ಐಷಾರಾಮಿ ಕಾರುಗಳಂತೆ ಮಾಡಿಫೈಗೊಂಡ ಬಜೆಟ್ ಬೆಲೆಯ ಕಾರುಗಳಿವು

ಪ್ರತಿಯೊಬ್ಬ ಕಾರು ಪ್ರಿಯರಿಗೆ ಐಷಾರಾಮಿ ಕಾರು ಖರೀದಿಸುವ ಕನಸಿರುತ್ತದೆ. ಆದರೆ ಅವುಗಳ ಬೆಲೆ ದುಬಾರಿಯಾಗಿರುವುದರಿಂದ ಅವರ ಕನಸು ಕನಸಾಗಿಯೇ ಉಳಿಯುತ್ತದೆ. ಕೆಲವು ಕಂಪನಿಗಳು ಕಾರುಗಳನ್ನು ಕಸ್ಟಮೈಸ್ ಹಾಗೂ ಮಾಡಿಫೈಗೊಳಿಸುವ ಮೂಲಕ ಐಷಾರಾಮಿ ಕಾರು ಖರೀದಿಯ ಕನಸನ್ನು ನನಸಾಗಿಸುತ್ತವೆ.

ಐಷಾರಾಮಿ ಕಾರುಗಳಂತೆ ಮಾಡಿಫೈಗೊಂಡ ಬಜೆಟ್ ಬೆಲೆಯ ಕಾರುಗಳಿವು

ಬಜೆಟ್ ಬೆಲೆಯ ಕಾರುಗಳನ್ನು ಐಷಾರಾಮಿ ಹಾಗೂ ಸೂಪರ್ ಕಾರುಗಳಾಗಿ ಮಾಡಿಫೈಗೊಳಿಸಿರುವ ಬಗೆ ಕಾರ್ ಟಾಕ್ ವರದಿ ಮಾಡಿದೆ. ಮಾಡಿಫೈಗೊಂಡಿರುವ ಈ ಕಾರುಗಳಲ್ಲಿದ್ದ ಮೂಲ ಕಂಪನಿಯ ಲೋಗೊಗಳನ್ನು ತೆಗೆದು ಹಾಕಿ ಐಷಾರಾಮಿ ಕಾರುಗಳ ಲೋಗೊವನ್ನು ಅಳವಡಿಸಲಾಗಿದೆ. ಈ ಮೂಲಕ ಐಷಾರಾಮಿ ಕಾರುಗಳ ಲುಕ್ ನೀಡುವ ಪ್ರಯತ್ನ ಮಾಡಲಾಗಿದೆ.

ಐಷಾರಾಮಿ ಕಾರುಗಳಂತೆ ಮಾಡಿಫೈಗೊಂಡ ಬಜೆಟ್ ಬೆಲೆಯ ಕಾರುಗಳಿವು

ಆಡಿ ಸಿಯಾಜ್

ಮಾರುತಿ ಸುಜುಕಿ ಕಂಪನಿಯ ಸಿಯಾಜ್ ಕಾರಿನಲ್ಲಿದ್ದ ಮಾರುತಿ ಸುಜುಕಿ ಕಂಪನಿಯ ಲೋಗೊವನ್ನು ತೆಗೆದುಹಾಕಲಾಗಿದೆ. ಲೋಗೋ ಮಾತ್ರವಲ್ಲದೆ ಫ್ರಂಟ್ ಸೈಡ್ ಗ್ರಿಲ್ ಅನ್ನು ಸಹ ಬದಲಿಸಲಾಗಿದೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಐಷಾರಾಮಿ ಕಾರುಗಳಂತೆ ಮಾಡಿಫೈಗೊಂಡ ಬಜೆಟ್ ಬೆಲೆಯ ಕಾರುಗಳಿವು

ಇವುಗಳ ಜೊತೆಗೆ ಈ ಕಾರಿನಲ್ಲಿ ಆಡಿ ಕಾರಿನಲ್ಲಿರುವಂತಹ ಫಾಗ್ ಲ್ಯಾಂಪ್, ಬಾನೆಟ್, ಹೆಡ್‌ಲೈಟ್ ಗಳನ್ನು ಅಳವಡಿಸಲಾಗಿದೆ. ಈ ಮೂಲಕ ಸಾಮಾನ್ಯ ಮಾರುತಿ ಸಿಯಾಜ್ ಕಾರನ್ನು ದುಬಾರಿ ಬೆಲೆಯ ಆಡಿ ಕಾರಿನಂತೆ ಮಾಡಿಫೈಗೊಳಿಸಲಾಗಿದೆ.

ಐಷಾರಾಮಿ ಕಾರುಗಳಂತೆ ಮಾಡಿಫೈಗೊಂಡ ಬಜೆಟ್ ಬೆಲೆಯ ಕಾರುಗಳಿವು

ಲೆಕ್ಸಸ್ ಫಾರ್ಚೂನರ್

ಲೆಕ್ಸಸ್, ಟೊಯೊಟಾ ಕಂಪನಿಯ ಪ್ರೀಮಿಯಂ ಕಾರ್ ಆಗಿದೆ. ಲೆಕ್ಸಸ್ ಕಾರುಗಳು ದುಬಾರಿ ಬೆಲೆಯನ್ನು ಹೊಂದಿವೆ. ಈ ಕಾರಣಕ್ಕೆ ಸೀಮಿತ ಸಂಖ್ಯೆಯ ಕಾರುಗಳು ಮಾತ್ರ ಮಾರಾಟವಾಗುತ್ತವೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಐಷಾರಾಮಿ ಕಾರುಗಳಂತೆ ಮಾಡಿಫೈಗೊಂಡ ಬಜೆಟ್ ಬೆಲೆಯ ಕಾರುಗಳಿವು

ಟೊಯೊಟಾ ಫಾರ್ಚೂನರ್ ಕಾರು ಮಾಲೀಕರೊಬ್ಬರು ತಮ್ಮ ಕಾರ್ ಅನ್ನು ಲೆಕ್ಸಸ್ ಕಾರಿನಂತೆ ಮಾಡಿಫೈಗೊಳಿಸಿದ್ದಾರೆ. ಈ ಕಾರಣಕ್ಕೆ ಫಾರ್ಚೂನರ್ ಕಾರಿನ ಮುಂಭಾಗದ ಗ್ರಿಲ್ ಹಾಗೂ ಟಯರ್‌ಗಳನ್ನು ಬದಲಿಸಲಾಗಿದೆ. ಆದರೆ ಟೊಯೊಟಾ ಕಂಪನಿಯ ಲೋಗೊವನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ.

ಐಷಾರಾಮಿ ಕಾರುಗಳಂತೆ ಮಾಡಿಫೈಗೊಂಡ ಬಜೆಟ್ ಬೆಲೆಯ ಕಾರುಗಳಿವು

ಟೊಯೊಟಾ ಫಾರ್ಚೂನರ್ ಕಾರನ್ನು ಲೆಕ್ಸಸ್ ಕಾರಿನಂತೆ ಮಾಡಿಫೈಗೊಳಿಸಲು ಕೆಲವು ಫೀಚರ್ ಗಳನ್ನು ಅಳವಡಿಸಲಾಗಿದೆ. ಮಾಡಿಫೈಗೊಂಡ ಫಾರ್ಚೂನರ್ ಲೆಕ್ಸಸ್ ಕಾರಿನ ಎಲ್‌ಎಕ್ಸ್ ಮಾದರಿಯಂತೆ ಕಾಣುತ್ತದೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಐಷಾರಾಮಿ ಕಾರುಗಳಂತೆ ಮಾಡಿಫೈಗೊಂಡ ಬಜೆಟ್ ಬೆಲೆಯ ಕಾರುಗಳಿವು

ಬೆಂಝ್ ಸ್ಕಾರ್ಪಿಯೋ

ಮಹೀಂದ್ರಾ ಸ್ಕಾರ್ಪಿಯೋದಲ್ಲಿ ಬೆಂಝ್ ಕಂಪನಿಯ ಲೋಗೊ ಹಾಗೂ ಬಂಪರ್ ಬಳಸಿ ಬೆಂಝ್ ರೀತಿಯಲ್ಲಿ ಮಾಡಿಫೈಗೊಳಿಸಲಾಗಿದೆ. ಸ್ಕಾರ್ಪಿಯೋ, ದೇಶೀಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿದೆ.

ಐಷಾರಾಮಿ ಕಾರುಗಳಂತೆ ಮಾಡಿಫೈಗೊಂಡ ಬಜೆಟ್ ಬೆಲೆಯ ಕಾರುಗಳಿವು

ಮಾಡಿಫೈಗೊಂಡಿರುವ ಸ್ಕಾರ್ಪಿಯೋ ಕಾರಿನ ಮುಂಭಾಗದಲ್ಲಿ ಬೆಂಝ್ ಕಂಪನಿಯ ಗ್ರಿಲ್, ಬಂಪರ್, ಹೆಡ್‌ಲೈಟ್ ಹಾಗೂ ಎಲ್‌ಇಡಿ ಡಿಆರ್‌ಎಲ್‌ಗಳನ್ನು ಅಳವಡಿಸಲಾಗಿದೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಐಷಾರಾಮಿ ಕಾರುಗಳಂತೆ ಮಾಡಿಫೈಗೊಂಡ ಬಜೆಟ್ ಬೆಲೆಯ ಕಾರುಗಳಿವು

ಲೆಕ್ಸಸ್ ಕ್ಯಾಮ್ರಿ

ಟೊಯೊಟಾ ಕಂಪನಿಯ ಕ್ಯಾಮ್ರಿ ಕಾರ್ ಅನ್ನು ಲೆಕ್ಸಸ್ ಕಾರಿನಂತೆ ಮಾಡಿಫೈಗೊಳಿಸಲಾಗಿದೆ. ಕ್ಯಾಮ್ರಿ ಕಾರಿನಲ್ಲಿ ಲೆಕ್ಸಸ್ ಕಾರಿನ ಫ್ರಂಟ್ ಗ್ರಿಲ್, ಬಂಪರ್, ಹೆಡ್‌ಲೈಟ್‌ ಹಾಗೂ ಡಿಆರ್‌ಎಲ್‌ಗಳನ್ನು ಅಳವಡಿಸಲಾಗಿದೆ. ಮಾಡಿಫೈಗೊಂಡ ಕ್ಯಾಮ್ರಿ ಕಾರು ಕೆಂಪು ಬಣ್ಣದಲ್ಲಿದೆ.

ಐಷಾರಾಮಿ ಕಾರುಗಳಂತೆ ಮಾಡಿಫೈಗೊಂಡ ಬಜೆಟ್ ಬೆಲೆಯ ಕಾರುಗಳಿವು

ಬೆಂಝ್ ಡಿಜೈರ್

ಮಾರುತಿ ಡಿಜೈರ್ ಕಾರಿನಲ್ಲಿರುವ ಲೋಗೊ ಹಾಗೂ ಬಂಪರ್ ಗಳನ್ನು ಬದಲಿಸಿ ಬೆಂಝ್ ಕಾರಿನಂತೆ ಮಾಡಿಫೈಗೊಳಿಸಲಾಗಿದೆ. ಈ ಕಾರಿನಲ್ಲಿ ಅಳವಡಿಸಿರುವ ಲೋಗೊ ನಿಜವಾದ ಬೆಂಝ್ ಲೋಗೊದಂತೆ ಕಾಣುವುದಿಲ್ಲ. ಇದರಿಂದಾಗಿ ಈ ಕಾರು ರಸ್ತೆಯಲ್ಲಿ ಸಂಚರಿಸುವಾಗ ಜನರು ಗೊಂದಲಕ್ಕೀಡಾಗುವ ಸಾಧ್ಯತೆಗಳಿವೆ.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಐಷಾರಾಮಿ ಕಾರುಗಳಂತೆ ಮಾಡಿಫೈಗೊಂಡ ಬಜೆಟ್ ಬೆಲೆಯ ಕಾರುಗಳಿವು

ಈ ಎಲ್ಲಾ ಕಾರುಗಳ ಮಾಡಿಫಿಕೇಷನ್ ಗಳು ಶ್ಲಾಘನೀಯವಾದರೂ, ಇವೆಲ್ಲವೂ ಕಾನೂನುಬಾಹಿರ. ಯಾವುದೇ ಕಾರಿನ ಮೂಲ ಸ್ವರೂಪವನ್ನು ಬದಲಿಸುವುದು ಭಾರತೀಯ ಮೋಟಾರು ವಾಹನ ಕಾಯ್ದೆಯಡಿ ಅಪರಾಧವಾಗಿದೆ. ಈ ಅಪರಾಧಕ್ಕೆ ಗರಿಷ್ಠ ಮೊತ್ತದ ದಂಡ, ನೋಂದಣಿ ರದ್ದು ಹಾಗೂ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತಹ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ.

Most Read Articles

Kannada
English summary
Budget cars modified as luxury vehicles. Read in Kannada.
Story first published: Friday, September 25, 2020, 12:33 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X