ನಾಲ್ಕು ಚಕ್ರದ ಆಟೋಗಳಿಗೂ ಅನ್ವಯಿಸಲಿದೆ ಬಿಎಸ್ 6 ನಿಯಮ

ಕಾರು, ಬೈಕ್ ಹಾಗೂ ಕಮರ್ಷಿಯಲ್ ವಾಹನಗಳಿಗೆ ಬಿಎಸ್ 6 ಮಾಲಿನ್ಯ ನಿಯಮಗಳನ್ನು ಜಾರಿಗೊಳಿಸಿದ ನಂತರ, ಕೇಂದ್ರ ಸರ್ಕಾರವು ನಾಲ್ಕು ಚಕ್ರದ ಆಟೋಗಳಿಗೂ (ಕ್ವಾಡ್ರಿ ಸೈಕಲ್‌) ಬಿಎಸ್ 6 ಮಾಲಿನ್ಯ ನಿಯಮಗಳನ್ನು ಜಾರಿಗೆ ತಂದಿದೆ. ಬಿಎಸ್ 6 ಮಾಲಿನ್ಯ ನಿಯಮಗಳನ್ನು 2020ರ ಏಪ್ರಿಲ್ 1ರಿಂದ ದೇಶಾದ್ಯಂತ ಜಾರಿಗೆ ತರಲಾಗಿದೆ.

ನಾಲ್ಕು ಚಕ್ರದ ಆಟೋಗಳಿಗೂ ಅನ್ವಯಿಸಲಿದೆ ಬಿಎಸ್ 6 ನಿಯಮ

ಹೊಸ ರೀತಿಯ ವಾಹನವಾಗಿರುವ ಕಾರಣಕ್ಕೆ ನಾಲ್ಕು ಚಕ್ರದ ಆಟೋಗಳಿಗೆ ಅಂದರೆ ಕ್ವಾಡ್ರಿ ಸೈಕಲ್‌ಗಳಿಗೆ ಬಿಎಸ್ 6 ನಿಯಮಗಳನ್ನು ಅಳವಡಿಸುವುದಕ್ಕೆ ಗಡುವು ನೀಡಲಾಗಿತ್ತು. ಭಾರತದಲ್ಲಿ ಕ್ವಾಡ್ರಿ ಸೈಕಲ್‌ಗಳನ್ನು ಎಲ್ 7 ವಾಹನಗಳಾಗಿ ವರ್ಗೀಕರಿಸಲಾಗಿದೆ. ಈ ಸೆಗ್‌ಮೆಂಟ್‌ನಲ್ಲಿ ನಾಲ್ಕು ಚಕ್ರಗಳ ವಾಹನಗಳಿರುತ್ತವೆ. ಈ ವಾಹನಗಳ ಒಟ್ಟು ತೂಕ 400 ಕೆ.ಜಿಯನ್ನು ಮೀರುವಂತಿಲ್ಲ. ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿ ಸಾಮರ್ಥ್ಯವು 15 ಕಿ.ವ್ಯಾ ಮೀರುವಂತಿಲ್ಲ. ಸರಕು ಸಾಗಣೆ ವಾಹನಗಳಿಗೆ 550 ಕೆ.ಜಿ. ಮಿತಿಯನ್ನು ನಿಗದಿಪಡಿಸಲಾಗಿದೆ.

ನಾಲ್ಕು ಚಕ್ರದ ಆಟೋಗಳಿಗೂ ಅನ್ವಯಿಸಲಿದೆ ಬಿಎಸ್ 6 ನಿಯಮ

ಕೇಂದ್ರ ಸರ್ಕಾರವು ಕ್ವಾಡ್ರಿ ಸೈಕಲ್‌ಗಳಿಗೆ ಮಾಲಿನ್ಯ ನಿಯಮಗಳನ್ನು ನಿಗದಿಪಡಿಸದ ಕಾರಣ ವಾಹನ ಕಂಪನಿಗಳು ಕ್ವಾಡ್ರಿ ಸೈಕಲ್‌ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ತಯಾರಿಸುತ್ತಿರಲಿಲ್ಲ. ಈಗ ಕ್ವಾಡ್ರಿ ಸೈಕಲ್‌ಗಳಿಗೂ ಮಾಲಿನ್ಯ ನಿಯಮಗಳನ್ನು ನಿಗದಿಪಡಿಸಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ತಯಾರಿಸುವ ಸಾಧ್ಯತೆಗಳಿವೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ನಾಲ್ಕು ಚಕ್ರದ ಆಟೋಗಳಿಗೂ ಅನ್ವಯಿಸಲಿದೆ ಬಿಎಸ್ 6 ನಿಯಮ

ಕ್ವಾಡ್ರಿ ಸೈಕಲ್‌ಗಳನ್ನು 2018ರಲ್ಲಿ ಮೊದಲ ಬಾರಿಗೆ ಭಾರತದಲ್ಲಿ ಪರಿಚಯಿಸಲಾಯಿತು. ಈ ವಾಹನವನ್ನು ಖಾಸಗಿಯಾಗಿ ಹಾಗೂ ವಾಣಿಜ್ಯ ಉದ್ದೇಶಗಳಿಗೆ ಬಳಸಬಹುದು. ಭಾರತದ ಮೊದಲ ಕ್ವಾಡ್ರಿ ಸೈಕಲ್‌ ಅನ್ನು ಬಜಾಜ್ ಕಂಪನಿಯು ತಯಾರಿಸಿತು. ಇದನ್ನು ಕಾಂಪ್ಯಾಕ್ಟ್ ಆಟೋರಿಕ್ಷಾ ಎಂದು ಬಿಡುಗಡೆಗೊಳಿಸಲಾಯಿತು.

ನಾಲ್ಕು ಚಕ್ರದ ಆಟೋಗಳಿಗೂ ಅನ್ವಯಿಸಲಿದೆ ಬಿಎಸ್ 6 ನಿಯಮ

ಕ್ವಾಡ್ರಿ ಸೈಕಲ್‌ಗಳನ್ನು ನಗರದೊಳಗಿನ ಸಂಚಾರಕ್ಕಾಗಿ ಬಳಸಬಹುದು. ಕ್ವಾಡ್ರಿ ಸೈಕಲ್‌ಗಳ ಗರಿಷ್ಠ ವೇಗ ಪ್ರತಿ ಗಂಟೆಗೆ 70 ಕಿ.ಮೀಗಳಾಗಿದೆ. ಕ್ವಾಡ್ರಿ ಸೈಕಲ್‌ಗಳು ಆಟೋರಿಕ್ಷಾದಷ್ಟೇ ಗಾತ್ರ ಹೊಂದಿದ್ದರೂ ನಾಲ್ಕು ಚಕ್ರಗಳನ್ನು ಹೊಂದಿರುತ್ತವೆ. ಕ್ವಾಡ್ರಿ ಸೈಕಲ್‌ಗಳನ್ನು ಕಾರಿನಂತೆ ವಿನ್ಯಾಸಗೊಳಿಸಲಾಗಿದ್ದು, ನಾಲ್ಕು ಡೋರ್‌ಗಳನ್ನು ಹೊಂದಿರುತ್ತವೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ನಾಲ್ಕು ಚಕ್ರದ ಆಟೋಗಳಿಗೂ ಅನ್ವಯಿಸಲಿದೆ ಬಿಎಸ್ 6 ನಿಯಮ

ಕೇಂದ್ರ ಸರ್ಕಾರವು ಇತ್ತೀಚಿಗೆ ಕ್ವಾಡ್ರಿ ಸೈಕಲ್‌ಗಳನ್ನು ಮೋಟಾರು ವಾಹನ ಕಾಯ್ದೆ 1988ರ ಅಡಿಯಲ್ಲಿ ಸಾರಿಗೆ ರಹಿತ ವಾಹನಗಳೆಂದು ಘೋಷಿಸಿತ್ತು. ಇನ್ನು ಮುಂದೆ ಕ್ವಾಡ್ರಿ ಸೈಕಲ್‌ಗಳನ್ನು ಖಾಸಗಿ, ಕಮರ್ಷಿಯಲ್ ಹಾಗೂ ಸಾರಿಗೆ ರಹಿತ ವಾಹನಗಳನ್ನಾಗಿ ಬಳಸಬಹುದು.

ನಾಲ್ಕು ಚಕ್ರದ ಆಟೋಗಳಿಗೂ ಅನ್ವಯಿಸಲಿದೆ ಬಿಎಸ್ 6 ನಿಯಮ

ಕ್ವಾಡ್ರಿ ಸೈಕಲ್‌ಗಳನ್ನು ನಗರ ವ್ಯಾಪ್ತಿಯಲ್ಲಿ ಮಾತ್ರ ಬಳಸಬಹುದಾಗಿದೆ. ಬಜಾಜ್ ಕಂಪನಿಯು 2018ರಲ್ಲಿ ಮೊದಲ ಕ್ವಾಡ್ರಿ ಸೈಕಲ್‌ ಆದ ಕ್ಯೂಟ್ ಅನ್ನು ಬಿಡುಗಡೆಗೊಳಿಸಿತ್ತು. ಹಲವಾರು ಭದ್ರತಾ ಲೋಪದೋಷಗಳಿದ್ದ ಕಾರಣಕ್ಕೆ ಕ್ವಾಡ್ರಿ ಸೈಕಲ್‌ಗಳ ಮಾರಾಟವನ್ನು ಸುಪ್ರೀಂ ಕೋರ್ಟ್ ನಿಷೇಧಿಸಿತ್ತು.

Most Read Articles

Kannada
English summary
Quadricycles bought under BS6 emission norms in India. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X