ಹೊಸ ಕನೆಕ್ಟಿವಿಟಿ ಟೆಕ್ನಾಲಜಿಯೊಂದಿಗೆ ಅನಾವರಣಗೊಂಡ ಭಾರತ್‍‍ಬೆಂಝ್ ಟ್ರಕ್‍‍ಗಳು

ಭಾರತ್‍‍ಬೆಂಝ್ ಕಂಪನಿಯು ದೇಶಿಯ ಮಾರುಕಟ್ಟೆಗಾಗಿ ಬಿ‍ಎಸ್ 6 ಎಂಜಿನ್ ಹೊಂದಿರುವ ಹೊಸ ಬಸ್ ಹಾಗೂ ಟ್ರಕ್‍‍ಗಳನ್ನು ಅನಾವರಣಗೊಳಿಸಿದೆ. ಈ ಹೊಸ ಟ್ರಕ್ ಹಾಗೂ ಬಸ್‍‍ಗಳನ್ನು ಭಾರತ್‍‍ಬೆಂಝ್ ತನ್ನ ಮಾತೃಸಂಸ್ಥೆಯಾದ ಡೈಮ್ಲರ್ ಇಂಡಿಯಾ ಕಮರ್ಷಿಯಲ್ ವೆಹಿಕಲ್ಸ್ ಪ್ರೈವೇಟ್ ಲಿಮಿಟೆಡ್‍‍ನಲ್ಲಿ ನಡೆದ ಸಮಾರಂಭದಲ್ಲಿ ಅನಾವರಣಗೊಳಿಸಿದೆ.

ಹೊಸ ಕನೆಕ್ಟಿವಿಟಿ ಟೆಕ್ನಾಲಜಿಯೊಂದಿಗೆ ಅನಾವರಣಗೊಂಡ ಭಾರತ್‍‍ಬೆಂಝ್ ಟ್ರಕ್‍‍ಗಳು

ಏಪ್ರಿಲ್ 1ರಿಂದ ಜಾರಿಗೆ ಬರಲಿರುವ ಬಿ‍ಎಸ್ 6 ನಿಯಮಗಳು ಭಾರತದ ಆಟೋಮೊಬೈಲ್ ಉದ್ಯಮದ ದಿಕ್ಕನ್ನು ಬದಲಿಸಿವೆ. ಬಹುತೇಕ ಎಲ್ಲಾ ವಾಹನ ತಯಾರಕ ಕಂಪನಿಗಳು ತಮ್ಮ ವಾಹನ ತಯಾರಿಕೆಯ ತಂತ್ರವನ್ನು ಬದಲಿಸಿದ್ದರೆ, ಇನ್ನು ಕೆಲವು ಕಂಪನಿಗಳು ತಮ್ಮ ಸರಣಿಯಲ್ಲಿರುವ ಎಲ್ಲಾ ವಾಹನಗಳನ್ನು ಬಿ‍ಎಸ್ 6ಗೆ ಅಪ್‍‍ಡೇಟ್‍‍ಗೊಳಿಸುತ್ತಿವೆ.

ಹೊಸ ಕನೆಕ್ಟಿವಿಟಿ ಟೆಕ್ನಾಲಜಿಯೊಂದಿಗೆ ಅನಾವರಣಗೊಂಡ ಭಾರತ್‍‍ಬೆಂಝ್ ಟ್ರಕ್‍‍ಗಳು

ಕಮರ್ಷಿಯಲ್ ವಾಹನ ತಯಾರಕರು ಸಹ ಇದೇ ತಂತ್ರವನ್ನು ಅನುಸರಿಸುತ್ತಿದ್ದಾರೆ. ಭಾರತದ ಅತಿ ದೊಡ್ಡ ಕಮರ್ಷಿಯಲ್ ವಾಹನ ತಯಾರಕ ಕಂಪನಿಗಳಲ್ಲಿ ಒಂದಾದ ಭಾರತ್‍‍ಬೆಂಝ್ ಸಹ ಹೊಸ ವಾಹನಗಳನ್ನು ಬಿಡುಗಡೆಗೊಳಿಸಲು ಮುಂದಾಗಿದೆ.

ಹೊಸ ಕನೆಕ್ಟಿವಿಟಿ ಟೆಕ್ನಾಲಜಿಯೊಂದಿಗೆ ಅನಾವರಣಗೊಂಡ ಭಾರತ್‍‍ಬೆಂಝ್ ಟ್ರಕ್‍‍ಗಳು

ಭಾರತ್‍‍ಬೆಂಝ್ ದೇಶಿಯ ಮಾರುಕಟ್ಟೆಯಲ್ಲಿ ತನ್ನ ಹೊಸ ಟ್ರಕ್ ಹಾಗೂ ಬಸ್‍‍ಗಳನ್ನು ಅನಾವರಣಗೊಳಿಸಿದೆ. ಬಿ‍ಎಸ್ 6 ಎಂಜಿನ್ ಹೊಂದಿರುವ ಭಾರತ್‍‍ಬೆಂಝ್ ಟ್ರಕ್ ಹಾಗೂ ಬಸ್‍‍ಗಳು ಹಲವು ಬದಲಾವಣೆಗಳನ್ನು ಹೊಂದಿವೆ. ಇವುಗಳಲ್ಲಿ ಡಿಸೈನ್ ಹಾಗೂ ಸ್ಟೈಲ್‍‍ಗಳ ಬದಲಾವಣೆ ಸಹ ಸೇರಿವೆ.

ಹೊಸ ಕನೆಕ್ಟಿವಿಟಿ ಟೆಕ್ನಾಲಜಿಯೊಂದಿಗೆ ಅನಾವರಣಗೊಂಡ ಭಾರತ್‍‍ಬೆಂಝ್ ಟ್ರಕ್‍‍ಗಳು

ಈ ಕಮರ್ಷಿಯಲ್ ವಾಹನಗಳಲ್ಲಿ ಹೊಸ ಗ್ರಿಲ್, ಸಾಲಿಡ್ ಬಂಪರ್ ಹಾಗೂ ರಿ‍‍ಡಿಸೈನ್ ಮಾಡಲಾದ ಹೆಡ್‍‍ಲ್ಯಾಂಪ್‍‍ಗಳಿವೆ. ಈ ವಾಹನಗಳಲ್ಲಿರುವ ಪವರ್‍‍ಟ್ರೇನ್ ಹಾಗೂ ಇಂಟಿರಿಯರ್‍‍ನಲ್ಲಿ ದೊಡ್ಡ ಬದಲಾವಣೆಗಳನ್ನು ಮಾಡಲಾಗಿದೆ.

ಹೊಸ ಕನೆಕ್ಟಿವಿಟಿ ಟೆಕ್ನಾಲಜಿಯೊಂದಿಗೆ ಅನಾವರಣಗೊಂಡ ಭಾರತ್‍‍ಬೆಂಝ್ ಟ್ರಕ್‍‍ಗಳು

ಹೊಸ ಟ್ರಕ್ ಹಾಗೂ ಬಸ್ಸುಗಳಲ್ಲಿ ಒಂದೇ ಸಾಮರ್ಥ್ಯದ ಎಂಜಿನ್ ಹಾಗೂ ಗೇರ್‍‍ಬಾಕ್ಸ್ ಗಳನ್ನು ಅಳವಡಿಸಲಾಗಿದೆ. ಬಿ‍ಎಸ್ 6 ಎಂಜಿನ್ ಹೊಂದಿರುವ ಕಾರಣಕ್ಕೆ ಈ ವಾಹನಗಳು ಹೆಚ್ಚು ಎಫಿಶಿಯಂಟ್ ಆಗಿರುವುದರ ಜೊತೆಗೆ ಪರಿಸರ ಸ್ನೇಹಿಯಾಗಿರಲಿವೆ.

ಹೊಸ ಕನೆಕ್ಟಿವಿಟಿ ಟೆಕ್ನಾಲಜಿಯೊಂದಿಗೆ ಅನಾವರಣಗೊಂಡ ಭಾರತ್‍‍ಬೆಂಝ್ ಟ್ರಕ್‍‍ಗಳು

ಟ್ರಕ್ ಹಾಗೂ ಬಸ್‍‍ಗಳ ಸಾಮರ್ಥ್ಯಕ್ಕೆ ತಕ್ಕಂತೆ ಅವುಗಳಲ್ಲಿರುವ ಎಂಜಿನ್ ಹಾಗೂ ಗೇರ್‍‍ಬಾಕ್ಸ್ ಗಳ ಸಾಮರ್ಥ್ಯವು ಬದಲಾಗಲಿದೆ. ಈ ವಾಹನಗಳ ಕ್ಯಾಬಿನ್‍‍ನಲ್ಲಿ ಅತ್ಯುತ್ತಮವಾದ ಕನೆಕ್ಟಿವಿಟಿ ಟೆಕ್ನಾಲಜಿಯನ್ನು ಅಳವಡಿಸಲಾಗಿದೆ.

ಹೊಸ ಕನೆಕ್ಟಿವಿಟಿ ಟೆಕ್ನಾಲಜಿಯೊಂದಿಗೆ ಅನಾವರಣಗೊಂಡ ಭಾರತ್‍‍ಬೆಂಝ್ ಟ್ರಕ್‍‍ಗಳು

ಈ ಕನೆಕ್ಟಿವಿಟಿ ಟೆಕ್ನಾಲಜಿಯಲ್ಲಿ ಪ್ರಾಫಿಟ್ ಟೆಕ್ನಾಲಜಿ ಪ್ಲಸ್, ಪ್ರೊ ಸರ್ವ್, ಬಸ್ ಕನೆಕ್ಟ್ ಹಾಗೂ ಟ್ರಕ್ ಕನೆಕ್ಟ್ ಗಳು ಸೇರಿವೆ. ಭಾರತ್‍‍ಬೆಂಝ್ ಕಂಪನಿಯು ಈ ಟೆಕ್ನಾಲಜಿಗಳಿಂದ ತನ್ನ ಟ್ರಕ್‍‍ಗಳ ಎಫಿಶಿಯನ್ಸಿ ಹಾಗೂ ವಿಶ್ವಾಸಾರ್ಹತೆಯನ್ನು ಅಭಿವೃದ್ಧಿಪಡಿಸಲು ಮುಂದಾಗಿದೆ.

ಹೊಸ ಕನೆಕ್ಟಿವಿಟಿ ಟೆಕ್ನಾಲಜಿಯೊಂದಿಗೆ ಅನಾವರಣಗೊಂಡ ಭಾರತ್‍‍ಬೆಂಝ್ ಟ್ರಕ್‍‍ಗಳು

ಪ್ರಾಫಿಟ್ ಟೆಕ್ನಾಲಜಿ ಪ್ಲಸ್ ವಾಹನಗಳ ಮಾಲೀಕರಿಗೆ ವಹಿವಾಟನ್ನು ಹೆಚ್ಚಿಸಿಕೊಳ್ಳಲು ನೆರವಾಗುತ್ತದೆ. ಟ್ರಕ್ ಕನೆಕ್ಟ್, ಫ್ಲೀಟ್ ಆಪರೇಟರ್‌ಗಳು ಹಾಗೂ ಮಾಲೀಕರು ವಾಹನದ ಅಂಕಿಅಂಶ ಹಾಗೂ ಟ್ರಕ್‌ಗಳ ನಿರ್ವಹಣೆಯನ್ನು ಮೇಲ್ವಿಚಾರಣೆ ಮಾಡಲು ನೆರವಾಗುತ್ತದೆ.

ಹೊಸ ಕನೆಕ್ಟಿವಿಟಿ ಟೆಕ್ನಾಲಜಿಯೊಂದಿಗೆ ಅನಾವರಣಗೊಂಡ ಭಾರತ್‍‍ಬೆಂಝ್ ಟ್ರಕ್‍‍ಗಳು

ಬಸ್‌ಕನೆಕ್ಟ್ ಟೆಕ್ನಾಲಜಿಯು ಮಾರ್ಗಗಳನ್ನು ಆಯ್ಕೆ ಮಾಡಿಕೊಳ್ಳಲು, ಆನ್-ಬೋರ್ಡ್ ಮನರಂಜನೆಯನ್ನು ಪಡೆಯಲು, ಟ್ರ್ಯಾಕಿಂಗ್ ಅಲರ್ಟ್‍‍ಗಳನ್ನು ಪಡೆಯಲು ನೆರವಾಗುತ್ತದೆ. ಪ್ರೊಸರ್ವ್‍‍ನಲ್ಲಿ ಅತಿದೊಡ್ಡ ಟೆಕ್ನಾಲಜಿ ಅಪ್‍‍ಡೇಟ್ ಮಾಡಲಾಗಿದೆ. ಇದು ಕಸ್ಟಮರ್ ಸರ್ವಿಸ್ ಪ್ಲಾಟ್‍‍ಫಾರಂ ಆಗಿದೆ.

ಹೊಸ ಕನೆಕ್ಟಿವಿಟಿ ಟೆಕ್ನಾಲಜಿಯೊಂದಿಗೆ ಅನಾವರಣಗೊಂಡ ಭಾರತ್‍‍ಬೆಂಝ್ ಟ್ರಕ್‍‍ಗಳು

ಟ್ರಕ್ ಕನೆಕ್ಟ್ ಹಾಗೂ ಬಸ್‌ಕನೆಕ್ಟ್ ಫೀಚರ್‍‍ಗಳು ಪ್ರೊಸರ್ವ್ ಪ್ಲಾಟ್‌ಫಾರ್ಮ್ ಅಡಿಯಲ್ಲಿ ಬರುತ್ತವೆ. ಇವುಗಳಿಂದಾಗಿ ಗ್ರಾಹಕರು ತಮ್ಮ ವಾಹನಗಳನ್ನು ನೈಜವಾದ ಸಮಯದಲ್ಲಿ ಟ್ರ್ಯಾಕ್ ಮಾಡಿ, ಅನಾಲೈಸ್ ಮಾಡಬಹುದಾಗಿದೆ.

ಹೊಸ ಕನೆಕ್ಟಿವಿಟಿ ಟೆಕ್ನಾಲಜಿಯೊಂದಿಗೆ ಅನಾವರಣಗೊಂಡ ಭಾರತ್‍‍ಬೆಂಝ್ ಟ್ರಕ್‍‍ಗಳು

ಈ ಫೀಚರ್‍‍ಗಳು ಗ್ರಾಹಕರಿಗೆ ಸರ್ವಿಸ್ ಅಪಾಯಿಂಟ್‍‍ಮೆಂಟ್ ಬುಕ್ ಮಾಡಲು, ಬಿಡಿಭಾಗಗಳನ್ನು ಆರ್ಡರ್ ಮಾಡಲು, ಎಕ್ಸ್ ಟೆಂಟೆಡ್ ವಾರಂಟಿ ಹಾಗೂ ರೋಡ್‍‍ಸೈಡ್ ಅಸಿಸ್ಟೆನ್ಸ್ ಪಡೆಯಲು ನೆರವಾಗಲಿವೆ.

ಹೊಸ ಕನೆಕ್ಟಿವಿಟಿ ಟೆಕ್ನಾಲಜಿಯೊಂದಿಗೆ ಅನಾವರಣಗೊಂಡ ಭಾರತ್‍‍ಬೆಂಝ್ ಟ್ರಕ್‍‍ಗಳು

ಈ ಟೆಕ್ನಾಲಜಿಯನ್ನು ಅಳವಡಿಸಿರುವುದರಿಂದ ಕಮರ್ಷಿಯಲ್ ವಾಹನಗಳನ್ನು ನಿರ್ವಹಿಸುವುದು ಹಾಗೂ ವೆಚ್ಚ ಎಫಿಶಿಯನ್ಸಿ ಹೆಚ್ಚಾಗಲಿದೆ. ಭಾರತ್‌ಬೆಂಝ್ ಕಮರ್ಷಿಯಲ್ ವಾಹನಗಳ ಸಾಂಪ್ರದಾಯಿಕ ವರ್ಗೀಕರಣದಿಂದ ದೂರವಿರುವುದಾಗಿ ತಿಳಿಸಿದೆ. ಕಂಪನಿಯು ಹೊಸ ವರ್ಗದ ವಾಹನಗಳನ್ನು ರಚಿಸುವ ಕೆಲಸ ಮಾಡಲಿದೆ.

ಹೊಸ ಕನೆಕ್ಟಿವಿಟಿ ಟೆಕ್ನಾಲಜಿಯೊಂದಿಗೆ ಅನಾವರಣಗೊಂಡ ಭಾರತ್‍‍ಬೆಂಝ್ ಟ್ರಕ್‍‍ಗಳು

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಬಿಎಸ್6 ನಿಯಮಗಳು ಹಲವು ಆಸಕ್ತಿದಾಯಕ ವಿಷಯಗಳನ್ನು ರೂಪಿಸುತ್ತಿವೆ. ಈ ನಿಯಮವು ಪರಿಸರ ಸ್ನೇಹಿಯಾಗಿರುವಂತೆ ಹೇಳುತ್ತದೆಯಾದರೂ, ಕಂಪನಿಗಳು ತಮ್ಮ ವಾಹನಗಳನ್ನು ಮರುವಿನ್ಯಾಸಗೊಳಿಸುತ್ತಿವೆ. ಭಾರತ್‌ಬೆಂಝ್ ಕಂಪನಿಯ ಹೊಸ ತಂತ್ರದ ಬಗ್ಗೆ ಕಾದು ನೋಡೋಣ.

Most Read Articles

Kannada
English summary
BharatBenz BS-VI Trucks & Buses Revealed With New Connectivity Tech. Read in Kannada.
Story first published: Wednesday, January 29, 2020, 12:25 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X