಕ್ಕೆ ಸಹಕಾರ ನೀಡುತ್ತಿವೆ.

ಕೋವಿಡ್ 19: ಪಿಎಂ ಪರಿಹಾರ ನಿಧಿಗೆ ರೂ.50 ಕೋಟಿ ನೆರವು ನೀಡಿದ ಬಾಷ್ ಇಂಡಿಯಾ

ಇದರೊಂದಿಗೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಒದ್ದಾಡುತ್ತಿರುವ ಬಡವರ ಹಸಿವನ್ನು ಸಹ ನೀಗಿಸುತ್ತಿರುವ ಆಟೋ ಕಂಪನಿಗಳು ಅಗತ್ಯ ಜನರಿಗೆ ದಿನನಿತ್ಯ ಸಾವಿರಾರು ಆಹಾರ ಪೊಟ್ಟಣಗಳನ್ನು ಪೂರೈಕೆ ಮಾಡುತ್ತಿದ್ದು, ಬಾಷ್ ಇಂಡಿಯಾ ಕೂಡಾ ಈ ನಿಟ್ಟಿನಲ್ಲಿ ಜನಮೆಚ್ಚುಗೆಯ ಕಾರ್ಯಗಳನ್ನು ಹಮ್ಮಿಕೊಂಡಿದೆ.

MOST READ: ಕರೋನಾ ವಿರುದ್ಧದ ಹೋರಾಟಕ್ಕಾಗಿ 60 ಬೈಕ್ ಆ್ಯಂಬುಲೆನ್ಸ್ ದೇಣಿಗೆ ನೀಡಿದ ಹೀರೋ

ಕೋವಿಡ್ 19: ಪಿಎಂ ಪರಿಹಾರ ನಿಧಿಗೆ ರೂ.50 ಕೋಟಿ ನೆರವು ನೀಡಿದ ಬಾಷ್ ಇಂಡಿಯಾ

ಪ್ರಧಾನಮಂತ್ರಿಗಳ ಕರೆಗೆ ಸ್ಪಂದಿಸಿ ರೂ.50 ಕೋಟಿ ನೆರವು ಘೋಷಣೆ ಮಾಡಿರುವ ಬಾಷ್ ಕಂಪನಿಯು ರೂ.5 ಕೋಟಿ ಹಣವನ್ನು ಪ್ರಧಾನಮಂತ್ರಿಗಳ ಪರಿಹಾರ ನಿಧಿಗೆ ವರ್ಗಾಯಿಸಿದ್ದು, ಇನ್ನುಳಿದ ರೂ.45 ಕೋಟಿ ಹಣವನ್ನು ಸಮುದಾಯದ ಕಲ್ಯಾಣ ಕಾರ್ಯಗಳಿಗೆ ಬಳಕೆ ಮಾಡುತ್ತಿರುವುದಾಗಿ ಹೇಳಿಕೊಂಡಿದೆ.

ಕೋವಿಡ್ 19: ಪಿಎಂ ಪರಿಹಾರ ನಿಧಿಗೆ ರೂ.50 ಕೋಟಿ ನೆರವು ನೀಡಿದ ಬಾಷ್ ಇಂಡಿಯಾ

ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ಉಪಕ್ರಮದಡಿ ಗರಿಷ್ಠ ನೆರವು ಘೋಷಣೆ ಮಾಡಿರುವ ಬಾಷ್ ಕಂಪನಿಯು, ವೈರಸ್ ತೊಡೆದುಹಾಕಲು ಶ್ರಮಿಸುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಎಲ್ಲಾ ರೀತಿಯಲ್ಲೂ ಸಹಕಾರ ನೀಡುವುಗಾಗಿ ಭರವಸೆ ನೀಡಿದೆ.

MOST READ: ಲಾಕ್ ಡೌನ್ ಎಫೆಕ್ಟ್- ಮಾರ್ಗ ಮಧ್ಯದಲ್ಲೇ ಉಳಿದ ಸಾವಿರಾರು ಕೋಟಿ ಮೌಲ್ಯದ ಹೊಸ ವಾಹನಗಳು

ಕೋವಿಡ್ 19: ಪಿಎಂ ಪರಿಹಾರ ನಿಧಿಗೆ ರೂ.50 ಕೋಟಿ ನೆರವು ನೀಡಿದ ಬಾಷ್ ಇಂಡಿಯಾ

ಇನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕರೆಗೆ ಓಗೊಟ್ಟು ವಿವಿಧ ಮಾದರಿಯ ಸಾಮಾಜಿಕ ಕಾರ್ಯಗಳನ್ನು ಕೈಗೊಂಡಿರುವ ಆಟೋ ಕಂಪನಿಗಳು ವೈದ್ಯಕೀಯ ಉಪಕರಣಗಳ ಉತ್ಪಾದನೆಗೂ ಸಾಕಷ್ಟು ಸಹಕಾರಿಯಾಗಿವೆ.

ಕೋವಿಡ್ 19: ಪಿಎಂ ಪರಿಹಾರ ನಿಧಿಗೆ ರೂ.50 ಕೋಟಿ ನೆರವು ನೀಡಿದ ಬಾಷ್ ಇಂಡಿಯಾ

ಸದ್ಯ ವೈರಸ್ ತಡೆಗಾಗಿ ವಿಶ್ವದ ಎಲ್ಲಾ ರಾಷ್ಟ್ರಗಳು ಒಗ್ಗಟ್ಟಿನಿಂದ ಹೋರಾಟ ನಡೆಸುತ್ತಿದ್ದು, ವೈದ್ಯಕೀಯ ಉಪಕರಣಗಳ ಕೊರತೆಯು ಸೋಂಕಿತರ ಸಾವಿನ ಪ್ರಮಾಣದಲ್ಲಿ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ.

MOST READ: ಕರೋನಾ ವೈರಸ್ ವಿರುದ್ದದ ಹೋರಾಟಕ್ಕೆ ಭಾರೀ ಪ್ರಮಾಣದ ದೇಣಿಗೆ ನೀಡಿದ ಟಿವಿಎಸ್ ಮೋಟಾರ್

ಕೋವಿಡ್ 19: ಪಿಎಂ ಪರಿಹಾರ ನಿಧಿಗೆ ರೂ.50 ಕೋಟಿ ನೆರವು ನೀಡಿದ ಬಾಷ್ ಇಂಡಿಯಾ

ಈ ಹಿನ್ನಲೆಯಲ್ಲಿ ಸದ್ಯಕ್ಕೆ ವಾಹನಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಿರುವ ಆಟೋ ಕಂಪನಿಗಳು ವಾಹನ ಉತ್ಪಾದನಾ ಘಟಕಗಳಲ್ಲೇ ಅಗತ್ಯ ವೈದಕೀಯ ಉಪಕರಣಗಳ ಉತ್ಪಾದನೆಗೆ ಚಾಲನೆ ನೀಡಿದ್ದು, ವೆಂಟಿಲೆಟರ್, ಮಾಸ್ಕ್‌, ಫೇಸ್ ಶೀಲ್ಡ್, ಟೆಸ್ಟಿಂಗ್ ಕಿಟ್ ಉತ್ಪಾದನೆಯಲ್ಲಿ ಸಾಕಷ್ಟು ಹೆಚ್ಚಳವಾಗಿದೆ.

Most Read Articles

Kannada
English summary
Bosch India Commits Rs 50 Crore Towards PM CARES FUND And Community Welfare Initiatives. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X