ಕರೋನಾ ವೈರಸ್ ಭೀತಿ- ಮತ್ತೆ ಹೆಚ್ಚಳವಾಗಲಿದೆಯೆಂತೆ ಹೊಸ ವಾಹನಗಳ ಖರೀದಿ ಪ್ರಮಾಣ..!?

ಕರೋನಾ ವೈರಸ್‌ನಿಂದಾಗಿ ಇಡೀ ದೇಶವೇ ಲಾಕ್ ಡೌನ್ ಆಗಿದ್ದು, ಅಗತ್ಯ ಸೇವೆಗಳನ್ನು ಹೊರತುಪಡಿಸಿ ಬಹುತೇಕ ವಾಣಿಜ್ಯ ಚಟುವಟಿಕೆಗಳನ್ನು ಬಂದ್ ಮಾಡಲಾಗಿದೆ. ಈ ನಡುವೆ ಕರೋನಾ ವೈರಸ್‌ ಪರಿಣಾಮದಿಂದಾಗಿ ದೇಶದಲ್ಲಿ ಮತ್ತಷ್ಟು ವಾಹನಗಳು ಹೆಚ್ಚಾಗುವುದರೊಂದಿಗೆ ಭಾರೀ ಪ್ರಮಾಣದ ಟ್ರಾಫಿಕ್ ದಟ್ಟಣೆ ಉಂಟಾಗಬಹುದು ಎನ್ನಲಾಗುತ್ತಿದೆ.

ಕರೋನಾ ವೈರಸ್ ಭೀತಿ- ಮತ್ತೆ ಹೆಚ್ಚಳವಾಗಲಿದೆಯೆಂತೆ ಹೊಸ ವಾಹನಗಳ ಖರೀದಿ ಪ್ರಮಾಣ..!?

ಮಾಲಿನ್ಯ ತಡೆಯುವ ಉದ್ದೇಶದಿಂದ ಸರ್ಕಾರಗಳು ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಹೆಚ್ಚು ಒತ್ತು ನೀಡುತ್ತಿದ್ದರೂ ಕೂಡಾ ಟ್ರಾಫಿಕ್ ದಟ್ಟಣೆಯು ಉಂಟಾಗುತ್ತಿದ್ದು, ಇದೀಗ ಕರೋನಾ ವೈರಸ್ ಭಯದಿಂದ ಸಾರ್ವಜನಿಕರು ಮತ್ತೆ ಸ್ವಂತ ವಾಹನಗಳ ಬಳಕೆಯನ್ನು ಮುಂದುವರಿಸುವ ಸಾಧ್ಯತೆಗಳಿವೆ. ಜೊತೆಗೆ ಸ್ವಂತ ವಾಹನಗಳು ಇಲ್ಲದವರು ಕೂಡಾ ಹೊಸ ವಾಹನಗಳ ಖರೀದಿಗೆ ಆದ್ಯತೆ ನೀಡುವ ಸಾಧ್ಯತೆಗಳಿದ್ದು, ಸಾರ್ವಜನಿಕ ಸಾರಿಗೆ ಸೌಲಭ್ಯಗಳ ಬಳಕೆಗೆ ಹಿಂದೇಟು ಹಾಕಬಹುದಾಗಿದೆ.

ಕರೋನಾ ವೈರಸ್ ಭೀತಿ- ಮತ್ತೆ ಹೆಚ್ಚಳವಾಗಲಿದೆಯೆಂತೆ ಹೊಸ ವಾಹನಗಳ ಖರೀದಿ ಪ್ರಮಾಣ..!?

ಸಾರ್ವಜನಿಕ ಸಾರಿಗೆ ಸೌಲಭ್ಯಗಳನ್ನು ಬಳಕೆ ಮಾಡಿದ್ದಲ್ಲಿ ವೈರಸ್ ಪ್ರಮಾಣ ಹೆಚ್ಚಾಗುವ ಸಾಧ್ಯತೆಗಳಿಗೆ ಎನ್ನುವ ಭಯ ಕಾಡತೊಡಗಿದ್ದು, ಸಾಮಾಜಿಕ ಅಂತರ ಕಾಯ್ದಕೊಳ್ಳುವುದಕ್ಕಾಗಿ ಸ್ವಂತ ವಾಹನಗಳ ಬಳಕೆ ಹೆಚ್ಚಾಗುವುದರಲ್ಲಿ ಎರಡು ಮಾತಿಲ್ಲ.

ಕರೋನಾ ವೈರಸ್ ಭೀತಿ- ಮತ್ತೆ ಹೆಚ್ಚಳವಾಗಲಿದೆಯೆಂತೆ ಹೊಸ ವಾಹನಗಳ ಖರೀದಿ ಪ್ರಮಾಣ..!?

ಇದು ನೆರವಾಗಿ ಟ್ರಾಫಿಕ್ ದಟ್ಟಣೆ ಕಾರಣವಾಗುವುದಲ್ಲದೆ ಸಾರ್ವಜನಿಕ ಸಾರಿಗೆ ಸೌಲಭ್ಯಗಳಿಂದ ಸರ್ಕಾರಗಳಿಗೆ ನಷ್ಟ ಉಂಟಾಗುವ ಸಾಧ್ಯತೆಗಳಿದ್ದು, ಸದಾ ಜನದಟ್ಟಣೆಯಿಂದ ಕೂಡಿರುವ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲೂ ಕಡಿಮೆಯಾಗಬಹುದು ಎನ್ನಲಾಗುತ್ತಿದೆ.

ಕರೋನಾ ವೈರಸ್ ಭೀತಿ- ಮತ್ತೆ ಹೆಚ್ಚಳವಾಗಲಿದೆಯೆಂತೆ ಹೊಸ ವಾಹನಗಳ ಖರೀದಿ ಪ್ರಮಾಣ..!?

ಇದಲ್ಲದೇ ಕರೋನಾ ವೈರಸ್‌ನಿಂದಾಗಿ ಇಡಿ ವಿಶ್ವವೇ ಆತಂಕದಲ್ಲಿದ್ದು, ವೈರಸ್ ಹರಡುವಿಕೆಯನ್ನು ತಡೆಯಲು ಎಲ್ಲಾ ರೀತಿಯ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಹೀಗಿರುವಾಗ ದೇಶದ ಆರ್ಥಿಕ ಪರಿಸ್ಥಿತಿಯು ದಿನದಿಂದ ದಿನಕ್ಕೆ ಶೋಚನೀಯವಾಗುತ್ತಿದ್ದು, ಆಟೋ ಉದ್ಯಮದವು ಕೂಡಾ ಸಂಕಷ್ಟಕ್ಕೆ ಸಿಲುಕಿಕೊಂಡಿದೆ. ಮಾಲಿನ್ಯ ತಡೆಯುವ ಉದ್ದೇಶದಿಂದ ದೇಶದಲ್ಲಿ ಏಪ್ರಿಲ್ 1ರಿಂದ ಅನ್ವಯವಾಗುವಂತೆ ಬಿಎಸ್-6(ಭಾರತ್ ಸ್ಟೆಜ್-6) ಜಾರಿಗೆ ತರಲಾಗುತ್ತಿದ್ದು, ಹೊಸ ಎಮಿಷನ್ ನಿಯಮ ಜಾರಿ ನಂತರ ಬಿಎಸ್-4 ವಾಹನ ಮಾರಾಟ ಮತ್ತು ನೋಂದಣಿಯನ್ನು ಸಂಪೂರ್ಣವಾಗಿ ನಿಷೇಧ ಮಾಡಲಾಗುತ್ತಿದೆ.

ಕರೋನಾ ವೈರಸ್ ಭೀತಿ- ಮತ್ತೆ ಹೆಚ್ಚಳವಾಗಲಿದೆಯೆಂತೆ ಹೊಸ ವಾಹನಗಳ ಖರೀದಿ ಪ್ರಮಾಣ..!?

ಆದರೆ ನಿಗದಿತ ಅವಧಿಯೊಳಗೆ ಬಿಎಸ್-4 ವಾಹನಗಳನ್ನು ಮಾರಾಟ ಮಾಡಬೇಕೆಂದರೆ ಕರೋನಾ ವೈರಸ್ ಹಿನ್ನಲೆ ಸಂಪೂರ್ಣವಾಗಿ ಲಾಕ್ ಡೌನ್ ಮಾಡಿರುವುದರಿಂದ ವಾಹನ ಉತ್ಪಾದನಾ ಕಂಪನಿಗಳು ಸಂಕಷ್ಟಕ್ಕೆ ಸಿಲುಕಿವೆ.

ಕರೋನಾ ವೈರಸ್ ಭೀತಿ- ಮತ್ತೆ ಹೆಚ್ಚಳವಾಗಲಿದೆಯೆಂತೆ ಹೊಸ ವಾಹನಗಳ ಖರೀದಿ ಪ್ರಮಾಣ..!?

ಮಾಹಿತಿಗಳ ಪ್ರಕಾರ ವಿವಿಧ ಆಟೋ ಕಂಪನಿಗಳ ಬಳಿ ಸುಮಾರು 7 ಲಕ್ಷ ಬಿಎಸ್-4 ವಾಹನ ಸ್ಟಾಕ್ ಇದ್ದು, ಇದು ರೂ.6,400 ಕೋಟಿ ಮೌಲ್ಯವನ್ನು ಹೊಂದಿದೆ. ಇದರಿಂದ ಮಾರಾಟವಾಗದೆ ಉಳಿದಿರುವ ಬಿಎಸ್-4 ವಾಹನಗಳು ಇದೀಗ ಆರ್ಥಿಕ ಹೊರೆಯಾಗಿ ಪರಿಣಮಿಸಿವೆ.

ಕರೋನಾ ವೈರಸ್ ಭೀತಿ- ಮತ್ತೆ ಹೆಚ್ಚಳವಾಗಲಿದೆಯೆಂತೆ ಹೊಸ ವಾಹನಗಳ ಖರೀದಿ ಪ್ರಮಾಣ..!?

ಹೀಗಾಗಿ ಬಿಎಸ್-4 ವಾಹನ ಮಾರಾಟವನ್ನು ಮಾಡಲೇಬೇಕಾದ ಅನಿವಾರ್ಯತೆಯಲ್ಲಿರುವ ಆಟೋ ಕಂಪನಿಗಳು ಕರೋನಾ ವೈರಸ್ ನೆಪವೊಡ್ಡಿ ಮತ್ತೆ ಸುಪ್ರೀಂಕೋರ್ಟ್‌ ಕದತಟ್ಟುವ ಸಾಧ್ಯತೆಗಳಿವೆ.

ಕರೋನಾ ವೈರಸ್ ಭೀತಿ- ಮತ್ತೆ ಹೆಚ್ಚಳವಾಗಲಿದೆಯೆಂತೆ ಹೊಸ ವಾಹನಗಳ ಖರೀದಿ ಪ್ರಮಾಣ..!?

ಆದರೆ ಪರಿಸ್ಥಿತಿಗೆ ಅನುಗುಣವಾಗಿ ಹಲವಾರು ವಿನಾಯ್ತಿಗಳನ್ನು ನೀಡಿರುವ ಕೇಂದ್ರ ಸರ್ಕಾರವು ಬಿಎಸ್-4 ವಾಹನ ಮಾರಾಟಕ್ಕೆ ಮತ್ತಷ್ಟು ಅವಕಾಶ ನೀಡುವ ಸಾಧ್ಯತೆಗಳಿದ್ದು, ಮುಂಬರುವ ದಿನಗಳಲ್ಲಿ ಕೈಗೊಳ್ಳಲಿರುವ ಆರ್ಥಿಕ ನಿರ್ಧಾರಗಳ ಮೇಲೆ ಬಿಎಸ್-4 ವಾಹನಗಳ ಭವಿಷ್ಯ ನಿರ್ಧಾರವಾಗಲಿದೆ.

Most Read Articles

Kannada
English summary
According to a report, People may avoid public transport and will prefer own vehicles like car, bikes due to the Coronavirus fears. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X