Just In
Don't Miss!
- News
ಪದ್ಮವಿಭೂಷಣ ಉಸ್ತಾದ್ ಗುಲಾಂ ಮುಸ್ತಾಫಾ ಖಾನ್ ವಿಧಿವಶ
- Movies
ಫೋಟೋಗಳು: ರಮೇಶ್ ಅರವಿಂದ್ ಮಗಳ ಮದುವೆ ಆರತಕ್ಷತೆಯಲ್ಲಿ ಸಿನಿ ತಾರೆಯರು; ಯಶ್, ಸುದೀಪ್ ಸಖತ್ ಡ್ಯಾನ್ಸ್
- Finance
ಸಿಲಿಂಡರ್ ಬುಕ್ ಮಾಡಿದ ಎರಡು ಗಂಟೆಯೊಳಗೆ ಮನೆ ಬಾಗಿಲಿಗೆ ಡೆಲಿವರಿ
- Sports
ಆಸಿಸ್ ಬೌಲರ್ಗಳಿಗೆ ಪಾಂಟಿಂಗ್ ಚಾಟಿ: ಶಾರ್ದೂಲ್- ಸುಂದರ್ ಆಟಕ್ಕೆ ಮೆಚ್ಚುಗೆ
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹೊಸ ಪೊಲೊ ಕಾರು ವಿತರಣೆ ಮಾಡಿದ ಎರಡೇ ನಿಮಿಷದಲ್ಲಿ ನಡೆಯಿತು ಅಪಘಾತ..!
ಕರೋನಾ ವೈರಸ್‌ನಿಂದಾಗಿ ಸಂಪೂರ್ಣವಾಗಿ ಬಂದ್ ಆಗಿದ್ದ ಆಟೋ ಉತ್ಪಾದನಾ ಮಾರಾಟ ಪ್ರಕ್ರಿಯೆಯು ಇದೀಗ ಲಾಕ್‌ಡೌನ್ ವಿನಾಯ್ತಿ ನಂತರ ಪುನಾರಂಭಗೊಂಡಿದ್ದು, ಹೊಸ ಕಾರು ಖರೀದಿ ಪ್ರಕ್ರಿಯೆಯು ಹಂತ ಹಂತವಾಗಿ ಸುಧಾರಣೆ ಕಾಣುತ್ತಿದೆ.

ಲಾಕ್‌ಡೌನ್ ವಿನಾಯ್ತಿ ನಂತರ ಕಾರು ಖರೀದಿಯ ಯೋಜನೆಯಲ್ಲಿದ್ದ ಗ್ರಾಹಕರನೊಬ್ಬ ತನ್ನ ಇಷ್ಟದ ಫೋಕ್ಸ್‌ವ್ಯಾಗನ್ ಪೊಲೊ ಹ್ಯಾಚ್‌ಬ್ಯಾಕ್ ಕಾರನ್ನು ಖರೀದಿ ಮಾಡಿದ್ದಾನೆ. ಆದರೆ ಹೊಸ ಕಾರು ಖರೀದಿ ಮಾಡಿದ ಖುಷಿಯಲ್ಲಿದ್ದ ಗ್ರಾಹಕನಿಗೆ ಕೇವಲ ಎರಡನೇ ನಿಮಿಷದಲ್ಲಿ ಶಾಕಿಂಗ್ ಕಾದಿತ್ತು. ಕಾರು ವಿತರಣೆ ನಂತರ ಡ್ರೈವ್‌ಗೆ ಹೊರಟ ಗ್ರಾಹಕರನು ಡಿಲರ್ಸ್ ಗೇಟ್ ದಾಟುವ ಮುನ್ನವೇ ಅಪಘಾತಕ್ಕಿಡು ಮಾಡಿದ್ದಾನೆ.

ಯಾವುದೇ ಒಂದು ಹೊಸ ವಾಹನಗಳನ್ನು ಖರೀದಿಸುವ ಮುನ್ನ ಆ ವಾಹನದ ಚಾಲನೆ ಕುರಿತು ಒಂದಿಷ್ಟು ಮಾಹಿತಿ ಪಡೆದುಕೊಂಡಿದ್ದರೆ ಉತ್ತಮವಾಗಿರುತ್ತದೆ. ಇಲ್ಲವಾದಲ್ಲಿ ಹೊಸ ವಾಹನ ಖರೀದಿ ಮಾಡಿದ ಹುಮ್ಮಸ್ಸಿನಲ್ಲಿ ವಾಹನ ಚಾಲನೆ ಮಾಡಲು ಹೋದಲ್ಲಿ ಇಂತಹ ಅನಾಹುತಗಳು ತಪ್ಪಿದ್ದಲ್ಲ ಎನ್ನುವುದಲ್ಲಿ ಎರಡು ಮಾತಿಲ್ಲ.

ಹೌದು, ಫೋಕ್ಸ್‌ವ್ಯಾಗನ್ ಪೊಲೊ ಖರೀದಿ ಮಾಡಿದ ಗ್ರಾಹಕನೊಬ್ಬ ಅಪಕ್ವ ಚಾಲನಾ ಶೈಲಿಯಿಂದಾಗಿ ಹೊಸ ಕಾರು ಡೀಲರ್ಸ್ ಯಾರ್ಡ್ ಗೇಟ್ ದಾಟುವ ಮುನ್ನವೇ ಮೊಗಚಿ ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಕಾರು ಮಾರಾಟ ಮಳಿಗೆಯ ಹೊರ ಭಾಗದಲ್ಲಿ ಕಾರು ವಿತರಣೆ ಮಾಡಿದ ನಂತರ ಡ್ರೈವ್‌ಗೆ ಮುಂದಾದ ಗ್ರಾಹಕರನು ಹೊಸ ಕಾರು ಖರೀದಿಸಿದ ಹುಮ್ಮಸ್ಸಿನಲ್ಲಿ ಬ್ರೇಕ್ ಬದಲಾಗಿ ಆಕ್ಸೆಲೇಟರ್ ಒತ್ತಿದ ಪರಿಣಾಮ ಕಾರು ಒಂದೇ ಬಾರಿಗೆ ವೇಗ ಪಡೆದುಕೊಂಡಿದೆ.

ಈ ವೇಳೆ ಮಾರಾಟ ಮಳಿಗೆಯ ಮುಂಭಾಗದಲ್ಲಿ ಇಕ್ಕಟ್ಟಾದ ಸ್ಥಳಾವಕಾಶದಲ್ಲಿ ನುಗ್ಗಿಬಂದ ಫೋಕ್ಸ್‌ವ್ಯಾಗನ್ ಪೊಲೊ ಕಾರು ಶೋರೂಂ ಮುಂಭಾಗದಲ್ಲಿ ನಿಂತಿದ್ದ ಕಾರುಗಳಿಗೆ ಡಿಕ್ಕಿ ಹೊಡೆದಿರುವುದಲ್ಲದೇ ಕಂಪೌಂಡ್‌ಗೂ ವೇಗವಾಗಿ ಡಿಕ್ಕಿ ಹೊಡೆದಿದೆ.

ಕಂಪೌಂಡ್‌ಗೆ ರಭವಾಗಿ ಗುದ್ದಿದ್ದ ಪರಿಣಾಮ ಹೊಸ ಕಾರು ಕ್ಷಣಮಾತ್ರದಲ್ಲೇ ಪಲ್ಟಿ ಹೊಡೆದಿದ್ದು, ತಕ್ಷಣವೇ ರಕ್ಷಣೆಗೆ ಧಾವಿಸಿದ ಶೋರೂಂ ಸಿಬ್ಬಂದಿಯು ಕಾರು ಚಾಲನೆ ಮಾಡುತ್ತಿದ್ದ ವ್ಯಕ್ತಿಯನ್ನು ಹೊರಕ್ಕೆ ಎಳೆದುಕೊಂಡಿದ್ದಾರೆ.
MOST READ: ಲಾಕ್‌ಡೌನ್ ಸಂಕಷ್ಟ: ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಉದ್ಯಮ ಆರಂಭಿಸಿದ ಫೋಕ್ಸ್‌ವ್ಯಾಗನ್

ಆದರೆ ಕಾರು ಚಾಲನೆ ಮಾಡುತ್ತಿದ್ದ ಗ್ರಾಹಕರಿನಿಗೆ ಸಣ್ಣಪುಟ್ಟ ಗಾಯಗಳನ್ನು ಹೊರತುಪಡಿಸಿ ಯಾವುದೇ ಗಂಭೀರ ಗಾಯವಾಗಿಲ್ಲ ಎನ್ನಲಾಗಿದ್ದು, ಅದೃಷ್ಟವಾಶಾತ್ ಕಾರು ಖರೀದಿಯ ಸಮಯದಲ್ಲಿ ಗ್ರಾಹಕನ ಜೊತೆಗೆ ಬಂದಿದ್ದ ಅವನ ಕುಟಂಬದ ಸದಸ್ಯರು ಕಾರಿನಲ್ಲಿ ಕೂರದೆ ಹೊರಗೆ ನಿಂತಿರುವುದು ದೊಡ್ಡ ಅನಾಹುತವನ್ನೇ ತಪ್ಪಿಸಿದೆ ಎನ್ನಬಹುದು.
ಅಂದಹಾಗೆ ಇದು ತಮಿಳುನಾಡಿನಲ್ಲಿ ನಡೆದ ಘಟನೆ ಎನ್ನುವುದು ವಿಡಿಯೋದಲ್ಲಿನ ಕಾರಿನ ನೋಂದಣಿ ಸಂಖ್ಯೆಯ ಆಧಾರ ಮೇಲೆ ಗುರುತಿಸಬಹುದಾಗಿದ್ದು, ಗ್ರಾಹಕನು ಖರೀದಿ ಮಾಡಿದ ಕಾರು ಪೊಲೊ ಟಾಪ್ ಎಂಡ್ ಟಿಎಸ್ಐ ಎಂಜಿನ್ ಆವೃತ್ತಿಯಾಗಿದೆ.
MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಪೋಕ್ಸ್‌ವ್ಯಾಗನ್ ಪೊಲೊ ಕಾರಿನಲ್ಲಿ ಪ್ರಮುಖ ಎರಡು ಮಾದರಿಯ ಪೆಟ್ರೋಲ್ ಎಂಜಿನ್ ಮಾದರಿಗಳನ್ನು ಖರೀದಿಗೆ ಲಭ್ಯವಿದ್ದು, ಆರಂಭಿಕ ಆವೃತ್ತಿಯು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 1.0-ಲೀಟರ್ ಎಂಪಿಐ ಪೆಟ್ರೋಲ್ ಎಂಜಿನ್ ಮೂಲಕ 76-ಬಿಎಚ್‌ಪಿ ಮತ್ತು 95-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಟಾಪ್ ಎಂಡ್ 1.0-ಲೀಟರ್ ಟಿಎಸ್ಐ ಪೆಟ್ರೋಲ್ ಪೊಲೊ ಮಾದರಿಯು 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಟಾರ್ಕ್ ಕನ್ವರ್ಟರ್ 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 110-ಬಿಎಚ್‌ಪಿ ಮತ್ತು 175-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.
MOST READ: ಲಾಕ್‌ಡೌನ್ ಎಫೆಕ್ಟ್: ಆಟೋ ರಿಕ್ಷಾವನ್ನೆ ದಿನಸಿ ಅಂಗಡಿಯಾಗಿ ಬದಲಿಸಿದ ಆಟೋ ಡ್ರೈವರ್

ಪೊಲೊ ಕಾರು ಸದ್ಯ ಏಪ್ರಿಲ್ 1ರಿಂದ ಕಡ್ಡಾಯವಾಗಿ ಜಾರಿಗೆ ಬಂದಿರುವ ಬಿಎಸ್-6 ಎಂಜಿನ್‌ನೊಂದಿಗೆ ಖರೀದಿಗೆ ಲಭ್ಯವಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 5.82 ಲಕ್ಷ ಮತ್ತು ಟಾಪ್ ಎಂಡ್ ಮಾದರಿಗೆ ರೂ.9.59 ಲಕ್ಷ ಬೆಲೆ ಹೊಂದಿದೆ.