ಆಟೋ ಉದ್ಯಮದಲ್ಲಿ ಇಂದಿನಿಂದ ಭಾರೀ ಬದಲಾವಣೆ- ಹೊಸ ವಾಹನಗಳ ಖರೀದಿ ವೇಳೆ ಇರಲಿ ಎಚ್ಚರ..!

ದೇಶಾದ್ಯಂತ ಇಂದಿನಿಂದಲೇ ಬಿಎಸ್-6(ಭಾರತ್ ಸ್ಟೇಜ್-6) ಎಮಿಷನ್ ನಿಯಮವು ಅಧಿಕೃತವಾಗಿ ಜಾರಿಗೆ ಬಂದಿದ್ದು, ಹೊಸ ವಾಹನ ಖರೀದಿ ಯೋಜನೆಯಲ್ಲಿರುವ ಗ್ರಾಹಕರು ಕೆಲವು ಮುಖ್ಯ ವಿಚಾರಗಳನ್ನು ತಪ್ಪದೇ ತಿಳಿದುಕೊಳ್ಳಬೇಕಿದೆ.

ಆಟೋ ಉದ್ಯಮದಲ್ಲಿ ಇಂದಿನಿಂದ ಭಾರೀ ಬದಲಾವಣೆ- ಹೊಸ ವಾಹನಗಳ ಖರೀದಿ ವೇಳೆ ಇರಲಿ ಎಚ್ಚರ..!

ಭಾರತದಲ್ಲಿ ಮಾಲಿನ್ಯವನ್ನು ತಡೆಯುವ ಉದ್ದೇಶದಿಂದ 2018ರ ಅಕ್ಟೋಬರ್‌ನಲ್ಲಿ ಮಹತ್ವದ ಆದೇಶ ಹೊರಡಿಸಿದ್ದ ಸುಪ್ರೀಂಕೋರ್ಟ್ 2020ರ ಏಪ್ರಿಲ್ 1ರಿಂದ ಕಡ್ಡಾಯವಾಗಿ ಬಿಎಸ್-6 ನಿಯಮವನ್ನು ಜಾರಿಗೆ ತರುವಂತೆ ಆದೇಶ ನೀಡಿತ್ತು. ಆದೇಶದಂತೆ ಇಂದಿನಿಂದ ಬಿಎಸ್-6 ವಾಹನಗಳ ಮಾರಾಟವು ಕಡ್ಡಾಯವಾಗಿದ್ದರೂ ಪರಿಸ್ಥಿತಿಗೆ ಅನುಗುಣವಾಗಿ ಇನ್ನು ಕೂಡಾ ಬಿಎಸ್-4 ವಾಹನಗಳವನ್ನು ಮುಂದಿನ ಕೆಲ ದಿನಗಳ ಕಾಲ ಮುಂದುವರಿಸಲಾಗಿದೆ.

ಆಟೋ ಉದ್ಯಮದಲ್ಲಿ ಇಂದಿನಿಂದ ಭಾರೀ ಬದಲಾವಣೆ- ಹೊಸ ವಾಹನಗಳ ಖರೀದಿ ವೇಳೆ ಇರಲಿ ಎಚ್ಚರ..!

2020ರ ಏಪ್ರಿಲ್ 1ರಿಂದಲೇ ಬಿಎಸ್-4 ವಾಹನಗಳ ಮಾರಾಟ ಮತ್ತು ನೋಂದಣಿ ಪ್ರಕ್ರಿಯೆಯನ್ನು ಬ್ಯಾನ್ ಮಾಡಿದ್ದ ಸುಪ್ರೀಂಕೋರ್ಟ್ ಕೊನೆಯ ಕ್ಷಣದಲ್ಲಿ ಬ್ಯಾನ್ ಅಸ್ತ್ರವನ್ನು ಸಡಿಲಿಸಿದ್ದು, ಕರೋನಾ ವೈರಸ್ ತಡೆ ಉದ್ದೇಶದಿಂದ ದೇಶಾದ್ಯಂತ ಜಾರಿಗೊಳಿಸಿರುವ ಲಾಕ್‌ಡೌನ್ ಹಿನ್ನಲೆಯಲ್ಲಿ ಆಟೋ ಕಂಪನಿಗಳಿಗೆ ಕೆಲವು ವಿನಾಯ್ತಿಗಳನ್ನು ನೀಡಿದೆ.

ಆಟೋ ಉದ್ಯಮದಲ್ಲಿ ಇಂದಿನಿಂದ ಭಾರೀ ಬದಲಾವಣೆ- ಹೊಸ ವಾಹನಗಳ ಖರೀದಿ ವೇಳೆ ಇರಲಿ ಎಚ್ಚರ..!

ಬಿಎಸ್-6 ಜಾರಿಗೆ ಮುನ್ನ ಕರೋನಾ ವೈರಸ್ ಭೀತಿ ಹೆಚ್ಚಿದ್ದರಿಂದ ಎಲ್ಲಾ ಮಾದರಿಯ ವಾಣಿಜ್ಯ ಚಟುವಟಿಕೆಗಳನ್ನು ಬಂದ್ ಮಾಡಿ ಲಾಕ್ ಡೌನ್ ಹೇರಲಾಗಿತ್ತು. ಕೊನೆಯ ಗಳಿಗೆಯಲ್ಲಿ ಮಾರಾಟವಾಗಬೇಕಿದ್ದ ಲಕ್ಷಾಂತರ ಬಿಎಸ್-4 ವಾಹನಗಳು ಮಾರಾಟವಾಗದೆ ಹಾಗೆಯೇ ಉಳಿದಿವೆ.

ಆಟೋ ಉದ್ಯಮದಲ್ಲಿ ಇಂದಿನಿಂದ ಭಾರೀ ಬದಲಾವಣೆ- ಹೊಸ ವಾಹನಗಳ ಖರೀದಿ ವೇಳೆ ಇರಲಿ ಎಚ್ಚರ..!

ಇದರಿಂದ ಆಟೋ ಕಂಪನಿಗಳಿಗೆ ವಿನಾಯ್ತಿಯೊಂದಿಗೆ ಕೆಲವು ಷರತ್ತುಗಳನ್ನು ವಿಧಿಸಿ ಮಾರಾಟಕ್ಕೆ ಅವಕಾಶ ನೀಡಿರುವ ಸುಪ್ರೀಂಕೋರ್ಟ್ ಬ್ಯಾನ್ ನಷ್ಟ ತಡೆಗೆ ಸಹಕರಿಸಿದೆ.ಕರೋನಾ ವೈರಸ್ ಹಿನ್ನಲೆಯಲ್ಲಿ ಲಾಕ್ ಡೌನ್ ಮಾಡಿರುವ ವಿಚಾರವನ್ನು ಮುಂದಿಟ್ಟುಕೊಂಡು ವಿನಾಯ್ತಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿರುವ ಇಂಡಿಯನ್ ಆಟೋ ಡೀಲರ್ಸ್ ಅಸೋಶಿಯೇಷನ್ ಸಂಸ್ಥೆಗೆ ಸುಪ್ರೀಂಕೋರ್ಟ್ ಹಲವು ಷರತ್ತುಗಳನ್ನು ವಿಧಿಸಿ ಮಾರಾಟ ಅವಧಿಯನ್ನು ವಿಸ್ತರಣೆ ಮಾಡಿದೆ.

ಆಟೋ ಉದ್ಯಮದಲ್ಲಿ ಇಂದಿನಿಂದ ಭಾರೀ ಬದಲಾವಣೆ- ಹೊಸ ವಾಹನಗಳ ಖರೀದಿ ವೇಳೆ ಇರಲಿ ಎಚ್ಚರ..!

ಏಪ್ರಿಲ್ 1ರಿಂದಲೇ ನಿಷೇಧಗೊಳ್ಳಬೇಕಿದ್ದ ಬಿಎಸ್-4 ವಾಹನಗಳ ಮಾರಾಟ ಪ್ರಕ್ರಿಯೆಯನ್ನು ಏಪ್ರಿಲ್ 24ರ ತನಕ ವಿಸ್ತರಣೆ ಮಾಡಲಾಗಿದ್ದು, ಪ್ರತಿ ಆಟೋ ಕಂಪನಿಗಳು ಸ್ಟಾಕ್ ಇರುವ ಶೇ.10 ರಷ್ಟು ಪ್ರಮಾಣದ ಬಿಎಸ್-4 ವಾಹನಗಳನ್ನು ಮಾತ್ರವೇ ಮಾರಾಟ ಮಾಡಬೇಕು ಎಂದಿದೆ.

ಆಟೋ ಉದ್ಯಮದಲ್ಲಿ ಇಂದಿನಿಂದ ಭಾರೀ ಬದಲಾವಣೆ- ಹೊಸ ವಾಹನಗಳ ಖರೀದಿ ವೇಳೆ ಇರಲಿ ಎಚ್ಚರ..!

ಜೊತೆಗೆ ಬಿಎಸ್-4 ವಾಹನ ಮಾರಾಟ ಅವಧಿ ವಿಸ್ತರಣೆಯ ವಿನಾಯ್ತಿಯು ದೆಹಲಿ ಮತ್ತು ಎನ್‌ಸಿಆರ್ ಪ್ರದೇಶಗಳಿಗೆ ಅನ್ವಯಸುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಸುಪ್ರೀಂಕೋರ್ಟ್, ಮಾಲಿನ್ಯ ತಡೆಯಲು ಹಳೆಯ ವಾಹನಗಳಿಗೆ ಕಡಿವಾಣ ಹಾಕುವುದೇ ಮುಖ್ಯ ಎಂದಿದೆ.

ಆಟೋ ಉದ್ಯಮದಲ್ಲಿ ಇಂದಿನಿಂದ ಭಾರೀ ಬದಲಾವಣೆ- ಹೊಸ ವಾಹನಗಳ ಖರೀದಿ ವೇಳೆ ಇರಲಿ ಎಚ್ಚರ..!

ಈ ಹಿಂದೆಯೂ ಎರಡು ಬಾರಿ ಆಟೋ ಕಂಪನಿಗಳು ಬಿಎಸ್-4 ವಾಹನಗಳ ಮಾರಾಟಕ್ಕೆ ಅವಧಿಯ ವಿಸ್ತರಣೆಯ ಮನವಿಯನ್ನು ತಳ್ಳಿಹಾಕಿರುವ ಸುಪ್ರೀಂಕೋರ್ಟ್ ಕಡ್ಡಾಯವಾಗಿ ಎಪ್ರಿಲ್ 1ರಿಂದ ಬಿಎಸ್-6 ಆದೇಶವನ್ನು ಪಾಲಿಸುವಂತೆ ಖಡಕ್ ಆದೇಶ ನೀಡಿತ್ತು.

ಆಟೋ ಉದ್ಯಮದಲ್ಲಿ ಇಂದಿನಿಂದ ಭಾರೀ ಬದಲಾವಣೆ- ಹೊಸ ವಾಹನಗಳ ಖರೀದಿ ವೇಳೆ ಇರಲಿ ಎಚ್ಚರ..!

ಆದರೆ ಇದೀಗ ಕರೋನಾ ವೈರಸ್‌ನಿಂದ ವಾಹನ ಮಾರಾಟ ಬಂದ್ ಆಗಿರುವುದರಿಂದ ಆಟೋ ಕಂಪನಿಗಳ ಹೊಸ ಮರುಪರಿಶೀಲನಾ ಅರ್ಜಿಯನ್ನು ಮಾನ್ಯ ಮಾಡಿ ಷರತ್ತುಗಳೊಂದಿಗೆ ಮತ್ತೊಂದು ಅವಕಾಶವನ್ನು ನೀಡಿದೆ.

ಆಟೋ ಉದ್ಯಮದಲ್ಲಿ ಇಂದಿನಿಂದ ಭಾರೀ ಬದಲಾವಣೆ- ಹೊಸ ವಾಹನಗಳ ಖರೀದಿ ವೇಳೆ ಇರಲಿ ಎಚ್ಚರ..!

ಮಾಹಿತಿಗಳ ಪ್ರಕಾರ, ವಿವಿಧ ಆಟೋ ಕಂಪನಿಗಳ ಬಳಿ ಇನ್ನು ಸುಮಾರು 7 ಲಕ್ಷ ಬಿಎಸ್-4 ಎಂಜಿನ್ ಪ್ರೇರಿತ ವಾಹನಗಳ ಸ್ಟಾಕ್ ಇದ್ದು, ಇದು ರೂ.6,400 ಕೋಟಿ ಮೌಲ್ಯವನ್ನು ಹೊಂದಿದೆ.

ಆಟೋ ಉದ್ಯಮದಲ್ಲಿ ಇಂದಿನಿಂದ ಭಾರೀ ಬದಲಾವಣೆ- ಹೊಸ ವಾಹನಗಳ ಖರೀದಿ ವೇಳೆ ಇರಲಿ ಎಚ್ಚರ..!

ಹೀಗಾಗಿ ಬಿಎಸ್-4 ವಾಹನ ಮಾರಾಟವನ್ನು ಮಾಡಲೇಬೇಕಾದ ಅನಿವಾರ್ಯತೆಯಲ್ಲಿರುವ ಆಟೋ ಕಂಪನಿಗಳು ಕರೋನಾ ವೈರಸ್ ನೆಪವೊಡ್ಡಿ ಮತ್ತೊಂದು ಅವಕಾಶವನ್ನು ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಏಪ್ರಿಲ್ 24ರ ನಂತರ ಬಿಎಸ್-4 ವಾಹನಗಳ ಮಾರಾಟ ಮತ್ತು ನೋಂದಣಿ ಕೊನೆಗೊಳ್ಳುತ್ತದೆ.

ಆಟೋ ಉದ್ಯಮದಲ್ಲಿ ಇಂದಿನಿಂದ ಭಾರೀ ಬದಲಾವಣೆ- ಹೊಸ ವಾಹನಗಳ ಖರೀದಿ ವೇಳೆ ಇರಲಿ ಎಚ್ಚರ..!

ಇದರಿಂದಾಗಿ ಏಪ್ರಿಲ್ 25ರ ನಂತರ ಮಾರಾಟಗೊಳ್ಳುವ ಬಿಎಸ್-4 ವಾಹನಗಳು ನೋಂದಣಿಯಾಗುವುದಿಲ್ಲ. ಈ ವೇಳೆ ಹೊಸ ವಾಹನ ಖರೀದಿದಾರರು ಎಚ್ಚರ ವಹಿಸಬೇಕಿದ್ದು, ಆಟೋ ಕಂಪನಿಗಳು ಸ್ಟಾಕ್ ಇರುವ ಶೇ.10ರಷ್ಛು ಮಾತ್ರ ಮಾರಾಟ ಮಾಡಲಿದ್ದಾರೆ.

Most Read Articles

Kannada
English summary
BS6 Emission Norms Come Into Effect From Today In India. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X