ಸ್ಥಗಿತವಾಯ್ತು ಬಿಎಸ್-4 ಮಾರುತಿ ಸುಜುಕಿ ಸಿಯಾಜ್ ಡೀಸೆಲ್ ಆವೃತ್ತಿ

ಜನಪ್ರಿಯ ಕಾರು ಉತ್ಪಾದನಾ ಸಂಸ್ಥೆಯಾದ ಮಾರುತಿ ಸುಜುಕಿ ಬಿಎಸ್-6 ಮಾಲಿನ್ಯ ನಿಯಮ ಜಾರಿಯಾಗುವ ಮೊದಲು ಸಿಯಾಜ್ ಡೀಸೆಲ್ ಆವೃತ್ತಿಯನ್ನು ಸ್ಥಗಿತಗೊಳಿಸಿದೆ. ಏಪ್ರಿಲ್ 1ರಿಂದ ಬಿಎಸ್-6 ಮಾಲಿನ್ಯ ನಿಯಮ ಜಾರಿಯಾಗಲಿದೆ.

ಸ್ಥಗಿತವಾಯ್ತು ಬಿಎಸ್-4 ಮಾರುತಿ ಸುಜುಕಿ ಸಿಯಾಜ್ ಡೀಸೆಲ್ ಆವೃತ್ತಿ

ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿಯು ಬಿಎಸ್-4 ಸಿಯಾಜ್ ಡೀಸೆಲ್ ಆವೃತ್ತಿಯನ್ನು ಸ್ಥಗಿತಗೊಳಿಸಿದೆ. ಬಿಎಸ್-6 ಮಾಲಿನ್ಯ ನಿಯಮ ಜಾರಿಯಾಗುವ ತನಕ ಸಮಯವಕಾಶವಿತ್ತು, ಆದರೆ ಅದಕ್ಕೂ ಮೊದಲೇ ಡೀಸೆಲ್ ಆವೃತ್ತಿಯನ್ನು ಸ್ಥಗಿತಗೊಳಿಸಲಿದೆ. ಆದರೆ ಬಿಎಸ್-6 ಆವೃತ್ತಿಯನ್ನು 1.5 ಲೀಟರ್ ಡಿಡಿಐಎಸ್ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಬಿ‍ಡುಗಡೆಗೊಳಿಸಬಹುದು.

ಸ್ಥಗಿತವಾಯ್ತು ಬಿಎಸ್-4 ಮಾರುತಿ ಸುಜುಕಿ ಸಿಯಾಜ್ ಡೀಸೆಲ್ ಆವೃತ್ತಿ

ಬಿಎಸ್-4 ಸಿಯಾಜ್ ಕಾರಿನಲ್ಲಿರುವ 1.5 ಲೀಟರ್ 4 ಸಿಲಿಂಡರ್ ಡಿಡಿಐಎಸ್ ಡೀಸೆಲ್ ಎಂಜಿನ್ 94 ಬಿಹೆಚ್‍ಪಿ ಪವರ್ ಮತ್ತು 225 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍‍ನೊಂದಿಗೆ 6 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಸ್ಥಗಿತವಾಯ್ತು ಬಿಎಸ್-4 ಮಾರುತಿ ಸುಜುಕಿ ಸಿಯಾಜ್ ಡೀಸೆಲ್ ಆವೃತ್ತಿ

ಸಿಯಾಜ್ ಕಾರಿನಲ್ಲಿ ಮರು ವಿನ್ಯಾಸಗೊಳಿಸಲಾದ ಗ್ರಿಲ್, ಹೊಸ ವಿನ್ಯಾಸದ ಎಲ್ಇಡಿ ಡಿಆರ್‍ಎಲ್ ಹೆಡ್‍‍ಲ್ಯಾಂಪ್, ಸೆಂಟ್ರಲ್ ಏರ್ ಡ್ಯಾಮ್‍‍‍ನೊಂದಿಗೆ ಫ್ರಂಟ್ ಬಂಪರ್ ಮತ್ತು ಫಾಗ್ ಲ್ಯಾಂಪ್‍‍ಗಳಿವೆ .

ಸ್ಥಗಿತವಾಯ್ತು ಬಿಎಸ್-4 ಮಾರುತಿ ಸುಜುಕಿ ಸಿಯಾಜ್ ಡೀಸೆಲ್ ಆವೃತ್ತಿ

ಸಿಯಾಜ್ ಕಾರಿನಲ್ಲಿ ಮಲ್ಟಿ ಸ್ಪೋಕ್ 15 ಇಂಚಿನ ಅಲಾಯ್ ವ್ಹೀಲ್, ಕ್ರೋಮ್ ಆಧಾರಿತ ಡೋರ್ ಹ್ಯಾಂಡಲ್ಸ್ ಮತ್ತು ಒಆರ್‍‍ವಿಎಮ್ ಅನ್ನು ಇಂಟಿಗ್ರೇಟೆಡ್ ಟರ್ನ್ ಇಂಡಿಕೇಟರ್ಸ್ ಗಳಿವೆ. ಹಾಗೆಯೇ ಮರು ವಿನ್ಯಾಸಗೊಳಿಸಲಾದ ಹಿಂಭಾಗದ ಬಂಪರ್ ಅನ್ನು ಹೊಂದಿದೆ.

ಸ್ಥಗಿತವಾಯ್ತು ಬಿಎಸ್-4 ಮಾರುತಿ ಸುಜುಕಿ ಸಿಯಾಜ್ ಡೀಸೆಲ್ ಆವೃತ್ತಿ

ಸಿಯಾಜ್ ಕಾರಿನ ಇಂಟಿರಿಯರ್ ಆಕರ್ಷಕ ಲುಕ್ ಅನ್ನು ಹೊಂದಿದೆ. ಸ್ಟೀಯರಿಂಗ್ ವ್ಹೀಲ್, ಲೆದರ್ ಸೀಟುಗಳು, ಟಚ್ ಸ್ಕ್ರೀನ್ ಇನ್ಫೋಟೇನ್‍‍ಮೆಂಟ್, ಆಂಡ್ರಾಯ್ಡ್ ಆಟೋ, ಆ್ಯಪಲ್ ಕಾರ್ ಪ್ಲೇ, ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಜೊತೆ ಟಿಟಿಪಿ ಕಲರ್ ಎಂಐಡಿ ಮತ್ತು ಕ್ರೂಸ್ ಕಂಟ್ರೊಲರ್ ಅನ್ನು ಹೊಂದಿದೆ.

ಸ್ಥಗಿತವಾಯ್ತು ಬಿಎಸ್-4 ಮಾರುತಿ ಸುಜುಕಿ ಸಿಯಾಜ್ ಡೀಸೆಲ್ ಆವೃತ್ತಿ

ಇತ್ತೀಚೆಗೆ ಬಿಡುಗಡೆಗೊಳಿಸಲಾದ ಬಿಎಸ್-6 ಮಾರುತಿ ಸುಜುಕಿ ಸಿಯಾಜ್ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.10.08 ಲಕ್ಷಗಳಾಗಿದೆ. ಹೊಸ ಮಾರುತಿ ಸುಜುಕಿ ಸಿಯಾಜ್ ಎಸ್ ಕಾರು ಹಲವಾರು ಬದಲಾವಣೆಗಳೊಂದಿಗೆ ಬಿಡುಗಡೆಯಾಗಿದೆ.

ಸ್ಥಗಿತವಾಯ್ತು ಬಿಎಸ್-4 ಮಾರುತಿ ಸುಜುಕಿ ಸಿಯಾಜ್ ಡೀಸೆಲ್ ಆವೃತ್ತಿ

ಹೊಸ ಸಿ-ಸೆಗ್‍‍ಮೆಂಟ್ ಸೆಡಾನ್ ಹೆಚ್ಚು ಸ್ಪೋರ್ಟಿ ಲುಕ್ ಅನ್ನು ಹೊಂದಿದೆ. ಹೊಸ ಸಿಯಾಜ್ ಎಸ್ ಕಾರು ಮೂರು ಬಣ್ಣಗಳ ಆಯ್ಕೆಯೊಂದಿಗೆ ಬಿಡುಗಡೆಯಾಗಿದೆ. ಅವುಗಳು ಪ್ರೀಮಿಯಂ ಸಿಲ್ವರ್, ಸ್ನೋ ವೈಟ್ ಮತ್ತು ಸಾಂಗ್ರಿಯಾ ರೆಡ್ ಬಣ್ಣಗಳಾಗಿದೆ.

ಸ್ಥಗಿತವಾಯ್ತು ಬಿಎಸ್-4 ಮಾರುತಿ ಸುಜುಕಿ ಸಿಯಾಜ್ ಡೀಸೆಲ್ ಆವೃತ್ತಿ

ಹೊಸ ಮಾರುತಿ ಸುಜುಕಿ ಸಿಯಾಜ್ ಎಸ್ ಕಾರಿನ ಕಾಸ್ಮೆಟಿಕ್‍ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಇದರಲ್ಲಿ ಬ್ಲ್ಯಾಕ್ ಒಆರ್‍‍ವಿಎಂ‍ಗಳು, ಕಪ್ಪು ಬಣ್ಣದ 16 ಇಂಚಿನ ಅಲಾಯ್ ವ್ಹೀಲ್‍‍ಗಳು, ಬೂಟ್ ಲಿಡ್ ಮತ್ತು ನವೀಕರಿಸಿದ ಫಾಂಗ್ ಲ್ಯಾಂಪ್‍ಗಳನ್ನು ಅಳವಡಿಸಲಾಗಿದೆ.

ಸ್ಥಗಿತವಾಯ್ತು ಬಿಎಸ್-4 ಮಾರುತಿ ಸುಜುಕಿ ಸಿಯಾಜ್ ಡೀಸೆಲ್ ಆವೃತ್ತಿ

ಮಾರುತಿ ಸಿಯಾಜ್ ಎಸ್‍ ಬಿಎಸ್-6 ಎಂಜಿನ್ ಅನ್ನು ಹೊಂದಿದೆ. ಮಾರುತಿ ಸಿಯಾಜ್ ಎಸ್ ಕಾರಿನಲ್ಲಿ ಬಿಎಸ್-6, 1.5 ಲೀಟರ್ ಕೆ 15 ಸೀರಿಸ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಎರ್ಟಿಗಾ ಕಾರಿನಲ್ಲಿಯೂ ಕೂಡ ಇದೇ ಮಾದರಿಯ ಎಂಜಿನ್ ಅನ್ನು ಅಳವಡಿಸಲಾಗಿದೆ.

ಸ್ಥಗಿತವಾಯ್ತು ಬಿಎಸ್-4 ಮಾರುತಿ ಸುಜುಕಿ ಸಿಯಾಜ್ ಡೀಸೆಲ್ ಆವೃತ್ತಿ

ದೇಶಿಯ ಮಾರುಕಟ್ಟೆಯಲ್ಲಿರುವ ಬಿಎಸ್-4 ಸಿಯಾಜ್ ಕಾರು ಹೋಂಡಾ ಸಿಟಿ, ಸ್ಕೋಡಾ ರ‍್ಯಾಪಿಡ್ ಮತ್ತು ಫೋಕ್ಸ್ ವ್ಯಾಗನ್ ವೆಂಟೊ ಕಾರುಗಳಿಗೆ ಪೈಪೋಟಿಯನ್ನು ನೀಡುತ್ತಿತ್ತು.

Most Read Articles

Kannada
English summary
Maruti Suzuki Ciaz Diesel Discontinued Ahead Of BS6 Deadline
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X