ಕೊರೊನಾ ಎಫೆಕ್ಟ್: ಒಂದೇ ತಿಂಗಳಿನಲ್ಲಿ ನೆಲಕಚ್ಚಿದ ಚೀನಿ ಆಟೋ ಉದ್ಯಮ

ಚೀನಾದಲ್ಲಿ ಸಾವಿರಾರು ಜನರ ಬಲಿಪಡೆದಿರುವ ಕೊರೊನಾ ವೈರಸ್‌ ತನ್ನ ಅಟ್ಟಹಾಸವನ್ನು ಮುಂದುವರಿಸಿದ್ದು, ವೈರಸ್ ತಡೆಗೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿದ್ದರು ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇದರ ನಡುವೆ ಕೊರೊನಾ ವೈರಸ್ ಚೀನಿ ಆರ್ಥಿಕತೆ ಮೇಲೆ ಸಾಕಷ್ಟು ಪರಿಣಾಮ ಬೀರಿದ್ದು, ಆಟೋ ಉದ್ಯಮವಂತಲೂ ದಾಖಲೆ ಪ್ರಮಾಣದಲ್ಲಿ ಕುಸಿತ ಕಂಡಿದೆ.

ಕೊರೊನಾ ಎಫೆಕ್ಟ್: ಒಂದೇ ತಿಂಗಳಿನಲ್ಲಿ ನೆಲಕಚ್ಚಿದ ಚೀನಿ ಆಟೋ ಉದ್ಯಮ

ಕೊರೊನಾ ವೈರಸ್‌ನಿಂದಾಗಿ ಪ್ರಮುಖ ಕಾರು ಉತ್ಪಾದನಾ ಘಟಕಗಳು ಹೊಸ ವಾಹನ ಉತ್ಪಾದನೆಯನ್ನೇ ಬಂದ್ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಹೊಸ ವಾಹನ ಮಾರಾಟವು ಕೇವಲ ಒಂದೇ ತಿಂಗಳಿನಲ್ಲಿ ಶೇ.18ರಿಂದ ಶೇ.20 ರಷ್ಟು ಇಳಿಕೆ ಕಂಡಿದೆ. ಇದು ಫೆಬ್ರುವರಿ ಅವಧಿಯಲ್ಲಿನ ವಾಹನ ಮಾರಾಟ ಪ್ರಮಾಣದಲ್ಲಿ ಇನ್ನಷ್ಟು ಇಳಿಕೆಯಾಗುವ ಸಾಧ್ಯತೆಯಿದ್ದು, ಪರಿಸ್ಥಿತಿ ಸದ್ಯಕ್ಕೆ ತಿಳಿಗೊಳ್ಳುವಂತೆ ಕಾಣುತ್ತಿಲ್ಲ.

ಕೊರೊನಾ ಎಫೆಕ್ಟ್: ಒಂದೇ ತಿಂಗಳಿನಲ್ಲಿ ನೆಲಕಚ್ಚಿದ ಚೀನಿ ಆಟೋ ಉದ್ಯಮ

ವಿಶ್ವದ ಪ್ರಮುಖ ಕಾರು ಉತ್ಪಾದನಾ ಸಂಸ್ಥೆಗಳು ಚೀನಿ ಮಾರುಕಟ್ಟೆಯಿಂದಲೇ ಬಿಡಿಭಾಗಗಳನ್ನೇ ನೆಚ್ಚಿಕೊಂಡಿದ್ದು, ಅದು ಇದೀಗ ಕುಂಠಿತವಾಗಿರುವುದು ಚೀನಾದಲ್ಲಿ ಮಾತ್ರವಲ್ಲದೇ ಭಾರತೀಯ ಆಟೋ ಉದ್ಯಮದ ಮೇಲೂ ದುಷ್ಪರಿಣಾಮ ಬೀರುತ್ತಿದೆ.

ಕೊರೊನಾ ಎಫೆಕ್ಟ್: ಒಂದೇ ತಿಂಗಳಿನಲ್ಲಿ ನೆಲಕಚ್ಚಿದ ಚೀನಿ ಆಟೋ ಉದ್ಯಮ

ನಿಗದಿತ ಅವಧಿಯೊಳಗೆ ಬಿಡಿಭಾಗಗಳ ಪೂರೈಕೆಯಿಲ್ಲದೆ ವಾಹನ ಉತ್ಪಾದನೆಯು ತಗ್ಗುತ್ತಿದ್ದು, ಗ್ರಾಹಕರಿಂದ ಬೇಡಿಕೆಯಿದ್ದರೂ ವಾಹನಗಳನ್ನು ಪೂರೈಕೆ ಮಾಡಲು ಸಾಧ್ಯವಾಗದೆ ಪರದಾಟುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.

ಕೊರೊನಾ ಎಫೆಕ್ಟ್: ಒಂದೇ ತಿಂಗಳಿನಲ್ಲಿ ನೆಲಕಚ್ಚಿದ ಚೀನಿ ಆಟೋ ಉದ್ಯಮ

ಇದು ಈಗಾಗಲೇ ಎಂಜಿ ಮೋಟಾರ್ ಮೇಲೆ ನೇರ ಪರಿಣಾಮ ಬೀರಿದ್ದು, ಶೇ.70 ರಷ್ಟು ಚೀನಿ ಬಿಡಿಭಾಗಗಳನ್ನೇ ಹೊಂದಿರುವ ಹೆಕ್ಟರ್ ಉತ್ಪಾದನೆಗೆ ಕುಂಠಿತವಾಗಿರುವುದಲ್ಲದೇ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮತ್ತು ಮಾರಾಟದಲ್ಲೂ ಸಾಕಷ್ಟು ಹಿನ್ನಡೆಯಾಗುವ ಸಾಧ್ಯತೆಗಳಿವೆ. ಎಲೆಕ್ಟ್ರಿಕ್ ವಾಹನ ಮುಖ್ಯ ತಾಂತ್ರಿಕ ಅಂಶವಾಗಿರುವ ಲೀಥಿಯಂ ಅಯಾನ್ ಬ್ಯಾಟರಿ ಸಂಪನ್ಮೂಲವು ಶೇ.100ರಷ್ಟು ಚೀನಿ ಮತ್ತು ತೈವಾನ್ ಮಾರುಕಟ್ಟೆಗಳನ್ನು ಅಲಂಭಿಸಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ.

ಕೊರೊನಾ ಎಫೆಕ್ಟ್: ಒಂದೇ ತಿಂಗಳಿನಲ್ಲಿ ನೆಲಕಚ್ಚಿದ ಚೀನಿ ಆಟೋ ಉದ್ಯಮ

ಭಾರತದಲ್ಲಿ ಇದುವರೆಗೂ ಪೂರ್ಣ ಪ್ರಮಾಣದಲ್ಲಿ ಸಿದ್ದವಾಗುತ್ತಿರುವ ಲೀಥಿಯಂ ಬ್ಯಾಟರಿ ಸಂಪನ್ಮೂಲವು ಇಲ್ಲದಿರುವುದು ಚೀನಿ ಮಾರುಕಟ್ಟೆಯನ್ನೇ ಅಲಂಭಿಸುವಂತಾಗಿದ್ದು, ಶೀಘ್ರದಲ್ಲೇ ಹಲವು ಆಟೋ ಉತ್ಪಾದನಾ ಸಂಸ್ಥೆಗಳು ಭಾರತದಲ್ಲೇ ಬ್ಯಾಟರಿ ಉತ್ಪಾದನೆಗಾಗಿ ಭಾರೀ ಪ್ರಮಾಣದ ಹೂಡಿಕೆ ಮಾಡುತ್ತಿವೆ.

ಕೊರೊನಾ ಎಫೆಕ್ಟ್: ಒಂದೇ ತಿಂಗಳಿನಲ್ಲಿ ನೆಲಕಚ್ಚಿದ ಚೀನಿ ಆಟೋ ಉದ್ಯಮ

ಆದರೆ ಸದ್ಯ ಪರಿಸ್ಥಿತಿಯಲ್ಲಿ ಕೊರೊನಾ ಭೀತಿಯು ಆಟೋ ಉದ್ಯಮದ ಮೇಲೆ ಮತ್ತಷ್ಟು ದುಷ್ಪರಿಣಾಮ ಬೀರಲಿದ್ದು, ಈಗಾಗಲೇ ಆರ್ಥಿಕ ಹಿಂಜರಿತದಿಂದ ಕಂಗೆಟ್ಟಿರುವ ಆಟೋ ಉತ್ಪಾದನಾ ಸಂಸ್ಥೆಗಳು ಇದೀಗ ಮತ್ತೊಮ್ಮೆ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗುವ ಭೀತಿಯಲ್ಲಿವೆ.

ಕೊರೊನಾ ಎಫೆಕ್ಟ್: ಒಂದೇ ತಿಂಗಳಿನಲ್ಲಿ ನೆಲಕಚ್ಚಿದ ಚೀನಿ ಆಟೋ ಉದ್ಯಮ

ಕಾರು ಉತ್ಪಾದನೆ ಬಂದ್ ಮಾಡಿದ ಹ್ಯುಂಡೈ

ಕೊರೊನಾ ವೈರಸ್‌ನಿಂದಾಗಿ ದಕ್ಷಿಣ ಕೊರಿಯಾದ ಅತಿ ದೊಡ್ಡ ಕಾರು ಉತ್ಪಾದನಾ ಸಂಸ್ಥೆಯಾಗಿರುವ ಹ್ಯುಂಡೈ ಕೂಡಾ ಚೀನಾದಲ್ಲಿರುವ ತನ್ನ ಕಾರು ಉತ್ಪಾದನಾ ಘಟಕವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದು, ವಾಹನ ರಫ್ತು ಪ್ರಮಾಣವನ್ನು ಗಣನೀಯವಾಗಿ ಇಳಿಕೆ ಮಾಡಿದೆ.

ಕೊರೊನಾ ಎಫೆಕ್ಟ್: ಒಂದೇ ತಿಂಗಳಿನಲ್ಲಿ ನೆಲಕಚ್ಚಿದ ಚೀನಿ ಆಟೋ ಉದ್ಯಮ

ಇದರ ಜೊತೆಗೆ ಚೀನಿ ಅತಿ ದೊಡ್ಡ ಕಾರು ಉತ್ಪಾದನಾ ಸಂಸ್ಥೆಯಾದ ಸೈಕ್(ಎಂಜಿ ಮೋಟಾರ್ ಮಾತೃಸಂಸ್ಥೆ), ಟೊಯೊಟಾ, ಫಾವ್, ಹೈಮಾ, ಗ್ರೇಟ್ ವಾಲ್ ಮೋಟಾರ್ಸ್, ಫೋಕ್ಸ್‌ವ್ಯಾಗನ್, ಜೀಪ್ ಮತ್ತು ಹವಾಲ್ ಕಾರುಗಳ ಉತ್ಪಾದನೆಯಲ್ಲಿ ಕುಂಠಿತವಾಗಿರುವುದಲ್ಲದೇ ಮಾರಾಟ ಪ್ರಕ್ರಿಯೆಯು ಸಹ ತೀವ್ರಗತಿಯಲ್ಲಿ ಕುಸಿತ ಕಾಣುತ್ತಿದೆ.

ಕೊರೊನಾ ಎಫೆಕ್ಟ್: ಒಂದೇ ತಿಂಗಳಿನಲ್ಲಿ ನೆಲಕಚ್ಚಿದ ಚೀನಿ ಆಟೋ ಉದ್ಯಮ

ಇದರೊಂದಿಗೆ ಬಿಡಿಭಾಗಗಳ ಆಮದು ಕೂಡಾ ಕುಸಿದಿರುವುದು ಆಟೋ ಉದ್ಯಮಗಳಿಗೆ ತಲೆನೋವಾಗಿ ಪರಿಣಮಿಸಿದ್ದು, ಕೊರೊನಾ ವೈರಸ್‌ನಿಂದಾಗಿ ಚೀನಾ ಮಾತ್ರವಲ್ಲದೇ ಭಾರತದ ಆರ್ಥಿಕತೆ ಕೂಡಾ ಪರೋಕ್ಷವಾಗಿ ಪರಿಣಾಮ ಎದುರಿಸಬೇಕಾದ ಸಂಧಿಗ್ನ ಸ್ಥಿತಿ ಎದುರಾಗಿದೆ.

Most Read Articles

Kannada
English summary
China Auto Sales Decreased By 18 PerCent In January. Read in Kannada.
Story first published: Friday, February 14, 2020, 20:34 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X