ಬುಕ್ಕಿಂಗ್‍‍‍ನಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಬಿಎಸ್-6 ಹ್ಯುಂಡೈ ಕ್ರೆಟಾ

ಹ್ಯುಂಡೈ ಕಂಪನಿಯು ಬಿಎಸ್-6 ಕ್ರೆಟಾ ಎಸ್‍ಯುವಿಯನ್ನು ಈ ವರ್ಷದ ಮಾರ್ಚ್ ತಿಂಗಳಲ್ಲಿ ಭಾರತದಲ್ಲಿ ಬಿಡುಗಡೆಗೊಳಿಸಿತ್ತು. ಹ್ಯುಂಡೈ ಇಂಡಿಯಾ ಕಂಪನಿಯು ಬಿಎಸ್-6 ಕ್ರೆಟಾ ಎಸ್‍ಯುವಿಯನ್ನು 2020ರ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸಲಾಗಿತ್ತು.

ಬುಕ್ಕಿಂಗ್‍‍‍ನಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಬಿಎಸ್-6 ಹ್ಯುಂಡೈ ಕ್ರೆಟಾ

ಭಾರತೀಯ ಮಾರುಕಟ್ಟೆಯಲ್ಲಿ 2020ರ ಹ್ಯುಂಡೈ ಕ್ರೆಟಾ ಎಸ್‍ಯುವಿಗಾಗಿ ಭರ್ಜರಿ ಬುಕ್ಕಿಂಗ್ ದಾಖಲಾಗಿದೆ. ಈ ಹೊಸ ಕ್ರೆಟಾ ಎಸ್‍ಯುವಿಗಾಗಿ ಒಟ್ಟು 40,000 ಕ್ಕೂ ಹೆಚ್ಚು ಬುಕ್ಕಿಂಗ್ ಅನ್ನು ಪಡೆದುಕೊಂಡಿದೆ. ಈ ಮಿಡ್ ಎಸ್‍ಯುವಿಯು ಬಿಡುಗಡೆಯಾದ ಕೆಲವೇ ತಿಂಗಳಲ್ಲಿ ಹೊಸ ಮೈಲಿಗಲ್ಲು ಸಾಧಿಸುವಲ್ಲಿ ಯಶ್ವಸಿಯಾಗಿದೆ. ಲಾಕ್ ಡೌನ್ ಆಗುವ ಮೊದಲು ಹ್ಯುಂಡೈ ಕ್ರೆಟಾ ಎಸ್‍ಯುವಿಯು 14,000 ಪೂರ್ವ ಬುಕ್ಕಿಂಗ್‌ಗಳನ್ನು ಸಹ ಪಡೆಕೊಂಡಿತ್ತು.

ಬುಕ್ಕಿಂಗ್‍‍‍ನಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಬಿಎಸ್-6 ಹ್ಯುಂಡೈ ಕ್ರೆಟಾ

ವಿಶೇಷವೆಂದರೆ ಡೀಸೆಲ್ ರೂಪಾಂತರವು ಶೇ.67 ರಷ್ಟು ಬುಕ್ಕಿಂಗ್ ಅನ್ನು ಪಡೆದುಕೊಂಡಿದ್ದರೆ, ಪೆಟ್ರೋಲ್ ರೂಪಾಂತರವು ಶೇ.33 ರಷ್ಟು ಬುಕ್ಕಿಂಗ್ ಅನ್ನು ಪಡೆದಿದೆ. 2020ರ ಹ್ಯುಂಡೈ ಕ್ರೆಟಾ ಹೊಸ ವಿನ್ಯಾಸವನ್ನು ಹೊಂದಿದೆ.

MOST READ: ದಾಖಲೆ ಪ್ರಮಾಣದ ಬುಕ್ಕಿಂಗ್ ಪಡೆದ ಎಂಜಿ ಹೆಕ್ಟರ್ ಎಸ್‍ಯುವಿ

ಬುಕ್ಕಿಂಗ್‍‍‍ನಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಬಿಎಸ್-6 ಹ್ಯುಂಡೈ ಕ್ರೆಟಾ

ಈ ಎಸ್‍ಯುವಿಯ ಮುಂಭಾಗದಲ್ಲಿರುವ ಹ್ಯುಂಡೈನ ಕ್ಯಾಸ್ಕೇಡಿಂಗ್ ಗ್ರಿಲ್ ಹೆಚ್ಚು ಗಮನ ಸೆಳೆದರೂ, ಹೆಡ್‍‍ಲೈಟ್ ಮತ್ತಷ್ಟು ಗಮನ ಸೆಳೆಯುತ್ತದೆ. ಸ್ಪ್ಲಿಟ್ ಹೆಡ್‍‍‍ಲೈಟ್ ಸ್ಲಿಟ್ ರೀತಿಯ ಎಲ್ಇಡಿ ಡಿಆರ್‍ಎಲ್ ಅನ್ನು ಹೊಂದಿದೆ. ಈ ಎಸ್‍ಯುವಿಯ ಹೆಡ್‌ಲೈಟ್ ಕ್ಲಸ್ಟರ್ ಕೆಳಗೆ ಹೊಸ ಲುಕ್‍‍ನ ಫಾಗ್ ಲ್ಯಾಂಪ್‍‍ಗಳಿವೆ.

ಬುಕ್ಕಿಂಗ್‍‍‍ನಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಬಿಎಸ್-6 ಹ್ಯುಂಡೈ ಕ್ರೆಟಾ

ಇನ್ನು ಬಂಪರ್‍‍ನ ಕೆಳಗೆ ಸ್ಕಫ್ ಪ್ಲೇಟ್‍‍ಗಳಿವೆ. ಸ್ಕ್ವೇರ್ ಶೇಪಿನ ವ್ಹೀಲ್ ಆರ್ಕ್‍‍ಗಳು ಕ್ರೆಟಾಗೆ ಹೆಚ್ಚಿನ ಲುಕ್ ನೀಡುತ್ತವೆ. ಹೊಸ ಕ್ರೆಟಾ ಎಸ್‍ಯುವಿಗೆ ಭಾರತೀಯ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.9.99 ಲಕ್ಷ ಬೆಲೆ ಆದರೆ ಟಾಪ್ ಎಂಡ್ ಮಾದರಿಗೆ ರೂ.17.20 ಲಕ್ಷ ಗಳಾಗಿದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಬುಕ್ಕಿಂಗ್‍‍‍ನಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಬಿಎಸ್-6 ಹ್ಯುಂಡೈ ಕ್ರೆಟಾ

ಹೊಸ ತಲೆಮಾರಿನ ಹ್ಯುಂಡೈ ಕ್ರೆಟಾ ಎಸ್‍‍ಯುವಿಯಲ್ಲಿ ಹೊಸ ಇನ್ಫೋಟೇನ್‍‍ಮೆಂಟ್ ಸಿಸ್ಟಂ ಅಳವಡಿಸಲಾಗಿದೆ. ಈ ಸಿಸ್ಟಂನಲ್ಲಿ ವಾಯ್ಸ್ ಕಮಾಂಡ್ ಹಾಗೂ ಬ್ಲೂಲಿಂಕ್ ಕನೆಕ್ಟಿವಿಟಿ ಫೀಚರ್‍‍ಗಳಿರಲಿವೆ.

ಬುಕ್ಕಿಂಗ್‍‍‍ನಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಬಿಎಸ್-6 ಹ್ಯುಂಡೈ ಕ್ರೆಟಾ

ಈ ಎಸ್‍‍ಯುವಿಯಲ್ಲಿರುವ ಸನ್‍‍ರೂಫ್ ವಾಯ್ಸ್ ಕಮಾಂಡ್‍‍ನಿಂದ ಚಲಿಸಲಿದೆ. ಆಟೋಮ್ಯಾಟಿಕ್ ಮಾದರಿಗಳಲ್ಲಿ ಪ್ಯಾಡಲ್ ಶಿಫ್ಟ್, ಡ್ಯುಯಲ್ ಹೋಸ್ ಚಿಮ್ನಿ, ರಿಮೋಟ್ ಎಂಜಿನ್ ಸ್ಟಾರ್ಟ್ ಅಪ್, ಕ್ರೂಸ್ ಕಂಟ್ರೋಲ್, ಏರ್ ಪ್ಯೂರಿಫೈಯರ್ ಹಾಗೂ ವೈರ್‍‍ಲೆಸ್ ಚಾರ್ಜರ್‍‍ಗಳಿರಲಿವೆ .

MOST READ: ಭರ್ಜರಿಯಾಗಿ ಮಾರಾಟವಾಯ್ತು ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿ

ಬುಕ್ಕಿಂಗ್‍‍‍ನಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಬಿಎಸ್-6 ಹ್ಯುಂಡೈ ಕ್ರೆಟಾ

ಇದರೊಂದಿಗೆ ಹೊಸ ಕ್ರೆಟಾ ಎಸ್‍ಯುವಿಯು ಮೂರು ವಿಭಿನ್ನ ಟ್ರಾಕ್ಷನ್ ಕಂಟ್ರೋಲ್ ಮತ್ತು ಟಿಯರಿಯನ್ ಮೋಡ್‌ಗಳನ್ನು ಹೊಂದಲಿದೆ. ಈ ಹೊಸ ತಾಂತ್ರಕ ಸೌಲಭ್ಯದಿಂದಾಗಿ ಹೆಚ್ಚಿನ ಗ್ರಾಹಕರನ್ನು ಸೆಳೆದಿದೆ.

ಬುಕ್ಕಿಂಗ್‍‍‍ನಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಬಿಎಸ್-6 ಹ್ಯುಂಡೈ ಕ್ರೆಟಾ

ಈ ಜನಪ್ರಿಯಯ ಬಿ‍ಎಸ್-6 ಹ್ಯುಂಡೈ ಕ್ರೆಟಾ ದೇಶಿಯ ಮಾರುಕಟ್ಟೆಯಲ್ಲಿ ಕಿಯಾ ಸೆಲ್ಟೋಸ್, ರೆನಾಲ್ಟ್ ಡಸ್ಟರ್, ಎಂಜಿ ಹೆಕ್ಟರ್ ಹಾಗೂ ಟಾಟಾ ಹ್ಯಾರಿಯರ್‍ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
2020 Hyundai Creta Bookings Crosses The 40,000 Mark Since Its Inception. Read In Kannada.
Story first published: Friday, July 3, 2020, 13:54 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X