ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಟಾಟಾ ಕಾರುಗಳು

ಟಾಟಾ ಮೋಟಾರ್ಸ್ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ನೆಕ್ಸಾನ್ ಮತ್ತು ಆಲ್‌ಟ್ರೊಜ್ ಮಾದರಿಗಳ ಬೆಲೆಯನ್ನು ಹೆಚ್ಚಿಸಿದೆ. ಈ ಎರಡು ಜನಪ್ರಿಯ ಮಾದರಿಗಳ ರೂಪಾಂತರವನ್ನು ಅವಲಂಬಿಸಿ ರೂ.1,000 ದಿಂದ ರೂ.16,000 ಗಳವರೆಗೆ ಬೆಲೆಯನ್ನು ಹೆಚ್ಚಿಸಿದೆ.

ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಟಾಟಾ ಕಾರುಗಳು

ಟಾಟಾ ಮೋಟಾರ್ಸ್ ಕಂಪನಿಯು ತನ್ನ 'ನ್ಯೂ ಫಾರೆವರ್' ಸರಣಿಯ ಪ್ಯಾಸೆಂಜರ್ ವಾಹನಗಳ ಬೆಲೆಯನ್ನು ಪರಿಷ್ಕರಿಸಲಾಗಿದೆ. ಹೆಚ್ಚುತ್ತಿರುವ ಮಾರುಕಟ್ಟೆಯ ಪರಿಸ್ಥಿತಿಗಳು, ಇನ್ಪುಟ್ ವೆಚ್ಚಗಳಲ್ಲಿನ ಬದಲಾವಣೆಗಳು ಮತ್ತು ಇತರ ಆರ್ಥಿಕ ವೆಚ್ಚಗಳು ಹೆಚ್ಚಳವನ್ನು ಪರಿಗಣಿಸಿ ತನ್ನ ಸರಣಿಯ ಕಾರುಗಳ ಬೆಲೆಯನ್ನು ಪರಿಷ್ಕರಿಸಿದೆ ಎಂದು ಟಾಟಾ ಕಂಪನಿ ತಿಳಿಸಿದೆ. ಟಾಟಾ ಮೋಟಾರ್ಸ್ ಕಂಪನಿಯು ನೆಕ್ಸಾನ್ ಮತ್ತು ಆಲ್‌ಟ್ರೊಜ್ ಮಾದರಿಗಳ ಎಲ್ಲಾ ರೂಪಾಂತರಗಳ ಬೆಲೆಯನ್ನು ಹೆಚ್ಚಿಸಲಾಗಿದೆ. ಈ ಎರಡು ಮಾದರಿಗಳಲ್ಲಿಇತರ ಯಾವುದೇ ಬದಲಾವಣೆಗಳನ್ನು ಹೊಂದಿಲ್ಲ.

ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಟಾಟಾ ಕಾರುಗಳು

ಟಾಟಾ ಆಲ್‌ಟ್ರೊಜ್ ಪೆಟ್ರೋಲ್ ಮತ್ತು ಡೀಸೆಲ್ ಎರಡು ರೂಪಾಂತರಗಳಲ್ಲಿ ಲಭ್ಯವಿದೆ. ಈ ಟಾಟಾ ಆಲ್‌ಟ್ರೊಜ್ ಕಾರು ಹಲವಾರು ಅತ್ಯಾಧುನಿಕ ಫೀಚರ್ ಗಳನ್ನ್ ಹೊಂದಿದೆ. ಟಾಟಾ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಕಂಪನಿಯ ಮೊದಲ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಆಗಿ ಆಲ್‌‌ಟ್ರೊಜ್ ಕಾರನ್ನು ಬಿಡುಗಡೆಗೊಳಿಸಿತು.

MOST READ: ಭಾರತಕ್ಕೆ ಲಗ್ಗೆ ಇಡಲಿದೆ ಹೊಸ ಹೋಂಡಾ ಹೆಚ್‌ಆರ್-ವಿ ಎಸ್‍ಯುವಿ

ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಟಾಟಾ ಕಾರುಗಳು

ಟಾಟಾ ಆಲ್‌ಟ್ರೊಜ್ ಹ್ಯಾಚ್‌ಬ್ಯಾಕ್‌ನ ಟಾಪ್-ಸ್ಪೆಕ್ ಎಕ್ಸ್‌ಝಡ್(ಒ) ರೂಪಾಂತರದ ಹೊರತಾಗಿ ಇತರ ಎಲ್ಲಾ ರೂಪಾಂತರಗಳು ಮತ್ತು ಕಸ್ಟಮೈಸ್ ಪ್ಯಾಕೇಜ್‌ಗಳು ಸುಮಾರು ರೂ.15,000 ಮತ್ತು ಟಾಪ್ ಸ್ಪೆಕ್ ರೂಪಾಂತರವು ರೂ.6,000 ಗಳಿಂದ ಹೆಚ್ಚಿಸಲಾಗಿದೆ.

Altroz Petrol New Price Old Price Difference
XE ₹5,44,000 ₹5,29,000 ₹15,000
XM

₹6,30,000

₹6,15,000 ₹15,000
XT ₹6,99,000 ₹6,84,000 ₹15,000
XZ ₹7,59,000 ₹7,44,000 ₹15,000
XZ(O) ₹7,75,000 ₹7,69,000 ₹6,000
XE Rhythm ₹5,70,000 ₹5,54,000 ₹16,000
XM Style ₹6,64,000 ₹6,49,000 ₹15,000
XM Rhythm ₹6,69,000 ₹6,54,000 ₹15,000
XM R+S ₹6,94,000 ₹6,79,000 ₹15,000
XT Luxe ₹7,38,000 ₹7,23,000 ₹15,000
XZ Urban ₹7,89,000 ₹7,74,000 ₹15,000
Atlroz Diesel New Price Old Price Difference
XE ₹6,99,000 ₹6,99,000 0
XM ₹7,90,000 ₹7,75,000 ₹15,000
XT ₹8,59,000 ₹8,44,000 ₹15,000
XZ ₹9,19,000 ₹9,04,000 ₹15,000
XZ(O) ₹9,35,000 ₹9,29,000 ₹6,000
XE Rhythm ₹7,27,000 ₹7,24,000 ₹3,000
XM Style ₹8,24,000 ₹8,09,000 ₹15,000
XM Rhythm ₹8,29,000 ₹8,14,000 ₹15,000
XM R+S ₹8,54,000 ₹8,39,000 ₹15,000
XT Luxe ₹8,98,000 ₹8,44,000 ₹54,000
XZ Urban ₹9,49,000 ₹9,34,000 ₹15,000
ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಟಾಟಾ ಕಾರುಗಳು

ಇನ್ನು ಡೀಸೆಲ್ ಮಾದರಿಯ ಎಂಟ್ರಿ ಲೆವೆಲ್ ಎಕ್ಸ್‌ಇ ರೂಪಾಂತರದ ಬೆಲೆಯಲ್ಲಿ ಯಾವುದೇ ಹೆಚ್ಚಳವನ್ನು ಪಡೆಯುವುದಿಲ್ಲ. ಕಸ್ಟಮೈಸ್ ಮಾಡಿದ ಪ್ಯಾಕೇಜ್ ಹೊಂದಿರುವ ಎಕ್ಸ್‌ಇ ರಿದಮ್ ಡೀಸೆಲ್ ರೂಪಾಂತರವು ರೂ.3,000 ಗಳವರೆಗೆ ಹೆಚ್ಚಾಗಿದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಟಾಟಾ ಕಾರುಗಳು

ಟಾಟಾ ನೆಕ್ಸಾನ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳನ್ನು ಹೊಂದಿರುವ ಕಾಂಪ್ಯಾಕ್ಟ್ ಎಸ್‍ಯುವಿಯಾಗಿದೆ. ಟಾಟಾ ನೆಕ್ಸಾನ್ ಡ್ಯುಯಲ್ ಟೋನ್ ಬಣ್ಣಗಳ ಆಯ್ಕೆಯನ್ನು ಹೊಂದಿದೆ.

ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಟಾಟಾ ಕಾರುಗಳು

ಬೆಲೆ ಹೆಚ್ಚಳದ ನಂತರ ನೆಕ್ಸಾನ್ ಪೆಟ್ರೋಲ್ ಎಕ್ಸ್‌ಇ ಆರಂಭಿಕ ಬೆಲೆಯು ರೂ.6.69 ಲಕ್ಷಗಳಾಗಿದೆ. ಟಾಪ್ ಸ್ಪೆಕ್ ಎಕ್ಸ್‌ಝಡ್ ಪ್ಲಸ್ ಡ್ಯುಯಲ್ ಟೋನ್ (ಎಸ್) ಬೆಲೆಯು ರೂ.11.34 ಲಕ್ಷ, ಡೀಸೆಲ್ ಎಕ್ಸ್‌ಇ ರೂಪಾಂತರದ ಬೆಲೆಯು ರೂ, 8.45 ಲಕ್ಷಗಳಾದರೆ ಟಾಪ್-ಸ್ಪೆಕ್ ಎಕ್ಸ್‌ಝಡ್ ಪ್ಲಸ್ ಡ್ಯುಯಲ್ ಟೋನ್(ಒ) ರೂಪಾಂತರಕ್ಕೆ ರೂ.12.7 ಲಕ್ಷಗಳಾಗಿದೆ.

MOST READ: ಗ್ಲೋಬಲ್ ಎನ್‌ಸಿಎಪಿಯ ಸುರಕ್ಷತಾ ಟೆಸ್ಟ್​ನಲ್ಲಿ ಅಗ್ರಸ್ಥಾನಗಳಿಸಿದ ಮಹೀಂದ್ರಾ ಕಾರು

ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಟಾಟಾ ಕಾರುಗಳು

ಟಾಟಾ ಮೋಟಾರ್ಸ್ ಕಂಪನಿಯು ಹೊಸ ಆಲ್‌‌ಟ್ರೊಜ್ ಟರ್ಬೋ ಪೆಟ್ರೋಲ್ ಆವೃತ್ತಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಇದರ ಭಾಗವಾಗಿ ಟಾಟಾ ಕಂಪನಿಯು ಹೊಸ ಆಲ್‌‌ಟ್ರೊಜ್ ಟರ್ಬೋ ಪೆಟ್ರೋಲ್ ಆವೃತ್ತಿಯನ್ನು ಭಾರತದಲ್ಲಿ ಸ್ಪಾಟ್ ಟೆಸ್ಟ್ ನಡೆಸಿದೆ.

Nexon PetrolPrice

Nexon Petrol Price
XE ₹6,99,900
XM ₹7,84,500
XMA ₹8,44,500
ZX ₹9,64,500
XZ+ ₹9,84,500
Z+ DT ₹10,24,500
XZA+ DT ₹10,24,500
XZA+ ₹10,44,500
XZ+ (O) ₹10,44,500
XZ+ DT (O) ₹10,54,500
XZA+ (O) ₹10,84,500
XZ+ (S) ₹11,04,500
XZ+ DT (S) ₹11,14,500
XZA+ DT (S) ₹11,34,500
XZA+ (S) ₹10,70,000
Nexon Diesel Price
XE ₹8,45,000
XM ₹9,20,000
XMA ₹9,80,000
ZX ₹10,20,000
XZ+ ₹11,00,000
XZ+ DT ₹11,20,000
XZA+ DT ₹11,80,000
XZA+ ₹11,60,000
XZ+ (O) ₹11,90,000
XZ+ DT (O) ₹12,10,000
XZA+ (O) ₹12,70,000
XZ+ (S) ₹11,60,000
XZ+ DT (S) ₹11,80,000
XZA+ DT (S) ₹12,40,000
XZA+ (S) ₹12,20,000
ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಟಾಟಾ ಕಾರುಗಳು

ಟಾಟಾ ಮೋಟಾರ್ಸ್ ಕಂಪನಿಯು ಭಾರತದಲ್ಲಿ ತನ್ನ ಜನಪ್ರಿಯ ಮಾದರಿಗಳ ಬೆಲೆಯನ್ನು ಹೆಚ್ಚಿಸಲಾಗಿದೆ. ಆದರೆ ಟಾಟಾ ಕಂಪನಿಯು ನೆಕ್ಸಾನ್ ಮತ್ತು ಆಲ್‌ಟ್ರೊಜ್ ಕಾರುಗಳ ಬೆಲೆ ಹೆಚ್ಚಿಸಿರುವುದರ ಹಿಂದಿನ ಕಾರಣವನ್ನು ಬಹಿರಂಗಪಡಿಸಿಲ್ಲ.

Most Read Articles

Kannada
English summary
Tata Nexon & Altroz Price Increase Announced In India. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X