ಬಿಡುಗಡೆಯಾಯ್ತು ಬಿ‍ಎಸ್-6 ಫೋರ್ಡ್ ಇಕೋಸ್ಪೋರ್ಟ್

ಅಮೇರಿಕಾ ಮೂಲದ ಕಾರು ತಯಾರಕ ಕಂಪನಿಯಾದ ಫೋರ್ಡ್ ತನ್ನ ಇಕೋಸ್ಪೋರ್ಟ್ ಕಾಂಪ್ಯಾಕ್ಟ್ ಎಸ್‍‍ಯುವಿಯನ್ನು ಬಿಎಸ್-6 ಆವೃತ್ತಿಯಲ್ಲಿ ಬಿಡುಗಡೆಗೊಳಿಸಿದೆ. ಫೋರ್ಡ್ ಕಂಪನಿಯ ಕಾರುಗಳ ಸರಣಿಯಲ್ಲಿ ಬಿಡುಗಡೆಯಾದ ಮೊದಲ ಬಿಎಸ್-6 ವಾಹನವಾಗಿದೆ.

ಬಿಡುಗಡೆಯಾಯ್ತು ಬಿ‍ಎಸ್-6 ಫೋರ್ಡ್ ಇಕೋಸ್ಪೋರ್ಟ್

ಫೋರ್ಡ್ ಇಕೋಸ್ಪೋರ್ಟ್ ಭಾರತದಲ್ಲಿ 2013ರಲ್ಲಿ ಮೊದಲ ಬಾರಿ ಬಿಡುಗಡೆಯಾಗಿತ್ತು. ಇಕೋಸ್ಪೋರ್ಟ್ ಈ ಸೆಗ್‍‍ಮೆಂಟಿನಲ್ಲಿರುವ ಹಳೆಯ ಮಾದರಿಗಳಲ್ಲಿ ಒಂದಾಗಿದೆ. ಈ ಕಾಂಪ್ಯಾಕ್ಟ್ ಎಸ್‍‍ಯುವಿಯು ಹೆಚ್ಚು ಜನಪ್ರಿಯವಾಗಿರುವುದರಿಂದ ಬಿಎಸ್-6 ಮಾದರಿಯು ಹೆಚ್ಚಿನ ಗ್ರಾಹಕರನ್ನು ಸೆಳೆಯಬಹುದು.

ಬಿಡುಗಡೆಯಾಯ್ತು ಬಿ‍ಎಸ್-6 ಫೋರ್ಡ್ ಇಕೋಸ್ಪೋರ್ಟ್

ಹೊಸ ಫೋರ್ಡ್ ಇಕೋಸ್ಪೋರ್ಟ್ ಕಾರಿನಲ್ಲಿ 1.5 ಲೀಟರ್ ಟಿ‍ಡಿಸಿಐ ಡೀಸೆಲ್ ಎಂಜಿನ್ ಅನ್ನು ಅಳವಡಿಸಿದ್ದಾರೆ. ಈ ಎಂಜಿನ್ 101 ಬಿ‍‍ಹೆಚ್‍‍ಪಿ ಪವರ್ ಮತ್ತು 215 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನೂ 1.5 ಲೀಟರ್ ಟಿಐ-ವಿಸಿಟಿ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಿದ್ದಾರೆ. ಈ ಎಂಜಿನ್ 122 ಬಿ‍‍ಹೆಚ್‍‍ಪಿ ಪವರ್ ಮತ್ತು 149 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಬಿಡುಗಡೆಯಾಯ್ತು ಬಿ‍ಎಸ್-6 ಫೋರ್ಡ್ ಇಕೋಸ್ಪೋರ್ಟ್

ಮಾಲಿನ್ಯವನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಮುಂದಿನ ಏಪ್ರಿಲ್ ತಿಂಗಳಲ್ಲಿ ಬಿಎಸ್-6 ಮಾಲಿನ್ಯ ನಿಯಮವನ್ನು ಜಾರಿಗೊಳಿಸುತ್ತಿದೆ. ಬಿಎಸ್-6 ಮಾಲಿನ್ಯ ನಿಯಮ ಜಾರಿಗೊಳಿಸುವ ಮೊದಲೇ ಇಕೋಸ್ಪೋರ್ಟ್ ಎಸ್‍‍ಯುವಿಯನ್ನು ಬಿಡುಗಡೆಗೊಳಿದೆ. ಹೊಸ ಬಿಎಸ್-6 ಇಕೋಸ್ಪೋರ್ಟ್‍ ಕಾಂಪ್ಯಾಕ್ಟ್ ಎಸ್‍‍ಯುವಿಯು ಇದೇ ತಿಂಗಳು ಅಂತ್ಯದ ವೇಳೆಗೆ ಡೀಲರ್‍‍ಗಳ ಬಳಿ ತಲುಪುವ ನಿರೀಕ್ಷೆಗಳಿವೆ.

ಬಿಡುಗಡೆಯಾಯ್ತು ಬಿ‍ಎಸ್-6 ಫೋರ್ಡ್ ಇಕೋಸ್ಪೋರ್ಟ್

ಫೋರ್ಡ್, ಬಿಎಸ್6 ನಿಯಮಗಳಿಗೆ ಅನುಗುಣವಾಗಿ 1.5 ಲೀಟರಿನ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್‍‍ಗಳನ್ನು ಅಭಿವೃದ್ಧಿ ಪಡಿಸಿದೆ. ಅಧಿಕ ವೆಚ್ಚವಾಗುವ ಕಾರಣಕ್ಕೆ 1.0 ಲೀಟರಿನ ಇಕೋಬೂಸ್ಟ್ ಎಂಜಿನ್ ಅನ್ನು ಹೊಸ ಇಕೋಸ್ಪೋರ್ಟ್‌ನಲ್ಲಿ ಸ್ಥಗಿತಗೊಳಿಸಲಾಗಿದೆ.

ಬಿಡುಗಡೆಯಾಯ್ತು ಬಿ‍ಎಸ್-6 ಫೋರ್ಡ್ ಇಕೋಸ್ಪೋರ್ಟ್

ಇಕೋಸ್ಪೋರ್ಟ್ ಎಸ್‍‍ಯುವಿಯ ಮುಂಭಾಗದಲ್ಲಿ, ಫಾಗ್ ಲ್ಯಾಂಪ್ ಬೆಜೆಲ್ ಮತ್ತು ಗ್ರಿಲ್‍‍ಗಳಿವೆ. ಇಂಟಿರಿಯರ್‍‍ನಲ್ಲಿರುವ ಕ್ಯಾಬಿನ್‌ ಡ್ಯುಯಲ್ ಟೋನ್ ಥೀಮ್ ಹೊಂದಿದೆ. ಸೀಟುಗಳು, ಡೋರ್ ಪ್ಯಾನೆಲ್‍‍ಗಳು, ಪ್ಯಾಸೆಂಜರ್ ಗ್ರಾಬ್ ಹ್ಯಾಂಡಲ್, ಸೆಂಟರ್ ಆರ್ಮ್‌‍‍ರೆಸ್ಟ್ ಹಾಗೂ ಸೆಂಟರ್ ಕನ್ಸೋಲ್‌ಗಳು ಕಂದು ಬಣ್ಣವನ್ನು ಹೊಂದಿವೆ.

ಬಿಡುಗಡೆಯಾಯ್ತು ಬಿ‍ಎಸ್-6 ಫೋರ್ಡ್ ಇಕೋಸ್ಪೋರ್ಟ್

ಹೊಸ ಫೋರ್ಡ್ ಇಕೋಸ್ಪೋರ್ಟ್ ಎಸ್‍‍ಯುವಿಯ ಇಂಟಿರಿಯರ್‍‍ನಲ್ಲಿ ಹಲವಾರು ಫೀಚರ್ಸ್‍‍ಗಳನ್ನು ಅಳವಡಿಸಿದ್ದಾರೆ. ಇದರಲ್ಲಿ ಎಸ್‍‍ವೈಎನ್‍ಸಿ 3 ಇನ್ಫೋಟೇನ್‍‍ಮೆಂಟ್ ಸಿಸ್ಟಂ, 8 ಇಂಚಿನ ಟಚ್‍‍ಸ್ಕ್ರೀನ್ ಮತ್ತು ಟಾಪ್ ವೆರಿಯೆಂಟ್‍ ಆದ ಇಕೋಸ್ಪೋರ್ಟ್ ಎಸ್ ರೂಪಾಂತರದಲ್ಲಿ ಆ್ಯಪಲ್ ಕಾರ್‍‍ಪ್ಲೇ ಮತ್ತು ಆಂಡ್ರಾಯ್ಡ್ ಆಟೋವನ್ನು ಅಳವಡಿಸಲಾಗಿದೆ.ಸುರಕ್ಷತೆಗಾಗಿ ಈ ಎಸ್‍‍‍ಯುವಿಯಲ್ಲಿ 6 ಏರ್‍‍ಬ್ಯಾಗ್‍‍ಗಳನ್ನು ಅಳವಡಿಸಲಾಗಿದೆ.

ಬಿಡುಗಡೆಯಾಯ್ತು ಬಿ‍ಎಸ್-6 ಫೋರ್ಡ್ ಇಕೋಸ್ಪೋರ್ಟ್

ಹೊಸ ಫೋರ್ಡ್ ಇಕೋಸ್ಪೋರ್ಟ್ ರೂಪಾಂತರವನ್ನು ಅವಲಂಬಿಸಿ 9 ಇಂಚಿನ ಟಚ್‍‍ಸ್ಕ್ರೀನ್ ಇನ್ಫೋಟೇನ್‍‍‍ಮೆಂಟ್ ಸಿಸ್ಟಂ ಮತ್ತು ಎಂಬೆಡಡ್ ನ್ಯಾವಿಗೇಷನ್ ಅಳವಡಿಸಲಾಗಿದೆ. ಹೊಸ ಬಿಎಸ್-6 ಇಕೋಸ್ಪೋರ್ಟ್ ಪೆಟ್ರೋಲ್ ಆವೃತ್ತಿಯ ಪ್ರಾರಂಭಿಕ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.8,04 ಲಕ್ಷಗಳಾಗಿದೆ ಮತ್ತು ಬಿಎಸ್-6 ಇಕೋಸ್ಪೋರ್ಟ್ ಡೀಸೆಲ್ ಆವೃತ್ತಿಯ ಪ್ರಾರಂಭಿಕ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.8,54 ಲಕ್ಷಗಳಾಗಿದೆ.

ಬಿಡುಗಡೆಯಾಯ್ತು ಬಿ‍ಎಸ್-6 ಫೋರ್ಡ್ ಇಕೋಸ್ಪೋರ್ಟ್

2020ರ ಫೋರ್ಡ್ ಇಕೋಸ್ಪೋರ್ಟ್ ಎಸ್‍‍ಯುವಿಗೆ 3 ವರ್ಷ ಅಥವಾ 100,000 ಕಿ.ಮೀ ಫ್ಯಾಕ್ಟರಿ ವಾರಂಟಿಯನ್ನು ನೀಡಲಾಗುತ್ತದೆ. ಬಿಎಸ್-4 ಇಕೋಸ್ಪೋರ್ಟ್ ಮಾದರಿಯನ್ನು ಹೊಸ ಬಿಎಸ್-6 ಇಕೋಸ್ಪೋರ್ಟ್ ಮಾದರಿಯ ಬೆಲೆಯನ್ನು ಹೋಲಿಸಿದರೆ ರೂ.13 ಸಾವಿರದಷ್ಟು ಹೆಚ್ಚಾಗಿದೆ.

Most Read Articles

Kannada
English summary
BS6 Ford EcoSport launched at Rs 8.04 lakh. Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X