ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಬಿಎಸ್-6 ಫೋರ್ಡ್ ಫ್ರೀಸ್ಟೈಲ್

ಕಾರು ಉತ್ಪಾದನಾ ಕಂಪನಿಗಳು ತಮ್ಮ ಸರಣಿಯಲ್ಲಿರುವ ಕಾರುಗಳನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗುತ್ತಿದೆ. ಮುಂದಿನ ಏಪ್ರಿಲ್ 1ರಂದು ಬಿಎಸ್-6 ಮಾಲಿನ್ಯ ನಿಯಮ ಜಾರಿಯಾಗುತ್ತಿದೆ.

ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಬಿಎಸ್-6 ಫೋರ್ಡ್ ಫ್ರೀಸ್ಟೈಲ್

ಬಿಎಸ್-6 ಮಾಲಿನ್ಯ ನಿಯಮ ಜಾರಿಯಾಗುವ ಮೊದಲು ಹಲವಾರು ಕಾರು ಉತ್ಪಾದನಾ ಕಂಪನಿಗಳು ತಮ್ಮ ಜನಪ್ರಿಯ ಮಾದರಿಗಳು ಬಿಎಸ್-6 ಆವೃತ್ತಿಗಳನ್ನು ಬಿಡುಗಡೆಗೊಳಿಸುತ್ತಿದೆ. ಇನ್ನು ಕೆಲವು ಮಾದರಿಗಳನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗುತ್ತಿದೆ. ಅದರಂತೆ ಫೋರ್ಡ್ ಕಂಪನಿಯು ತಮ್ಮ ಸರಣಿಯಲ್ಲಿರುವ ಕಾರಗಳನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗುತ್ತಿದೆ.

ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಬಿಎಸ್-6 ಫೋರ್ಡ್ ಫ್ರೀಸ್ಟೈಲ್

ಫೋರ್ಡ್ ಕೆಲವು ಮಾದರಿಗಳನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿದೆ. ಫೋರ್ಡ್ ಕಂಪನಿಯು ತನ್ನ ಫ್ರೀಸ್ಟೈಲ್ ಕಾರನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸುವಲ್ಲಿ ನಿರತರಾಗಿದ್ದಾರೆ. ಇದರ ಭಾಗವಾಗಿ ಹೊಸ ಫೋರ್ಡ್ ಫ್ರೀಸ್ಟೈಲ್ ಕಾರಿನ್ನು ಪುಣೆಯಲ್ಲಿ ಸ್ಪಾಟ್ ಟೆಸ್ಟ್ ಮಾಡಲಾಗಿದೆ.

ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಬಿಎಸ್-6 ಫೋರ್ಡ್ ಫ್ರೀಸ್ಟೈಲ್

ಬಿಎಸ್-6 ಫೋರ್ಡ್ ಫ್ರೀಸ್ಟೈಲ್‍ನ ವಿನ್ಯಾಸದಲ್ಲಿ ಯಾವುದೇ ಹೆಚ್ಚಿನ ಬದಲಾವಣೆಗಳನ್ನು ಮಾಡಲಾಗಿಲ್ಲ. ಈ ಕಾರಿನ ವಿನ್ಯಾಸದಲ್ಲಿ ಕೆಲವು ಸಣ್ಣ ಬದಲಾವಣೆಗಳನ್ನು ಮಾಡುವ ಸಾಧ್ಯತೆಗಳಿದೆ. ಹೊಸದಾಗಿ ಬ್ಲ್ಯಾಕ್ ಅಲಾಯ್ ವ್ಹೀಲ್ ಅನ್ನು ಅಳವಡಿಸಿದ್ದಾರೆ. ಹಿಂದಿನ ಬಿಎಸ್-4 ಮಾದರಿಯಲ್ಲಿ 15 ಇಂಚಿನ ಸ್ಪೋಕ್ ವ್ಹೀಲ್ ಅನ್ನು ಹೊಂದಿತ್ತು.

ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಬಿಎಸ್-6 ಫೋರ್ಡ್ ಫ್ರೀಸ್ಟೈಲ್

ಕಾಂಪ್ಯಾಕ್ಟ್ ಯುಟಿಲಿಟಿ ವೆಹಿಕಲ್ (ಸಿಯುವಿ) ಎಂದು ಕರೆಯಲ್ಪಡುವ ಫೋರ್ಡ್ ಫ್ರೀಸ್ಟೈಲ್ ಅನ್ನು ಫಿಗೊ ಹ್ಯಾಚ್‍‍ಬ್ಯಾಕ್‍ನ ಉತ್ತರಾಧಿಕಾರಿ ಎಂದು ಪರಿಗಣಿಸಲಾಗುವುದಿಲ್ಲ. ಫೋರ್ಡ್ ಇಂಡಿಯಾದ ಇಂಜಿನಿಯರ್‍‍ಗಳು ವಿಭಿನ್ನ ಚಾಲನಾ ಅನುಭವವನ್ನು ನೀಡಲು ಫ್ರೀಸ್ಟೈಲ್‍ನ ಸಸ್ಪೆಂಷನ್ ಅನ್ನು ಮತ್ತು ಇತರ ಚಾಲನಾ ಯುನಿಟ್‍‍ಗಳನ್ನು ಟ್ಯೂನ್ ಮಾಡಲಾಗಿದೆ.

ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಬಿಎಸ್-6 ಫೋರ್ಡ್ ಫ್ರೀಸ್ಟೈಲ್

ಪ್ರಸ್ತುತ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಫೋರ್ಡ್ ಫ್ರೀಸ್ಟೈಲ್ ಕಾರಿನಲ್ಲಿ ಎಂಜಿನ್ ಮತ್ತು 1.2-ಲೀಟರ್ 4 ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದೆ. ಈ ಎಂಜಿನ್ 95 ಬಿಎಚ್‌ಪಿ ಪವರ್ ಮತ್ತು 120 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಬಿಎಸ್-6 ಫೋರ್ಡ್ ಫ್ರೀಸ್ಟೈಲ್

ಇನ್ನು 1.5-ಲೀಟರ್ ಡೀಸೆಲ್ ಎಂಜಿನ್ 99 ಬಿಎಚ್‌ಪಿ ಮತ್ತು 120 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍‍ಗಳೊಂದಿಗೆ 5 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಅನ್ನು ಹೊಂದಿದೆ. ಬಿಎಸ್-6 ಫೋರ್ಡ್ ಫ್ರೀಸ್ಟೈಲ್ ಸ್ಪಾಟ್ ಟೆಸ್ಟ್ ನಡೆಸಿರುವುದನ್ನು ರಶ್‍ಲೇನ್ ಬಹಿರಂಗಪಡಿಸಿದೆ.

ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಬಿಎಸ್-6 ಫೋರ್ಡ್ ಫ್ರೀಸ್ಟೈಲ್

ಇತ್ತೀಚೆಗೆ ಬಿಡುಗಡೆಯಾದ ಹೊಸ ಫೋರ್ಡ್ ಇಕೋಸ್ಪೋರ್ಟ್ ಕಾರಿನಲ್ಲಿ 1.5 ಲೀಟರ್ ಟಿ‍ಡಿಸಿಐ ಡೀಸೆಲ್ ಎಂಜಿನ್ ಅನ್ನು ಅಳವಡಿಸಿದ್ದಾರೆ. ಈ ಎಂಜಿನ್ 101 ಬಿ‍‍ಹೆಚ್‍‍ಪಿ ಪವರ್ ಮತ್ತು 215 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನೂ 1.5 ಲೀಟರ್ ಟಿಐ-ವಿಸಿಟಿ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಿದ್ದಾರೆ. ಈ ಎಂಜಿನ್ 122 ಬಿ‍‍ಹೆಚ್‍‍ಪಿ ಪವರ್ ಮತ್ತು 149 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಬಿಎಸ್-6 ಫೋರ್ಡ್ ಫ್ರೀಸ್ಟೈಲ್

ಹೊಸ ಫೋರ್ಡ್ ಫ್ರೀಸ್ಟೈಲ್ ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡಗಡೆಯಾಗಲಿದೆ. ಭಾರತದಲ್ಲಿ ಬಿಡುಗಡೆಯಾದ ಬಳಿಕ ಹ್ಯುಂಡೈ ಐ20 ಆಕ್ಟಿವ್ ಮತ್ತು ಟೊಯೋಟಾ ಎಟಿಯೊಸ್ ಕಾರುಗಳಿಗೆ ಪೈಪೋಟಿಯನ್ನು ನೀಡುತ್ತದೆ. ಬಿಎಸ್-6 ಫೋರ್ಡ್ ಫ್ರೀಸ್ಟೈಲ್ ಕಾರು ತುಸು ದುಬಾರಿಯಾಗಿರಲಿದೆ.

Most Read Articles

Kannada
Read more on ಫೋರ್ಡ್ ford
English summary
Ford Freestyle BS6 spied testing in Pune – Launch soon. Read in Kananda.
Story first published: Thursday, February 13, 2020, 19:36 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X