ಭಾರತಕ್ಕೆ ಲಗ್ಗೆ ಇಡಲಿದೆ ಮತ್ತೊಂದು ಚೀನಾ ಕಾರು ತಯಾರಕ ಕಂಪನಿ

ಚೀನಾ ಮೂಲದ ಎಂಜಿ ಹೆಕ್ಟರ್ ಎಸ್‍‍ಯುವಿಯು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡು ಯಶಸ್ವಿಯಾದ ನಂತರ ಮತ್ತಷ್ಟು ಚೀನಾ ಮೂಲದ ಕಂಪನಿಗಳು ದೇಶಿಯ ಮಾರುಕಟ್ಟೆಯನ್ನು ಪ್ರವೇಶಿಸಲು ಸಜ್ಜಾಗಿವೆ.

ಭಾರತಕ್ಕೆ ಲಗ್ಗೆ ಇಡಲಿದೆ ಮತ್ತೊಂದು ಚೀನಾ ಕಾರು ತಯಾರಕ ಕಂಪನಿ

ಇವುಗಳಲ್ಲಿ ಗ್ರೇಟ್‍‍ವಾಲ್, ಹವಾಲ್, ಚಂಗನ್ ಕಂಪನಿಗಳು ಸೇರಿವೆ. ಚಂಗನ್ ಕಂಪನಿಯು ತನ್ನ ಮೊದಲ ವಾಹನವನ್ನು ಮಧ್ಯಮ ಗಾತ್ರದ ಎಸ್‍‍ಯುವಿ ಸೆಗ್‍‍ಮೆಂಟ್‍‍ನಲ್ಲಿ ಬಿಡುಗಡೆಗೊಳಿಸಲು ಬಯಸಿದೆ. ತನ್ನ ಸಿ‍ಎಸ್ 75 ಪ್ಲಸ್ ಎಸ್‍‍ಯುವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ.

ಭಾರತಕ್ಕೆ ಲಗ್ಗೆ ಇಡಲಿದೆ ಮತ್ತೊಂದು ಚೀನಾ ಕಾರು ತಯಾರಕ ಕಂಪನಿ

ಈ ಎಸ್‍‍ಯುವಿಯು ಭಾರತದಲ್ಲಿರುವ ಮತ್ತೊಂದು ಚೀನಾ ಮೂಲದ ಕಂಪನಿಯಾದ ಎಂಜಿ ಮೋಟಾರ್‍‍ನ ಹೆಕ್ಟರ್ ಎಸ್‍‍ಯುವಿಗೆ ಪೈಪೋಟಿ ನೀಡಲಿದೆ. ಸಿ‍ಎಸ್ 75 ಪ್ಲಸ್ ಎಸ್‍‍ಯುವಿಯನ್ನು ಅಂತರ್‍‍ರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ಸಹ ಮಾರಾಟ ಮಾಡಲಾಗುತ್ತಿದೆ.

ಭಾರತಕ್ಕೆ ಲಗ್ಗೆ ಇಡಲಿದೆ ಮತ್ತೊಂದು ಚೀನಾ ಕಾರು ತಯಾರಕ ಕಂಪನಿ

ಅಂತರ್‍‍ರಾಷ್ಟ್ರೀಯ ಮಾರುಕಟ್ಟೆಯಲ್ಲಿರುವ ಸಿ‍ಎಸ್ 75 ಪ್ಲಸ್ ಎಸ್‍‍ಯುವಿಯಲ್ಲಿ 1.5 ಲೀಟರಿನ ಡಿಜಿ‍‍ಡಿ‍ಐ ಬ್ಲೂ ವೇಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 175 ಬಿ‍‍ಹೆಚ್‍‍ಪಿ ಪವರ್ ಹಾಗೂ 265 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ಭಾರತಕ್ಕೆ ಲಗ್ಗೆ ಇಡಲಿದೆ ಮತ್ತೊಂದು ಚೀನಾ ಕಾರು ತಯಾರಕ ಕಂಪನಿ

ಈ ಎಂಜಿ‍‍ನ್‍‍ನಲ್ಲಿ 6 ಸ್ಪೀಡ್‍‍ನ ಮ್ಯಾನುವಲ್ ಗೇರ್‍‍ಬಾಕ್ಸ್ ಅಥವಾ 6 ಸ್ಪೀಡ್‍‍ನ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಜೋಡಿಸಲಾಗುವುದು. ಇದರ ಜೊತೆಗೆ 2.0 ಲೀಟರಿನ ಬ್ಲೂ ವೇಲ್ ಡಿಜಿ‍ಟಿ‍ಐ ಪೆಟ್ರೋಲ್ ಎಂಜಿನ್‍‍ನಲ್ಲಿಯೂ ಸಹ ಮಾರಾಟ ಮಾಡಲಾಗುವುದು.

ಭಾರತಕ್ಕೆ ಲಗ್ಗೆ ಇಡಲಿದೆ ಮತ್ತೊಂದು ಚೀನಾ ಕಾರು ತಯಾರಕ ಕಂಪನಿ

ಈ ಎಂಜಿನ್ 229 ಬಿ‍‍ಹೆಚ್‍‍ಪಿ ಪವರ್ ಹಾಗೂ 360 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ 8 ಸ್ಪೀಡಿನ ಆಟೋಮ್ಯಾಟಿಕ್ ಗೇ‍ರ್‍‍ಬಾಕ್ಸ್ ಅಳವಡಿಸಲಾಗುವುದು. ಈ ಎಸ್‍‍ಯುವಿಯನ್ನು ಮೂರು ವಿಧದ ಮಾದರಿಗಳಲ್ಲಿ ಮಾರಾಟ ಮಾಡಲಾಗುವುದು.

ಭಾರತಕ್ಕೆ ಲಗ್ಗೆ ಇಡಲಿದೆ ಮತ್ತೊಂದು ಚೀನಾ ಕಾರು ತಯಾರಕ ಕಂಪನಿ

ಮೂರು ವಿಧದ ಮಾದರಿಗಳು 4,670 ಎಂಎಂ, 4,690 ಎಂಎಂ ಹಾಗೂ 4,700 ಎಂಎಂಗಳಾಗಿರಲಿವೆ. ಇವುಗಳ ಅಗಲವು 1,865 ಎಂಎಂ ಆಗಿರಲಿದೆ. ಈ ಎಸ್‍‍ಯುವಿಯು 2,710 ಎಂಎಂ ವ್ಹೀಲ್‍‍ಬೇಸ್ ಅನ್ನು ಹೊಂದಿರಲಿದೆ. ಈ ಗಾತ್ರದಿಂದಾಗಿ ಈ ಎಸ್‍‍ಯುವಿಯು ಮಧ್ಯಮ ಗಾತ್ರದ ಎಸ್‍‍ಯುವಿಯಲ್ಲಿರುವಂತಹ ಎಲ್ಲಾ ಫೀಚರ್‍‍ಗಳನ್ನು ಹೊಂದಿದೆ.

ಭಾರತಕ್ಕೆ ಲಗ್ಗೆ ಇಡಲಿದೆ ಮತ್ತೊಂದು ಚೀನಾ ಕಾರು ತಯಾರಕ ಕಂಪನಿ

ಈ ಎಸ್‍‍ಯುವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಮುಂದಿನ ವರ್ಷ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ. ಚಂಗನ್ ಕಂಪನಿಯು ದೆಹಲಿಯಲ್ಲಿ ತಾತ್ಕಾಲಿಕವಾದ ಪ್ರಧಾನ ಕಚೇರಿಯನ್ನು ಹೊಂದುವ ಸಾಧ್ಯತೆಗಳಿವೆ. ಇದರ ಜೊತೆಗೆ ಭಾರತದಲ್ಲಿ ಕಾರು ಉತ್ಪಾದಕ ಘಟಕವನ್ನು ತೆರೆಯಲಿದೆ.

ಭಾರತಕ್ಕೆ ಲಗ್ಗೆ ಇಡಲಿದೆ ಮತ್ತೊಂದು ಚೀನಾ ಕಾರು ತಯಾರಕ ಕಂಪನಿ

ಚಂಗನ್ ಕಂಪನಿಯು ಭಾರತದಲ್ಲಿ ಮೊದಲು ಸಿ‍ಎಸ್ 75 ಪ್ಲಸ್ ಎಸ್‍‍ಯುವಿಯನ್ನು ಬಿಡುಗಡೆಗೊಳಿಸಲಿದೆ. ಇದಾದ ನಂತರ ಸಿ‍ಎಸ್ 35 ಕಾರ್ ಅನ್ನು ಬಿಡುಗಡೆಗೊಳಿಸಲಿದೆ. ಈ ಕಾರು ಕಾಂಪ್ಯಾಕ್ಟ್ ಎಸ್‍‍ಯುವಿ ಸೆಗ್‍‍ಮೆಂಟಿನಲ್ಲಿ ಬಿಡುಗಡೆಗೊಳ್ಳುವ ಸಾಧ್ಯತೆಗಳಿವೆ.

ಭಾರತಕ್ಕೆ ಲಗ್ಗೆ ಇಡಲಿದೆ ಮತ್ತೊಂದು ಚೀನಾ ಕಾರು ತಯಾರಕ ಕಂಪನಿ

ಚೀನಾದ ಕಂಪನಿಗಳಲ್ಲಿ ತಾಂತ್ರಿಕ ಅಂಶಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಅಳವಡಿಸಲಾಗಿರುತ್ತದೆ. ಚಂಗನ್ ಕಂಪನಿಯು ಚಾಲಕನಿಲ್ಲದ ಕಾರ್ ಅನ್ನು ಸಹ ಅಭಿವೃದ್ಧಿಪಡಿಸುವ ಯತ್ನದಲ್ಲಿದೆ. ಚಂಗನ್ ಕಂಪನಿಯು ಎರಡು ವರ್ಷಗಳ ಹಿಂದೆ 2 ಡ್ರೈವರ್‍‍ಲೆಸ್ ಕಾರುಗಳನ್ನು ಸುಮಾರು 2,000 ಕಿ.ಮೀಗಳವರೆಗೆ ಚಲಾಯಿಸಿ ಪರೀಕ್ಷಿಸಿತ್ತು.

Most Read Articles

Kannada
English summary
Changan cars to launch in India with CS 75 SUV next year. Read in Kannada.
Story first published: Saturday, February 29, 2020, 13:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X