Just In
- 4 min ago ಫ್ಯಾಮಿಲಿ ಕಾರಾಗಿ ಜನರ ಮನಗೆದ್ದ ಹ್ಯುಂಡೈ ಅಲ್ಕಾಜರ್ ಎಸ್ಯುವಿಯ ಮೇಲೆ ಭರ್ಜರಿ ಡಿಸ್ಕೌಂಟ್
- 1 hr ago Elevate: ಶ್ರೀಸಾಮಾನ್ಯನ ಬಿಎಂಡಬ್ಲ್ಯೂ.. ಹೋಂಡಾ ಎಲಿವೇಟ್ ಖರೀದಿಸಬೇಕೇ? ಆನ್-ರೋಡ್ ಬೆಲೆ ಎಷ್ಟು, EMI ಏನು?
- 1 hr ago ಜಾವಾ ಮೋಟಾರ್ಸೈಕಲ್ ಮಾಲೀಕರಿಗೆ ಸಿಹಿಸುದ್ದಿ: ಈ ಅವಕಾಶ ಕಳೆದುಕೊಳ್ಳಬೇಡಿ!
- 2 hrs ago ದೊಡ್ಡ ಸಿಗ್ನಲ್ ಕೊಟ್ಟ ಫೋರ್ಡ್: ಭಾರತಕ್ಕೆ ಬರುತ್ತಿದೆ ಹೊಸ ಎಸ್ಯುವಿ... ಟಾಟಾಗೆ ಆತಂಕ ಶುರು
Don't Miss!
- Finance ಕಬ್ಬನ್ ಪಾರ್ಕ್ನಲ್ಲಿ ಮರ ಅಪ್ಪಿಕೊಳ್ಳುವ ಕಾರ್ಯಕ್ರಮಕ್ಕೆ ತಲಾ 1,500 ರೂ. ಶುಲ್ಕವಿಟ್ಟ ಕಂಪನಿ!
- Technology Itel: ಐಟೆಲ್ ಸೂಪರ್ ಗುರು 4G ಫೋನ್ ಲಾಂಚ್! ಯುಪಿಐ ಬೆಂಬಲ
- Movies ನಟಿ ಪ್ರೀತಿ ಜಿಂಟಾ ಮದುವೆ ಮುನ್ನವೇ 34 ಮಕ್ಕಳಿಗೆ ತಾಯಿ ಪ್ರೀತಿ ನೀಡಿದ ವಿಷಯ ನಿಮಗೆ ಗೊತ್ತೇ?
- News ರಜನಿಕಾಂತ್, ವಿಜಯ್ ಸೇತುಪಥಿ, ಧನುಷ್.. ಯಾರೆಲ್ಲಾ ವೋಟ್ ಹಾಕಿದ್ರು?
- Lifestyle ಸ್ವತಂತ್ರ ಭಾರತದ ಮೊದಲ ಮತದಾರನಿಲ್ಲದ ಮೊದಲ ಚುನಾವಣೆ ಇದು..! ಯಾರು ಈ ಮತದಾರ ಗೊತ್ತಾ?
- Sports IPL 2024: ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದರೂ ಹಾರ್ದಿಕ್ ಪಾಂಡ್ಯಗೆ ಭಾರೀ ಮೊತ್ತದ ದಂಡ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜನಪ್ರಿಯ ಟಾಟಾ ನೆಕ್ಸಾನ್ ಕಾರಿನ ಮೇಲೆ ಭರ್ಜರಿ ಆಫರ್
ಟಾಟಾ ಮೋಟಾರ್ಸ್ ಕಂಪನಿಯ ಕಾರುಗಳ ಸರಣಿಯಲ್ಲಿ ನೆಕ್ಸಾನ್ ಕೂಡ ಜನಪ್ರಿಯ ಮಾದರಿಗಳಲ್ಲಿ ಒಂದಾಗಿದೆ. ಇತ್ತೀಚೆಗೆ ಟಾಟಾ ತನ್ನ ನೆಕ್ಸಾನ್ ಮಾದರಿಯ ಎಕ್ಸ್ಎಂ(ಎಸ್) ಎಂಬ ಹೊಸ ವೆರಿಯೆಂಟ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಿತ್ತು.
ಟಾಟಾ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಮಾದರಿಗಳನ್ನು ಪರಿಚಯಿಸಲಿದೆ. ಟಾಟಾ ಕಂಪನಿಯು ಭಾರತದಲ್ಲಿ ಮಾರಾಟವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ. ಇದೀಗ ಟಾಟಾ ಕಂಪನಿಯು ಗ್ರಾಹಕರನ್ನು ಆಕರ್ಷಿಸಲು ತನ್ನ ನೆಕ್ಸಾನ್ ಕಾರಿನ ಮೇಲೆ ಇಎಂಐ ಆಫರ್ ಅನ್ನು ಘೋಷಿಸಿದೆ. ನೆಕ್ಸಾನ್ ಕಾರಿನ ಮೇಲೆ ರೂ.5,999 ಗಳವರೆಗಿನ ಇಎಂಐ ಆಫರ್ ಅನ್ನು ಘೋಷಿಸಿದೆ. ರೂ.5,999 ಇಎಂಐ ಆಫರ್ ಆರಂಭಿಕ ಆರು ತಿಂಗಳವರೆಗೆ ಮಾತ್ರ ಅನ್ವಯಿಸುತ್ತದೆ.
ನಂತರ ತಿಂಗಳಲ್ಲಿ ಇಎಂಐ ಮೊತ್ತವು ಹೆಚ್ಚಾಗುತ್ತದೆ ಮತ್ತು ಐದು ವರ್ಷಗಳ ಸಾಲದ ಅವಧಿಯುದ್ದಕ್ಕೂ ಕ್ರಮೇಣ ಹೆಚ್ಚಾಗುತ್ತದೆ. ಇದಲ್ಲದೆ, ಟಾಟಾ ನೆಕ್ಸನ್ಗಾಗಿ ಇತರ ಆಸಕ್ತಿದಾಯಕ ಫೈನಾನ್ಸ್ ಆಫರ್ ಅನ್ನು ನೀಡುತ್ತಿದೆ.
MOST READ: 2020ರ ಸಿಟಿ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹೋಂಡಾ
ಹೊಸ ಟಾಟಾ ನೆಕ್ಸಾನ್ ಎಕ್ಸ್ಎಂ(ಎಸ್) ವೆರಿಯೆಂಟ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಮಾರಾಟ ಮಾಡಲಾಗುತ್ತದೆ. ಇನ್ನು ಹೊಸ ಕಿಯಾ ಸೊನೆಟ್ ಕಾಂಪ್ಯಾಕ್ಟ್ ಎಸ್ಯುವಿಗೆ ಪೈಪೋಟಿ ನೀಡಲು ಈ ಆಫರ್ ನೀಡಿರಬಹುದು ಎಂದು ನಿರೀಕ್ಷಿಸುತ್ತೇವೆ.
ಕಿಯಾ ಸೊನೆಟ್ ಕಾಂಪ್ಯಾಕ್ಟ್ ಎಸ್ಯುವಿಗೆ ಪೈಪೋಟಿ ನೀಡಲು ಇತ್ತೀಚೆಗೆ ಟಾಟಾ ಕಂಪನಿಯು ನೆಕ್ಸಾನ್ ಮಾದರಿಯ ಎಕ್ಸ್ಎಂ(ಎಸ್) ಎಂಬ ಹೊಸ ವೆರಿಯೆಂಟ್ ಬಿಡುಗಡೆಗೊಳಿಸಿತ್ತು. ಹೊಸ ನೆಕ್ಸಾನ್ ಎಕ್ಸ್ಎಂ(ಎಸ್) ಆರಂಭಿಕೆ ಬೆಲೆಯು ರೂ.8.36 ಲಕ್ಷಗಳಾಗಿದೆ. ಇನ್ನು ಹೊಸ ವರಿಯೆಂಟ್ನ ಡೀಸೆಲ್-ಆಟೋಮ್ಯಾಟಿಕ್ ಆವೃತ್ತಿಗೆ ರೂ.10.30 ಲಕ್ಷಗಳಾಗಿದೆ. ಈ ಎಲ್ಲಾ ಬೆಲೆಗಳು ದೆಹಲಿ ಎಕ್ಸ್ ಶೋರೂಂ ಪ್ರಕಾರವಾಗಿದೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್
ಟಾಟಾ ನೆಕ್ಸಾನ್ ಕಾರಿನಲ್ಲಿ 1.2-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 118 ಬಿಹೆಚ್ಪಿ ಪವರ್ ಮತ್ತು 170 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
ಇನ್ನು 1.5-ಲೀಟರ್ ಡೀಸೆಲ್ ಎಂಜಿನ್ ಅನ್ನು ಅಳವಡಿಸಿದೆ. ಈ ಎಂಜಿನ್ 108 ಬಿಹೆಚ್ಪಿ ಪವರ್ ಮತ್ತು 260 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು ಈ ಎರಡು ಎಂಜಿನ್ ಗಳೊಂದಿಗೆ 6-ಸ್ಪೀಡ್ ಮ್ಯಾನುವಲ್ ಅಥವಾಆ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.
MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ
ಹೊಸ ಟಾಟಾ ನೆಕ್ಸಾನ್ ಎಕ್ಸ್ಎಂ(ಎಸ್) ವೆರಿಯೆಂಟ್ ನೆಕ್ಸಾನ್ ಸರಣಿಯ 'ಎಕ್ಸ್ಇ' ಮತ್ತು 'ಎಕ್ಸ್ಎಂ' ವರಿಯೆಂಟ್ಗಳಿಗಿಂತ ಮೇಲಿನ ಸ್ಥಾನದಲ್ಲಿರುತ್ತದೆ. ಹೊಸ ನೆಕ್ಸಾನ್ ಎಕ್ಸ್ಎಂ(ಎಸ್) ವೆರಿಯೆಂಟ್ ಎಲೆಕ್ಟ್ರಿಕ್ ಸನ್ರೂಫ್ ಅನ್ನು ಹೊಂದಿದೆ.
ಎಲೆಕ್ಟ್ರಿಕ್ ಸನ್ರೂಫ್ ಸೇರ್ಪಡೆಯ ಹೊರತಾಗಿ, ಹೊಸ ನೆಕ್ಸನ್ ಎಕ್ಸ್ಎಂ(ಎಸ್) ವರಿಯೆಂಟ್ನಲ್ಲಿ ಹಲವು ಪ್ರೀಮಿಯಂ ಫೀಚರ್ ಗಳನ್ನು ಹೊಂದಿದೆ. ಈ ಎಕ್ಸ್ಎಂ(ಎಸ್) ವೆರಿಯೆಂಟ್ನಲ್ಲಿ ಹೆಡ್ಲ್ಯಾಂಪ್, ರೈನ್-ಸೆನ್ಸಿಂಗ್ ವೈಪರ್ಗಳು ಮತ್ತು ಸ್ಟೀಯರಿಂಗ್-ಮೌಂಟಡ್ ಕಂಟ್ರೋಲ್ ಗಳನ್ನು ಒಳಗೊಂಡಿದೆ.
ಹೊಸ ಟಾಟಾ ನೆಕ್ಸಾನ್ ಎಕ್ಸ್ಎಂ(ಎಸ್) ವರಿಯೆಂಟ್ನಲ್ಲಿ 'ಎಕ್ಸ್ಎಂ' ಮಾದರಿಯಲ್ಲಿರುವಂತಹ ಎಲ್ಇಡಿ ಡಿಆರ್ಎಲ್ಗಳು, ಕನೆಕ್ಟ್ ನೆಕ್ಸ್ಟ್ ಇನ್ಫೋಟೈನ್ಮೆಂಟ್ ಸಿಸ್ಟಂ, ಹಿಲ್-ಹೋಲ್ಡ್ ಕಂಟ್ರೋಲ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಡ್ಯುಯಲ್ ಫ್ರಂಟ್ ಏರ್ಬ್ಯಾಗ್ಗಳು ಮತ್ತು ಇತರ ಫೀಚರ್ ಗಳನ್ನು ಹೊಂದಿವೆ.