ಬಿಡುಗಡೆಯಾಯ್ತು ಬಿಎಸ್-6 ರೆನಾಲ್ಟ್ ಕ್ವಿಡ್ ಆರ್‌ಎಕ್ಸ್‌ಎಲ್ ಆವೃತ್ತಿ

ರೆನಾಲ್ಟ್ ಇಂಡಿಯಾ ಕಂಪನಿಯು ತನ್ನ ಬಿಎಸ್-6 ಕ್ವಿಡ್ ಆರ್‌ಎಕ್ಸ್‌ಎಲ್ ಆವೃತ್ತಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ರೆನಾಲ್ಟ್ ಕ್ವಿಡ್ ಆರ್‌ಎಕ್ಸ್‌ಎಲ್ ಆವೃತ್ತಿಯ ಆರಂಭಿಕ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.4.16 ಲಕ್ಷಗಳಾಗಿದೆ.

ಬಿಡುಗಡೆಯಾಯ್ತು ಬಿಎಸ್-6 ರೆನಾಲ್ಟ್ ಕ್ವಿಡ್ ಆರ್‌ಎಕ್ಸ್‌ಎಲ್ ಆವೃತ್ತಿ

ರೆನಾಲ್ಟ್ ಕ್ವಿಡ್ ಆರ್ಎಕ್ಸ್ಎಲ್ ಆವೃತ್ತಿಯಲ್ಲಿ 1.0-ಲೀಟರ್ ಎಂಜಿನ್ ನೊಂದಿಗೆ ಆಟೋಮ್ಯಾಟಿಕ್ ಮತ್ತು ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯನ್ನು ನೀಡಲಾಗಿದೆ. ಇದರಲ್ಲಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಹೊಂದಿರುವ ರೆನಾಲ್ಟ್ ಕ್ವಿಡ್ ಆರ್‌ಎಕ್ಸ್‌ಎಲ್ 1.0-ಲೀಟರ್ ಬೆಲೆಯು ತುಸು ದುಬಾರಿಯಾಗಿದೆ. ಈ ಆಟೋಮ್ಯಾಟಿಕ್ ಆವೃತ್ತಿಯ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.4.48 ಲಕ್ಷಗಳಾಗಿದೆ.

ಬಿಡುಗಡೆಯಾಯ್ತು ಬಿಎಸ್-6 ರೆನಾಲ್ಟ್ ಕ್ವಿಡ್ ಆರ್‌ಎಕ್ಸ್‌ಎಲ್ ಆವೃತ್ತಿ

ಹೊಸ ರೆನಾಲ್ಟ್ ಕ್ವಿಡ್ ಆರ್‌ಎಕ್ಸ್‌ಎಲ್ ಆವೃತ್ತಿಯಲ್ಲಿ 999 ಸಿಸಿ ಮೂರು ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಿದೆ. ಈ ಎಂಜಿನ್ 5500 ಆರ್‌ಪಿಎಂನಲ್ಲಿ 67 ಬಿಹೆಚ್‌ಪಿ ಮತ್ತು 4,250 ಆರ್‌ಪಿಎಂನಲ್ಲಿ 91 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಬಿಡುಗಡೆಯಾಯ್ತು ಬಿಎಸ್-6 ರೆನಾಲ್ಟ್ ಕ್ವಿಡ್ ಆರ್‌ಎಕ್ಸ್‌ಎಲ್ ಆವೃತ್ತಿ

ಈ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಅಥವಾ ಎಎಂಟಿ ಗೇರ್ ಬಾಕ್ಸ್ ಅನ್ನು ಅಳವಡಿಸಲಾಗಿದೆ. ರೆನಾಲ್ಟ್ ಕ್ವಿಡ್ 1.0-ಲೀಟರ್ ಆರ್‌ಎಕ್ಸ್‌ಎಲ್‌ನ ಎಎಮ್‌ಟಿ ಆವೃತ್ತಿಯಲ್ಲಿ ಬಿಎಸ್ 6 ಪ್ರೇರಿತ ಎರಡು-ಪೆಡಲ್ ಅನ್ನು ನೀಡಿದೆ.

ಬಿಡುಗಡೆಯಾಯ್ತು ಬಿಎಸ್-6 ರೆನಾಲ್ಟ್ ಕ್ವಿಡ್ ಆರ್‌ಎಕ್ಸ್‌ಎಲ್ ಆವೃತ್ತಿ

ಭಾರತೀಯ ಮಾರುಕಟ್ಟೆಯಲ್ಲಿ ಕ್ವಿಡ್ ಹ್ಯಾಚ್‌ಬ್ಯಾಕ್ ಮೊದಲ ತಲೆಮಾರಿನಿಂದ ಇಲ್ಲಿಯವರೆಗೆ ಒಟ್ಟು 3.5 ಲಕ್ಷ ಯೂನಿಟ್‌ಗಳು ಮಾರಾಟ ಮಾಡಲಾಗಿದೆ. ಇತರ ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ಕ್ವಿಡ್‌ನ 45,000 ಯೂನಿಟ್‌ಗಳನ್ನು ರಫ್ತು ಮಾಡಲಾಗಿದೆ.

MOST READ: ಭರ್ಜರಿಯಾಗಿ ಮಾರಾಟವಾಯ್ತು ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿ

ಬಿಡುಗಡೆಯಾಯ್ತು ಬಿಎಸ್-6 ರೆನಾಲ್ಟ್ ಕ್ವಿಡ್ ಆರ್‌ಎಕ್ಸ್‌ಎಲ್ ಆವೃತ್ತಿ

ರೆನಾಲ್ಟ್ ಇಂಡಿಯಾ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ವೆಂಕಟ್ ರಾಮ್ ಅವರು ಮಾತನಾಡಿ, ರೆನಾಲ್ಟ್ ಕಂಪನಿಯ ಬೆಳವಣಿಗೆಯಲ್ಲಿ ಭಾರತೀಯ ಮಾರುಕಟ್ಟೆಯು ಬಹಳ ಪ್ರಮುಖ ಪಾತ್ರವನ್ನು ನಿರ್ವಹಿಸಿದೆ. ಭಾರತದಲ್ಲಿ ಇಲ್ಲಿಯವರೆಗೆ ಕ್ವಿಡ್ ಕಾರಿನ 3.5 ಲಕ್ಷ ಯೂನಿಟ್‌ಗಳು ಮಾರಾಟ ಮಾಡಿದ್ದೇವೆ.

ಬಿಡುಗಡೆಯಾಯ್ತು ಬಿಎಸ್-6 ರೆನಾಲ್ಟ್ ಕ್ವಿಡ್ ಆರ್‌ಎಕ್ಸ್‌ಎಲ್ ಆವೃತ್ತಿ

ಭಾರತೀಯ ಗ್ರಾಹಕರನ್ನು ಸೆಳೆಯುವಲ್ಲಿ ಕ್ವಿಡ್ ಕಾರು ಯಶ್ವಸಿಯಾಗಿದೆ. ಭಾರತೀಯ ಗ್ರಾಹಕರ ನಂಬಿಕೆಗೆ ನಾವು ಕೃತಜ್ಞರಾಗಿರುತ್ತೇವೆ ಎಂದು ಹೇಳಿದರು. ಕ್ವಿಡ್ ರೆನಾಲ್ಟ್ ಇಂಡಿಯಾ ಕಂಪನಿಯ ಸರಣಿಯಲ್ಲಿ ಪ್ರಮುಖ ಕಾರುಗಳಲ್ಲಿ ಇದು ಒಂದಾಗಿದೆ.

MOST READ: ದೋಷ ಪೂರಿತ 22 ಲಕ್ಷ ಕಾರುಗಳನ್ನು ರಿಕಾಲ್ ಮಾಡಲು ಮುಂದಾದ ವೊಲ್ವೊ

ಬಿಡುಗಡೆಯಾಯ್ತು ಬಿಎಸ್-6 ರೆನಾಲ್ಟ್ ಕ್ವಿಡ್ ಆರ್‌ಎಕ್ಸ್‌ಎಲ್ ಆವೃತ್ತಿ

ಭಾರತದಲ್ಲಿ ರೆನಾಲ್ಟ್ ಕ್ವಿಡ್ ಒಟ್ಟು ಆರು ಆವೃತ್ತಿಗಳಲ್ಲಿ ಲಭ್ಯವಿದೆ. ಇದು ಎಸ್‌ಟಿಡಿ, ಆರ್‌ಎಕ್ಸ್‌ಇ, ಆರ್‌ಎಕ್ಸ್‌ಎಲ್, ಆರ್‌ಎಕ್ಸ್‌ಟಿ, ಆರ್‌ಎಕ್ಸ್‌ಟಿ (ಒ) ಮತ್ತು ಕ್ಲೈಂಬರ್ (ಒ) ಆವೃತ್ತಿಯಾಗಿದೆ.

ಬಿಡುಗಡೆಯಾಯ್ತು ಬಿಎಸ್-6 ರೆನಾಲ್ಟ್ ಕ್ವಿಡ್ ಆರ್‌ಎಕ್ಸ್‌ಎಲ್ ಆವೃತ್ತಿ

ರೆನಾಲ್ಟ್ ಕ್ವಿಡ್ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾದ ಮಾದರಿಗಳಲ್ಲಿ ಒಂದಾಗಿದೆ. ಇದೀಗ ಹೊಸ ಆವೃತ್ತಿಯಲ್ಲಿ ಬಿಡುಗಡೆಗೊಳಿಸಿರುವುದರಿಂದ ಹೆಚ್ಚಿನ ಗ್ರಾಹಕರನ್ನು ಆಕರ್ಷಿಸಲು ಸಹಾಯವಾಗುತ್ತದೆ. ರೆನಾಲ್ಟ್ ಕ್ವಿಡ್ ಕಾರು ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಕಾರಿಗೆ ಪೈಪೋಟಿಯನ್ನು ನೀಡುತ್ತದೆ.

Most Read Articles

Kannada
English summary
Renault Kwid RXL Variant Launched With 1.0-Litre BS6 Engine. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X