ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ಬಳಿಯಿರುವ ಅಪರೂಪದ ವಿಂಟೇಜ್ ಕಾರಿದು

ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮೊನೆಯಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದರು. ಭಾರತೀಯ ಕ್ರಿಕೆಟನ್ನು ಹೊಸ ಎತ್ತರಕ್ಕೆ ಕೊಂಡೊಯ್ದ ಧೋನಿಯವರ ನಿವೃತ್ತಿ ಅವರ ಅಭಿಮಾನಿಗಳನ್ನು ಶೋಕ ಸಾಗರದಲ್ಲಿ ಮುಳುಗುವಂತೆ ಮಾಡಿದೆ.

ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ಬಳಿಯಿರುವ ಅಪರೂಪದ ವಿಂಟೇಜ್ ಕಾರಿದು

ಆದರೆ ಧೋನಿ ಐಪಿಎಲ್ ಪಂದ್ಯಗಳಲ್ಲಿ ಆಡಲಿದ್ದಾರೆ ಎಂಬುದು ಅಭಿಮಾನಿಗಳಲ್ಲಿ ತುಸು ಸಮಾಧಾನವನ್ನುಂಟು ಮಾಡಿದೆ. ಧೋನಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರೂ ಸಹ ಅವರ ಗ್ಯಾರೇಜ್ ಸ್ಕೋರ್ ಹೆಚ್ಚುತ್ತಲೇ ಇದೆ. ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್‌ ಜೊತೆಗೆ ಕಾರು ಹಾಗೂ ಬೈಕ್‌ಗಳ ಕ್ರೇಜ್ ಹೊಂದಿದ್ದಾರೆ. ಧೋನಿ ಹಲವಾರು ಬಾರಿ ಚೆನ್ನೈ ಹಾಗೂ ರಾಂಚಿಯ ರಸ್ತೆಗಳಲ್ಲಿ ತಮ್ಮ ನೆಚ್ಚಿನ ಕಾರು ಹಾಗೂ ಬೈಕ್ ಗಳೊಂದಿಗೆ ಕಾಣಿಸಿಕೊಂಡಿದ್ದಾರೆ.

ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ಬಳಿಯಿರುವ ಅಪರೂಪದ ವಿಂಟೇಜ್ ಕಾರಿದು

ಧೋನಿ ಆಧುನಿಕ ತಂತ್ರಜ್ಞಾನವನ್ನು ಹೊಂದಿರುವ ಬಹಳ ಅಪರೂಪದ ವಿಂಟೇಜ್ ಕಾರುಗಳನ್ನು ಹೊಂದಿದ್ದಾರೆ. ಹಮ್ಮರ್ ಹೆಚ್ 2, ರೋಲ್ಸ್ ರಾಯ್ಸ್ ಸಿಲ್ವರ್ ಶ್ಯಾಡೋ ಸೀರೀಸ್ 1, ಮಿಟ್ಸುಬಿಷಿ ಪಜೆರೊ ಎಸ್‌ಎಫ್‌ಎಕ್ಸ್, ಆಡಿ ಕ್ಯೂ 7, ಲ್ಯಾಂಡ್ ರೋವರ್ ಫ್ರೀಲ್ಯಾಂಡರ್ 2 ಹಾಗೂ ಫೆರಾರಿ 599 ಜಿಟಿಒ ಧೋನಿಯವರ ಬಳಿಯಿರುವ ಅಪರೂಪದ ಕಾರುಗಳಾಗಿವೆ.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ಬಳಿಯಿರುವ ಅಪರೂಪದ ವಿಂಟೇಜ್ ಕಾರಿದು

ಇವುಗಳ ಜೊತೆಗೆ ಧೋನಿರವರು ಗ್ರ್ಯಾಂಡ್ ಚೆರೋಕೀ ಟ್ರ್ಯಾಕ್‌ಹಾಕ್, ಮರ್ಸಿಡಿಸ್-ಬೆಂಝ್ ಎಫ್‌ಎಲ್ಇ ಹಾಗೂ ನಿಸ್ಸಾನ್ 4 ಡಬ್ಲ್ಯೂ 73 ಕಾರುಗಳನ್ನು ಸಹ ಹೊಂದಿದ್ದಾರೆ. ಕಾರುಗಳನ್ನು ಮಾತ್ರವಲ್ಲದೇ ಧೋನಿ ಹಲವಾರು ದ್ವಿಚಕ್ರ ವಾಹನಗಳನ್ನು ಸಹ ಹೊಂದಿದ್ದಾರೆ.

ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ಬಳಿಯಿರುವ ಅಪರೂಪದ ವಿಂಟೇಜ್ ಕಾರಿದು

ಇವುಗಳಲ್ಲಿ ಕವಾಸಕಿ ನಿಂಜಾ ಹೆಚ್ 2, ಕವಾಸಕಿ ನಿಂಜಾ ಝಡ್ಎಕ್ಸ್ 14 ಆರ್ ಹಾಗೂ ಕಾನ್ಫೆಡರೇಟ್ ಹೆಲ್ಕಾಟ್ ಎಕ್ಸ್ 132 ಧೋನಿಯವರ ಬಳಿಯಿರುವ ಪ್ರಮುಖ ದ್ವಿಚಕ್ರ ವಾಹನಗಳಾಗಿವೆ. ಧೋನಿ ಹೊಸ ಹೊಸ ವಾಹನಗಳನ್ನು ಖರೀದಿಸುತ್ತಲೇ ಇರುತ್ತಾರೆ. ಈಗ ಹೊಸ ವಿಂಟೇಜ್ ಕಾರನ್ನು ಖರೀದಿಸಿದ್ದಾರೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ಬಳಿಯಿರುವ ಅಪರೂಪದ ವಿಂಟೇಜ್ ಕಾರಿದು

ಮಹೇಂದ್ರ ಸಿಂಗ್ ಧೋನಿರವರ ಪತ್ನಿ ಸಾಕ್ಷಿ ಇತ್ತೀಚೆಗೆ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿರುವ ಫೋಟೋ ಹಾಗೂ ವೀಡಿಯೊ ಮೂಲಕ ಈ ಮಾಹಿತಿ ಬಹಿರಂಗವಾಗಿದೆ. ಪಾಂಟಿಯಾಕ್ ಫೈರ್‌ಬರ್ಡ್ ಕಾರ್ಟನ್ ಎಂಬ ಅಪರೂಪದ ವಿಂಟೇಜ್ ಕಾರನ್ನು ಧೋನಿ ಖರೀದಿಸಿದ್ದಾರೆ. ಭಾರತದ ರಸ್ತೆಗಳಲ್ಲಿ ಈ ಕಾರನ್ನು ಕಾಣುವುದು ಬಹಳ ಅಪರೂಪ.

ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ಬಳಿಯಿರುವ ಅಪರೂಪದ ವಿಂಟೇಜ್ ಕಾರಿದು

ಸಾಮಾನ್ಯವಾಗಿ ಧೋನಿರವರು ಖರೀದಿಸುವ ಯಾವುದೇ ವಾಹನಗಳಿರಲಿ ಅವುಗಳನ್ನು ಸಾರ್ವಜನಿಕ ರಸ್ತೆಗಳಲ್ಲಿ ಚಾಲನೆ ಮಾಡುತ್ತಾರೆ. ಆದರೆ ಈ ಕಾರನ್ನು ಸಾರ್ವಜನಿಕ ರಸ್ತೆಗಳಲ್ಲಿ ಚಾಲನೆ ಮಾಡುವುದು ಅನುಮಾನ. ಈ ಕಾರು ಎಡ ಭಾಗದಲ್ಲಿ ಡ್ರೈವ್ ಸಿಸ್ಟಂ ಹೊಂದಿರುವುದೇ ಇದಕ್ಕೆ ಕಾರಣ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ಬಳಿಯಿರುವ ಅಪರೂಪದ ವಿಂಟೇಜ್ ಕಾರಿದು

ಭಾರತದಲ್ಲಿ ಬಲ ಭಾಗದ ಡ್ರೈವ್ ಸಿಸ್ಟಂ ಹೊಂದಿರುವ ವಾಹನಗಳನ್ನು ಮಾತ್ರ ಮಾರಾಟ ಮಾಡಲಾಗುತ್ತದೆ. ಈ ಅಪರೂಪದ ಕಾರಿನ ಬೆಲೆಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆದರೆ ಈ ಕಾರಿನ ಬೆಲೆ ರೂ.68.3 ಲಕ್ಷಗಳಿರಬಹುದು ಎಂದು ಅಂದಾಜು ಮಾಡಲಾಗಿದೆ.

ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ಬಳಿಯಿರುವ ಅಪರೂಪದ ವಿಂಟೇಜ್ ಕಾರಿದು

ಇದೇ ಮಾದರಿಯ ಕಾರನ್ನು 2019ರ ನವೆಂಬರ್‌ನಲ್ಲಿ ಇದೇ ಬೆಲೆಗೆ ಹರಾಜು ಹಾಕಲಾಗಿತ್ತು. ಧೋನಿರವರು ಭವಿಷ್ಯದಲ್ಲಿ ಮತ್ತಷ್ಟು ಅಪರೂಪದ ವಾಹನಗಳನ್ನು ಖರೀದಿಸಬಹುದು.

Most Read Articles

Kannada
English summary
Captain cool Mahendra Singh Dhoni's rare vintage car. Read in Kannada.
Story first published: Tuesday, August 18, 2020, 9:33 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X